• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Story: ಹಾರ ಬದಲಾಯಿಸಿಕೊಳ್ಳುವಾಗ ಮದುಮಕ್ಕಳ ಹೊಡೆದಾಟ! ವಧುವನ್ನೇ ಮಂಟಪದಿಂದ ತಳ್ಳಿದ ವರ!

Viral Story: ಹಾರ ಬದಲಾಯಿಸಿಕೊಳ್ಳುವಾಗ ಮದುಮಕ್ಕಳ ಹೊಡೆದಾಟ! ವಧುವನ್ನೇ ಮಂಟಪದಿಂದ ತಳ್ಳಿದ ವರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಲ್ಲೊಬ್ಬ ವರ ತಾನು ಕೇಳಿದ್ದನ್ನು ಕೊಡಲಿಲ್ಲ ಅಂತ ಮದುವೆಯಲ್ಲಿ ಹಾರ ಬದಲಾಯಿಸಿಕೊಳ್ಳುವ ಸಮಯದಲ್ಲಿ ಎಂತಹ ಕೆಲಸ ಮಾಡಿದ್ದಾನೆ ನೀವೇ ಓದಿ.

  • Share this:

ಈಗಂತೂ ದಿನ ಬೆಳಗಾದರೆ ಸಾಕು, ಸಾಮಾಜಿಕ ಮಾಧ್ಯಮಗಳಲ್ಲಿ (Social Media) ವಿಡಿಯೋಗಳು ಒಳ್ಳೆ ಬಿಸಿ ಕೇಕ್​ನಂತೆ ಒಂದರ ಮೇಲೊಂದು ಇನ್ನೊಂದು ಎಂಬಂತೆ ಬರುತ್ತಲೇ ಇರುತ್ತವೆ. ಕೆಲವು ವಿಡಿಯೋಗಳು ನೋಡುಗರನ್ನು ಅಚ್ಚರಿ ಮತ್ತು ಬೆರಗುಗೊಳಿಸುವಂತದ್ದು ಆಗಿದ್ದರೆ, ಇನ್ನೂ ಕೆಲವು ವೀಡಿಯೋಗಳು ಮನಸ್ಸಿಗೆ ತುಂಬಾನೇ ಮುದ ನೀಡುವಂತೆ ಸಹ ಇರುತ್ತವೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಹೆಚ್ಚಿನ ವಿಡಿಯೋಗಳಲ್ಲಿ ಮುದ್ದಾದ ಸಾಕು ಪ್ರಾಣಿಗಳ ವಿಡಿಯೋಗಳು ಮತ್ತು ಈ ಮದುವೆಗೆ (Marriage) ಸಂಬಂಧಪಟ್ಟಂತಹ ವಿಡಿಯೋಗಳೇ ಹೆಚ್ಚಾಗಿರುತ್ತವೆ.


ಸೋಷಿಯಲ್ ಮೀಡಿಯಾದಲ್ಲಿ ಮದುವೆಗೆ ಸಂಬಂಧಿಸಿದ ವಿಡಿಯೋ ವೈರಲ್​


ಮದುವೆಗೆ ಸಂಬಂಧಪಟ್ಟ ವಿಡಿಯೋಗಳೆಂದರೆ ಮೊದಲಿಗೆ ನೆನಪಿಗೆ ಬರುವುದೇ ಮದುವೆ ಮಂಟಪದಲ್ಲಿ ವಧು-ವರರ ಗ್ರ್ಯಾಂಡ್ ಎಂಟ್ರಿ ಮತ್ತು ಮದುವೆ ಸಮಯದಲ್ಲಿ ಚಿಕ್ಕ-ಪುಟ್ಟ ವಿಷಯಕ್ಕೆ ಕಿತ್ತಾಡಿಕೊಂಡು ಮದುವೆಯನ್ನು ಕೊನೆಯ ಘಳಿಗೆಯಲ್ಲಿ ರದ್ದು ಮಾಡಿಕೊಂಡು ಹೋಗಿರುವ ಘಟನೆಗಳ ವಿಡಿಯೋಗಳು ನೋಡಿ.


ಈ ಹಿಂದೆ ಸಹ ನಾವು ಅನೇಕ ರೀತಿಯ ವಧು-ವರರ ಎಂಟ್ರಿಗಳನ್ನು ನಾವು ವಿಡಿಯೋಗಳಲ್ಲಿ ನೋಡಿದ್ದೆವು. ಅಷ್ಟೇ ಅಲ್ಲದೆ ಹಪ್ಪಳ ತಿನ್ನೋದಕ್ಕೆ ಸಿಕ್ಕಿಲ್ಲ ಅಂತ ವರನ ಸಂಬಂಧಿಕರು ವಧುವಿನ ಮನೆಯವರ ಜೊತೆ ಜಗಳವಾಡಿ, ಮದುವೆಯನ್ನ ಕ್ಯಾನ್ಸಲ್ ಮಾಡಿಕೊಂಡಿರುವುದು, ಬೈಕ್ ಕೊಡಿಸಲಿಲ್ಲ ಅಂತ ವರ ಮಹಾಶಯ, ಮದುವೆಯಾಗೋ ಹುಡುಗಿಗೆ ಪಿಯುಸಿಯಲ್ಲಿ ಕಡಿಮೆ ಅಂತ ಬಂದಿವೆ ಅಂತ ನೆಪ ಹೇಳಿ ಮದುವೆ ಕ್ಯಾನ್ಸಲ್ ಮಾಡಿದ್ದನ್ನು ನಾವು ನೋಡಿದ್ದೆವು.


ಇದನ್ನೂ ಓದಿ: ಕಾರು ಓಡಿಸುವಾಗ ಕೂಡ ಹೆಲ್ಮೆಟ್ ಧರಿಸ್ತಾರಂತೆ ಈ ವ್ಯಕ್ತಿ! ಇದರ ಹಿಂದಿನ ಕಾರಣ ಏನಿರಬಹುದು?


ವರ ಕುಡಿದುಕೊಂಡು ಮದುವೆ ಮಂಟಪಕ್ಕೆ ಬಂದಿದ್ದಾನೆ ಅಂತ ಸಹ ವಧುವಿನ ಕಡೆಯವರು ಮದುವೆಯನ್ನು ಕೊನೆಯ ಸಮಯದಲ್ಲಿ ರದ್ದುಗೊಳಿಸಿದ್ದರು. ಈಗ ಸಹ ಇಂತಹದೇ ಒಂದು ಘಟನೆ ನಡೆದಿದೆ ನೋಡಿ. ಇದರಲ್ಲಿ ತಾನು ಕೇಳಿದ ಎಸಿಯನ್ನು (ಏರ್ ಕಂಡಿಷನರ್) ಕೊಡಿಸಲಿಲ್ಲ ಅಂತ ವರ ಮದುವೆಯಲ್ಲಿ ಹಾರ ಬದಲಾಯಿಸಿಕೊಳ್ಳುವ ಸಮಯದಲ್ಲಿ ಎಂತಹ ಕೆಲಸ ಮಾಡಿದ್ದಾನೆ ನೀವೇ ಓದಿ.


ಉತ್ತರ ಪ್ರದೇಶದಲ್ಲಿ ಖುಷಿಯಾಗಿ ನಡೆಯಬೇಕಾದ ಮದುವೆಯಲ್ಲಿ ಎಡವಟ್ಟು


ಉತ್ತರ ಪ್ರದೇಶದ ಕನುಜ್ ಜಿಲ್ಲೆಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವಧು-ವರರು ಇನ್ನೇನು ಹಾರಗಳನ್ನು ಬದಲಾಯಿಸಿಕೊಳ್ಳಬೇಕು, ಆಗಲೇ ವರನು ಮದುವೆಯ ವೇದಿಕೆಯಲ್ಲಿ ವಧುವಿಗೆ ಹೊಡೆದ ಕಾರಣಕ್ಕೆ ಆ ಮದುವೆಯನ್ನೇ ರದ್ದುಗೊಳಿಸಲಾಗಿದೆ.


ಸಾಂದರ್ಭಿಕ ಚಿತ್ರ


ಸ್ಥಳೀಯ ಸುದ್ದಿ ಮಾಧ್ಯಮದ ವರದಿಯ ಪ್ರಕಾರ, ವರದಕ್ಷಿಣೆಯಲ್ಲಿ ವರನು ವಧುವಿನ ತಂದೆ-ತಾಯಿಗೆ ಒಂದು ಎಸಿ ಎಂದರೆ ಏರ್ ಕಂಡಿಷನರ್ ಕೊಡಿಸಲು ಡಿಮ್ಯಾಂಡ್ ಮಾಡಿದ್ದನಂತೆ. ಆದರೆ ಎಸಿಯನ್ನು ಆ ವಧುವಿನ ಕುಟುಂಬವು ಕೊಡುವುದಕ್ಕೆ ಒಪ್ಪದ ಕಾರಣ ವರ ತುಂಬಾನೇ ಅಸಮಾಧಾನಗೊಂಡಿದ್ದಾನೆ. ಆನಂತರ ಹಾರ ಬದಲಾಯಿಸಿಕೊಳ್ಳುವ ಸಮಯದಲ್ಲಿ ಕೋಪಗೊಂಡ ವರನು ಆ ವಧುವನ್ನು ಹೊಡೆದು ಮದುವೆಯ ವೇದಿಕೆಯಿಂದ ಕೆಳಕ್ಕೆ ತಳ್ಳಿದನಂತೆ.


ವಧು-ವರನ ಸಂಬಂಧಿಕರ ನಡುವೆ ದೊಡ್ಡ ಜಗಳವೇ ನಡೆದಿದೆ


ಶೀಘ್ರದಲ್ಲಿಯೇ ಈ ಘಟನೆಯ ಬಗ್ಗೆ ವಧು-ವರರ ಸಂಬಂಧಿಕರ ಮಧ್ಯೆ ವಾದ-ವಿವಾದಗಳು ಜಗಳಕ್ಕೆ ತಿರುಗಿತು. ಈ ಜಗಳದಲ್ಲಿ ಎರಡೂ ಕಡೆಯ ಅನೇಕ ವಿವಾಹ ಅತಿಥಿಗಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.


ನಂತರ, ಎರಡೂ ಪಕ್ಷಗಳು ಸ್ಥಳೀಯ ಪಂಚಾಯತ್ ಅನ್ನು ಸಂಪರ್ಕಿಸಿ ಮದುವೆಯನ್ನು ಮುಂದುವರಿಸದಿರಲು ನಿರ್ಧಾರ ತೆಗೆದುಕೊಂಡವು. ಇದರ ನಂತರ, ವರ ಮತ್ತು ಅವನ ಸಂಬಂಧಿಕರು ವಧುವಿಲ್ಲದೆ ಮನೆಗೆ ಹಿಂದಿರುಗಿದರು. ಮೇ 11 ರಂದು ಇಟಾವಾದ ಯುವಕನೊಂದಿಗೆ ಈ ವಧುವಿನ ಮದುವೆ ನಿಶ್ಚಯವಾಗಿತ್ತು ಎಂದು ವರದಿಯಾಗಿದೆ.
ವರದಕ್ಷಿಣೆಯಲ್ಲಿ ತಾನು ಕೇಳಿದ ಎಸಿಯನ್ನು ನೀಡಲು ವಧುವಿನ ಕುಟುಂಬವು ನಿರಾಕರಿಸಿದೆ ಎಂದು ವರನಿಗೆ ತಿಳಿಯುವವರೆಗೂ ಮದುವೆಯ ಎಲ್ಲಾ ಕಾರ್ಯಕ್ರಮಗಳು ತುಂಬಾ ಸುಗಮವಾಗಿಯೇ ನಡೆಯುತ್ತಿದ್ದವು. ಎಸಿ ಕೊಡುತ್ತಿಲ್ಲ ಅಂತ ತಿಳಿದು ತುಂಬಾನೇ ಕೋಪಗೊಂಡ ವರನು ಆ ವಧುವನ್ನು ಹೊಡೆದು ವೇದಿಕೆಯಿಂದ ತಳ್ಳಿದ್ದಕ್ಕೆ, ಆಕೆ ಮೂರ್ಛೆ ಹೋದಳು.


ಈ ಘಟನೆಗೆ ಸಂಬಂಧಿಸಿದಂತೆ ದೂರು ಸ್ವೀಕರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ದೃಢಪಡಿಸಿದರು ಮತ್ತು ಎರಡೂ ಕುಟುಂಬಗಳು ಮದುವೆಯನ್ನು ರದ್ದುಗೊಳಿಸಲು ನಿರ್ಧರಿಸಿದವು ಎಂದು ಹೇಳಿದರು.

top videos
    First published: