Grand Wedding: ಹೆಲಿಕಾಪ್ಟರ್‌ನಿಂದ ಇಳಿದು, ಜಾಗ್ವಾರ್‌ ಹತ್ತಿ ಮಂಟಪಕ್ಕೆ ಬಂದ ರೈತನ ಮಗ! ವೈರಲ್ ಆಯ್ತು ಅದ್ಧೂರಿ ವಿವಾಹ

ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳುವ ಭಾಗ್ಯ (Luck) ಎಲ್ಲರಿಗೂ ಇರುವುದಿಲ್ಲ. ಆದರೆ ಇಲ್ಲೊಬ್ಬ ರೈತ (Farmer) ತನ್ನ ಮಗನ (Son) ಮದುವೆಯನ್ನು ಯಾರೂ ಊಹಿಸದ ರೀತಿಯಲ್ಲಿ ಅದ್ಧೂರಿಯಾಗಿ ಮಾಡಿದ್ದಾನೆ. ರೈತನ ಮಗ ಹೆಲಿಕಾಪ್ಟರ್ (Helicopter) ಏರಿ ಬಂದು, ಜಾಗ್ವಾರ್‌ (Jaguar) ಕಾರಿನಲ್ಲಿ (Car) ಮದುವೆ ಮಂಟಪ ತಲುಪಿದ್ದಾನೆ.

ಹೆಲಿಕಾಪ್ಟರ್‌ನಲ್ಲಿ ಬಂದ ಮದುಮಗ

ಹೆಲಿಕಾಪ್ಟರ್‌ನಲ್ಲಿ ಬಂದ ಮದುಮಗ

  • Share this:
ಮಧ್ಯ ಪ್ರದೇಶ: ಪ್ರತಿಯೊಬ್ಬರಿಗೂ ತಮ್ಮ ಮದುವೆ (Marriage) ಅದ್ಧೂರಿಯಾಗಿ (Grand) ಮಾಡಿಕೊಳ್ಳಬೇಕು ಎಂಬ ಕನಸು (Dreams) ಇರುತ್ತದೆ. ಆದರೆ ಆ ರೀತಿ ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳುವ ಭಾಗ್ಯ (Luck) ಎಲ್ಲರಿಗೂ ಇರುವುದಿಲ್ಲ. ಆದರೆ ಇಲ್ಲೊಬ್ಬ ರೈತ (Farmer) ತನ್ನ ಮಗನ (Son) ಮದುವೆಯನ್ನು ಯಾರೂ ಊಹಿಸದ ರೀತಿಯಲ್ಲಿ ಅದ್ಧೂರಿಯಾಗಿ ಮಾಡಿದ್ದಾನೆ. ರೈತನ ಮಗ ಹೆಲಿಕಾಪ್ಟರ್ (Helicopter) ಏರಿ ಬಂದು, ಜಾಗ್ವಾರ್‌ (Jaguar) ಕಾರಿನಲ್ಲಿ (Car) ಮದುವೆ ಮಂಟಪ ತಲುಪಿದ್ದಾನೆ. ವಧುವಿನ (Bride) ಕೈ ಹಿಡಿದು, ಬಳಿಕ ಹೆಲಿಕಾಪ್ಟರ್ ಮೇಲೆಯೇ ಮನೆ ತಲುಪಿದ್ದಾನೆ.

ಮಧ್ಯ ಪ್ರದೇಶದಲ್ಲಿ ನಡೆಯಿತು ಅದ್ಧೂರಿ ಕಲ್ಯಾಣೋತ್ಸವ

ಮಗನ ಮದುವೆಯನ್ನು ಅದ್ಧೂರಿಯಾಗಿ ಮಾಡ್ಬೇಕೆಂದು ಕನಸು ಕಂಡಿದ್ದ ರೈತನೋರ್ವ ತಾನು ಅಂದುಕೊಂಡಿರುವ ರೀತಿಯಲ್ಲೇ ವೈಭವದಿಂದ ಮಗು ಮದುವೆ ಮಾಡಿಸಿದ್ದಾನೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಈ ವಿವಾಹ ಈಗ ವೈರಲ್ ಆಗಿದೆ. ಈ ವಿಶಿಷ್ಟ ಮದುವೆ ಕಾರ್ಯಕ್ರಮ ಇಂದೋರ್​ನ ಅರಾಂಡಿಯಾ ಎಂಬ ಸಣ್ಣ ಹಳ್ಳಿಯಲ್ಲಿ ನಡೆದಿದ್ದು, ಇಲ್ಲಿನ ಕೃಷಿಕ ಸಜ್ಜನ್ ಕುಶ್ವಾಹ್​ ತಮ್ಮ ಮಗ ಜೈ ಸಿಂಗ್​ಗೋಸ್ಕರ ಇಷ್ಟೆಲ್ಲ ವ್ಯವಸ್ಥೆ ಮಾಡಿದ್ದಾರೆ.

ಮಗನಿಗೆ ಸರ್‌ಪ್ರೈಸ್ ಕೊಟ್ಟ ತಂದೆ

ಸಜ್ಜನ್ ಸಿಂಗ್ ಕುಶ್ವಾಹ ಎಂಬ ರೈತ ತನ್ನ ಮಗನ ಮದುವೆಯ ಮೆರವಣಿಗೆಯನ್ನು ಅರಾಂಡಿಯಾದಿಂದ ರಾಜಸ್ಥಾನದ ಬುಡಾನಿಯಾಗೆ ಕರೆದೊಯ್ದಬೇಕಿತ್ತು. ವರನ ಮನೆಯಿಂದ ವಧುನ ಊರಿಗೆ ಮೆರವಣಿಗೆ ಮೂಲಕ ಹೊರಡಲು ಎಲ್ಲರೂ ಸಜ್ಜಾಗಿದ್ದರು. ಈ ವೇಳೆ ಅಲ್ಲಿ ಸೇರಿದ್ದ ಎಲ್ಲರಿಗೂ ಅಚ್ಚರಿ ಕಾದಿತ್ತು.

ಇದನ್ನೂ ಓದಿ: Love on the Animal: ಸಾಕು ಪ್ರಾಣಿಯ ಸ್ನೇಹ ಬಯಸಿ ಪತ್ರ ಬರೆದ ಯುವಕರು, ಶ್ವಾನದಿಂದ ಉತ್ತರವೂ ಬಂತು!

ಹೆಲಿಕಾಪ್ಟರ್‌ನಲ್ಲಿ ಬಂದು, ಜಾಗ್ವಾರ್‌ ಏರಿದ ವರ

ಖುದ್ದಾಗಿ ಮಗನಿಗೂ ಅಪ್ಪನ ಯೋಜನೆ ತಿಳಿದಿರಲಿಲ್ಲ. ವರನನ್ನು ಹೊತ್ತೊಯ್ಯಲು ಹೆಲಿಕಾಪ್ಟರ್ ಬಂದಿದೆ. ಈ ವೇಳೆ ತಂದೆಯ ಅಚ್ಚರಿಯ ಯೋಜನೆ ಬಯಲಾಗಿದೆ. ವಧುವಿನ ಊರು ತಲುಪುತ್ತಿದ್ದಂತೆ ಅವರನ್ನು ಕಲ್ಯಾಣ ಮಂಟಪದವರೆಗೂ ಕರೆದುಕೊಂಡು ಹೋಗಲು ಜಾಗ್ವಾರ್ ಕಾರು ಬಂದಿದೆ. ಅದಕ್ಕೆ ಸಂಪೂರ್ಣವಾಗಿ ಅಲಂಕಾರ ಮಾಡಲಾಗಿತ್ತು. ಇದನ್ನು ನೋಡಿರುವ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಇದರ ಬೆನ್ನಲ್ಲೇ ಸಂಪ್ರದಾಯದಂತೆ ಕುದುರೆ ಮೆರವಣಿಗೆ ಸಹ ಮಾಡಿಸಲಾಗಿದೆ. ಮದುವೆಯ ನಂತರ ವರನ ಮನೆಯವರು ವಧುವನ್ನು ಚಾಪರ್‌ನಲ್ಲಿ ಗ್ರಾಮಕ್ಕೆ ಕರೆತಂದರು.

ತಂದೆಗೆ ಧನ್ಯವಾದ ಅರ್ಪಿಸಿದ ಮಗ

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ವರ ಜೈಸಿಂಗ್​, ಮಗನ ಮದುವೆ ಸ್ಮರಣೀಯವಾಗಿಸಲು ತಂದೆ ಮಾಡಿರುವ ಅದ್ದೂರಿ ಮದುವೆಯ ವ್ಯವಸ್ಥೆಯನ್ನು ಮರೆಯಲು ಸಾಧ್ಯವಿಲ್ಲ. ಅವರಿಗೆ ನಾನು ಯಾವಾಗಲು ಋಣಿ. ಇದು ನನ್ನ ಜೀವನದ ಅತ್ಯಂತ ಅನನ್ಯ ಕೊಡುಗೆಯಾಗಿದೆ.” ಎಂದಿದ್ದಾರೆ.

ಮಗನ ಕನಸು ನನಸಾಗಿಸಿದ ತಂದೆ

ತನ್ನ ಮದುವೆಯ ಕ್ಷಣಗಳು ಸ್ಮರಣೀಯವಾಗಿರಬೇಕು ಎಂಬುದು ಪ್ರತಿಯೊಬ್ಬರ ಕನಸಾಗಿದೆ. ನನ್ನ ತಂದೆ ನನ್ನ ಮದುವೆಯ ಕ್ಷಣವನ್ನು ಸ್ಮರಣೀಯವಾಗಿಸಿದರು. ಹೆಲಿಕಾಪ್ಟರ್‌ನಲ್ಲಿ ಮದುಮಗನನ್ನು ಕರೆದುಕೊಂಡು ಹೋಗಲು ಮಗ ಹೋಗಬೇಕು ಎಂಬ ಕನಸೂ ಇತ್ತು. ಅವರೂ ಈ ಕನಸನ್ನು ನನಸು ಮಾಡಿದರು. ಇಡೀ ಕುಟುಂಬ ತುಂಬಾ ಸಂತೋಷವಾಗಿದೆ. ಈ ಅಚ್ಚರಿಯ ಬಗ್ಗೆ ತಂದೆ ಯಾರಿಗೂ ತಿಳಿಸಲಿಲ್ಲ ಅಂತ ಪುತ್ರ ಹೇಳಿದ್ದಾರೆ.

ಇದನ್ನೂ ಓದಿ: Animal Fight: ಜಿರಾಫೆ ಮೇಲೆ ದಾಳಿ ಮಾಡಲು ಸಿಂಹಗಳ ಶತ ಪ್ರಯತ್ನ! ಜಿರಾಫೆ ಬಚಾವಾಯ್ತಾ?

ಗ್ರಾಮಸ್ಥರ ಸಂತಸ

ಈ ವೇಳೆ ಗ್ರಾಮಸ್ಥರು ಹೇಳುವಂತೆ ಈ ಹಿಂದೆ ಹೆಲಿಕಾಪ್ಟರ್ ಆಕಾಶದಲ್ಲಿ ಹಾರುವುದನ್ನು ಮಾತ್ರ ನೋಡಿದ್ದೆವು. ಅವರ ಗ್ರಾಮಕ್ಕೆ ಹೆಲಿಕಾಪ್ಟರ್ ಹಿಂದೆಂದೂ ಬಂದಿರಲಿಲ್ಲ. ಇದೇ ಮೊದಲ ಬಾರಿಗೆ ಹೆಲಿಕಾಪ್ಟರ್‌ನಲ್ಲಿ ಮೆರವಣಿಗೆ ಸಾಗಿದ್ದು, ಮರುದಿನ ವಧು ಕೂಡ ಅದರಲ್ಲಿ ಸವಾರಿ ಮಾಡಿಕೊಂಡು ಗ್ರಾಮಕ್ಕೆ ತಲುಪಿದ್ದಾರೆ.
Published by:Annappa Achari
First published: