ವಿಶ್ವದಾದ್ಯಂತ ಇಂದು (ಫೆಬ್ರವರಿ 14) ಜನರು ವ್ಯಾಲೆಂಟೈನ್ಸ್ ಡೇ (Valentine's Day) ಅನ್ನು ಆಚರಿಸುತ್ತಿದ್ದು, ತಮಗೆ ತುಂಬಾ ಇಷ್ಟವಿರುವ ವ್ಯಕ್ತಿಗೆ ಬಣ್ಣ ಬಣ್ಣದ ಹೂವುಗಳನ್ನು, ಗ್ರೀಟಿಂಗ್ ಕಾರ್ಡ್ ಗಳಲ್ಲಿ ತಮ್ಮ ಪ್ರೀತಿಯ ಸಂದೇಶವನ್ನು ಕವಿತೆಯ ರೂಪದಲ್ಲಿ ಬರೆದು, ತಮ್ಮ ಪ್ರೀತಿ ಪಾತ್ರರಾದವರಿಗೆ ಸರ್‌ಪ್ರೈಸ್ (Surprice) ಆಗಿ ಉಡುಗೊರೆಯನ್ನು (Gift) ಕೊಟ್ಟು ಈ ದಿನವನ್ನು ಆಚರಿಸುತ್ತಾರೆ ಅಂತ ಹೇಳಬಹುದು. ಹೀಗೆ ಅನೇಕ ರೀತಿಯಲ್ಲಿ ಈ ದಿನವನ್ನು ತಮ್ಮ ಪ್ರೀತಿ ಪಾತ್ರರಾದವರಿಗಾಗಿ ಮೀಸಲಿಡುವ ದಿನ ಇದಾಗಿದೆ ಅಂತ ಹೇಳಬಹುದು.
ಈ ದಿನದಂದು ಅನೇಕ ಯುವಕ ಮತ್ತು ಯುವತಿಯರು ತಮಗೆ ಇಷ್ಟವಾದದವರಿಗೆ ಗುಲಾಬಿ ಹೂವನ್ನು ಕೊಟ್ಟು ತಮ್ಮ ಪ್ರೀತಿಯನ್ನು ಹೇಳಿಕೊಂಡರೆ, ವಿವಾಹಿತರು ತಮ್ಮ ಪ್ರೀತಿಯ ಮಡದಿಯರ ಮುಂದೆ ಅವರ ಪ್ರೀತಿಯನ್ನು ಸರ್‌ಪ್ರೈಸ್ ಆಗಿ ಉಡುಗೊರೆ ನೀಡುವುದರೊಂದಿಗೆ ಆಚರಿಸುತ್ತಾರೆ ಅಂತ ಹೇಳಬಹುದು.
ಹೀಗೆ ಅನೇಕರು ಅನೇಕ ರೀತಿಯಲ್ಲಿ ಈ ದಿನವನ್ನು ಆಚರಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಈ ರೀತಿಯ ಸರ್‌ಪ್ರೈಸ್ ಗಳು ನಮ್ಮ ಪ್ರೀತಿಪಾತ್ರರಾದವರ ಮುಖದಲ್ಲಿ ಒಂದು ದೊಡ್ಡ ನಗುವನ್ನು ತರುವುದಂತೂ ಗ್ಯಾರಂಟಿ. ಇಲ್ಲೊಬ್ಬ ತಂದೆ ತನ್ನ ಪ್ರೀತಿಯ ಮಗಳಿಗೆ ಈ ದಿನದಂದು ಎಂತಹ ಸರ್‌ಪ್ರೈಸ್ ನೀಡಿದ್ದಾರೆ ನೋಡಿ.
ಇದನ್ನೂ ಓದಿ: ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ನಕಲಿ ಆಲೂಗೆಡ್ಡೆ, ಅಸಲಿ ಯಾವುದು ಅಂತ ಹೀಗೆ ಕಂಡು ಹಿಡಿಯಿರಿ
ವ್ಯಾಲೆಂಟೈನ್ಸ್ ಡೇ ದಿನ ಮಗಳಿಗೆ ತಂದೆ ನೀಡಿರುವ ಸರ್‌ಪ್ರೈಸ್ ಏನು ಗೊತ್ತೇ?
ವ್ಯಾಲೆಂಟೈನ್ಸ್ ಡೇಯಂದು ತಂದೆಯೊಬ್ಬ ತನ್ನ ಪುಟ್ಟ ಮಗಳನ್ನು ತನ್ನ ಮೊದಲ ಡೇಟಿಂಗ್ ಗೆ ಕರೆದೊಯ್ಯುವ ಮೂಲಕ ಅವಳನ್ನು ಅಚ್ಚರಿಗೊಳಿಸುವ ವೀಡಿಯೋವೊಂದು ಆನ್ಲೈನ್ನಲ್ಲಿ ಕಾಣಿಸಿಕೊಂಡಿದೆ. ಹೃದಯಸ್ಪರ್ಶಿ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಅನೇಕರ ಹೃದಯಗಳನ್ನು ಗೆಲ್ಲುತ್ತಿದೆ ಅಂತ ಹೇಳಬಹುದು.
58 ಸೆಕೆಂಡಿನ ವಿಡಿಯೋದಲ್ಲಿ ತಂದೆ ತನ್ನ ಪುಟ್ಟ ಮಗಳನ್ನು “ನೀವು ನನ್ನ ವ್ಯಾಲೆಂಟೈನ್ ಆಗುತ್ತೀರಾ?" ಎಂದು ಕೈಯಲ್ಲಿ ಬಣ್ಣ ಬಣ್ಣದ ಫಲಕಗಳನ್ನು ಹಿಡಿದುಕೊಳ್ಳುವ ಮೂಲಕ ಕೇಳುವುದನ್ನು ತೋರಿಸುತ್ತದೆ. ನಂತರ ತಂದೆ-ಮಗಳು ಇಬ್ಬರೂ ಶಾಪಿಂಗ್, ಇಷ್ಟವಾದ ಆಹಾರ ತಿನ್ನುವ ಮೂಲಕ ತಮ್ಮ ದಿನವನ್ನು ಆನಂದಿಸುವುದನ್ನು, ತಮ್ಮ ನೆಚ್ಚಿನ ಊಟವನ್ನು ಆನಂದಿಸುವುದನ್ನು ಮತ್ತು ಬೌಲಿಂಗ್ ನಂತಹ ಮೋಜಿನ ಚಟುವಟಿಕೆಗಳಲ್ಲಿ ತೊಡಗುವುದನ್ನು ಈ ಕ್ಲಿಪ್ ನಲ್ಲಿ ನಾವು ನೋಡಬಹುದಾಗಿದೆ.
ದಿನಾಂಕವಿಲ್ಲದ ವಿಡಿಯೋಗೆ ಮುದ್ದಾದ ಶೀರ್ಷಿಕೆ
ದಿನಾಂಕವಿಲ್ಲದ ಈ ವಿಡಿಯೋವನ್ನು ಚಾರ್ರಿಸ್ ಲೇನ್ ಎಂಬ ಹೆಸರಿನ ಟ್ವಿಟ್ಟರ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದ ಶೀರ್ಷಿಕೆ "ನನ್ನ ಭವಿಷ್ಯದ ಮಗಳು ಈ ರೀತಿಯ ತಂದೆಯನ್ನು ಹೊಂದಲಿ ಎಂದು ನಾನು ಪ್ರಾರ್ಥಿಸುತ್ತೇನೆ" ಎಂದು ಬರೆದಿದ್ದಾರೆ.
I pray my Future Daughter can have a Father like this 🥹❤️. #ValentinesDay pic.twitter.com/KZds03e4nW
— Charrise Lane (@CharriseJLane) February 13, 2023
ಮುದ್ದಾದ ವಿಡಿಯೋಗೆ ಕಾಮೆಂಟ್ ಮಾಡಿದ ನೆಟ್ಟಿಗರು
"ಪುರುಷರು ಸಹ ಈ ರೀತಿಯ ತಂದೆಯಾಗಲು ಆಶಿಸಬೇಕು" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.
ಮೂರನೇ ಸಾಮಾಜಿಕ ಮಾಧ್ಯಮ ಬಳಕೆದಾರರು "ಸುಂದರವಾಗಿದೆ ಈ ವಿಡಿಯೋ ಅನೇಕ ಪುರುಷರು ಇದನ್ನು ಗುರುತಿಸದೆ ಪ್ರತಿದಿನ ಮಾಡುತ್ತಾರೆ. ಅದನ್ನು ಹೊಗಳುವುದನ್ನು ನೋಡುವುದು ಅದ್ಭುತವಾಗಿದೆ, ನಾವೆಲ್ಲರೂ ಬೇಬಿ ಡ್ಯಾಡಿಗಳಲ್ಲ. ನಮ್ಮಲ್ಲಿ ಅನೇಕರು ಗಂಡಂದಿರು ಮತ್ತು ತಂದೆಯರು ಸಹ ಇದ್ದಾರೆ" ಎಂದು ಹೇಳಿದ್ದಾರೆ.
"ನನ್ನ ಭಾವಿ ಪತಿ ಈ ರೀತಿಯಾಗಿ ಮಾಡದೆ ಇದ್ದರೆ, ನಾನು ಅವನನ್ನು ಇಷ್ಟ ಪಡುವುದಿಲ್ಲ" ಎಂದು ನಾಲ್ಕನೇ ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ