ಮದುವೆ ಸೀಸನ್ (Marriage Function) ಎಲ್ಲೆಡೆ ಪ್ರಾರಂಭವಾಗಿದೆ. ಹೆಣ್ಣು-ಗಂಡು (Female and male) ಮದುವೆ ಎಂಬ ಪವಿತ್ರ ಬಂಧನದಲ್ಲಿ (Holy bondage) ಬಂಧಿಯಾಗುವ ಅಮೂಲ್ಯ ಕ್ಷಣ ಇದು. ಮದುವೆ ಜೀವನದಲ್ಲಿ ಒಂದೇ ಬಾರಿ ನಡೆಯುವ ಸುಂದರ ಘಳಿಗೆ (Movement). ಕೆಲವರು ಸಂದರ್ಭದಲ್ಲಿ ಇದು ಒಂದಕ್ಕಿಂತ ಹೆಚ್ಚು ಬಾರಿ ನಡೆಯಬಹುದು ಅದು ಬೇರೆ ವಿಚಾರ ಬಿಡಿ. ಮದುವೆ ಎಲ್ಲರ ಜೀವನದ ಕನಸು (Dream of life). ನಾನು ಅಂದಿನ ದಿನ ಹೀಗೆ ತಯಾರಿಯಾಗಬೇಕು, ಇದೇ ಬಣ್ಣದ ಇದೇ ಡ್ರೆಸ್ (Dress) ಹಾಕಿಕೊಳ್ಳಬೇಕು, ಅದೇ ಆಭರಣ ಬೇಕು. ಅಯ್ಯೋ ಒಂದಾ ಎರಡಾ.. ಅದರಲ್ಲೂ ಈ ಪಟ್ಟಿಗೆ ಹುಡುಗಿಯ ಬೇಡಿಕೆ ತುಸು ಹೆಚ್ಚೇ ಎನ್ನಬಹುದು.
ನಾವು ಕೆಲವು ಡ್ರೆಸ್ ಗಳನ್ನು ನಿರ್ದಿಷ್ಟ ದಿನದಲ್ಲಿ ಮಾತ್ರ ಮಾಡಿಕೊಳ್ಳಬಹುದು. ದಿನಾಲೂ ಆ ಥರ ರೆಡಿಯಾಗುವುದು ಕಷ್ಟ ಮತ್ತು ಅದನ್ನು ಯಾರು ಒಪ್ಪುವುದೂ ಇಲ್ಲ. ಅಂತವುಗಳಲ್ಲಿ ಮದುವೆಯ ದಿನ ರೆಡಿಯಾಗುವುದು ಸಹ ಒಂದಾಗಿದೆ.
ವಧುವನ್ನು ನೋಡಿದ ವರನ ಪ್ರತಿಕ್ರಿಯೆ ಹೀಗಿತ್ತು
ಮದುವೆ ನಿಶ್ಚಯ ಆದ ದಿನದಿಂದ ಅಥವಾ ಪ್ರೀತಿಸಿ ಮದುವೆಯಾಗುವವರಾದರೆ ಪ್ರೀತಿಯಲ್ಲಿ ಬಿದ್ದಾಗಿನಿಂದ ತಮ್ಮ ಹುಡುಗಿಯನ್ನು ಮಾಮೂಲಿ ಡ್ರೆಸ್, ಸೀರೆಯಂತ ಉಡುಗೆಗಳಲ್ಲಿ ನೋಡಿರುತ್ತಾರೆ. ಆದರೆ ಮದುವೆ ಅಂತಾ ಬಂದಾಗ ತಮ್ಮ ಮನದರಸಿಯನ್ನು, ತಾವು ಇಷ್ಟ ಪಟ್ಟು ಮದುವೆಯಾಗುತ್ತಿರುವ ಹುಡುಗಿಯನ್ನು ಮದುವೆ ಡ್ರೆಸ್ನಲ್ಲಿ ನೋಡುತ್ತಿದ್ದರೆ ಎಷ್ಟು ಚೆಂದ ಅನಿಸುತ್ತೆ ಅಲ್ವಾ? ಇದೇ ರೀತಿ ವರನೊಬ್ಬ ವಧುವನ್ನು ಮದುವೆಯ ಡ್ರೆಸ್ ನಲ್ಲಿ ನೋಡುತ್ತಿದ್ದ ಹಾಗೆ ಎಷ್ಟು ಕ್ಯೂಟಾಗಿ ಪ್ರತಿಕ್ರಿಯಿಸಿದ್ದಾನೆ ಗೊತ್ತಾ.. ನೀವೆ ನೋಡಿ.
ಈ ಮದುವೆ ಸುಗ್ಗಿಯಲ್ಲಿ ನಾವು ನೀವು ಮದುವೆಯಾಗುವ ಜೋಡಿಗಳ ಮತ್ತು ಪರಸ್ಪರ ತಮ್ಮ ಪ್ರೀತಿಯನ್ನು ಪ್ರದರ್ಶಿಸುವ ಅಸಂಖ್ಯಾತ ವೀಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿರುತ್ತೇವೆ. ಈ ವಿಡಿಯೋ ಕೂಡ ನಿಮ್ಮ ಮನಸ್ಸಿಗೆ ಮುದ ನೀಡುತ್ತದೆ ನೋಡಿ. ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾದ ಈ ವೀಡಿಯೊದಲ್ಲಿ ಮದುವೆ ಹುಡುಗಿ ಚೆಂದವಾಗಿ ಎಲ್ಲಾ ಸಿಂಗಾರ ಅಲಂಕಾರದೊಂದಿಗೆ ಹುಡುಗನ ಎದುರು ಬಂದು ನಿಲ್ಲುತ್ತಾಳೆ. ಆಕೆಯನ್ನು ನೋಡಿದ ವರ ಬಾಯಿ ಮೇಲೆ ಕೈ ಇಟ್ಟು ಕೊಂಡು ಅಚ್ಚರಿಯಿಂದ ನೋಡುತ್ತಾನೆ. ಕೆಲವೇ ಸೆಕೆಂಡುಗಳು ಇರುವ ಈ ವಿಡಿಯೋದಲ್ಲಿ ವರ ಹೆಂಡತಿಯಾಗುವವಳ ಸೌಂದರ್ಯ ನೋಡಿ ಖುಷಿಯಿಂದ ನಿಬ್ಬೆರಗಾಗಿದ್ದಾನೆ.
ಇದನ್ನೂ ಓದಿ: Online Scam: 100 ರೂ. ಲಿಪ್ಸ್ಟಿಕ್ ಕೊಳ್ಳುವ ಭರದಲ್ಲಿ ಕಳೆದುಕೊಂಡಿದ್ದು ಲಕ್ಷ ಲಕ್ಷ!
ಮೇಕಪ್ ಬೈ ಕನಿಕ ಚಿಬ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ವೈರಲ್
ಮೇಕಪ್ ಬೈ ಕನಿಕ ಚಿಬ್ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ನೋಡಬಹುದು. ಮೇಕಪ್ ಮಾಡುವವರು ವಧುವನ್ನು ಸಂಪೂರ್ಣವಾಗಿ ಅಲಂಕರಿಸಿ ಹೊರಗೆ ವರನ ಬಳಿ ಕರೆದುಕೊಂಡು ಬಂದಾಗ ಹುಡುಗ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾನೆ. ವಿಡಿಯೋದಲ್ಲಿರುವ ವಧುವನ್ನು ಲವ್ಲಿ ಸಿನ್ಹಾ ಎಂದು ಗುರುತಿಸಲಾಗಿದ್ದು, ವರ ಸುರೂರ್ ಅತ್ರೇ ಎಂದು ಹೇಳಲಾಗಿದೆ.
ಮೇಕಪ್ ಬೈ ಕನಿಕ ಚಿಬ್ ಖಾತೆದಾರರು ಹಂಚಿಕೊಂಡ ಈ ವಿಡಿಯೋವನ್ನು ಹಲವಾರು ಮಂದಿ ಮೆಚ್ಚಿಕೊಂಡಿದ್ದು, 1 ಲಕ್ಷಕ್ಕಿಂತ ಹೆಚ್ಚು ಲೈಕ್ಸ್ ಗಳು ಬಂದಿವೆ. ವಧು ಲವ್ಲಿ ಸಿನ್ಹಾಳನ್ನು ನೋಡಿ ವರ ಸುರೂರ್ ಅತ್ರೇ ನೀಡಿರುವ ರಿಯಾಕ್ಷನ್ ಗೆ ಮಹಿಳೆಯರಂತೂ ಫಿಧಾ ಆಗಿ ಬಿಟ್ಟಿದ್ದಾರೆ. ಹಲವಾರು ಮಹಿಳೆಯರು ಗಂಡಂದಿರನ್ನು ತರಾಟೆಗೆ ತೆಗೆದುಕೊಂಡು ಕಾಮೆಂಟ್ ಮಾಡಿದ್ದಾರೆ.
ವಧುವರರ ಈ ರಿಯಾಕ್ಷನ್ ಗೆ ಬಂದ ಪ್ರತಿಕ್ರಿಯೆ ಹೀಗಿದೆ
ಒಬ್ಬರು "ನಾನು ರೆಡಿಯಾದಾಗಲೆಲ್ಲ ನನ್ನ ಪತಿ ಯಾವಾಗಲೂ ಒಂದೇ ರೀತಿ ಪ್ರತಿಕ್ರಿಯೆ ನೀಡುತ್ತಾರೆ, ನಾನು ಗೊಂದಲಕ್ಕೊಳಗಾಗಿದ್ದೇನೆ" ಎಂದು ಕಾಮೆಂಟ್ ಮಾಡಿದ್ದಾರೆ. "ನನಗೆ ನನ್ನ ಪತಿಯಿಂದ ಈ ರೀತಿಯಾದ ಪ್ರತಿಕ್ರಿಯೆ ಬೇಕು" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Jothe Jotheyali: ಆಫೀಸ್ ಕಡೆ ಖುಷಿಯಿಂದ ಹೆಜ್ಜೆ ಹಾಕಿದ ಹರ್ಷ! ತಾನು ಕಳೆದುಕೊಂಡ ಜೀವನವನ್ನು ಮತ್ತೆ ಹರ್ಷನಿಗೆ ನೀಡುತ್ತಾಳಾ ಅನು?
ಒಟ್ಟಾರೆ ಈ ವಿಡಿಯೋ ನೋಡಿ ಮಹಿಳೆಯರಂತೂ ಹೊಟ್ಟೆಕಿಚ್ಚು ಪಟ್ಟಿದ್ದಂತೂ ಹೌದು ಜೊತೆಗೆ ಅವರ ಗಂಡದಿರಿಗೆ ನೀವು ಯಾವತ್ತಾದರೂ ನನ್ನ ನೋಡಿ ಹೀಗೆ ರಿಯಾಕ್ಷನ್ ಕೊಟ್ಟಿದ್ದೀರಾ ಅಂತಾ ಸರಿಯಾಗಿ ತರಾಟೆ ತೆಗೆದು ಕೊಂಡಿರುತ್ತಾರೆ ಪಾಪ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ