ಯಾದಗಿರಿ(ಮೇ.23): ಆ ವಿದ್ಯಾರ್ಥಿನಿ (Student) ಹೆತ್ತವರಿಲ್ಲದ ನೋವಿನಲ್ಲಿಯು ಅನಾಥಳಾಗಿದ್ದು (Orphan) ಸಾಧನೆ ಮಾಡಿದರು. ಓದಿನಲ್ಲಿ ಸಾಧನೆ ಮಾಡಿ ಈಗ ಕೀರ್ತಿ ತರುವ ಕಾರ್ಯ ಮಾಡಿದ್ದಾಳೆ. ಯಾದಗಿರಿ (Yadgiri) ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಚಂಡರಕಿ ಗ್ರಾಮದ ನರಸಮ್ಮ ಹಾಗೂ ನರಸಿಂಹ ದಂಪತಿಗಳ ಪುತ್ರಿ ಎನ್.ಸೋನು ಬೆಂಗಳೂರುನಲ್ಲಿ ಎಸ್ ಎಸ್ ಎಲ್ ಸಿ (SSLC) ಓದಿ ಉತ್ತಮ ಸಾಧನೆ ಮಾಡಿದ್ದಾಳೆ. ಸೋನು ತಾಯಿ ನರಸಮ್ಮ ನಿಧನರಾದ ನಂತರ ಸೋನು ತಮ್ಮ ತಂದೆ ನರಸಿಂಹ ಅವರ ಜೊತೆ ಬೆಂಗಳೂರಿಗೆ (Bengaluru) ವಲಸೆ ಹೋಗುತ್ತಾಳೆ. ತಂದೆ ಕೂಲಿ ಕೆಲಸ ಮಾಡಲು ಹೋದರೆ ಸೋನು ಬೆಂಗಳೂರು ಸಹಕಾರ ನಗರದಲ್ಲಿರುವ ಗುಂಡಾಂಜನೇಯ ದೇವಸ್ಥಾನದಲ್ಲಿ ಭಿಕ್ಷೆ ಬೇಡುತ್ತಿದ್ದಳು. ಇದನ್ನು ಅರಿತ ಸ್ಪರ್ಶಾ ಟ್ರಸ್ಟ್ ಸಿಬ್ಬಂದಿ ರೂಪಾ ಮಹಾಜನ್ ಅವರು ಬಾಲಕಿಯನ್ನು ರಕ್ಷಣೆ ಮಾಡಿ ಕರೆದುಕೊಂಡು ಬರುತ್ತಾರೆ. 2013 ರಲ್ಲಿ ಬಾಲಕಿಯನ್ನು ರಕ್ಷಣೆ ಮಾಡಿ ಸ್ಪರ್ಶಾ ಟ್ರಸ್ಟ್ ಗೆ ಕರೆದುಕೊಂಡು ಬರುತ್ತಾರೆ.
ಈ ವೇಳೆ ಸೋನು ತಂದೆ ನರಸಿಂಹ ಅನಾರೋಗ್ಯದ ನಂತರ ತಾನು ಕೂಡ ಗುಂಡಾಂಜನೇಯ ದೇವಸ್ಥಾನದಲ್ಲಿ ಭಿಕ್ಷೆ ಬೇಡುತ್ತಾನೆ. ಆದರೆ, ಸೋನು ತನ್ನ ತಂದೆ ಭಿಕ್ಷಾಟನೆ ಇಲ್ಲವೇ ಕೂಲಿ ಕೆಲಸಕ್ಕೆ ದೂಡುತ್ತಾರೆಂಬ ಭಯದಲ್ಲಿ ಇದ್ದಳು.
ಉನ್ನತ ಗುರಿ ಮುಟ್ಟುವ ಕನಸು
ಆದರೆ, ಶಿಕ್ಷಣದಲ್ಲಿ ಉನ್ನತ ಗುರಿ ಮುಟ್ಟುವ ಕನಸು ಕಟ್ಟಿಕೊಂಡಿದ್ದಳು. ಸ್ಪರ್ಶಾ ಟ್ರಸ್ಟ್ ಅನಾಥಳಾಗಿದ್ದ ನೋವು ದೂರ ಮಾಡಿದ್ದು ಸೋನು ಸಾಧನೆಗೆ ಸಾಕ್ಷಿಯಾಗಿದೆ.
ಸೋನುಳನ್ನು ಕರೆದುಕೊಂಡು ಹೋಗಿ ಬೆಂಗಳೂರುನ ಸಂಜೀವಿನಿ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 3 ನೇ ತರಗತಿಗೆ ಸೇರಿಸಿದ್ದು ,7 ನೇ ತರಗತಿಯವರೆಗೆ ಅಧ್ಯಯನ ಮಾಡಿಸಿದ್ದಾರೆ.
ನಂತರ ಸೋನು ಓದಿನಲ್ಲಿ ಆಸಕ್ತಿ ವಹಿಸಿರುವದನ್ನು ಅರಿತು ಸೋನು ಅವರನ್ನು ಹೆಸರಘಟ್ಟದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರವೇಶ ಕೊಡಿಸಿದ್ದು,ಈ ಶಾಲೆಯಲ್ಲಿಯೇ 8 ರಿಂದ 10 ನೇ ತರಗತಿವರಗೆ ವ್ಯಾಸಂಗ ಮಾಡುತ್ತಾಳೆ.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಒಟ್ಟು 625 ಕ್ಕೆ 602 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಸ್ಪರ್ಶಾ ಟ್ರಸ್ಟ್ ನ ಸಿಬ್ಬಂದಿಗಳಾದ ರೂಪಾ ಮಹಾಜನ್,ಹುಲಿಶ್ ಅವರು ವಿದ್ಯಾರ್ಥಿನಿ ಇಂಗ್ಲಿಷ್ ತರಬೇತಿ ಸೇರಿದಂತೆ ಮೊದಲಾದ ವಿಷಯ ಕುರಿತು ತರಬೇತಿ ನೀಡಿದ್ದಾರೆ .
ನಾನು ಬೆಂಗಳೂರುನ ಗುಂಡಾಂಜನೇಯ ದೇವಸ್ಥಾನದಲ್ಲಿ ಭೀಕ್ಷೆ ಬೇಡುತ್ತಿದ್ದೆ ಅಂದು ಜೀವನ ನಡೆಸುವುದು ಕಷ್ಟವಾಗಿತ್ತು .ಈ ವೇಳೆ ಸ್ಪರ್ಶಾ ಟ್ರಸ್ಟ್ ಸಿಬ್ಬಂದಿ ವರ್ಗದವರು ನನ್ನನ್ನು ನೋಡಿ ಸ್ಪರ್ಶಾ ಟ್ರಸ್ಟ್ ಕಚೇರಿಗೆ ಕರೆದುಕೊಂಡು ಹೋಗಿ ನಂತರ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ತಂದೆ ,ತಾಯಿ ಯಾರು ಇಲ್ಲ.ನಾನು ಸಾಫ್ಟ್‌ವೇರ್ ಇಂಜಿನಿಯರ್ ಆಗಬೇಕೆಂಬ ಗುರಿ ಹೊಂದಿದ್ದೇನೆ ಎಂದಳು.
ಜಿಲ್ಲೆಗೆ ಕೀರ್ತಿ
ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಚಂಡರಕಿ ಗ್ರಾಮದ ವಿದ್ಯಾರ್ಥಿನಿ ಸೋನು ಸಾಧನೆ ಮಾಡಿದ್ದು ಜಿಲ್ಲೆಗೆ ಕೀರ್ತಿ ತರುವ ಕೆಲಸವಾಗಿದ್ದು,ಗ್ರಾಮಸ್ಥರು ಬಾಲಕಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Yangqu Dam: ಈ ಡ್ಯಾಂ ಕಟ್ಟೋಕೆ ರೋಬೋಗಳನ್ನು ಕರೆಸಲಾಗಿದೆ, ಇನ್ನು ಮನುಷ್ಯರು ಬೇಕಾಗಿಲ್ವಂತೆ!
ಈ ಬಗ್ಗೆ ಸ್ಪರ್ಶಾ ಟ್ರಸ್ಟ್ ನ ಸಂಸ್ಥಾಪಕ ಗೋಪಿನಾಥ ಅವರು ಮಾತನಾಡಿ, ಬಾಲಕಿ ಸೋನು ಅವರನ್ನು ಟ್ರಸ್ಟ್ ಸಿಬ್ಬಂದಿ ಗುಂಡಾಂಜನೇಯ ದೇವಸ್ಥಾನದಲ್ಲಿ ರಕ್ಷಣೆ ಮಾಡಿ ನಂತರ ಆಕೆಗೆ ಸೂಕ್ತ ತರಬೇತಿ ನೀಡಿ ಉತ್ತಮ ಕೊಡಿಸಲಾಗಿದೆ.ವಿದ್ಯಾರ್ಥಿನಿ ಸಾಧನೆ ಖುಷಿ ತಂದಿದೆ.ಆಕೆಯ ಓದುವರೆಗು ವ್ಯಾಸಂಗ ಮಾಡಿಸಲಾಗುತ್ತದೆಂದರು. ಹೆತ್ತವರಿಲ್ಲದ ನೋವಿನಲ್ಲಿಯು ಸೋನು ಸಾಧನೆ ಪ್ರತಿಯೊಬ್ಬ ವಿದ್ಯಾರ್ಥಿಗಳಿಗು ಪ್ರೇರಣೆಯಾಗಿದ್ದಾಳೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ