ನೀವು ಯಾವುದಾದರೂ ವಾಟರ್ ಪಾರ್ಕ್ (Water Park) ಅಥವಾ ಅಮ್ಯೂಸ್ಮೆಂಟ್ ಪಾರ್ಕ್ಗೆ (Amusement Park) ಹೋದಾಗ ಒಂದು ಸ್ಥಳದಲ್ಲಿ ಜನರು ತುಂಬಾನೇ ಕಿರುಚುವುದನ್ನು ನೀವು ಕೇಳಬಹುದು. ಏನಪ್ಪಾ ಈ ರೀತಿಯಾಗಿ ಕಿರುಚುತ್ತಿದ್ದಾರೆ ಎಂದು ಹತ್ತಿರ ಹೋಗಿ ನೋಡಿದರೆ, ಅಲ್ಲಿ ಜನರು ಬುಲ್ ಗೇಮ್ (Bull Game) ಅನ್ನು ಆಡುತ್ತಾ ಇರುತ್ತಾರೆ. ಏನಿದು ಬುಲ್ ಗೇಮ್ ಅಂತೀರಾ..? ಒಂದು ಕೃತಕ ಗೂಳಿಯನ್ನು ಅಲ್ಲಿ ಒಂದು ದೊಡ್ಡ ಸ್ಪ್ರಿಂಗ್ಗೆ (Spring) ಜೋಡಿಸಿ ಅದನ್ನು ವಿದ್ಯುತ್ (Power) ಶಕ್ತಿಯ ಸಹಾಯದಿಂದ ಅದನ್ನು ಹೇಗೆ ಬೇಕೋ ಹಾಗೆ ಅಲ್ಲಾಡಿಸುವಂತೆ ಸೆಟ್ (Set) ಮಾಡಿರುತ್ತಾರೆ. ಜನರು ಮೋಜಿಗಾಗಿ ಅದರ ಮೇಲೆ ಹತ್ತಿ ಕುಳಿತುಕೊಳ್ಳುತ್ತಾರೆ. ನಂತರವೇ ನೋಡಿ ಶುರು ಆಗುತ್ತೆ ಗೂಳಿ ಆರ್ಭಟ, ಮೇಲೆ ಕೂರಿಸಿಕೊಂಡ ಜನರನ್ನು ಸಿಕ್ಕಾಪಟ್ಟೆ ಜೋರಾಗಿ ಅಲುಗಾಡಿಸಿ ಮೇಲಿಂದ ಕೆಳಕ್ಕೆ ಪದೇ ಪದೇ ಬೀಳಿಸುತ್ತಲೇ ಇರುತ್ತದೆ.
ಈ ಆಟ ನೋಡುಗರಿಗೆ ಎಷ್ಟು ಮಜಾ ಕೊಡುತ್ತದೆಯೋ, ಅಷ್ಟೇ ಭಯವನ್ನು ಮೇಲೆ ಕೂರಿಸಿಕೊಂಡವರಿಗೆ ನೀಡುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅರೆ ಈಗೇಕೆ ಈ ಬುಲ್ ಗೇಮ್ ಬಗ್ಗೆ ಮಾತಾಡುತ್ತಿದ್ದೇವೆ ಅಂತೀರಾ..? ನೈಜವಾಗಿಯೂ ಸಹ ಈ ಬುಲ್ ಗೇಮ್ ವಿದೇಶಗಳಲ್ಲಿ ಏರ್ಪಡಿಸುತ್ತಾರೆ.
ಗೂಳಿ ಆರ್ಭಟಕ್ಕೆ ಬೆಚ್ಚಿ ಬಿದ್ದ ಹುಡುಗ
ಇಂತಹದೇ ಒಂದು ಘಟನೆ ಟೆಕ್ಸಾಸ್ನ ರೋಡಿಯೋದಲ್ಲಿ ರಿಂಗ್ ಪ್ರವೇಶಿಸಿದ ಕೂಡಲೇ ನಡೆದಿದೆ ನೋಡಿ. ಗೂಳಿ ಮೇಲೆ ಕುಳಿತಂತಹ ಕೋಡಿ ಹುಕ್ಸ್ ಎಂಬ 18 ವರ್ಷದ ಹುಡುಗ ಗೂಳಿ ಆರ್ಭಟಕ್ಕೆ ಕೆಳಕ್ಕೆ ಉರುಳುತ್ತಾನೆ. ನಂತರ ನಡೆದಿದ್ದು ಮಾತ್ರ ಅಲ್ಲಿ ನೆರೆದಿರುವ ಜನರನ್ನು ಒಂದು ಕ್ಷಣ ಬೆಚ್ಚಿ ಬೀಳುವಂತೆ ಮಾಡಿದ್ದಂತೂ ನಿಜ.
19 ಸೆಕೆಂಡ್ಗಳ ವಿಡಿಯೋ
ಈ 19 ಸೆಕೆಂಡುಗಳ ವಿಡಿಯೋ ತುಣುಕಿನಲ್ಲಿ ಯುವಕ ಗೂಳಿಯ ಮೇಲೆ ಕುಳಿತು ಆಟದ ಮೈದಾನಕ್ಕೆ ಇಳಿದು ಬರುತ್ತಾನೆ. ಬಂದಿದ್ದೇ ತಡ ಆ ಗೂಳಿ ರೊಚ್ಚಿಗೆದ್ದು ಮೇಲೆ ಕೂತ ಆ ಹುಡುಗನನ್ನು ನೆಲಕ್ಕೆ ಉರುಳಿಸುತ್ತದೆ. ಆ ಯುವಕ ತಕ್ಷಣವೇ ಪ್ರಜ್ಞಾಹೀನನಾಗುತ್ತಾನೆ.
ನಂತರ ಆ ಗೂಳಿಯನ್ನು ನಿಯಂತ್ರಿಸಲು ಒಬ್ಬ ವ್ಯಕ್ತಿ ಆಟದ ಮೈದಾನಕ್ಕೆ ಓಡಿ ಬಂದು ಅದನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವಾಗ, ಕೆಳಕ್ಕೆ ಉರುಳಿದ ಮಗನನ್ನು ನೋಡಲು ಅವನ 40 ವರ್ಷದ ತಂದೆ ಲ್ಯಾಂಡಿಸ್ ಹುಕ್ಸ್ ಬರುತ್ತಾರೆ.
ಇದನ್ನೂ ಓದಿ: Viral Dance: ವೈರಲ್ ಆಯ್ತು ಅಮ್ಮ ಮಗನ ಅರಬಿಕ್ ಕುತ್ತ್
ಮಗನನ್ನು ರಕ್ಷಿಸಲು ಬಂದ ತಂದೆ
ನಂತರ ಆ ಗೂಳಿ ಆ ಯುವಕನ ಕಡೆಗೆ ವೇಗದಿಂದ ಓಡಿ ಬರುವುದನ್ನು ನೋಡಿ ಆ ತಂದೆ ತನ್ನ ಮಗನನ್ನು ಬಾಚಿ ತಬ್ಭಿಕೊಳ್ಳುತ್ತಾರೆ. ಆ ರೊಚ್ಚಿಗೆದ್ದ ಗೂಳಿ ತನ್ನ ಕೊಂಬುಗಳಿಂದ ತಂದೆಯ ತಲೆಗೆ ಜೋರಾಗಿ ತಿವಿಯುತ್ತದೆ.
ಅಕಸ್ಮಾತ್ ಆ ತಂದೆ ಸರಿಯಾದ ಸಮಯಕ್ಕೆ ಬರದೇ ಹೋಗಿದ್ದರೆ ಆ ಗೂಳಿ ಕೆಳಕ್ಕೆ ಉರುಳಿದಂತಹ ಯುವಕನನ್ನು ಏನು ಮಾಡುತ್ತಿತ್ತೋ ಗೊತ್ತಿಲ್ಲ. ಈ ವಿಡಿಯೋವನ್ನು ಈಗಾಗಲೇ ಮೂರು ಲಕ್ಷಕ್ಕಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ.
ತಂದೆಯನ್ನು ಹೀರೋ ಎಂದ ನೆಟ್ಟಿಗರು
ತನ್ನ ಮಗನನ್ನು ಕೆರಳಿರುವ ಗೂಳಿಯಿಂದ ಉಳಿಸಿದ್ದಕ್ಕಾಗಿ ತಂದೆಯನ್ನು ಹೀರೋ ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ. ಈ ವಿಡಿಯೋವನ್ನು ಕಳೆದ ತಿಂಗಳು ಮೊದಲ ಬಾರಿಗೆ ಆನ್ಲೈನ್ನಲ್ಲಿ ಹಂಚಿಕೊಳ್ಳಲಾಯಿತು, ಆದರೆ ಇತ್ತೀಚೆಗೆ ವೈರಲ್ ಆಗಿದೆ.
ಒಂದು ಕ್ಷಣ ನೋಡಿ ಎಂತಹ ವ್ಯಕ್ತಿಯಾದರೂ ಬೆಚ್ಚಿ ಬೀಳಿಸುವ ವಿಡಿಯೋ ತುಣುಕನ್ನು ಕೋಡಿ ಹುಕ್ಸ್ ಆನ್ಲೈನ್ನಲ್ಲಿ ಹಂಚಿ ಕೊಂಡಿದ್ದಾರೆ. ಅವರು ತಮ್ಮ ತಂದೆ ಮತ್ತು ಇತರ ಬುಲ್ ಫೈಟರ್ಗಳಿಗೆ ಗಂಭೀರ ಪರಿಸ್ಥಿತಿಯಿಂದ ತಮ್ಮನ್ನು ರಕ್ಷಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.
ತಂದೆ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಮೆಚ್ಚುಗೆ
ಸಾಮಾಜಿಕ ಮಾಧ್ಯಮ ಬಳಕೆದಾರರು ಲ್ಯಾಂಡಿಸ್ ಹುಕ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಯಾವುದೇ ಆಲೋಚನೆಯಿಲ್ಲದೆ ಆಟದ ಮೈದಾನಕ್ಕೆ ಜಿಗಿದಿದ್ದಕ್ಕಾಗಿ ಅವರನ್ನು ಶ್ಲಾಘಿಸಿದರು. "ಒಬ್ಬ ತಂದೆ ತನ್ನ ಮಗನಿಗಾಗಿ ತನ್ನ ಪ್ರಾಣವನ್ನು ತ್ಯಜಿಸಲು ಸಿದ್ಧನಿರುತ್ತಾನೆ" ಎಂದು ಒಬ್ಬರು ಬರೆದಿದ್ದಾರೆ. ಟ್ವಿಟ್ಟರ್ನಲ್ಲಿ, ಇವರನ್ನು "ವರ್ಷದ ಅಪ್ಪ" ಎಂದು ಶ್ಲಾಘಿಸಲಾಯಿತು.
ಇದನ್ನೂ ಓದಿ: Pet Love: ಮಹಿಳೆಯೊಬ್ಬರ ಪ್ರೀತಿಯ ಬೆಕ್ಕು ಮಾಡಿರುವ ಕೆಲಸ ನೋಡಿ..!
ಈ ಘಟನೆಯ ಬಗ್ಗೆ ಮಾತನಾಡಿದ ಲ್ಯಾಂಡಿಸ್ ಹುಕ್ಸ್ “ನನಗೆ ತಕ್ಷಣಕ್ಕೆ ಏನು ಮಾಡುವುದು ಎಂದು ತೋಚದೆ ಮಗನ ಹತ್ತಿರ ಹೋದೆ, ಅದೇ ಕ್ಷಣದಲ್ಲಿ ಗೂಳಿ ಬರುತ್ತಿರುವುದನ್ನು ನೋಡಿ ನನ್ನ ಮಗನಿಗೆ ಯಾವುದೇ ರೀತಿಯ ಅಪಾಯವಾಗದಂತೆ ನೋಡಿಕೊಂಡೆ" ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ