Black Mumba: ಬೆಡ್ ರೂಮ್​ಗೆ ಬಂದ ಭಯಾನಕ ಬ್ಲ್ಯಾಕ್ ಮಾಂಬಾ! ಮನೆಮಂದಿ ಶಾಕ್

ಮನೆಯ ಹೊರಗಿರುವ ಉದ್ಯಾನದಲ್ಲಿ ಚಿಕ್ಕ ಹಾವನ್ನು ನೋಡಿದರೆ ನಾವು ಬೆಚ್ಚಿ ಬಿಳ್ತೀವಿ, ಅಂತದರಲ್ಲಿ ದಕ್ಷಿಣ ಆಫ್ರಿಕಾದಲ್ಲಿನ ಒಂದು ಮನೆಯಲ್ಲಿ ಈ ವಿಷಪೂರಿತ ಹಾವೊಂದು ಬಂದಿರುವುದು ಮನೆಯವರ ಕಣ್ಣಿಗೆ ಬಿದ್ದಿದೆ. ಮನೆಯವರು ಈ ಹಾವನ್ನು ಲಿವಿಂಗ್ ರೂಮಿನಿಂದ ಮಲಗುವ ಕೋಣೆಯ ಕಡೆಗೆ ಹೋಗುವಾಗ ನೋಡಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನಮ್ಮ ಮನೆಗೆ ಯಾರೋ ಒಬ್ಬರು ಬಂದು ‘ನಿಮ್ಮ ಮನೆಯ ಹತ್ತಿರದಲ್ಲಿ ಒಂದು ದೊಡ್ಡ ಹಾವನ್ನು (Snake) ನೋಡಿದೆ, ತುಂಬಾನೇ ಭಯಾನಕವಾಗಿತ್ತು’ ಅಂತ ನಮಗೆ ಹೇಳಿದರೆ ಸಾಕು ನಮ್ಮ ಮನಸ್ಸಿನಲ್ಲಿ ಒಂದು ರೀತಿಯ ಭಯ ಮತ್ತು ಆತಂಕ ಮನೆ ಮಾಡುತ್ತದೆ. ಅಂತಹದರಲ್ಲಿ ವಿಶ್ವದ ಅತ್ಯಂತ ವಿಷಪೂರಿತ ಹಾವುಗಳಲ್ಲಿ (Most Venomous Snake In The World) ಒಂದಾದ ಕಪ್ಪು ಮಾಂಬಾ (Black Mumba) ನೀವು ಮಲಗುವ ಕೋಣೆಗೆ ಬಂದರೆ ನಿಮಗೆ ಭಯವಾಗುವುದು ಇರಲಿ, ನೋಡಿ ಭಯದಿಂದ ಮೂರ್ಛೆ ಹೋಗುವುದು ಒಂದೇ ಬಾಕಿ ಇರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.

ಮನೆಯೊಳಗೆ ಬಂದ ವಿಷಪೂರಿತ ಹಾವು 
ಮನೆಯ ಹೊರಗಿರುವ ಉದ್ಯಾನದಲ್ಲಿ ಚಿಕ್ಕ ಹಾವನ್ನು ನೋಡಿದರೆ ನಾವು ಬೆಚ್ಚಿ ಬಿಳ್ತೀವಿ, ಅಂತದರಲ್ಲಿ ದಕ್ಷಿಣ ಆಫ್ರಿಕಾದಲ್ಲಿನ ಒಂದು ಮನೆಯಲ್ಲಿ ಈ ವಿಷಪೂರಿತ ಹಾವೊಂದು ಬಂದಿರುವುದು ಮನೆಯವರ ಕಣ್ಣಿಗೆ ಬಿದ್ದಿದೆ. ಮನೆಯವರು ಈ ಹಾವನ್ನು ಲಿವಿಂಗ್ ರೂಮಿನಿಂದ ಮಲಗುವ ಕೋಣೆಯ ಕಡೆಗೆ ಹೋಗುವಾಗ ನೋಡಿದ್ದಾರೆ.

ಕುಟುಂಬ ಸದಸ್ಯರು ತಮ್ಮ ಮನೆಯ ಮುಂಬಾಗಿಲಿನ ಪಕ್ಕದಲ್ಲಿರುವ ಒಂದು ಮಂಚದ ಮೇಲೆ ಕುಳಿತಿದ್ದಾಗ ಹಾವು ಅವರ ಮನೆಯನ್ನು ಪ್ರವೇಶಿಸಿತು. ಮಾಂಬಾವನ್ನು ನೋಡಿದ ನಂತರ, ಅವರು ಭಯದಿಂದ ಮನೆಯಿಂದ ಹೊರಕ್ಕೆ ಓಡಿ ಹೋದರು ಮತ್ತು ಉತ್ತರ ಡರ್ಬಾನಿನ ಮಾಫೆಫೆಥೇನಿಯಲ್ಲಿ ಈ ಘಟನೆ ನಡೆದಿದ್ದು, ಘಟನೆ ನಡೆದ ಸ್ಥಳಕ್ಕೆ ಹಾವು ಹಿಡಿಯುವ ನಿಕ್ ಇವಾನ್ಸ್ ಕೂಡಲೇ ಬಂದರು.

ಕಪ್ಪು ಮುಂಬಾ ಹಾವು ನೋಡಲು ಹೇಗಿರುತ್ತದೆ 
ನ್ಯೂಸ್ ವೀಕ್ ವರದಿ ಮಾಡಿರುವ ಪ್ರಕಾರ, ಕಪ್ಪು ಮಾಂಬಾಗಳನ್ನು ಹಿಡಿಯುವುದು ತುಂಬಾನೇ ಕಷ್ಟ, ಏಕೆಂದರೆ ಅವು ಗಂಟೆಗೆ 12.5 ಮೈಲಿಗಳಷ್ಟು ವೇಗದಲ್ಲಿ ಚಲಿಸುತ್ತವೆ ಮತ್ತು 14 ಅಡಿಗಳವರೆಗೆ ಉದ್ದಇರುತ್ತವೆ.ಅವು ಕಾಲು ಇಂಚು ಉದ್ದದ ಕೋರೆ ಹಲ್ಲುಗಳನ್ನು ಸಹ ಹೊಂದಿರುತ್ತವೆ.

ಇದನ್ನೂ ಓದಿ: Viral Video: ಆಮೆಯೊಂದಿಗೆ ಆ್ಯಪಲ್ ಹಂಚಿಕೊಂಡ ಚಿಂಪಾಂಜಿ! ಈ ಪ್ರಾಣಿಗಳ ಪ್ರೀತಿ ಈಗ ನೆಟ್ಟಿಗರ ಫೇವರೇಟ್

ಮಾಂಬಾದ ಕೋರೆ ಹಲ್ಲುಗಳಿಂದ ಹೊರ ಬರುವ ವಿಷವು ಕಚ್ಚಿದ 10 ನಿಮಿಷಗಳಲ್ಲಿ ತನ್ನ ಪರಿಣಾಮವನ್ನು ತೋರಿಸಲು ಪ್ರಾರಂಭಿಸುತ್ತದೆ. ಕಚ್ಚಿದ ಸ್ಥಳದಲ್ಲಿ ಜುಮ್ಮೆನಿಸುವ ಸಂವೇದನೆಯು ಶೀಘ್ರದಲ್ಲಿಯೇ ಮಯೋಸಿಸ್, ಪ್ಟೋಸಿಸ್, ಮಸುಕಾದ ದೃಷ್ಟಿಗೆ ದಾರಿ ಮಾಡಿಕೊಡುತ್ತದೆ ಮತ್ತು ವಿಷದ ಪ್ರಬಲ ನ್ಯೂರೋಟಾಕ್ಸಿನ್ ಗಳು ತ್ವರಿತವಾಗಿ ದೇಹದ ಅಂಗಾಂಶಗಳನ್ನು ನಾಶಪಡಿಸಲು ಪ್ರಾರಂಭಿಸುವುದರಿಂದ ತೀವ್ರ ಸಂದರ್ಭಗಳಲ್ಲಿ ಕಚ್ಚಿಸಿಕೊಂಡ ವ್ಯಕ್ತಿ ಬೇಗನೆ ಪ್ರಜ್ಞೆ ಕಳೆದು ಕೊಳ್ಳುತ್ತಾರೆ ಎಂದು ಹೇಳಬಹುದು.ಮಾಂಬಾ ತನ್ನ ಕಪ್ಪು ದವಡೆಗಳನ್ನು ತೆರೆದು, ನಾಲಿಗೆಯನ್ನು ಹೊರಕ್ಕೆ ಹಾಕಿದ್ದನ್ನು ನೋಡಿದರೆ ನಿಜಕ್ಕೂ ಯಾರಿಗಾದರೂ ಭಯವಾಗುತ್ತದೆ. ತಜ್ಞರ ಪ್ರಕಾರ, ಅದರ ವಿಷವು ವಯಸ್ಕ ಮನುಷ್ಯನನ್ನು ಕೊಲ್ಲಲು ಕೇವಲ ಎರಡು ಹನಿಗಳು ಮಾತ್ರವೇ ತೆಗೆದು ಕೊಳ್ಳುತ್ತದೆ.

ಇದನ್ನೂ ಓದಿ:  Whale Vomit: ಕೇರಳದ ಮೀನುಗಾರರಿಗೆ ಸಿಕ್ತು 28 ಕೋಟಿ ಮೌಲ್ಯದ ತಿಮಿಂಗಿಲ ವಾಂತಿ!

ವಾಸನೆಗೆ ಹಾವು ಹೆದರಬಹುದು ಎಂದು ನಿರೀಕ್ಷಿಸಿ ಕುಟುಂಬವು ಮನೆಯ ಸುತ್ತಲೂ ಸೋಂಕು ನಿವಾರಕವನ್ನು ಸಿಂಪಡಿಸಿತು. ಹಾವು ಹಿಡಿಯುವ ಇವಾನ್ಸ್ ಬಂದಾಗ ಹಾವು ಮನೆಯ ಕೋಣೆಗಳಲ್ಲಿರುವ ಕಿಟಕಿಗಳು ಅಥವಾ ಬಾಗಿಲುಗಳ ಮೂಲಕ ಹೊರ ಹೋಗುತ್ತದೆಯೇ ಎಂದು ನೋಡಲು ಕುಟುಂಬದ ಸದಸ್ಯರನ್ನು ಮನೆಯ ಮುಂದೆ ಒಟ್ಟುಗೂಡಿಸಲಾಯಿತು.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಪೋಸ್ಟ್
ಹಾವು ಹಿಡಿಯುವವನು ಫೇಸ್‌ಬುಕ್ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಅದರಲ್ಲಿ ಮಾಂಬಾ ಹಾಸಿಗೆಯ ಕೆಳಗೆ ಇರಲಿಲ್ಲ ಎಂದು ಹೇಳಿದರು. "ನಾನು ಕೋಣೆಯ ಸುತ್ತಲೂ ನೋಡಿದೆ ಮತ್ತು ವಾರ್ಡ್ರೋಬ್ ನಲ್ಲಿ ಹೋಗಿರಬಹುದಾ ಅಂತ ಅಲ್ಲಿಯೂ ನೋಡಿದೆ. ನಾನು ಒಮ್ಮೆ ಟಾರ್ಚ್ ಹಾಕಿ ಒಳಗಡೆ ನೋಡಿದೆ ಮತ್ತು ಅದರ ದೇಹದ ಸುರುಳಿಯು ಹೊರಗೆ ಅಂಟಿಕೊಂಡಿರುವುದನ್ನು ನಾನು ನೋಡಿದೆ" ಎಂದು ಇವಾನ್ಸ್ ಬರೆದುಕೊಂಡಿದ್ದಾರೆ.ಹಾಗೆ ಅಲ್ಲಿ, ಇಲ್ಲಿ ಸುತ್ತಾಡುತ್ತಿದ್ದ ಹಾವನ್ನು ನಂತರ ಇವಾನ್ಸ್ ಹಿಡಿಯುವಲ್ಲಿ ಯಶಸ್ವಿಯಾದರು. ಮತ್ತು ಮನೆಯಲ್ಲಿ ಸೆರೆಸಿಕ್ಕ ಹಾವನ್ನು ಹಿಡಿದುಕೊಂಡು ಹೋಗಿ ಮನೆಯವರನ್ನು ನಿರಾಳಗೊಳಿಸಿದರು.
Published by:Ashwini Prabhu
First published: