• Home
  • »
  • News
  • »
  • trend
  • »
  • Elephant Viral Video: ಪತ್ರಕರ್ತರ ವರದಿಯನ್ನು ಕಂಡು ಮುದ್ದಿಸಿದ ಆನೆ! ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್

Elephant Viral Video: ಪತ್ರಕರ್ತರ ವರದಿಯನ್ನು ಕಂಡು ಮುದ್ದಿಸಿದ ಆನೆ! ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪತ್ರಕರ್ತರು ಈ ವಿಡಿಯೋದಲ್ಲಿ ಲೈವ್​ನಲ್ಲಿದ್ದಾರೆ. ಹಿಂದೆ ಆನೆಗಳ ಹಿಂಡು ಕೂಡ ಇದೆ. ಅದರಲ್ಲಿ ಹಿಂದೆ ಇರುವಂತಹ  ಆನೆಗಳಲ್ಲಿ ಒಂದು ಆನೆ ತನ್ನ ಸೊಂಡಿಲನ್ನು ಎತ್ತಿ ಪತ್ರಕರ್ತರನ್ನು ಮುದ್ದಿಸಿದೆ. ಇದಿಷ್ಟು ವಿಡಿಯೋ ಮಾತ್ರ ಈಗ ತುಂಬಾ ವೈರಲ್​ ಆಗುತ್ತಿದೆ.

  • Share this:

    ಪ್ರಾಣಿಗಳು (Animals) ಮತ್ತು ಮನುಷ್ಯರ (Human Being) ನಡುವಿನ ಒಡನಾಟದ ಬಗ್ಗೆ ಹೇಳುವುದಾದರೆ ಇತ್ತೀಚೆಗಂತು ಮನುಷ್ಯ ಮತ್ತು ಪ್ರಾಣಿ ಪಕ್ಷಿಗಳ ವಿಡಿಯೋಗಳು (Videos), ಫೋಟೋಗಳು (Photos) ಸೋಷಿಯಲ್ ಮಿಡಿಯಾಗಳಲ್ಲಿ (Social Media) ಹರಿದಾಡುತ್ತಲೇ ಇದೆ. ಈ ಮಧ್ಯೆ ಇದೀಗ ಸಿನಿಮಾಗಳನ್ನು (Cinema) ಕೂಡ ಮಾಡುತ್ತಿದ್ದಾರೆ. ಈಗೀಗ ಪ್ರಾಣಿಗಳು ಕೂಡ ಮನುಷ್ಯರಂತೆಯೇ ವರ್ತಿಸಲು ಪ್ರಾರಂಭಿದೆ. ಕೆಲವೊಂದು ಪ್ರಾಣಿಗಳು ಮಾಡುವಂತಹ ಕೆಲಸಗಳು ಒಮ್ಮೆಗೆ ನೋಡುಗರನ್ನೇ ಅಚ್ಚರಿ ಮೂಡಿಸುತ್ತೆ. ಇಲ್ಲೊಂದು ಆನೆ ಬಗ್ಗೆ ಒಬ್ಬ ನ್ಯೂಸ್ ವರದಿಯ ಲೈವ್​ನಲ್ಲಿ ಇರಬೇಕಾದರೆ ಹಿಂದೆ ಇರುವಂತಹ ಆನೆ ಪತ್ರಕರ್ತರ ಮುಖಕ್ಕೆ ಸೊಂಡಿಲನ್ನು ಇಟ್ಟು ಮುದ್ದಿಸುತ್ತಿದೆ. ಈ ವಿಡಿಯೋ ಇದೀಗ  ಸೋಷಿಯಲ್ ಮಿಡಿಯಾಗಳಲ್ಲಿ ಈಗಿನ ಟ್ರೆಂಡಿಂಗ್ ವಿಡಿಯೋ ಆಗಿದೆ.


    ಪತ್ರಕರ್ತರು ಈ ವಿಡಿಯೋದಲ್ಲಿ ಲೈವ್​ನಲ್ಲಿದ್ದಾರೆ. ಹಿಂದೆ ಆನೆಗಳ ಹಿಂಡು ಕೂಡ ಇದೆ. ಅದರಲ್ಲಿ ಹಿಂದೆ ಇರುವಂತಹ  ಆನೆಗಳಲ್ಲಿ ಒಂದು ಆನೆ ತನ್ನ ಸೊಂಡಿಲನ್ನು ಎತ್ತಿ ಪತ್ರಕರ್ತರನ್ನು ಮುದ್ದಿಸಿದೆ. ಇದಿಷ್ಟು ವಿಡಿಯೋ ಮಾತ್ರ ಈಗ ತುಂಬಾ ವೈರಲ್​ ಆಗುತ್ತಿದೆ. ಇನ್ನು ಈ ವಿಡಿಯೋ ಬಹಳಷ್ಟು ಸುಂದರವಾಗಿದ್ದು ನೋಡುಗರ ಮುಖದಲ್ಲಿ ಬಹಳಷ್ಟು ನಗು ತರಿಸಿದ ವಿಎಇಯೋ ಆಗಿದೆ.


    ಪತ್ರಕರ್ತರು ಯಾರು?


    ವನ್ಯಜೀವಿ ಟ್ರಸ್ಟ್​ವೊಂದರ ಬಗ್ಗೆ ಪತ್ರಕರ್ತ ಆಲ್ವಿನ್​ ಪ್ಯಾಟರ್ಸನ್​ ಕೌಂಡಾ ಸ್ಟೋರಿ ಮಾಡಲು ಹೋದಾಗ ಅಲ್ಲಿ ಆನೆಗಳ ದಿಂಡು ಕಂಡು ವರದಿ ಮಾಡಿದರು. ಈ ಸಂದರ್ಭದಲ್ಲಿ ಆನೆಗಳು ಈ ರೀತಿ ಮುದ್ದು ಮಾಡಿವೆ. ಇದು ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.


    ಇದನ್ನೂ ಓದಿ: ಹಿಮ ಚಿರತೆಯ ಫೋಟೋ ಸೆರೆಹಿಡಿಯಲು ಆಕೆ ನಡೆದದ್ದು 165 ಕಿ.ಮೀ!


    ಈ ವಿಡಿಯೋ ಇನ್ಸ್ಟಾಗ್ರಾಮ್​ನಲ್ಲಿ ಫುಲ್ ವೈರಲ್:


    ಈ ವಿಡಿಯೋವನ್ನು ಶೆಲ್ಡ್ರಿಕ್ ವೈಲ್ಡ್‌ಲೈಫ್ ಟ್ರಸ್ಟ್‌ನ ಇನ್‌ಸ್ಟಾಗ್ರಾಮ್ ಅಕೌಂಟ್​ನಲ್ಲಿ ಪೋಸ್ಟ್ ಮಾಡಲಾಗಿದೆ. ಇದು ಒಂದು ಮಿಲಿಯನ್​ಗಿಂತಲೂ ಹೆಚ್ಚು ಜನರು ಈ ವಿಡಿಯೋ ವನ್ನು ನೋಡಿದ್ದಾರೆ. ‘ಪ್ರತಿಯೊಬ್ಬರೂ ಸ್ಟಾರ್ ಆಗಲು ಇಚ್ಛಿಸುತ್ತಾರೆ! ಆಲ್ವಿನ್‌ನ ಪರ್ಫಾರ್ಮನ್ಸ್​ನಿಂದ ಕಿಂದಾನಿ ಪ್ರೇರಿತಳಾಗಿ ಅವರನ್ನು ಮುದ್ದು ಮಾಡಿದೆ’ ಎಂದು ಈ ವಿಡಿಯೋಗೆ ಇನ್ಸ್ಟಾಗ್ರಾಮ್​ನಲ್ಲಿ ಕ್ಯಾಪ್ಷನ್ ಬರೆದಿದ್ದಾರೆ.


    ಏನಿದೆ ಈ ವಿಡಿಯೋದಲ್ಲಿ?


    ಅಲ್ವಿನ್​ ಅನಾಥ ಆನೆಗಳು ಮತ್ತು ವನ್ಯಜೀವಿ ಸಂರಕ್ಷಣೆಯ ಬಗ್ಗೆ ವರದಿ ಮಾಡಲು ಇಲ್ಲಿ ಬಂದಿದ್ದರು. ಆ ಆನೆಗಳ ಹಿಂಡಿನ ಮುಂದೆ ನಿಂತು  ಆಲ್ವಿನ್​ ಆನೆಗಳಿಗೆ ವಾಸ್ತವ್ಯ ಕಲ್ಪಿಸುವ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಆ ಹೊತ್ತಿನಲ್ಲಿ ಹಿಂದೆಯಿದ್ದ ಆನೆ ಒಂದು ಅಲ್ವಿನ್ ಅವರನ್ನು ಮೊದಲು ಸೊಂಡಿಲಿನಿಂದ ಕಿವಿಯನ್ನು ಮುದ್ದಿಸಿತು ನಂತರ ನೇರ ಅವನ ಬಾಯಿಯತ್ತ ಸೊಂಡಿಲನ್ನು ಕೊಂಡೊಯ್ಯಿತು. ಈ ಸಂದರ್ಭದಲ್ಲಿ ವರದಿ ಮಾಡುವುದನ್ನು ನಿಲ್ಲಿಸಿ ನಗಲು ಆರಂಭಿಸಿದರು.




    ಶೆಲ್ಡ್ರಿಕ್ ವೈಲ್ಡ್‌ಲೈಫ್ ಟ್ರಸ್ಟ್


    ಶೆಲ್ಡ್ರಿಕ್ ವೈಲ್ಡ್‌ಲೈಫ್ ಟ್ರಸ್ಟ್, ಕೀನ್ಯಾ ಮೂಲದ ಸಂಸ್ಥೆಯಾಗಿದ್ದು, "ಅನಾಥ ಮರಿ ಆನೆಗಳ ರಕ್ಷಣೆ, ಪುನರ್ವಸತಿ ಮತ್ತು ಬಿಡುಗಡೆಗಾಗಿ" ಕೆಲಸ ಮಾಡುತ್ತದೆ, ಇದು ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ.


    ಈ ವಿಡಿಯೋಗೆ ಬಂದಂತಹ ಕಮೆಂಟ್​ಗಳು:


    ಈ ವಿಡಿಯೋವನ್ನು ನೋಡಿದ ವೀಕ್ಷಕರು ಬಹಳಷ್ಟು ಕಮೆಂಟ್​ಗಳನ್ನು ಮಾಡಿದ್ದಾರೆ. ಅದ್ರಲ್ಲೂ ಒಬ್ಬರು ಈ ದಿನ ಈ ವೈರಲ್ ವಿಡಿಯೋವನ್ನು ನೋಡುವುದರಿಂದಲೇ ಪ್ರಾರಂಭವಾಯಿತು ಎಂದು ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರು ನಾನು ಇದನ್ನು ಪದೇ ಪದೇ ನೋಡುತ್ತಿದ್ದೇನೆ,  ಇದು ನನಗೆ ಪ್ರತಿ ಬಾರಿಯೂ ನೋಡಿದಾಗಲೂ ನಗುವನ್ನು ತರಿಸುತ್ತದೆ ಎಂದು ಕಮೆಂಟ್ ಮಾಡಿದ್ದಾರೆ.

    Published by:Gowtham K
    First published: