Hospital Bed: ಆಸ್ಪತ್ರೆಯ ನೆನಪಿಗಾಗಿ ಹೆರಿಗೆ ಹಾಸಿಗೆಯನ್ನು ಈಗ್ಲೂ ಸಂರಕ್ಷಿಸಿಟ್ಟಿದ್ದಾರಂತೆ ಇಡುಕ್ಕಿಯ ಗ್ರಾಮಸ್ಥರು

ಕೇರಳದ ಜನ ಇಲ್ಲೊಂದು ಆಸ್ಪತ್ರೆಯ (Hospital) ನೆನಪಿಗಾಗಿ ಹೆರಿಗೆ ಮಾಡಿಸುವ ಹಾಸಿಗೆಯ (Bed) ಬೆಂಚ್‌ ಒಂದನ್ನು ಉಳಿಸಿಕೊಂಡಿದೆ. ಹೌದು, ಇಡುಕ್ಕಿಯ ಬೈಸನ್ ವ್ಯಾಲಿ ಪಂಚಾಯತ್ ವ್ಯಾಪ್ತಿಯ ಮುಲ್ಲಕ್ಕನಂ ಎಂಬ ಹಳ್ಳಿಯಲ್ಲಿ, ಇಪ್ಪತ್ತೈದು ವರ್ಷಕ್ಕಿಂತಲೂ ಹೆಚ್ಚು ಕಾಲ ಆ ಹಳ್ಳಿಯ ಸಮುದಾಯದ ವೈದ್ಯಕೀಯ ಅಗತ್ಯಗಳನ್ನು ಪೂರೈಸಿದ ಆಸ್ಪತ್ರೆಯ ನೆನಪಿಗಾಗಿ ಅಲ್ಲಿನ ನಿವಾಸಿಗಳು ಹೆರಿಗೆ ಮಾಡಿಸುವ ಸಂದರ್ಭದಲ್ಲಿ ಬಳಸುತ್ತಿದ್ದ ಮರದ ಹಾಸಿಗೆಯನ್ನು (Wooden Bed) ಉಳಿಸಿಕೊಂಡಿದ್ದಾರೆ.

50 ವರ್ಷ ಹಿಂದಿನ ಹೆರಿಗೆ ಬೆಡ್

50 ವರ್ಷ ಹಿಂದಿನ ಹೆರಿಗೆ ಬೆಡ್

  • Share this:
ಪ್ರೀತಿ-ಪಾತ್ರರು ಯಾರಾದರೂ ನಮ್ಮನ್ನು ಅಗಲಿದ್ದಾಗ ಅವರ ನೆನಪಿನರ್ಥವಾಗಿ ಅವರು ಬಳಸುತ್ತಿದ್ದ ವಸ್ತುವನ್ನು (Things) ನಾವು ಹಾಗೇ ನಮ್ಮಲ್ಲಿ ಉಳಿಸಿಕೊಳ್ಳುವ ಅಭ್ಯಾಸವನ್ನು (Habits) ಹಲವಾರು ಮಂದಿ ರೂಢಿಸಿಕೊಂಡಿರುತ್ತೇವೆ. ಹಾಗೆಯೇ ಕೇರಳದ ಜನ ಇಲ್ಲೊಂದು ಆಸ್ಪತ್ರೆಯ (Hospital) ನೆನಪಿಗಾಗಿ ಹೆರಿಗೆ ಮಾಡಿಸುವ ಹಾಸಿಗೆಯ (Bed) ಬೆಂಚ್‌ ಒಂದನ್ನು ಉಳಿಸಿಕೊಂಡಿದೆ. ಹೌದು, ಇಡುಕ್ಕಿಯ ಬೈಸನ್ ವ್ಯಾಲಿ ಪಂಚಾಯತ್ ವ್ಯಾಪ್ತಿಯ ಮುಲ್ಲಕ್ಕನಂ ಎಂಬ ಹಳ್ಳಿಯಲ್ಲಿ, ಇಪ್ಪತ್ತೈದು ವರ್ಷಕ್ಕಿಂತಲೂ ಹೆಚ್ಚು ಕಾಲ ಆ ಹಳ್ಳಿಯ ಸಮುದಾಯದ ವೈದ್ಯಕೀಯ ಅಗತ್ಯಗಳನ್ನು ಪೂರೈಸಿದ ಆಸ್ಪತ್ರೆಯ ನೆನಪಿಗಾಗಿ ಅಲ್ಲಿನ ನಿವಾಸಿಗಳು ಹೆರಿಗೆ ಮಾಡಿಸುವ ಸಂದರ್ಭದಲ್ಲಿ ಬಳಸುತ್ತಿದ್ದ ಮರದ ಬೆಡ್ ಅನ್ನು (Wooden Bed) ಉಳಿಸಿಕೊಂಡಿದ್ದಾರೆ.

ಆಸ್ಪತ್ರೆ ಕಟ್ಟಡ ಪ್ರಸ್ತುತ ಬೇರೆ ವ್ಯವಹಾರಕ್ಕೆ ಬದಲಾಗುತ್ತಿರುವುದರಿಂದ ಹಳೆಯ ಆಸ್ಪತ್ರೆಯ ಒಂದು ವಸ್ತುವನ್ನಾದರೂ ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಸಾವಿರಾರು ಮಕ್ಕಳು ಜನಿಸಿದ ಈ ಬೆಡ್ ಅನ್ನು ಇಟ್ಟುಕೊಳ್ಳಲು ಅವರು ಹೀಗೆ ಮಾಡಿದ್ದಾರೆ.

25,000 ಹೆರಿಗೆಗಳಿಗೆ ಸಾಕ್ಷಿಯಾದ ಮರದ ಬೆಡ್
1970 ಮತ್ತು 2000ರ ನಡುವೆ ಆಸ್ಪತ್ರೆಯಲ್ಲಿ ನಡೆದ ಸುಮಾರು 25,000 ಹೆರಿಗೆಗಳಿಗೆ 50 ವರ್ಷ ಹಳೆಯ ಈ ಮರದ  ಬೆಡ್ ಸಾಕ್ಷಿಯಾಗಿದೆ. ಹೀಗಾಗಿ ಇದರ ಜೊತೆ ಅವೀನಾಭಾವ ಸಂಬಂಧ ಹೊಂದಿರುವ ಆಸ್ಪತ್ರೆ ಮತ್ತು ಆ ಊರಿನ ಜನರು ಇದನ್ನು ಜೋಪಾನವಾಗಿ ಕಾಪಾಡಿಕೊಳ್ಳಲು ನಿರ್ಧರಿಸಿದ್ದಾರೆ. ಆಸ್ಪತ್ರೆಯ ಕಟ್ಟಡದಲ್ಲಿ ಕಾಫಿ ಮಾರಾಟ ಉದ್ಯಮವನ್ನು ಹೊಸದಾಗಿ ನಿರ್ಮಿಸಲು ವಹಿಸಿಕೊಂಡ ವ್ಯಕ್ತಿ ಸಹ ಸ್ಥಳೀಯರನ್ನು ಅರ್ಥಮಾಡಿಕೊಂಡು ಹೆರಿಗೆ ಹಾಸಿಗೆ ಮತ್ತು ಆಸ್ಪತ್ರೆಯನ್ನು ಮೂಲ ರೂಪದಲ್ಲಿ ಸಂರಕ್ಷಿಸಿದ್ದಾರೆ.

ಈ ಆಸ್ಪತ್ರೆ ಮೊದಲ ಬಾರಿಗೆ ಶುರು ಮಾಡಿದ್ದು ಯಾರು? ಯಾವಾಗ? 
ಕೇರಳದ ಈ ಆಸ್ಪತ್ರೆಯನ್ನು ಮೊದಲಿಗೆ ಎ.ಕೆ. ಜೋಸೆಫ್‌ ಎಂಬುವವರು 1972ರಲ್ಲಿ ಈ ಗ್ರಾಮದಲ್ಲಿ ಮೊದಲಿಗೆ ಸ್ಥಾಪನೆ ಮಾಡಿದ್ದರು. ಆ ಸಮಯದಲ್ಲಿ, ಎಂಬಿಬಿಎಸ್‌ ಪದವಿ ಮುಗಿದ ನಂತರ ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯ ಸಮುದಾಯಕ್ಕೆ ಸೇವೆ ಸಲ್ಲಿಸಲು ಬಯಸಿ ಮುಕ್ಕಲಂನಲ್ಲಿ ಸೇವೆಯನ್ನು ಆರಂಭಿಸಿದರು.

ಇದನ್ನೂ ಓದಿ: Ikipalin: ಸಂಬಂಧಿಕರು ಸಾವನ್ನಪ್ಪಿದರೆ ತಮ್ಮ ಬೆರಳುಗಳನ್ನು ಕತ್ತರಿಸಿಕೊಳ್ತಾರೆ ಈ ಮಹಿಳೆಯರು!

ಜೋಸೆಫ್, ಬಾಡಿಗೆ ಕಟ್ಟಡದಿಂದ ಮೊದಲಿಗೆ ಆಸ್ಪತ್ರೆ ಪ್ರಾರಂಭಿಸಿದರು ಮತ್ತು ಶೀಘ್ರದಲ್ಲೇ ಮುಲ್ಲಕ್ಕನಂನಲ್ಲಿ ತಮ್ಮದೇ ಆದ ಆಸ್ಪತ್ರೆಯನ್ನು ನಿರ್ಮಿಸಿದರು. “ಹೆಚ್ಚಿನ ಪ್ರದೇಶಗಳಲ್ಲಿ ವಿದ್ಯುತ್, ರಸ್ತೆ ಮತ್ತು ಸಾರಿಗೆ ಸೌಲಭ್ಯಗಳು ಲಭ್ಯವಿಲ್ಲದ ಕಾರಣ, ಇಡುಕ್ಕಿಯ ಉಡುಂಬಂಚೋಳ ಮತ್ತು ದೇವಿಕುಲಂ ತಾಲೂಕುಗಳ ವ್ಯಾಪ್ತಿಯ ಪಂಚಾಯತ್‌ಗಳಲ್ಲಿ ನೆಲೆಸಿರುವ ಸಾವಿರಾರು ಜನರಿಗೆ ಈ ಆಸ್ಪತ್ರೆಯೇ ಆಧಾರವಾಗಿತ್ತು. ತಲೆಮಾರುಗಳಿಂದ ಹೆರಿಗೆ ಸಮಯದಲ್ಲಿ ಸೂಲಗಿತ್ತಿಯರನ್ನು ಅವಲಂಬಿಸಿಸುತ್ತಿದ್ದ ಗರ್ಭಿಣಿಯರು ಆಸ್ಪತ್ರೆ ಕಡೆ ಮುಖಮಾಡಲು ಆರಂಭಿಸಿದರು ಮತ್ತು ಉತ್ತಮ ಚಿಕಿತ್ಸಾ ಸೌಲಭ್ಯಗಳನ್ನು ಪಡೆದರು,'' ಎಂದು ಸ್ವತಃ ಜೋಸೆಫ್ ಹೇಳುತ್ತಾರೆ.

ಪ್ರೆಶರೈಸ್ಡ್ ಪ್ಯಾರಾಫಿನ್ ದೀಪಗಳ ಬೆಳಕಿನಲ್ಲಿ ಹೆರಿಗೆ ಮಾಡುತ್ತಿದ್ದ ವೈದ್ಯ
ಸಾರಿಗೆ, ವಿದ್ಯುತ್‌ ನಂತಹ ಯಾವುದೇ ಮೂಲ ಸೌಕರ್ಯವಿಲ್ಲದ ಆ ಸಂದರ್ಭದಲ್ಲಿ ವೈದ್ಯರಾದ ಜೋಸೆಫ್‌ ‘ಪೆಟ್ರೋಮ್ಯಾಕ್ಸ್’ ಪ್ರೆಶರೈಸ್ಡ್ ಪ್ಯಾರಾಫಿನ್ ದೀಪಗಳ ಬೆಳಕಿನಲ್ಲಿ ನೂರಾರು ಮಹಿಳೆಯರಿಗೆ ಸಿ-ಸೆಕ್ಷನ್ (ಸಿಸೇರಿಯನ್ ಹೆರಿಗೆ) ಮಾಡಿಸಿದ್ದರು. ಆಸ್ಪತ್ರೆಯಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ, ಯಾವುದೇ ರೀತಿಯ ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣಗಳೂ ಕೂಡ ವರದಿಯಾಗಿರಲಿಲ್ಲ. ಅಷ್ಟು ಅಚ್ಚುಕಟ್ಟಾಗಿ ವೈದ್ಯಕೀಯ ಸೇವೆಯಲ್ಲಿ ತೊಡಗಿದ್ದರು ಜೋಸೆಫ್.‌

ಆಸ್ಪತ್ರೆಯ ಸ್ಥಾಪನೆಯ ನಂತರ, ಮುಲ್ಲಕ್ಕನಂನಲ್ಲಿ ಅಂಗಡಿಗಳು ಮತ್ತು ವ್ಯಾಪಾರ ಸಂಸ್ಥೆಗಳು ತಲೆ ಎತ್ತುವುದರ ಮೂಲಕ ಸಣ್ಣ ಹಳ್ಳಿ ಪಟ್ಟಣವಾಗ ತೊಡಗಿತು ಎಂದು ನೆನಪಿಸಿಕೊಳ್ಳುತ್ತಾರೆ ಜೋಸೆಫ್. ‌

ಆಸ್ಪತ್ರೆಯ ಹಳೆಯ ಕೆಲವು ವಸ್ತುಗಳ ಸಂಗ್ರಹ
ಆದಾಗ್ಯೂ, 1984ರ ಹೊತ್ತಿಗೆ, ಜೋಸೆಫ್ ತಮ್ಮ ಸೇವೆಯಿಂದ ವಿರಾಮ ತೆಗೆದುಕೊಂಡು ಉನ್ನತ ವ್ಯಾಸಂಗಕ್ಕೆ ಹೋದರು. ಇದೇ ವೇಳೆ ಹಲವಾರು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಸಮೀಪದ ಪ್ರದೇಶಗಳಿಗೆ ಬಂದವು. ಜೋಸೆಫ್ ಪಾಲಾದಲ್ಲಿ ಮಕ್ಕಳ ಆಸ್ಪತ್ರೆಯನ್ನು ಪ್ರಾರಂಭಿಸಿದರು, ಹೊಸ ಆಸ್ಪತ್ರೆಯ ಸ್ಥಾಪನೆಯಿಂದಾಗಿ ಕಾಲಕ್ರಮೇಣ ಮುಕ್ಕಲಂನಲ್ಲಿದ್ದ ಈ ಆಸ್ಪತ್ರೆಯನ್ನು 1998ರಲ್ಲಿ ಮುಚ್ಚಲಾಯಿತು.

ಇದನ್ನೂ ಓದಿ:  Wild Fruit: ಅಪರೂಪದ ಕಾಡು ಹಣ್ಣನ್ನು ಬೆಳೆದು ಲಕ್ಷಾಧಿಪತಿಯಾದ ರೈತ! ಕೃಷಿ ಮಾಡ್ತಿನಿ ಅನ್ನುವವರು ಒಮ್ಮೆ ಇವ್ರನ್ನು ನೋಡಿ

ಈ ಆಸ್ಪತ್ರೆಯ ಕಟ್ಟಡದಲ್ಲಿ ನಂತರ ಕಾಫಿ ಉತ್ಪಾದನಾ ಘಟಕವನ್ನು ಪ್ರಾರಂಭಿಸಲು ಬೇಬಿ ಮ್ಯಾಥ್ಯೂ ನಿರ್ಧರಿಸಿದರು. ಆದರೆ ಆಸ್ಪತ್ರೆಯೊಂದಿಗೆ ನಿಕಟ ಸಂಬಂಧ ಹೊಂದಿದ ಸ್ಥಳೀಯರ ಮಾತಿನಂತೆ ಆಸ್ಪತ್ರೆಯ ಹಳೆಯ ಕೆಲವು ವಸ್ತುಗಳನ್ನು ಕಟ್ಟಡದಲ್ಲಿ ಇರಿಸಲು ಒಪ್ಪಿಕೊಂಡಿದ್ದಾರೆ. “ಬೆಡ್ ಮತ್ತು ಆಸ್ಪತ್ರೆಯನ್ನು ಅವುಗಳ ಮೂಲ ಸ್ಥಿತಿಯಲ್ಲಿ ಸಂರಕ್ಷಿಸಲಾಗಿದೆ. ಪಟ್ಟಣದ ಯುವ ಪೀಳಿಗೆಗೆ ದೀರ್ಘಕಾಲದವರೆಗೆ ಸಮುದಾಯಕ್ಕೆ ಸೇವೆ ಸಲ್ಲಿಸಿದ ಆಸ್ಪತ್ರೆಯ ಬಗ್ಗೆ ತಿಳಿದಿಲ್ಲದಿರಬಹುದು, ಆದರೆ ಹಳೆಯ ಜನರಿಗೆ ಇದು ಐತಿಹಾಸಿಕ ಕಟ್ಟಡವಾಗಿದ್ದು, ಈ ಪಟ್ಟಣ ರಚನೆಗೂ ಈ ಆಸ್ಪತ್ರೆಯೇ ಒಂದು ರೀತಿಯಲ್ಲಿ ಕಾರಣವಾಯಿತು" ಎಂದು ಬೇಬಿ ಮ್ಯಾಥ್ಯೂ ಹೇಳಿದರು.
Published by:Ashwini Prabhu
First published: