• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral News: ಪ್ರಿ ವೆಡ್ಡಿಂಗ್ ಪಾರ್ಟಿಯಲ್ಲಿ ಭಾವಿ ಪತ್ನಿ ಜೊತೆ ಅಸಭ್ಯವಾಗಿ ವರ್ತಿಸಿದ ವರ! ಕೋಟಿ ವರದಕ್ಷಿಣೆ ತಗೊಂಡ್ರು ಅಂತ ಕೇಸ್ ಹಾಕಿದ ವಧು

Viral News: ಪ್ರಿ ವೆಡ್ಡಿಂಗ್ ಪಾರ್ಟಿಯಲ್ಲಿ ಭಾವಿ ಪತ್ನಿ ಜೊತೆ ಅಸಭ್ಯವಾಗಿ ವರ್ತಿಸಿದ ವರ! ಕೋಟಿ ವರದಕ್ಷಿಣೆ ತಗೊಂಡ್ರು ಅಂತ ಕೇಸ್ ಹಾಕಿದ ವಧು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ತನ್ನ ಭಾವಿ ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ವ್ಯಕ್ತಿಯ ವಿರುದ್ಧ ಹಲವಾರು ಸೆಕ್ಷನ್ ಗಳ ಅಡಿಯಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ

  • Share this:
  • published by :

ಈಗಂತೂ ಈ ಮದುವೆ (Marriage) ಸಮಾರಂಭಗಳು ಪೂರ್ತಿಯಾಗಿ ಮುಗಿಯುವವರೆಗೂ, ಆ ಮದುವೆ ಸಮಾರಂಭ ಶಾಂತವಾಗಿ ಮತ್ತು ಸುಸೂತ್ರವಾಗಿ ಮುಗಿದಿದೆ ಅಂತ ಹೇಳಲು ಸಾಧ್ಯವಿಲ್ಲ. ಹೌದು.ಇತ್ತೀಚೆಗೆ ಈ ಮದುವೆಗಳಲ್ಲಿ ವಧು ಮತ್ತು ವರ (Groom) ಅಥವಾ ಅವರ ಸಂಬಂಧಿಕರು ಯಾವುದೋ ಒಂದು ಚಿಕ್ಕ-ಪುಟ್ಟ ಕಾರಣಗಳಿಗೆ ವಾದ-ವಿವಾದ ಶುರು (Start) ಮಾಡಿಕೊಂಡು, ನಂತರ ಅದು ದೊಡ್ಡ ಜಗಳವಾಗಿ ಸುಸೂತ್ರವಾಗಿ ಆಗಬೇಕಿದ್ದ ಎಷ್ಟೋ ಮದುವೆಗಳು ಅರ್ಧಕ್ಕೆ ನಿಂತಿರುವ ಅನೇಕ ಘಟನೆಗಳನ್ನು ನಾವು ಸಾಮಾಜಿಕ ಮಾಧ್ಯಮದಲ್ಲಿರುವ ವಿಡಿಯೋಗಳಲ್ಲಿ (Video) ನೋಡಿರುತ್ತೇವೆ.


ತಾವು ಡಿಮ್ಯಾಂಡ್ ಮಾಡಿದ ವರದಕ್ಷಿಣೆಯನ್ನು ಕೊಡದೆ ಇದ್ದಾಗ, ವಧುವಿನ ಪಿಯುಸಿ ಪರೀಕ್ಷೆಯಲ್ಲಿನ ಅಂಕಗಳು ತುಂಬಾನೇ ಕಡಿಮೆ ಇವೆ ಅಂತ ಹೇಳಿ ಮದುವೆ ಅರ್ಧಕ್ಕೆ ನಿಲ್ಲಿಸಿ ಹೋಗಿರುವ ವರನ ವಿಡಿಯೋ ಈ ಹಿಂದೆ ನೋಡಿದ್ದೆವು. ಅಷ್ಟೇ ಅಲ್ಲದೆ ವರ ಕುಡಿದು ಮದುವೆ ಮಂಟಪಕ್ಕೆ ಬಂದ ಅಂತ ಹೇಳಿ ವಧು ತನಗೆ ಈ ಮದುವೆ ಬೇಡ ಅಂತ ಹೇಳಿ ಮದುವೆಯನ್ನ ರದ್ದು ಮಾಡಿದ್ದನ್ನು ಸಹ ಈ ಹಿಂದೆ ನೋಡಿದ್ದೆವು.


ಇತ್ತೀಚೆಗೆ ಮದುವೆ ಊಟದಲ್ಲಿ ಒಂದು ಹಪ್ಪಳದ ಸಲುವಾಗಿ ವಧು ಮತ್ತು ವರ ಸಂಬಂಧಿಕರು ಕಿತ್ತಾಡಿಕೊಂಡಿದ್ದೂ ಇದೆ. ಹೀಗೆ ಇತ್ತೀಚಿನ ಮದುವೆಗಳು ಪೂರ್ತಿಯಾಗಿ ಮುಗಿಯುವವರೆಗೂ ಏನೂ ಹೇಳಲು ಆಗುತ್ತಿಲ್ಲ ನೋಡಿ.


ಭಾವಿ ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿದ ವರ ಮಹಾಶಯ


ಇತ್ತೀಚೆಗೆ ಹೈದರಾಬಾದ್ ನಗರದಲ್ಲಿ ನಡೆದ ಒಂದು ಪ್ರಿ-ವೆಡ್ಡಿಂಗ್ ಎಂದರೆ ವಿವಾಹ ಪೂರ್ವ ಪಾರ್ಟಿಯಲ್ಲಿ ತನ್ನ ಭಾವಿ ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ವ್ಯಕ್ತಿಯ ವಿರುದ್ಧ ಹಲವಾರು ಸೆಕ್ಷನ್ ಗಳ ಅಡಿಯಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.


ನಗರದ ಮೊಯಿನಾಬಾದ್ ನ ರೆಸಾರ್ಟ್ ಒಂದರಲ್ಲಿ ಈ ಘಟನೆ ನಡೆದಿದ್ದು, ವಧುವಿನ ಕುಟುಂಬ ವಾಸಿಸುವ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.


ಇದನ್ನೂ ಓದಿ: Exams: 2ನೇ ತರಗತಿವರೆಗೆ ಲಿಖಿತ ಪರೀಕ್ಷೆ ಇರೋದಿಲ್ವಾ? ಇಲ್ಲಿದೆ ಮಹತ್ವದ ಮಾಹಿತಿ


ಪೊಲೀಸರ ಪ್ರಕಾರ, ವಿವಾಹ ಪೂರ್ವ ಸಮಾರಂಭವೊಂದರಲ್ಲಿ ವರ ವೈಷ್ಣವ್ ಅವರ ನಡವಳಿಕೆಯನ್ನು ವಧುವಿನ ಕುಟುಂಬ ಸದಸ್ಯರು ಆಕ್ಷೇಪಿಸಿದಾಗ, ಅವರು ಮತ್ತು ಅವರ ಸ್ನೇಹಿತರು ವಧುವಿನ ಕಡೆಯವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.


ಈ ಘಟನೆಯ ಬಗ್ಗೆ ಏನ್ ಹೇಳಿದ್ರು ಪೊಲೀಸ್ ಇನ್ಸಪೆಕ್ಟರ್?


ಘಟನೆಯ ನಂತರ ವಧುವಿನ ಕುಟುಂಬವು ಮದುವೆಯನ್ನು ರದ್ದುಗೊಳಿಸಲು ನಿರ್ಧರಿಸಿತು ಎಂದು ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಎಸ್ ರಾಜಶೇಖರ್ ರೆಡ್ಡಿ ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.


ಅವರ ಕುಟುಂಬವು ಈಗಾಗಲೇ ನೀಡಿದ 3 ಕೋಟಿ ರೂಪಾಯಿಗಳ ವರದಕ್ಷಿಣೆಯನ್ನು ಹಿಂದಿರುಗಿಸುವಂತೆ ಅವರು ವರನನ್ನು ಒತ್ತಾಯಿಸಿದರು. ಆದರೆ ಆ ವರನ ಕುಟುಂಬವು ವರದಕ್ಷಿಣೆಯನ್ನು ಹಿಂದಿರುಗಿಸಲು ಸಿದ್ಧರಿರಲಿಲ್ಲ ಮತ್ತು ಕೂಡಲೇ ಅವರು ತಮ್ಮ ಹುಟ್ಟೂರಾದ ಚಿತ್ತೂರಿಗೆ ಹೋಗಿ ಸೇರಿಕೊಂಡಿದ್ದಾರೆ ಅಂತ ಹೇಳಲಾಗುತ್ತಿದೆ.




ಈ ವರನಿಗೆ ಭಾರಿ ಮೊತ್ತದ ವರದಕ್ಷಿಣೆಯಲ್ಲಿ ಏನೆಲ್ಲಾ ಕೊಟ್ಟಿದ್ರು ನೋಡಿ..


ಈಗ, ವರದಕ್ಷಿಣೆ ಮೊತ್ತವನ್ನು ಮರಳಿ ಪಡೆಯಲು ಕುಟುಂಬವು ಮತ್ತೆ ಪೊಲೀಸರನ್ನು ಸಂಪರ್ಕಿಸಿದೆ. ವಧುವಿನ ಕುಟುಂಬವು ವರನಿಗೆ ವಜ್ರದ ಉಂಗುರ ಮತ್ತು 2 ಲಕ್ಷ ಮೌಲ್ಯದ ಗಡಿಯಾರವನ್ನು ಸಹ ನೀಡಿತ್ತು.


ವೈಷ್ಣವ್, ಆತನ ಕುಟುಂಬ ಮತ್ತು ಸ್ನೇಹಿತರ ವಿರುದ್ಧ ಐಪಿಸಿ ಸೆಕ್ಷನ್ 354 (ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ), 324 (ಅಪಾಯಕಾರಿ ಆಯುಧಗಳಿಂದ ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 420 (ವಂಚನೆ), 406 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ವಧುವಿನ ಕುಟುಂಬವು ಈ ವಿವಾಹ ಪೂರ್ವ ಪಾರ್ಟಿಗಾಗಿ 50 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದೆ ಅಂತ ಹೇಳಲಾಗುತ್ತಿದೆ.

First published: