ಸಾಮಾನ್ಯವಾಗಿ ನಾವು ಎಲ್ಲೋ ಹೊರಗೆ (Outside) ದ್ವಿಚಕ್ರ ವಾಹನದ (Two wheelers) ಮೇಲೆ ಹೋಗುತ್ತಿರುವಾಗ ರಸ್ತೆಯ (Road) ಮೇಲೆ ಒಂದು ಉದ್ದನೆಯ ಹಾವು (The long snake) ನಮ್ಮ ಕಣ್ಣು ಮುಂದೆಯೇ ಹಾದು ಹೋದರೆ ನಮಗೆ ತುಂಬಾನೇ ಭಯವಾಗುತ್ತದೆ. ಮನೆಯ (Home) ಸುತ್ತಮುತ್ತಲಿನಲ್ಲಿ (Around) ಮತ್ತು ತೋಟದಲ್ಲಿ (garden) ಒಂದು ಹಾವು ಕಾಣಿಸಿಕೊಂಡರೆ ಸಾಕು ಅದು ಎಲ್ಲಿಗೆ ಹೋಗುತ್ತಿದೆ? ಅದು ಏನು ಮಾಡುತ್ತಿದೆ? ಒಂದೇ ಸ್ಥಳದಲ್ಲಿ ಇದೆಯೇ ಅಥವಾ ಮುಂದಕ್ಕೆ ಹೋಗುತ್ತಿದೆಯೇ? ಎಂಬ ಅನೇಕ ಪ್ರಶ್ನೆಗಳು (Questions) ನಮ್ಮನ್ನು ಬೆಂಬಿಡದೆ ಕಾಡಲು ಶುರು ಮಾಡುತ್ತವೆ.
ಅಂತಹದರಲ್ಲಿ ನಾವು ಇರುವ ಮನೆಯಲ್ಲಿಯೇ ಹಾವು ಕಾಣಿಸಿಕೊಂಡರೆ ನಮಗೆ ಇನ್ನೆಷ್ಟು ಭಯವಾಗಬಹುದು ಹೇಳಿ? ಹೌದು.. ಆಸ್ಟ್ರೇಲಿಯಾದ ಮನೆಯೊಂದರಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 4 ದೊಡ್ಡ ಹೆಬ್ಬಾವುಗಳು ಬಂದು ಕುಳಿತಿರುವುದನ್ನು ಈ ವೀಡಿಯೋದಲ್ಲಿ ನಾವು ನೋಡಬಹುದು.
ಹಾವುಗಳನ್ನು ನೋಡಿದರೆ ಮೂರ್ಛೆ ಹೋಗುವುದಂತೂ ಗ್ಯಾರಂಟಿ
ಬರೀ ಚಿಕ್ಕ ಪುಟ್ಟ ಹಾವು ಕಂಡ್ರೆನೆ ಬೆಚ್ಚಿ ಬೀಳುವ ನಾವುಗಳು ಇನ್ನೂ ಇಂತಹ ಹಾವುಗಳನ್ನು ನೋಡಿದರೆ ಮೂರ್ಛೆ ಹೋಗುವುದಂತೂ ಗ್ಯಾರಂಟಿ. ಅದು ಈ ಹೆಬ್ಬಾವುಗಳು ಬರೀ ಒಂದು ದಿನ ಮಾತ್ರ ಈ ಮನೆಗೆ ಬಂದು ಹೋಗಿಲ್ಲ, ಈ ಹೆಬ್ಬಾವುಗಳು ಸತತವಾಗಿ ಎರಡು ಮೂರು ದಿನಗಳವರೆಗೆ ಈ ಮನೆಗೆ ಹೀಗೆ ಭೇಟಿ ನೀಡಿವೆ ಎಂದು ಹೇಳಲಾಗುತ್ತಿದೆ.
ಆಸ್ಟ್ರೇಲಿಯಾದ ಬುಡೆರಿಮ್ ನಲ್ಲಿರುವ ಮನೆಯೊಂದರಲ್ಲಿ ಹಾವು ಹಿಡಿಯುವವರು ನಾಲ್ಕು ಕಾರ್ಪೆಟ್ ಹೆಬ್ಬಾವುಗಳನ್ನು ತೋರಿಸುವ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋವನ್ನು ಸನ್‌ಶೈನ್ ಕೋಸ್ಟ್ ಸ್ನೇಕ್ ಕ್ಯಾಚರ್ಸ್ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿದೆ.
ಇದನ್ನೂ ಓದಿ:Python Story: ಹೆಬ್ಬಾವು ಮೊಟ್ಟೆಗಳ ಮರಿ ಮಾಡಲು 50 ದಿನ ಹೈವೇ ಕಾಮಗಾರಿಯೇ ಸ್ಟಾಪ್!
"ಇಲ್ಲಿ ಆಗಾಗ್ಗೆ ಮನೆಗಳಿಗೆ ಹಾವುಗಳು ಬರುವುದಿಲ್ಲ, ಆದರೆ ಸಂತಾನೋತ್ಪತ್ತಿ ಸಮಯದಲ್ಲಿ ನಾವು ನಿಯಮಿತವಾಗಿ ಒಂದೇ ಮನೆಯಲ್ಲಿ ಅನೇಕ ಹಾವುಗಳು ಬರುವುದನ್ನು ನೋಡುತ್ತೇವೆ. ಬುಡೇರಿಮ್ ನ ಈ ನಿರ್ದಿಷ್ಟ ಸ್ಥಳವು 2 ಅಥವಾ 3 ದಿನಗಳ ಅವಧಿಯಲ್ಲಿ ತಮ್ಮ ಹಿಂಭಾಗದ ಡೆಕ್ ನಲ್ಲಿ 4 ಕಾರ್ಪೆಟ್ ಪೈಥಾನ್ ಗಳನ್ನು ಮತ್ತು 2 ವಾರಗಳ ಅವಧಿಯಲ್ಲಿ ಒಟ್ಟು 6 ಹಾವುಗಳು ಇಲ್ಲಿಗೆ ಬಂದಿವೆ" ಎಂದು ಪೋಸ್ಟ್ ನ ಶೀರ್ಷಿಕೆಯಲ್ಲಿ ತಿಳಿಸಲಾಗಿದೆ.
ಇನ್‌ಸ್ಟಾಗ್ರಾಮ್ ನಲ್ಲಿ ವೈರಲ್ ಆದ ವಿಡಿಯೋ
ಈ ವೀಡಿಯೋ ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ನಲ್ಲಿ 7,263 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 350ಕ್ಕೂ ಹೆಚ್ಚು ಲೈಕ್ ಗಳನ್ನು ಸಹ ಪಡೆದಿದೆ.
ಈ ವೀಡಿಯೋದಲ್ಲಿ ಒಬ್ಬ ವ್ಯಕ್ತಿ ಮಾತಾಡುವುದನ್ನು ನಾವು ನೋಡಬಹುದು "ಒಂದು ಹಾವು ಗಂಡು ಮತ್ತು ಇನ್ನೊಂದು ಹೆಣ್ಣು ಹಾವು ಎಂದು ತೋರುತ್ತದೆ. ಒಂದು ಹಾವು ಡೆಕ್ ನ ಮೇಲ್ಭಾಗದಲ್ಲಿದೆ ಮತ್ತು ಅದು ಹೆಣ್ಣು ಹಾವಿನೊಂದಿಗೆ ಮಿಲನಕ್ಕೆ ಹೊರಟಿದೆ ಎಂದು ತೋರುತ್ತದೆ" ಎಂದು ಹೇಳಿರುವುದನ್ನು ಈ ವೀಡಿಯೋದಲ್ಲಿ ನೋಡಬಹುದಾಗಿದೆ.
View this post on Instagram
ಈ ವೀಡಿಯೋ ನೋಡಿದವರು ಭಯ ಪಟ್ಟಿದ್ದಂತೂ ನಿಜ. "ಒಂದು ಹಾವು ಸಾಕು ಎಂದರೆ ಇಲ್ಲಿ ಮೂರು ಹಾವುಗಳಿವೆ" ಎಂದು ಇನ್‌ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಒಬ್ಬರು ಕಾಮೆಂಟ್ ಮಾಡಿದ್ದಾರೆ. "ನಾನು ಆಸ್ಟ್ರೇಲಿಯಾಕ್ಕೆ ಹೋಗಬೇಕಾಗಿದೆ" ಎಂದು ಎರಡನೇ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಕಾರ್ಪೆಟ್ ಹೆಬ್ಬಾವು
ಕಾರ್ಪೆಟ್ ಹೆಬ್ಬಾವು ಒಂದು ದೊಡ್ಡ ಹೆಬ್ಬಾವು ಆಗಿದ್ದು, ಅವುಗಳ ದೇಹದ ಮೇಲಿನ ಚರ್ಮದ ಮೇಲೆ ಕಾರ್ಪೆಟ್ ಮಾದರಿಯನ್ನು ಅನುಕರಿಸುವ ಬೆರಗುಗೊಳಿಸುವ ಬಣ್ಣವನ್ನು ಮತ್ತು ವಿನ್ಯಾಸವನ್ನು ಹೊಂದಿರುತ್ತವೆ. ಸಾಮಾನ್ಯವಾಗಿ ಅವುಗಳ ಬಣ್ಣವು ಆಲಿವ್ ನಿಂದ ಕಪ್ಪು, ಬಿಳಿ, ಕೆನೆ ಅಥವಾ ಚಿನ್ನದ ಮಾದರಿಗಳೊಂದಿಗೆ ಬಹಳವಾಗಿ ಬದಲಾಗುತ್ತದೆ.
ಇದನ್ನೂ ಓದಿ: Cats: ನಿಮ್ಮ ಮನೆಯ ಬೆಕ್ಕಿಗೆ ಒಂದು ಸೂಪರ್ ಪವರ್ ಇದ್ಯಂತೆ ನೋಡಿ!
ಇವುಗಳ ದೇಹದ ಮೇಲಿನ ವಿನ್ಯಾಸವು ವಜ್ರದ ಆಕಾರದ್ದಾಗಿರಬಹುದು ಅಥವಾ ಬೂದು ಅಥವಾ ಕಂದು ಬಣ್ಣದ ಹಿನ್ನೆಲೆಯಲ್ಲಿ ಪ್ರಕಾಶಮಾನವಾದ ಮತ್ತು ಕಪ್ಪು ಪಟ್ಟಿಗಳಿಂದ ಮಾಡಲ್ಪಟ್ಟ ಸಂಕೀರ್ಣ ಮಾದರಿಗಳನ್ನು ಹೊಂದಿರಬಹುದು. ಈ ಪ್ರಭೇದದ ಗಂಡು ಹೆಬ್ಬಾವುಗಳು ಸಾಮಾನ್ಯವಾಗಿ ಹೆಣ್ಣು ಹೆಬ್ಬಾವುಗಳಿಗಿಂತಲೂ ಚಿಕ್ಕದಾಗಿರುತ್ತವೆ ಮತ್ತು ಕೆಲವು ಸಂದರ್ಭಗಳಲ್ಲಿ ಹೆಣ್ಣುಗಳು ನಾಲ್ಕು ಪಟ್ಟು ಹೆಚ್ಚು ಭಾರವಾಗಿರುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ