K-pop: ಕೊರಿಯನ್ ಮ್ಯೂಸಿಕ್ ಕ್ಷೇತ್ರದಲ್ಲಿ ಸದ್ದು ಮಾಡುತ್ತಿದೆ ಭಾರತೀಯ ಸಂಗೀತ

Indian Music: 2020 ರಲ್ಲಿ ಕೆ-ಪಾಪ್ ತಂಡದ ವೆಂಜೀ ಎಂಬುವವರು ಭಾರತದ ಶಾಲ್ಮಲಿ ಹಾಗೂ ಇಕ್ಕಾ ಎಂಬುವವರೊಂದಿಗೆ ತಮ್ಮ ಸೋಲೋ ಗೀತೆಗಾಗಿ ಕೆಲಸ ಮಾಡಿದ್ದರು. ಇದರಲ್ಲಿ ಪಂಜಾಬಿ ಸಂಗೀತ ಶೈಲಿಯ ಭಾಂಗ್ರಾ ಸಂಗೀತದ ಅಂಶಗಳನ್ನು ಬಳಸಿಕೊಳ್ಳಲಾಗಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪಾಪ್ (POP) ಸಂಗೀತ  (Music) ಎಂಬುದು ಯಾವಾಗಿನಿಂದಲೂ ಯುವಸಮುದಾಯದ ಅಚ್ಚುಮೆಚ್ಚು. ಪಾಶ್ಚಿಮಾತ್ಯ ದೇಶಗಳಿಂದ ಹೆಚ್ಚು ಕಡಿಮೆ ಉದಯಿಸಿರುವ ಈ ಸಂಗೀತ ಕ್ಷೇತ್ರ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದ್ದು ಜನರನ್ನು ಪರಿಣಾಮಕಾರಿಯಾಗಿ ತನ್ನೆಡೆ ಸೆಳೆಯುವಲ್ಲಿ ಎತ್ತಿದ ಕೈ. ಭಾರತದಲ್ಲೂ ಪಾಪ್ ಸಂಗೀತಕ್ಕೆ ಲಕ್ಷಾಂತರ ಅಭಿಮಾನಿಗಳಿದ್ದಾರೆ ಹಾಗೂ ಇದರ ಪ್ರಭಾವವನ್ನು ನಾವು ಕೆಲವು ಹಿಂದಿ ಚಲನಚಿತ್ರ ಸಂಗೀತಗಳಲ್ಲೂ ಸಹ ನೋಡಬಹುದಾಗಿದೆ. ಇದಲ್ಲದೆ, ಭಾರತದಲ್ಲಿ (India) ಸಂಗೀತಕ್ಕೆ ತನ್ನದೇ ಆದ ವಿಶೇಷ ಸಂಸ್ಕೃತಿಯಿದ್ದು ಈಗೀಗ ಭಾರತೀಯ ಸಂಗೀತ ಎಲ್ಲೆಡೆ ಗಮನಸೆಳೆಯುತ್ತಿರುವುದೂ ಸಹ ಅಷ್ಟೇ ಸತ್ಯ.

ಈಗ ಸುದ್ದಿ ಏನಪ್ಪಾ ಅಂದರೆ, ಕಳೆದ ವರ್ಷ ದಕ್ಷಿಣ ಕೊರಿಯಾದ ಸುಪ್ರಸಿದ್ಧ ಪಾಪ್ ಮ್ಯೂಸಿಕ್ ಬ್ರ್ಯಾಂಡ್ ಆದ NCT-127 ತಂಡದ ಕೆ-ಪಾಪ್ ಬಾಯ್ ಸಮೂಹವು ತಮ್ಮ ಹೊಚ್ಚ ಹೊಸ ಮ್ಯೂಸಿಚ್ ಅಲ್ಬಂನ ಫೇವರೇಟ್ (ವ್ಯಾಂಪೈರ್) ಗೀತೆಯ ಟೀಸರ್ ಅನ್ನು ಬಿಡುಗಡೆ ಮಾಡಿದಾಗ ಅದು ಸಖತ್ ವೈರಲ್ ಆಗಿ ಅಭಿಮಾನಿಗಳ ಮನದಲ್ಲಿ ಧೂಳೆಬ್ಬಿಸಿತ್ತು.

ಈ ದಕ್ಷಿಣ ಏಷಿಯಾದ ಸಂಗೀತ ತಂಡವು ತಮ್ಮ ಸಂಗೀತದಲ್ಲಿ ಭಾರತದ ಬಾಲಿವುಡ್‌ನಲ್ಲಿ 90ರ ದಶಕದಲ್ಲಿ ಸಖತ್ ಹಿಟ್ ಆಗಿದ್ದ 'ದಿಲ್ ತೋ ಪಾಗಲ್ ಹೈ' ಚಿತ್ರದ "ಅರೆ ರೆ ಅರೆ" ಎಂಬ ಸಂಗೀತದ ಕೋರಸ್ ತುಣುಕನ್ನು ತನ್ನ ಗೀತೆಯಲ್ಲಿ ವಿಶೇಷವಾಗಿ ಬಳಸಿಕೊಂಡಿದೆ. ಅಷ್ಟೇ ಅಲ್ಲ, ಅದಕ್ಕೆ ಅದು ಹೊಸ ಎಲೆಕ್ಟ್ರಾನಿಕ್ ಹಿನ್ನೆಲೆಯ ಸ್ಪರ್ಶ ನೀಡಿದ್ದು ಕೊಂಚ ಬದಲಾವಣೆ ಮಾಡಿ ತನ್ನ ಸಂಗೀತದಲ್ಲಿ ಅಳವಡಿಸಿಕೊಂಡಿದೆ ಎನ್ನಲಾಗಿದೆ. ಇದೊಂದು ರೀತಿಯಲ್ಲಿ ಕೊರಿಯನ್ ಹಾಗೂ ಭಾರತೀಯ ಸಂಗೀತದ ಲೋಕದ ಕಲಾವಿದರ ಸಮಾಗಮದ ವಿಶೇಷತೆ ಎನ್ನಬಹುದು ಅಷ್ಟೇ.

ಕೋರಿಯನ್ ಸಂಗೀತವನ್ನು ಬಹು ಹತ್ತಿರದಿಂದ ಗಮನಿಸುತ್ತಿರುವ ಅನ್ಶುಮನ್ ಶರ್ಮಾ ಅವರು ಹೇಳುವಂತೆ ಕೆ-ಪಾಪ್ ಸಂಗೀತ ತಂಡವು ಸಾಮಾನ್ಯವಾಗಿ ಹಿಪ್-ಹಾಪ್, ರ್‍ಯಾಪ್, ಪಾಪ್ ಮುಂತಾದ ಸಂಗೀತ ಪ್ರಕಾರಗಳಿಗೆ ಹೆಸರುವಾಸಿಯಾಗಿದ್ದು ಇದರಲ್ಲಿ ಇತ್ತೀಚಿನ ಕೆಲ ಸಮಯದಿಂದ ಭಾರತೀಯ ಸಂಗೀತದ ಪ್ರಭಾವ ಕಂಡುಬರುತ್ತಿದೆ ಎನ್ನುತ್ತಾರೆ. ಇದಕ್ಕೆ ಉದಾಹರಣೆಯಾಗಿ ಇತ್ತೀಚೆಗೆ ಅವರು ತಮ್ಮ ಹಳೆಯ ಅಲ್ಬಂ ಒಂದನ್ನು ಮತ್ತೆ ರೀ-ಪ್ಯಾಕೇಜ್ ಮಾಡಿದಾಗ ಅದರ ಮಿಲಿಯನ್ ಕಾಪಿಗಳು ಬಿಕರಿಯಾಗಿದ್ದವು. ಇದರಲ್ಲಿ ಭಾರತೀಯ ಸಂಗೀತದ ಪ್ರಭಾವವಿತ್ತು.

ವಾಸ್ತವದಲ್ಲಿ ಕಳೆದ ಹಲವು ವರ್ಷಗಳಿಂದ ಭಾರತೀಯ ಸಂಗೀತಾಸಕ್ತರು ಕೊರಿಯನ್ ದೇಶದ ಈ ಕೆ-ಪಾಪ್ ಸಂಗೀತ ತಂಡವು ನಿರ್ಮಿಸುವ ಸಂಗೀತದಲ್ಲಿ ಭಾರತದ ಸಂಗೀತ ಶೈಲಿಗೆ ಸಂಬಂಧಿಸಿದಂತೆ ಸಾಮ್ಯತೆ ಇರುವುದನ್ನು ಗಮನಿಸುತ್ತಿದ್ದು ಈ ಬಗ್ಗೆ ಹಲವಾರು ವಿಡಿಯೋಗಳು ಆನ್ಲೈನ್‌ನಲ್ಲಿ ಹರಿದಾಡಿವೆ. ಈ ರೀತಿಯ ವಿದ್ಯಮಾನಗಳಿಂದಾಗಿಯೇ ಈಗ ಕೊರಿಯನ್ ತಾರೆಯರು ಹೆಚ್ಚು ಹೆಚ್ಚು ಭಾರತದ ಕಡೆ ಗಮನ ಹರಿಸುವಂತಾಗಿದೆ ಎಂದು ಅಭಿಮಾನಗಳ ಅಭಿಪ್ರಾಯವಾಗಿದೆ.

ಇದನ್ನೂ ಓದಿ: ಬಿಯರ್ ಬದಲು ಕೆಮಿಕಲ್ ಕೊಟ್ಟ ಬಾರ್, ಕುಡಿದವನಿಗೆ ಸಿಕ್ತು 61 ಕೋಟಿ ಪರಿಹಾರ..!

ಭಾರತದ ರೋಲಿಂಗ್ ಸ್ಟೋನ್‌ನಲ್ಲಿ ಸಹಾಯಕ ಎಡಿಟರ್ ಆಗಿರುವ ರಿದ್ಧಿ ಚಕ್ರವರ್ತಿ ಅವರು ''ಈ ಹಿಂದೆ ಭಾರತೀಯ ಸಂಗೀತ ನಿರ್ಮಾಣಕಾರರು ಹೆಚ್ಚು ಕೊರಿಯಾ ಸಂಗೀತವನ್ನು ನಕಲು ಮಾಡುತ್ತಿದ್ದರು, ಆದರೆ, ಈಗ ಕಾಲ ಬದಲಾಗಿದ್ದು ಸಂಗೀತದಲ್ಲಿ ಒಂದು ವಿಕಸನವೇ ಆಗಿ ಹೋಗಿದೆ ಹಾಗೂ ನಕಲು ಎಂಬುದೇ ಇಲ್ಲ" ಎಂದು ಹೇಳುತ್ತಾರೆ.

ಭಾರತಕ್ಕೆ ಸಂಬಂಧಿಸಿದಂತೆ ಇಲ್ಲಿಯೇ ಸಂಗೀತ ಸಾಕಷ್ಟು ಗಟ್ಟಿಯಾಗಿರುವಾಗ ಕೆ-ಪಾಪ್ ಸಂಗೀತ ಭಾರತದಲ್ಲಿ ಗುರುತಿಸಿಕೊಂಡಿದ್ದು ಹೇಗೆ ಎಂಬ ಸಂದೇಹ ಸಾಮಾನ್ಯವಾಗಿ ಮೂಡದೇ ಇರಲಾರದು. ಅದಕ್ಕೆ ಉತ್ತರವೆಂದರೆ, ಭಾರತದ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಕೆಲ ಕ್ರಾಂತಿಕಾರಿ ಸಂಘಟನೆಗಳಿಂದ ಬಾಲಿವುಡ್ ಸಂಗೀತವನ್ನು ಬ್ಯಾನ್ ಮಾಡಿದ್ದ ಸಂದರ್ಭದಲ್ಲಿ ಕೊರಿಯನ್ ಡ್ರಾಮಾ ಹಾಗೂ ಸಂಗೀತಗಳನ್ನು ಇಲ್ಲಿನ ಜನರು ಕೇಳುತ್ತಿದ್ದರು. ತದನಂತರ ಕೆ-ಪಾಪ್ ತನ್ನದೇ ಆದ ಅಭಿಮಾನಿ ಬಳಗವನ್ನು ಈ ಭಾಗದಿಂದ ಪಡೆಯಿತು.

ಅಂದಿನಿಂದ ಕೊರಿಯನ್ ದೇಶದ ಕೆ-ಪಾಪ್ ಬ್ಯಾಂಡಿನಲ್ಲಿ ಭಾರತ ಸಂಗೀತದ ಪ್ರಭಾವ ಏರುತ್ತಲೇ ಇದೆ. ಈ ಹಿಂದೆ ಆನಲೈನ್‌ನಲ್ಲಿ ಕೆ-ಪಾಪ್ ನಡೆಸುತ್ತಿದ್ದ ಕೆಲವು ಸಂಗೀತ ಸ್ಪರ್ಧೆಗಳಲ್ಲಿ ಕೇವಲ ನೂರರ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದ ಕಲಾವಿದರು ಈಗ ಸಾವಿರ ಗಡಿ ದಾಟಿದ್ದಾರೆ. ಅಲ್ಲದೆ, ಭಾರತದಿಂದ ಲಕ್ಷಾಂತರ ಅಭಿಮಾನಿಗಳು ಇವರ ಲೈವ್ ಸ್ಟ್ರೀಮ್ ನೋಡುತ್ತಾರೆ. ಕಳೆದ ಬಾರಿ ಬಾಲಿವುಡ್ಡಿನ 'ಚುನರಿ ಚುನರಿ' ಪ್ರಭಾವಿತ ಗೀತೆ ಸಾಕಷ್ಟು ವೈರಲ್ ಆಗಿತ್ತು. ಕೆಲ ಭಾರತೀಯ ಸಂಗೀತ ನಿರ್ಮಾಣಕಾರರು ಕೆ-ಪಾಪ್ ನೊಂದಿಗೆ ಸಹಭಾಗಿತ್ವ ಹೊಂದಿದ್ದಾರೆ ಕೂಡ. ಇದನ್ನೆಲ್ಲ ನೋಡಿದಾಗ ಕೊರಿಯನ್ ಸಂಗೀತ ತಾರೆಯರು ಭಾರತೀಯ ಸಂಗೀತದತ್ತ ಮುಖ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ.

ಕಳೆದ ಫೆಬ್ರವರಿಯಂದು ಕೆ-ಪಾಪ್ ತಂಡದ ಅಲೆಕ್ಸಾ ಅವರ ಪ್ರತಿನಿಧಿಯು ಭಾರತದಲ್ಲಿ ಸ್ವತಂತ್ರ ಸಂಗೀತ ನಿರ್ಮಾಣಕಾರರಾದ ಅಶ್ವಿನ್ ಭಾಸ್ಕರ್ ಅವರನ್ನು ಸಂಪರ್ಕಿಸಿ ಅಲೆಕ್ಸಾ ಅವರ ಟ್ಯಾಟೂ ಕವರ್ ಗೀತೆಯ ನಿರ್ಮಾಣಕ್ಕಾಗಿ ಸಹಭಾಗಿತ್ವದಡಿಯಲ್ಲಿ ಪ್ರಸ್ತಾವನೆ ಇಟ್ಟಿದ್ದರು. ಅದಕ್ಕೆ ಅಶ್ವಿನ್ ಅವರು ಸಮ್ಮತಿಸಿದ್ದರು. ವಿಶೇಷವೆಂದರೆ ಕೇವಲ ಅಂಚೆ ಮೂಲಕವೇ ಈ ಬಗ್ಗೆ ವ್ಯವಹಾರ ನಡೆಸಿ ಕೊನೆಗೆ ಸಂಗೀತವನ್ನು ನಿರ್ಮಾಣ ಮಾಡಿದ್ದರು. ಈ ಒಟ್ಟಾರೆ ಪ್ರಕ್ರಿಯೆಯಲ್ಲಿ ಅಶ್ವಿನ್ ಅವರಾಗಲಿ ಅಲೆಕ್ಸಾ ಅವರಾಗಲಿ ಎಂದಿಗೂ ಮುಖಾಮುಖಿ ಭೇಟಿಯಾಗಲೇ ಇಲ್ಲ. ಈ ಬಗ್ಗೆ ಅಶ್ವಿನ್ ಅವರು ಇದೇ ಭವಿಷ್ಯದಲ್ಲಿ ನಡೆಯುವ ವ್ಯವಹಾರದ ಸ್ವರೂಪ ಎಂದು ಬಣ್ಣಿಸುತ್ತಾರೆ.

ಇದನ್ನೂ ಓದಿ: ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದಂತೆ ಮದುವೆಯಾದ ಜೋಡಿ

2020 ರಲ್ಲಿ ಕೆ-ಪಾಪ್ ತಂಡದ ವೆಂಜೀ ಎಂಬುವವರು ಭಾರತದ ಶಾಲ್ಮಲಿ ಹಾಗೂ ಇಕ್ಕಾ ಎಂಬುವವರೊಂದಿಗೆ ತಮ್ಮ ಸೋಲೋ ಗೀತೆಗಾಗಿ ಕೆಲಸ ಮಾಡಿದ್ದರು. ಇದರಲ್ಲಿ ಪಂಜಾಬಿ ಸಂಗೀತ ಶೈಲಿಯ ಭಾಂಗ್ರಾ ಸಂಗೀತದ ಅಂಶಗಳನ್ನು ಬಳಸಿಕೊಳ್ಳಲಾಗಿತ್ತು. ಭಾರತೀಯ ಅಭಿಮಾನಿಗಳು ಹೇಳುವಂತೆ ಕೆ-ಪಾಪ್ ಸಂಗೀತವು ಭಾರತೀಯ ಸಂಗೀತದಂತೆಯೇ ಮೆಲೋಡಿ ಹೊಂದಿರುತ್ತವೆ ಎನ್ನಲಾಗಿದೆ.
Published by:Sandhya M
First published: