• ಹೋಂ
 • »
 • ನ್ಯೂಸ್
 • »
 • ಟ್ರೆಂಡ್
 • »
 • Viral Tattoo: ಹೆಂಡತಿಯ ’ಆ ರೀತಿಯ’ ಫೋಟೋ ಟ್ಯಾಟೂ ಹಾಕಿಸಿಕೊಂಡ ಗಂಡ! ಬಿದ್ದು ಬಿದ್ದು ನಕ್ಕ ನೆಟ್ಟಿಗರು

Viral Tattoo: ಹೆಂಡತಿಯ ’ಆ ರೀತಿಯ’ ಫೋಟೋ ಟ್ಯಾಟೂ ಹಾಕಿಸಿಕೊಂಡ ಗಂಡ! ಬಿದ್ದು ಬಿದ್ದು ನಕ್ಕ ನೆಟ್ಟಿಗರು

ಗಂಡ ಹಾಕಿಸಿಕೊಂಡ ಟ್ಯಾಟೂ

ಗಂಡ ಹಾಕಿಸಿಕೊಂಡ ಟ್ಯಾಟೂ

ಇಲ್ಲೊಬ್ಬ ತನ್ನ ಹೆಂಡತಿಯನ್ನು ಖುಷಿ ಪಡಿಸುವ ಉದ್ದೇಶದಿಂದ ತನ್ನ ಮೈಮೇಲೆ ವಿಶೇಷ ರೀತಿಯಲ್ಲಿ ಹೆಂಡತಿಯ ಫೋಟೋವನ್ನು ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಈ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್​ ಆಗುತ್ತಿದ್ದು, ನೋಡುಗರಿಗೆ ತಮಾಷೆಯ ಸಂಗಾತಿ ಇದಾಗಿದೆ.

 • Share this:

  ಯಾರೆಲ್ಲಾ ಯಾವ ರೀತಿಯಲ್ಲೆಲ್ಲಾ ಪ್ರೀತಿಗೆ (Love) ಬೀಳುತ್ತಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಅನೇಕರು ಪ್ರೀತಿಯಲ್ಲಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಅವರು ತಮ್ಮ ಸಂಗಾತಿಯನ್ನು ಸಂತೋಷಪಡಿಸಲು, ಅವರ ಮನಸ್ಥಿತಿಯನ್ನು ಸುಧಾರಿಸಲು ಅನೇಕ ಕೆಲಸಗಳನ್ನು ಮಾಡುತ್ತಾರೆ. ಇನ್ನು ಇಂತಹ ಘಟನೆಗಳು ನಾವು ಇದುವರೆಗೆ ಸಾಕಷ್ಟು ಸೋಶಿಯಲ್ ಮೀಡಿಯಾದಲ್ಲಿ (Social Media) ನೋಡಿದ್ದೇವೆ. ಇನ್ನೂ ಕೆಲವರು ತನ್ನ ಪ್ರೀತಿಯನ್ನು ಗೆಲ್ಲುವ ಉದ್ದೇಶದಿಂದ ಬಹಳಷ್ಟು ಹರಸಾಹಸ ಪಡ್ತಾರೆ. ಅಂತಹದೇ ಒಂದು ಸುದ್ದಿ ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಚರ್ಚೆಯಲ್ಲಿದೆ. ತನ್ನ ಹೆಂಡತಿಯನ್ನು ಖುಷಿ ಪಡಿಸಲು ಹೋಗಿ ಹೆಂಡತಿಗೆ ಕೋಪ ಬರಿದಿದ್ದಾನೆ. ಹೆಂಡತಿಯ ಫೋಟೋವನ್ನು ತನ್ನ ಮೈಮೇಲೆ ಟ್ಯಾಟೂ (Tattoo) ಹಾಕಿಸಿಕೊಂಡಿದ್ದಾನೆ.


  ಹೌದು, ಇಲ್ಲೊಬ್ಬ ತನ್ನ ಹೆಂಡತಿಯನ್ನು ಖುಷಿ ಪಡಿಸುವ ಉದ್ದೇಶದಿಂದ ತನ್ನ ಮೈಮೇಲೆ ವಿಶೇಷ ರೀತಿಯಲ್ಲಿ ಹೆಂಡತಿಯ ಫೋಟೋವನ್ನು ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಈ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್​ ಆಗುತ್ತಿದ್ದು, ನೋಡುಗರಿಗೆ ತಮಾಷೆಯ ಸಂಗಾತಿ ಇದಾಗಿದೆ.


  ಟಿಕ್​ಟಾಕ್​ನಲ್ಲಿ ಶೇರ್ ಮಾಡಿದ ವಿಡಿಯೋ


  ಜೆರ್ರಿ ಎಂಬ ವ್ಯಕ್ತಿ ತನ್ನ ಹೆಂಡತಿಯ ತಮಾಷೆಯ ಮುಖವನ್ನು ತನ್ನ ದೇಹದ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ, ಇದನ್ನು ನೋಡಿ ಹೆಂಡತಿ ಬಹಳ:ಷ್ಟು ಕೋಪಗೊಂಡಳು. ಇನ್ನು ಜೆರ್ರಿ ಇತ್ತೀಚೆಗೆ ಜನಪ್ರಿಯ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಆಗಿರುವ ಟಿಕ್‌ಟಾಕ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ತಮ್ಮ ದೇಹದ ಮೇಲೆ ಹಾಕಿಕೊಂಡಿರುವಂತಹ ಟ್ಯಾಟೂವನ್ನು ತೋರಿಸಿದ್ದಾರೆ. ಅದರಲ್ಲಿ ಅವರ ಪತ್ನಿಯ ಮುಖದ ಹಚ್ಚೆ ಕೂಡ ಸೇರಿದೆ.


  ಇದನ್ನೂ ಓದಿ: Viral News: ಹೊಟ್ಟೆ ನೋವು ಅಂತ ಡಾಕ್ಟರ್​ ಹತ್ರ ಹೋದ ಯುವಕ, ಸ್ಕ್ಯಾನಿಂಗ್ ರಿಪೋರ್ಟ್​ನಲ್ಲಿತ್ತು ಶಾಕಿಂಗ್ ಸುದ್ದಿ

  ಈ ಟ್ಯಾಟೂನಲ್ಲಿ ಏನಿದೆ?


  ಪತ್ನಿ ತನ್ನ ಸ್ನೇಹಿತರೊಂದಿಗೆ ನಗುತ್ತಾ ತಮಾಷೆ ಮಾಡುತ್ತಿದ್ದಾಗ ಆ ಫೋಟೋವನ್ನು ನಾನು ಟ್ಯಾಟೂ ಹಾಕಿಸಿಕೊಂಡಿದ್ದೇನೆ. ಇದರಲ್ಲಿ ಪತ್ನಿಯ ಕಣ್ಣುಗಳು ಮೇಲಕ್ಕೆ ಮೇಲೆದ್ದು ಹಲ್ಲುಗಳು ಒಂದಕ್ಕೊಂದು ಅಂಟಿಕೊಂಡಿದ್ದು ಬಾಯಿ ಸ್ವಲ್ಪ ವಕ್ರವಾಗಿದೆ. ಇದರಿಂದ ಆಕೆ ಸ್ವಲ್ಪ ಕೋಪಗೊಂಡಂತೆ ಕಾಣುತ್ತದೆ.


  ಗಂಡ ಹಾಕಿಸಿಕೊಂಡ ಟ್ಯಾಟೂ


  ವರದಿಗಳ ಪ್ರಕಾರ, ಜೆರ್ರಿ ಅವರು ತಮ್ಮ ಹೆಂಡತಿಯ ಮುಖದ ಟ್ಯಾಟೂವನ್ನು ತುಂಬಾ ಇಷ್ಟಪಡುತ್ತಾರೆ ಎಂದು ಹೇಳುತ್ತಾರೆ. ಆದರೆ ಅವರ ಹೆಂಡತಿ ಮಾತ್ರ ಅದನ್ನು ತುಂಬಾ ಕೆಟ್ಟದಾಗಿ ಕಾಣುತ್ತಾರೆ. ಈ ಟ್ಯಾಟೂವನ್ನು ನೋಡಿದ ಪತ್ನಿಗೆ ತುಂಬಾನೇ ಕೋಪ ಬಂದಿತ್ತು ಎಂದು ಅವರು ಹೇಳಿದ್ದಾರೆ.
  ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್


  ಇದೀಗ ಜೆರ್ರಿಯ ಟ್ಯಾಟೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಪತ್ನಿಯ ಮುಖದ ಟ್ಯಾಟೂವನ್ನು ನೋಡಿದ ಜನರು ತಮಾಷೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಈ ಟ್ಯಾಟೂ ತಮಾಷೆಯಾಗಿದೆ ಎಂದು ಕೆಲವರು ಹೇಳಿದರೆ, ಕೆಲವರು ಟ್ಯಾಟೂ ಕಲಾವಿದ ಅದ್ಭುತ ಕೆಲಸ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಅದೇ ರೀತಿ ತನ್ನ ಮೈಮೇಲೆ ಮುಖ ಹಚ್ಚೆ ಹಾಕಿಸಿಕೊಳ್ಳುವಷ್ಟು ಪ್ರೀತಿಸುವ ಪತಿ ನನಗೂ ಬೇಕು ಎಂದು ಒಬ್ಬರು ಮಹಿಳಾ ಬಳಕೆದಾರರು ಹೇಳಿದ್ದಾರೆ.


  ಹೊಟ್ಟೆಯಲ್ಲಿ ಸ್ಟೀಲ್ ಗ್ಲಾಸ್


  ಈ ಹಿಂದೆ ಬಿಹಾರದಲ್ಲೂ ಒಂದು ಘಟನೆ ನಡೆದಿತ್ತು. ಒಬ್ಬ ಯುವಕನ ಹೊಟ್ಟೆಯಲ್ಲಿ ಸ್ಟೀಲ್ ಗ್ಲಾಸ್ ಇತ್ತು. 22 ವರ್ಷದ ಮದ್ಯದ ವ್ಯಕ್ತಿ ತೀವ್ರ ಹೊಟ್ಟೆ ನೋವು ಮತ್ತು ಗುದನಾಳದ ರಕ್ತಸ್ರಾವದಿಂದ ಬಳಲುತ್ತಿದ್ದರು. ಅನಾರೋಗ್ಯದ ತೀವ್ರತೆಯನ್ನು ಪರಿಗಣಿಸಿ, ತಕ್ಷಣವೇ ಅವರನ್ನು ಪಾಟ್ನಾದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರು ಆತನನ್ನು ಪರೀಕ್ಷಿಸಿದಾಗ ಆತನ ಹೊಟ್ಟೆಯಲ್ಲಿ 14 cm (5.5 in) ಉದ್ದದ ಸ್ಟೀಲ್ ಗ್ಲಾಸ್ ಅಂಟಿಕೊಂಡಿರುವುದು ಕಂಡುಬಂತು.

  Published by:Prajwal B
  First published: