• Home
  • »
  • News
  • »
  • trend
  • »
  • Indigo Airlines: ಹಿಂದಿ, ಇಂಗ್ಲಿಷ್ ಗೊತ್ತಿಲ್ಲವೆಂದು ಪ್ರಯಾಣಿಕರ ಸೀಟ್ ಬದಲಾಯಿಸಿದ ಇಂಡಿಗೋ ಸಿಬ್ಬಂದಿ

Indigo Airlines: ಹಿಂದಿ, ಇಂಗ್ಲಿಷ್ ಗೊತ್ತಿಲ್ಲವೆಂದು ಪ್ರಯಾಣಿಕರ ಸೀಟ್ ಬದಲಾಯಿಸಿದ ಇಂಡಿಗೋ ಸಿಬ್ಬಂದಿ

ಇಂಡಿಗೋ ಏರ್ಲೈನ್

ಇಂಡಿಗೋ ಏರ್ಲೈನ್

ವಿಮಾನದಲ್ಲಿ ಬಾಗಿಲ ಬಳಿ ಇರುವ ತುರ್ತು ನಿರ್ಗಮನ ಅಂತ ಇರುವ ಜಾಗದಲ್ಲಿರುವ ಸೀಟುಗಳಿಗೆ ತುಂಬಾನೇ ಬೇಡಿಕೆ ಇರುತ್ತಂತೆ. ಹೀಗೆ ಆ ಸೀಟ್ ಅನ್ನು ಕಾಯ್ದಿರಿಸಿಕೊಂಡು ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಇಂಡಿಗೋ ವಿಮಾನದಲ್ಲಿರುವ ಸಿಬ್ಬಂದಿಯೊಬ್ಬರು ಅವರಿಗೆ ಹಿಂದಿ ಅಥವಾ ಇಂಗ್ಲೀಷ್ ಭಾಷೆ ಗೊತ್ತಿಲ್ಲದ ಕಾರಣಕ್ಕೆ ಅವರನ್ನು ಆ ಸೀಟ್ ನಿಂದ ಎಬ್ಬಿಸಿ ಬೇರೆ ಸೀಟ್ ನಲ್ಲಿ ಕೂರಿಸಿರುವ ಘಟನೆ ಬೆಳಕಿಗೆ ಬಂದಿದೆ.

ಮುಂದೆ ಓದಿ ...
  • Share this:

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಈ ಸಾರಿಗೆ ವ್ಯವಸ್ತೆಗಳಲ್ಲಿ ಪ್ರಯಾಣಿಕರಿಗೆ ಅನಾನುಕೂಲವಾಗುವುದರ ಮತ್ತು ಸಾರಿಗೆ ವ್ಯವಸ್ಥೆಯನ್ನು ಒದಗಿಸುವ ಕಂಪನಿಯವರಿಂದ (Company) ಆಗುವಂತಹ ತೊಂದರೆಗಳನ್ನು ಸೆರೆಹಿಡಿದಿರುವ ವಿಡಿಯೋಗಳು (Video) ಹರಿದಾಡಲು ಶುರು ಮಾಡಿವೆ. ಸಾರಿಗೆ ವ್ಯವಸ್ಥೆಗಳಲ್ಲಿ ಒಂದಾದ ಈ ಬಸ್ ಗಳಲ್ಲಂತೂ ಸೀಟು ಬಿಟ್ಟು ಕೊಡದ ಕಾರಣಕ್ಕೆ ಅಥವಾ ಟಿಕೆಟ್ ತೆಗೆದುಕೊಳ್ಳದೆ ಪ್ರಯಾಣಿಸುವುದರಿಂದ ಮತ್ತು ಸರಿಯಾಗಿ ಚಿಲ್ಲರೆ ತೆಗೆದುಕೊಂಡು ಬಸ್ ಹತ್ತದೆ ಇರುವುದರಿಂದ ಅನೇಕ ಜಗಳಗಳು (Fights) ಆಗುತ್ತಿರುತ್ತವೆ. ಹಾಗೆಯೇ ಈ ರೈಲುಗಳಲ್ಲಿಯೂ (Train) ಸಹ ಒಬ್ಬರು ಕಾಯ್ದಿರಿಸಿದ ಸೀಟಿನಲ್ಲಿ ಇನ್ನೊಬ್ಬರು ಬಂದು ಟಿಕೆಟ್ ಇಲ್ಲದೆಯೇ ಮಲಗಿ, ಆ ಸೀಟನ್ನು ಬಿಟ್ಟು ಕೊಡಲು ಕಿರಿಕಿರಿ ಮಾಡಿ ಜಗಳಗಳಾಗುವುದನ್ನು ಸಹ ನಾವು ನೋಡಿರುತ್ತೇವೆ.


ಇತ್ತೀಚೆಗೆ ಸಮಯ ಉಳಿಯುತ್ತೇ, ಸ್ವಲ್ಪ ಹಣ ಹೋದರೂ ಚಿಂತೆಯಿಲ್ಲ ಅಂತ ಜನರು ವಿಮಾನದಲ್ಲಿ ಪ್ರಯಾಣಿಸಲು ಶುರು ಮಾಡಿದರೆ, ಅಲ್ಲಿಯೂ ಸಹ ಕಿರಿಕಿರಿಗಳು ತಪ್ಪಿದ್ದಲ್ಲ ನೋಡಿ.


ಹೌದು.. ವಿಮಾನದಲ್ಲಿಯೂ ಸಹ ಟಿಕೆಟ್ ಕಾಯ್ದಿರಿಸುವಾಗ ಕಿಟಕಿ ಹತ್ತಿರದ ಸೀಟ್ ಬೇಕು ಅಂತ ಸ್ವಲ್ಪ ಹೆಚ್ಚು ದುಡ್ಡು ಕೊಟ್ಟು ಕಾಯ್ದಿರಿಸುವುದನ್ನು ನಾವು ನೋಡಿರುತ್ತೇವೆ. ಆದರೆ ವಿಮಾನದಲ್ಲಿ ಬಾಗಿಲ ಬಳಿ ಇರುವ ತುರ್ತು ನಿರ್ಗಮನ ಅಂತ ಇರುವ ಜಾಗದಲ್ಲಿರುವ ಸೀಟುಗಳಿಗೆ ತುಂಬಾನೇ ಬೇಡಿಕೆ ಇರುತ್ತಂತೆ. ಹೀಗೆ ಆ ಸೀಟ್ ಅನ್ನು ಕಾಯ್ದಿರಿಸಿಕೊಂಡು ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಇಂಡಿಗೋ ವಿಮಾನದಲ್ಲಿರುವ ಸಿಬ್ಬಂದಿಯೊಬ್ಬರು ಅವರಿಗೆ ಹಿಂದಿ ಅಥವಾ ಇಂಗ್ಲೀಷ್ ಭಾಷೆ ಗೊತ್ತಿಲ್ಲದ ಕಾರಣಕ್ಕೆ ಅವರನ್ನು ಆ ಸೀಟ್ ನಿಂದ ಎಬ್ಬಿಸಿ ಬೇರೆ ಸೀಟ್ ನಲ್ಲಿ ಕೂರಿಸಿರುವ ಘಟನೆ ಬೆಳಕಿಗೆ ಬಂದಿದೆ.


ಇಂಡಿಗೋ ವಿಮಾನದಲ್ಲಿ ಆದದ್ದೇನು?
ಇತ್ತೀಚಿನ ಘಟನೆಯೊಂದರಲ್ಲಿ, ಇಂಡಿಗೋ ಪ್ರಯಾಣಿಕನನ್ನು ಭಾಷೆಯ ಅಡೆತಡೆಯಿಂದಾಗಿ ತನ್ನ ನಿರ್ಗಮನ ಸಾಲಿನ ಎಂದರೆ ‘ಎಕ್ಸಿಟ್ ರೋ’ ನಲ್ಲಿರುವ ಆಸನವನ್ನು ಬಿಟ್ಟು ಬೇರೆ ಸೀಟಿನಲ್ಲಿ ಕುಳಿತುಕೊಳ್ಳುವಂತೆ ಮಾಡಿರುವ ಘಟನೆಯೊಂದು ವರದಿಯಾಗಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರು ಮಾಡಿದ ಟ್ವೀಟ್ ಈಗ ದೊಡ್ಡ ಸುದ್ದಿಯಾಗಿದ್ದು, ಟ್ವಿಟ್ಟರ್ ನಲ್ಲಿ ಬಳಕೆದಾರರಿಂದ ತುಂಬಾ ಪ್ರತಿಕ್ರಿಯೆಗಳು ಬರುತ್ತಿವೆ.


ಇದನ್ನೂ ಓದಿ: Iran Hijab Protest: ಮಹಿಳೆಯರೇ ಹಿಜಾಬ್‌ ಸುಟ್ರು; ಧಗಧಗನೇ ಉರಿಯುತ್ತಿದೆ ಇರಾನ್


ಈ ಇಂಡಿಗೋ ವಿಮಾನವು ವಿಜಯವಾಡದಿಂದ ಹೈದರಾಬಾದ್ ಗೆ ಬರುತ್ತಿತ್ತು ಎಂದು ಹೇಳಲಾಗಿದೆ. ಇಂಗ್ಲಿಷ್ ಮತ್ತು ಹಿಂದಿ ಎರಡನ್ನೂ ಅರ್ಥಮಾಡಿಕೊಳ್ಳದ ಪ್ರಯಾಣಿಕನನ್ನು ನಿರ್ಗಮನ ಸಾಲಿನಿಂದ ಅದರ ಹಿಂದಿನ ಸಾಲಿನಲ್ಲಿರುವ ಸೀಟಿಗೆ ಸ್ಥಳಾಂತರಿಸಲಾಯಿತು ಎಂದು ಸಹ ಪ್ರಯಾಣಿಕರ ಟ್ವೀಟ್ ತಿಳಿಸಿದೆ.


ತುರ್ತು ನಿರ್ಗಮನದ ಪಕ್ಕದಲ್ಲಿ ಇರಿಸಲಾದ ನಿರ್ಗಮನ ಸಾಲಿನ ಆಸನಗಳು ಸಾಮಾನ್ಯವಾಗಿ ತುಂಬಾನೇ ಬೇಡಿಕೆಯಲ್ಲಿರುತ್ತವೆ, ಏಕೆಂದರೆ ಅವು ಹೆಚ್ಚುವರಿ ಲೆಗ್ ರೂಮ್ ಅನ್ನು ಒದಗಿಸುತ್ತವೆ, ಇದಕ್ಕಾಗಿ ಹೆಚ್ಚುವರಿ ಹಣವನ್ನು ಸಹ ನೀಡಲಾಗುತ್ತದೆ.


ಏನ್ ಹೇಳುತ್ತೇ ಸಹ ಪ್ರಯಾಣಿಕರ ಟ್ವೀಟ್?
ಐಐಟಿ ಪ್ರೊಫೆಸರ್ ದೇವಸ್ಮಿತಾ ಚಕ್ರವರ್ತಿ ಎಂಬ ಸಹ ಪ್ರಯಾಣಿಕರು ಸೆಪ್ಟೆಂಬರ್ 17 ರಂದು ಈ ಬಗ್ಗೆ ಟ್ವೀಟ್ ಮಾಡಿದ್ದರು. "ಅಟೆಂಡೆಂಟ್ ಮಹಿಳೆಯೊಬ್ಬರಿಗೆ ಇಂಗ್ಲಿಷ್ ಅಥವಾ ಹಿಂದಿ ಭಾಷೆ ಅರ್ಥವಾಗದಿರುವುದು ಸುರಕ್ಷತೆಯ ವಿಷಯ ಎಂದು ಹೇಳಿದರು" ಎಂದು ಚಕ್ರವರ್ತಿ ಟ್ವೀಟ್ ಮಾಡಿದ್ದಾರೆ, "ಯಾವುದೇ ಘನತೆ ಇಲ್ಲ, ಹಿಂದಿಯೇತರರನ್ನು ಅವರ ಸ್ವಂತ ರಾಜ್ಯದಲ್ಲಿಯೇ ಎರಡನೇ ದರ್ಜೆಯ ನಾಗರಿಕರಾಗಿ ಪರಿಗಣಿಸಲಾಗುತ್ತಿದೆ" ಎಂದು ಹೇಳಿದರು.


ನಿರ್ಗಮನ ಸಾಲಿನಲ್ಲಿರುವ ಸೀಟುಗಳಲ್ಲಿ ಕುಳಿತ ಫ್ಲೈಯರ್ ಗಳಿಗೆ ತುರ್ತು ಪರಿಸ್ಥಿತಿ ಉಂಟಾದರೆ ಸಹಾಯ ಮಾಡಲು ಸಿಬ್ಬಂದಿಯೊಂದಿಗೆ ಸಂವಹನ ನಡೆಸಲು ಸಾಧ್ಯವಾಗುತ್ತದೆ. ಕೆಲವು ಟ್ವಿಟ್ಟರ್ ಬಳಕೆದಾರರು ಚಕ್ರವರ್ತಿ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿ, ನಿರ್ಗಮನ ಸಾಲಿನಲ್ಲಿರುವ ಸೀಟುಗಳನ್ನು ನೀಡುವ ಮೊದಲು ಅಗತ್ಯ ತಪಾಸಣೆಗಳನ್ನು ನಡೆಸುವುದು ವಿಮಾನಯಾನ ಸಂಸ್ಥೆಯ ಜವಾಬ್ದಾರಿಯಾಗಿದೆ ಎಂದು ಕೆಲವರು ಹೇಳಿದ್ದಾರೆ.


ಟ್ವೀಟ್ ಗೆ ಪ್ರತಿಕ್ರಿಯಿಸಿದ ತೆಲಂಗಾಣ ಸಚಿವ ಕೆಟಿಆರ್
ತೆಲಂಗಾಣ ಸಚಿವ ಕೆ.ಟಿ.ರಾಮರಾವ್ ಕೂಡ ಈ ವಿಷಯವನ್ನು ಗಮನಿಸಿದ್ದು, ಇಂಡಿಗೋ ಪ್ರಾದೇಶಿಕ ಮಾರ್ಗಗಳಲ್ಲಿ ಸ್ಥಳೀಯ ಭಾಷೆಗಳ ಜ್ಞಾನವನ್ನು ಹೊಂದಿರುವ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು ಎಂದು ಹೇಳಿದರು.


ಇದನ್ನೂ ಓದಿ:  Afghanistan: ಹೊಟ್ಟೆಗೆ ಹಿಟ್ಟಿಲ್ಲ, ಹುಲ್ಲು ತಿಂದು ಹಸಿವು ನೀಗಿಸ್ತಿರೋ ಪುಟ್ಟ ಪುಟ್ಟ ಮಕ್ಕಳು: ಕರುಳು ಕಿವುಚುವಂತಿದೆ ಚಿತ್ರಗಳು


ಕೆಲವು ಬಳಕೆದಾರರು ಈ ಘಟನೆಯ ಬಗ್ಗೆ ಕೋಪಗೊಂಡಿದ್ದು, ತೆಲುಗು ಭಾಷೆಯನ್ನು ಅರ್ಥಮಾಡಿಕೊಳ್ಳಬಲ್ಲ ಸಿಬ್ಬಂದಿ ಸದಸ್ಯರನ್ನು ಹೊಂದಿರದ ವಿಮಾನಯಾನ ಸಂಸ್ಥೆಗೆ ಸ್ವೀಕಾರಾರ್ಹವಲ್ಲ ಎಂದು ಹೇಳಿದರು. "ಸ್ಪಷ್ಟವಾಗಿ ಹಿಂದಿ ಹೇರಿಕೆ ಮತ್ತು ಹಿಂದಿಯೇತರ ಭಾಷೆಯ ವಿರುದ್ಧ ತಾರತಮ್ಯ" ಎಂದು ಸಿ ರಮಣ ಕುಮಾರ್ ಎಂಬ ಬಳಕೆದಾರರು ಟ್ವೀಟ್ ಮಾಡಿದ್ದಾರೆ. ಇಷ್ಟಾದರೂ ಸಹ ಇನ್ನೂ ಇಂಡಿಗೋ ಮಾತ್ರ ಈ ಘಟನೆಯ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

Published by:Ashwini Prabhu
First published: