• Home
 • »
 • News
 • »
 • trend
 • »
 • Fish Prasada: ಈ ದೇವಿಗೆ ಮೀನಿನ ನೈವೇದ್ಯ, ಅದೇ ಭಕ್ತರಿಗೆ ಪ್ರಸಾದ ಕೂಡಾ! ಎಲ್ಲಿದೆ ದೇವಾಲಯ?

Fish Prasada: ಈ ದೇವಿಗೆ ಮೀನಿನ ನೈವೇದ್ಯ, ಅದೇ ಭಕ್ತರಿಗೆ ಪ್ರಸಾದ ಕೂಡಾ! ಎಲ್ಲಿದೆ ದೇವಾಲಯ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಟಕ್‌ ನ ಈ ದೇವಿಗೆ ಭೋಗ್ ಆಗಿ ದೇವಿಗೆ ಮೀನನ್ನು ಅರ್ಪಿಸಿಕೊಂಡು ಬರಲಾಗಿದೆ. ಈ ಪದ್ಧತಿ 1817ರಿಂದ ಜಾರಿಯಲ್ಲಿದೆ ಎಂದು ತಿಳಿದು ಬಂದಿದೆ.

 • Share this:

  ನಾವು ಪ್ರತಿನಿತ್ಯ ಪೂಜೆ ಮಾಡಿದರೆ ದೇವರಿಗೆ ಹಣ್ಣುಹಂಪಲು, ಸಿಹಿತಿಂಡಿ ಹಾಗೂ ಸೇರಿದಂತೆ ಸಸ್ಯಹಾರದ ನೈವೇದ್ಯ ಅರ್ಪಿಸುವುದನ್ನು ರೂಢಿಸಿಕೊಂಡಿದ್ದೇವೆ, ಇನ್ನು ಜಾತ್ರೆ, ಉತ್ಸವಗಳಲ್ಲಿ ಬಾಡೂಟವಿರುತ್ತದೆ, ಮೊದಲನೇ ದಿನ ಸಿಹಿ ಊಟ ಮಾಡಿ ನಂತರ ಬಾಡೂಟವನ್ನು ಮಾಡಿ ಬಡಿಸುತ್ತೇವೆ. ಇದಲ್ಲದೇ ದೇವರಿಗೆ ಕುರಿಕೋಳಿ ಕುಯಿಕೊಂಡು ಬಂದು ಅದನ್ನು ಪ್ರಸಾದ ಅಂತ ನಾವೇ ಸೇವಿಸುವ ಪದ್ಧತಿಯೂ ಇದೆ. ಇದಲ್ಲದೇ ದೇವರಿಗೆ ಮಾಂಸಾಹಾರ (Non-Vegetarian)ನೈವೇದ್ಯ ನೀಡುವುದು ವಿರಳ ಎನ್ನಬಹುದು. ಬೇಡರಕಣ್ಣಪ್ಪ ಶಿವನಿಗೆ ಮಾಂಸಾಹಾರ ನೈವೇದ್ಯ ನೀಡಿದ್ದನ್ನು ಕೇಳಿದ್ದೇವೆ, ಅದರಂತೆ ಒಡಿಶಾದ (Odisha) ಕಟಕ್‍ನಲ್ಲಿರುವ ಮೃಣ್ಮಯಿ ದೇವಿಗೆ ಮೀನಿನಿಂದ (Fish Food) ಮಾಡಿದ ಖಾದ್ಯವನ್ನು ನೈವೇದ್ಯ ನೀಡುವುದು ವಾಡಿಕೆ ಇದೆ. ಹೌದು ಒಡಿಶಾದ ಕಟಕ್‍ನಲ್ಲಿ ನಡೆಯುವ ದೇವಿ ಮೃಣ್ಮಯಿ(Devi Mrunmayi) ಪೂಜೆ ಕೊಂಚ ಭಿನ್ನವೇ ಸರಿ. ಹದಿನಾರನೇ ಶತಮಾನದಲ್ಲಿ ಶ್ರೀ ಚೈತನ್ಯ ಮಹಾಪ್ರಭು, ಪಶ್ಚಿಮ ಬಂಗಾಳದಿಂದ ಇಲ್ಲಿಗೆ ಬಂದಾಗ ಈ ದೇವಿಪೂಜೆಯ ಸಂಪ್ರದಾಯ ಆರಂಭವಾಯಿತು ಎಂಬುದು ಇತಿಹಾಸಕಾರರ ಅಭಿಪ್ರಾಯ. ಪೂರ್ವ ಭಾರತದೆಲ್ಲೆಡೆ ದೇವಿಪೂಜೆ ಪ್ರಮುಖವಾದರೂ ಕಟಕ್‍ನಲ್ಲಿ ಬಹಳ ವಿಶಿಷ್ಟವಾಗಿದೆ. ಈ ದೇವಿ ಸಕಲಾಭರಣಭೂಷಿತೆ ಜೊತೆಗೆ ಮೀನು ಪ್ರಿಯೆ (Food of the fish)ಎಂದು ಇತಿಹಾಸದಲ್ಲಿ(History) ಹೇಳಲಾಗಿದೆ.


  ಇದನ್ನು ಓದಿ: Fresh Fish: ತಾಜಾ ಮೀನು ಎಂದು ಪತ್ತೆಹಚ್ಚುವುದು ಹೇಗೆ? ಆರೋಗ್ಯ ದೃಷ್ಟಿಯಿಂದ ಯಾವ ಮೀನು ಸೇವಿಸಿದರೆ ಉತ್ತಮ? ಇಲ್ಲಿದೆ ಮಾಹಿತಿ


  ಮೀನೆಂದರೆ ಪ್ರೀತಿ(Fish Love)


  ನವರಾತ್ರಿ, ದೀಪಾವಳಿ, ಲಕ್ಷ್ಮಿ ಹಬ್ಬಗಳಲ್ಲಿ ಸಾಮಾನ್ಯವಾಗಿ ದೇವಿಗೆ ಸಿಹಿತಿಂಡಿ, ಹೂವು, ಹಣ್ಣುಗಳನ್ನು ನೈವೇದ್ಯವಾಗಿ ಇಡುವುದು ರೂಢಿ. ಕಟಕ್‌ ನ ಈ ದೇವಿಗೆ ಭೋಗ್ ಆಗಿ ದೇವಿಗೆ ಮೀನನ್ನು ಅರ್ಪಿಸಿಕೊಂಡು ಬರಲಾಗಿದೆ. ಈ ಪದ್ಧತಿ 1817ರಿಂದ ಜಾರಿಯಲ್ಲಿದೆ ಎಂದು ತಿಳಿದು ಬಂದಿದೆ. ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಕಟಕ್‍ನಲ್ಲಿರುವ ಅಷ್ಟ ಶಂಭು ದೇಗುಲದ ಹತ್ತಿರ ಪುಟ್ಟ ಗುಡಿಸಿಲಿನಲ್ಲಿ ದತ್ತ ಎಂಬ ಬೆಂಗಾಲಿ ಕುಟುಂಬದವರು ವಾಸವಾಗಿದ್ದರು. ಅವರ ಬಳಿಯಿದ್ದ ದೇವಿಯ ಮಣ್ಣಿನ ಮೂರ್ತಿಗೆ ನವರಾತ್ರಿ ದಿನದಂದು ವಿಶೇಷ ಪೂಜೆ ಸಲ್ಲುತ್ತಿತ್ತು. ಬೆಂಗಾಲಿಗಳಿಗೆ ಮೀನೆಂದರೆ ಎಲ್ಲಿಲ್ಲದ ಪ್ರೀತಿ. ತಮಗಿಷ್ಟವಾದ ಹುರಿದ ಮೀನು, ಬೇಳೆ, ತರಕಾರಿಯನ್ನು ಮಸಾಲೆಯೊಂದಿಗೆ ಬೆರೆಸಿ ದೇವಿಗೂ ನೈವೇದ್ಯವಾಗಿ ಅರ್ಪಿಸಿದರು. ಸುತ್ತಮುತ್ತಲಿನ ಜನ ಪೂಜೆಗೆ ಬಂದವರು ಇದನ್ನು ನೈವೇದ್ಯವಾಗಿ ಸ್ವೀಕರಿಸಿದರು. ದೇವಿಪೂಜೆಯ ಜತೆ ಈ ಸಂಪ್ರದಾಯ ಇಂದಿಗೂ ಮುಂದುವರಿದಿದೆ!


  ದರ್ಪಾನಿ ರಾಜವಂಶಸ್ಥಪೂಜೆ(The Darpani dynasty)


  ಹತ್ತೊಂಬತ್ತನೇ ಶತಮಾನದವರೆಗೆ ದೇಗುಲದ ಆವರಣದಲ್ಲಿ ದೇವಿಯ ಮೆರವಣಿಗೆಯ ಜವಾಬ್ದಾರಿ ದರ್ಪಾನಿ ರಾಜವಂಶಸ್ಥರು ನಡೆಸಿಕೊಂಡು ಬಂದಿದ್ದರು. ತದನಂತರ ಜನಸಾಮಾನ್ಯರೆಲ್ಲರೂ ಸೇರಿ ದೇವಿಗೆ ಸಾಮೂಹಿಕ ಪೂಜೆಯನ್ನು ಆರಂಭಿಸಿ ಮೆರವಣಿಗೆ ಮಾಡುವ ಮೂಲಕ ತಮ್ಮ ಸಂಪ್ರದಾಯವನ್ನು ಜೋರಾಗಿ ಆಚರಿಸಿ ಮುಂದುವರೆಸಿದ್ದಾರೆ . ಇಲ್ಲಿನ ಪೆಂಡಾಲ್‍ಗಳಲ್ಲಿ ಕೂರಿಸುವ ದೇವಿ, ಬಂಗಾಳದ ದೇವಿಗಿಂತ ಭಿನ್ನ. ಅಗಲ ಮುಖ, ದೊಡ್ಡ ನಗು, ಸೌಮ್ಯ ಕಳೆಯ ದೇವಿಯರು. ಕಣ್ಣುಗಳಲ್ಲೂ ರೌದ್ರತೆ ಇಲ್ಲ, ಪ್ರಸನ್ನತೆಯಿಂದ ಕೂಡಿದ್ದು, ಭಕ್ತರಿಗೆ ಶಾಂತಸ್ವರೂಪಳಾಗಿ ದರ್ಶನ ನೀಡುತ್ತಾಳೆ.


  ಮೀನುಗಳ ಪೂರೈಕೆ(Supply of fish)


  ದಶಮಿಯಂದು ದಹಿ ಪಖಾಲ್ (ಜೀರಿಗೆ, ಪುದಿನಾ, ಈರುಳ್ಳಿ ಹಾಕಿದ ಮೊಸರನ್ನ) ನೈವೇದ್ಯವಾದರೆ ನವಮಿಯಂದು ಮಚ್ಛ ಭೋಗ್! ಕಟಕ್‍ನ ಚಾಂದಿನಿ ಚೌಕ್ ಮತ್ತು ಅಲಿಶಾ ಬಜಾರ್‌ನಲ್ಲಿ ಸಾವಿರಾರು ಭಕ್ತಾದಿಗಳಿಗೆ ಈ ಪ್ರಸಾದವನ್ನು ಹಂಚಲಾಗುತ್ತದೆ. ರೋಹಿ ಮತ್ತು ಭಕುರಾ ಎಂಬ ಪ್ರಭೇದಗಳ ಮೀನುಗಳನ್ನು ಪ್ರಸಾದಕ್ಕಾಗಿ ಬಳಸಲಾಗುತ್ತದೆ. ಜನರ ಸಂಖ್ಯೆ ಕಡಿಮೆ ಇದ್ದಾಗ ಕಟಕ್‍ನ ಹತ್ತಿರದಲ್ಲಿರುವ ನರಾಜ್ ಹಳ್ಳಿಯಿಂದ ಮೀನುಗಾರರು ಮೀನುಗಳನ್ನು ಪೂರೈಸುತ್ತಿದ್ದರು. ಅಷ್ಟಮಿಯಂದು ದೇವಿಯ ಸಿಂಧೂರವನ್ನು ತೆಗೆದುಕೊಂಡು ತಮ್ಮ ದೋಣಿಗೆ ಹಾಕಿ ಪೂಜಿಸಿದರೆ ಅದೃಷ್ಟ ಒಲಿಯುತ್ತದೆ, ತಾಯಿ ರಕ್ಷಣೆ ನೀಡುತ್ತಾಳೆ ಎಂಬ ನಂಬಿಕೆ ಅವರಲ್ಲಿದೆ. ಈಗ ಹೆಚ್ಚಿದ ಬೇಡಿಕೆಯಿಂದ ಸಾಂಕೇತಿಕವಾಗಿ ಇಪ್ಪತ್ತೈದು ಕೆ.ಜಿ. ಮೀನು, ಸಾವಿರದೊಂದು ರೂಪಾಯಿ ಕಾಣಿಕೆ ನೀಡಿ ಸಿಂಧೂರವನ್ನು ಆಶೀರ್ವಾದವಾಗಿ ಪಡೆಯುತ್ತಾರೆ. ಪ್ರಸಾದಕ್ಕೆ ಬೇಕಾದ ಮೀನನ್ನು ಭಕ್ತಾದಿಗಳಿಂದ ಕಾಣಿಕೆಯ ರೂಪದಲ್ಲಿ ಸಂಗ್ರಹಿಸಿ ನಂತರ ಹಂಚಲಾಗುವುದು.


  ದರ್ಶನಕ್ಕೆ ಆನ್‍ಲೈನ್ ವ್ಯವಸ್ಥೆ(Online System for Walkthrough)


  ಈ ಪ್ರಸಾದವನ್ನು ಮಾಡುವಾಗ ಕಟ್ಟುನಿಟ್ಟಾದ ನಿಯಮಗಳನ್ನು ಅನುಸರಿಸಲಾಗುತ್ತದೆ. ಏಳು ಜನ ಬ್ರಾಹ್ಮಣರು ಸ್ನಾನ ಮಾಡಿ, ಹೊಸ ಧೋತಿ ಚದ್ದರ್ ತೊಟ್ಟು, ಕೆಂಪು/ ಬಿಳಿ ವಸ್ತ್ರದಿಂದ ತಮ್ಮ ಮುಖವನ್ನು ಮರೆಮಾಡಿ ಪ್ರಸಾದ ತಯಾರಿಸುತ್ತಾರೆ. ಸಂಜೆ ದೇವಿಗೆ ನೈವೇದ್ಯ ಅರ್ಪಣೆಯಾಗುವವರೆಗೆ ಹೀಗೆ ಇದ್ದು ನಂತರ ಪ್ರಸಾದ ಸೇವನೆಯ ಕಾರ್ಯಕ್ರಮ ನಡೆಯಲಿದೆ ಹಿಂದಿನ ವರ್ಷ ಕೋವಿಡ್‌ನಿಂದಾಗಿ ಈ ಪ್ರಸಾದ ನಿಲ್ಲಿಸಲಾಗಿತ್ತು. ದೇವಿಯ ದರ್ಶನಕ್ಕೆ ಆನ್‍ಲೈನ್ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ ಸುರಕ್ಷಾ ಕ್ರಮಗಳನ್ನು ಅನುಸರಿಸಿ ದೇವಿಯ ಪೂಜೆ ಹಾಗೂ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.


  ಬೆಳ್ಳಿ ಅಲಂಕಾರ(Silver decoration)


  ಇನ್ನು ಬೆಳ್ಳಿಯ ನಗರ ಎಂದೇ ಪ್ರಸಿದ್ಧವಾದ ಒರಿಸ್ಸಾದ ಕಟಕ್‌ ನಲ್ಲಿ ತರಕಾಸಿ ಕಲಾಪ್ರಕಾರ ರೂಡಿಯಲ್ಲಿದೆ.ಒಡಿಸ್ಸಿ ನೃತ್ಯ ಕಲಾವಿದರು ಪ್ರದರ್ಶನ ನೀಡುವಾಗ ಈ ಆಭರಣಗಳನ್ನು ಧರಿಸುವುದು ಸಂಪ್ರದಾಯ. ಒರಿಯಾ ವಧುಗಳಲ್ಲಿ ತರಕಾಸಿ ಕಾಲುಂಗುರ ಮತ್ತು ಗೆಜ್ಜೆ ಪವಿತ್ರ ಸಂಕೇತಗಳು. ಒಡಿಶಾದ ಜನಜೀವನದಲ್ಲಿ ಈ ಆಭರಣಗಳು ಮಹತ್ವದ ಸ್ಥಾನ ಪಡೆದಿವೆ. ದೇವಿಗೆ ಮೀನಿನ ಆಹಾರ, ಬೆಳ್ಳಿಯ ಅಲಂಕಾರ ಮಾಡಿ ಪೂಜಿಕೊಂಡು ಬರಲಾಗಿದೆ. ದಶಮಿ ನಂತರ ಮಣ್ಣಿನ ಮೂರ್ತಿಯನ್ನು ಪುರಿಘಾಟ್ ಬಳಿ ಮೆರವಣಿಗೆಯಲ್ಲಿ ಒಯ್ದು ನದಿಯಲ್ಲಿ ವಿಸರ್ಜಿಸುವಾಗ ಕೈಮುಗಿದು ‘ಮುಂದಿನ ಬಾರಿ ತಪ್ಪದೇ ಬಾರಮ್ಮಾ’ ಎಂದು ಪ್ರಾರ್ಥಿಸುವ ಇವರ ಪಾಲಿಗೆ ನವರಾತ್ರಿಯನ್ನು ಅಮ್ಮನ ಹಬ್ಬ ಎಂದೇ ಬಿಂಬಿಸಲಾಗುವುದು. ದೇವಿಗೂ ಬೆಳ್ಳಿ ಅಲಂಕಾರ ಬಹುಪ್ರಿಯ ಎನ್ನಲಾಗಿದೆ.


  ಇದನ್ನು ಓದಿ:Weight Loss: ಈ ವೆರೈಟಿ ಮೀನು ತಿಂದ್ರೆ ಬೇಗ ತೂಕ ಕಡಿಮೆ ಆಗುತ್ತಂತೆ ನೋಡಿ!


  ಪೈಪೋಟಿ(Competition)


  ಜೇಡಿ ಮಣ್ಣಿನಲ್ಲಿ ತಯಾರಾದ ಸುಮಾರು ನೂರೈವತ್ತಕ್ಕೂ ಹೆಚ್ಚು ದೇವಿಯರನ್ನು ನವರಾತ್ರಿಯ ಮೊದಲ ದಿನ ದೊಡ್ಡ-ಸಣ್ಣ ಪೆಂಡಾಲ್‍ಗಳಲ್ಲಿ (ಮೆಧೊ) ಅಲಂಕಾರ ಮಾಡಿ ಶಾಸ್ತ್ರೋಕ್ತವಾಗಿ ಸ್ಥಾಪಿಸಿ ಪೂಜೆ ಸಲ್ಲಿಸಲಾಗುತ್ತದೆ. ಇದರಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ದೊಡ್ಡ ಪೆಂಡಾಲ್‍ಗಳಲ್ಲಿ ಬೆಳ್ಳಿಯ ಅಲಂಕಾರವಿರುತ್ತದೆ.
  ದುರ್ಗೆ ತಮ್ಮನ್ನು ಕಾಯುವ ಅಮ್ಮ ಎಂದು ನಂಬಿರುವ ಕಟಕ್‍ನಲ್ಲಿ ಬೆಳ್ಳಿ ಬೆಲೆ ಎಷ್ಟೇ ಹೆಚ್ಚಾದರೂ ದೇವಿಯ ಅಲಂಕಾರ ಮಾತ್ರ ಪೈಪೋಟಿಯಲ್ಲಿ ನಡೆಯುತ್ತದೆ.

  Published by:vanithasanjevani vanithasanjevani
  First published: