Viral Video: ಮತ್ತೆ ತನ್ನ ಮರಿಯ ಜೊತೆಯಾದ ಆನೆಯೊಂದು ಅರಣ್ಯಾಧಿಕಾರಿಗಳಿಗೆ ಏನ್​​ಮಾಡಿದೆ ಗೊತ್ತಾ? ಈ ವಿಡಿಯೋ ನೋಡಿ

Viral Video: ತಾಯಿಯಿಂದ ಬೇರ್ಪಟ್ಟ ಆನೆ ಮರಿಯನ್ನು ಅರಣ್ಯ ಅಧಿಕಾರಿಗಳು ಮತ್ತೆ ತಾಯಿಯ ಜೊತೆಗೆ ಸೇರಿಸಿದ್ದಾರೆ. ಮತ್ತೆ ಮರಿಯ ಜೊತೆ ಸೇರಿದ ಆನೆ ಏನ್ಮಾಡ್ತು ಗೊತ್ತಾ ಈ ವಿಡಿಯೋ ನೋಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಾಡಿನಲ್ಲಿರುವ ದೈತ್ಯವಾದ ಪ್ರಾಣಿ ಎಂದರೆ ಅದು ಆನೆಗಳು ಅಂತ ಹೇಳಿದರೆ ತಪ್ಪಾಗುವುದಿಲ್ಲ, ಈ ಆನೆಗಳು (Elephant) ಸಾಮಾನ್ಯವಾಗಿ ದೊಡ್ಡ ದೊಡ್ಡ ಹಿಂಡುಗಳಲ್ಲಿಯೇ ಇರಲು ಇಷ್ಟಪಡುತ್ತವೆ. ಕಾಡಿನಲ್ಲಿ ಈ ಆನೆಗಳು ಒಬ್ಬಂಟಿಯಾಗಿ ಓಡಾಡುವುದು ತೀರ ಕಡಿಮೆ (Less) ಅಂತ ಹೇಳಬಹುದು.ಆದಾಗ್ಯೂ, ಕೆಲವೊಮ್ಮೆ ಆನೆ ಮರಿಗಳು ತಾಯಿ ಆನೆಯಿಂದ ಮತ್ತು ತಮ್ಮ ಹಿಂಡುಗಳಿಂದ ಬೇರ್ಪಡುತ್ತವೆ ಮತ್ತು ಆ ದಟ್ಟವಾದ ಕಾಡಿನಲ್ಲಿ (Forest) ಮತ್ತೆ ತನ್ನ ಹಿಂಡನ್ನು ಒಂದಾಗಲೂ ತುಂಬಾನೇ ಕಷ್ಟ ಪಡುತ್ತವೆ ಅಂತ ಹೇಳಿದರೆ ಸುಳ್ಳಲ್ಲ. ಹೀಗೆ ಒಂದು ಆನೆ ಮರಿಯೊಂದು (Baby Elephant) ತನ್ನ ತಾಯಿಯಿಂದ ಬೇರ್ಪಟ್ಟು, ಕಾಡಿನಲ್ಲಿ ದಾರಿ ತಪ್ಪಿತ್ತು.

ಆದರೆ ನಂತರ ಅರಣ್ಯ ಅಧಿಕಾರಿಗಳು ಆ ಮರಿ ಆನೆಯನ್ನು ತನ್ನ ತಾಯಿಯ ಜೊತೆಗೆ ಸೇರಿಸಿದ್ದಾರೆ. ತನ್ನ ಮರಿ ತನಗೆ ಸಿಕ್ಕಿದ ಖುಷಿಗೆ ಆ ತಾಯಿ ಆನೆ ಅರಣ್ಯ ಅಧಿಕಾರಿಗಳಿಗೆ ಏನು ಮಾಡಿದೆ ನೋಡಿ. ಈ ಆನೆಯ ವೀಡಿಯೋ ನೋಡಿ ನಿಮಗೆ ಅರ್ಥವಾಗುತ್ತದೆ.ಈಗ ಈ ಆನೆಗಳ ಮುದ್ದಾದ ವೀಡಿಯೋವನ್ನು ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿಯಾದ ಸುಸಾಂತ ನಂದಾ ಅವರು ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ. ಮರಿ ಆನೆಯೊಂದಿಗೆ ಮತ್ತೆ ಒಂದಾಗಿಸಿದ್ದಕ್ಕಾಗಿ ತಾಯಿ ಆನೆಯು ಅರಣ್ಯ ಅಧಿಕಾರಿಗಳಿಗೆ ಆಶೀರ್ವದಿಸಿ ಮುಂದೆ ಹೋಗುತ್ತಿರುವುದನ್ನು ನಾವು ನೋಡಬಹುದು.

ತನ್ನ ಹಿಂಡಿನಿಂದ ಬೇರ್ಪಟ್ಟ ಆನೆ ಮರಿ

ನಂದಾ ಅವರು ಗುರುವಾರ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ ಮತ್ತು ಇದು 19,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 1,500 ಕ್ಕೂ ಹೆಚ್ಚು ಲೈಕ್ ಗಳನ್ನು ಪಡೆದಿದೆ. ವೀಡಿಯೋ ಪೋಸ್ಟ್ ನ ಶೀರ್ಷಿಕೆಯಲ್ಲಿ, ಐಎಫ್ಎಸ್ ಅಧಿಕಾರಿ ಅವರು "ಆ ಆಶೀರ್ವಾದ.. ಆನೆಯ ಮರಿಯನ್ನು ಅರಣ್ಯ ಸಿಬ್ಬಂದಿ ತನ್ನ ತಾಯಿಯೊಂದಿಗೆ ಮತ್ತೆ ಒಂದು ಗೂಡಿಸಿದರು. ಮಗುವಿನೊಂದಿಗೆ ಅದರ ವಾಸಸ್ಥಾನಕ್ಕೆ ಹೊರಡುವ ಮೊದಲು ತಾಯಿ ಆನೆ ಅವರನ್ನು ಆಶೀರ್ವದಿಸುತ್ತಾಳೆ. ಮಿಸ್ ಮಾಡಲೇಬೇಡಿ ಈ ಮುದ್ದಾದ ವೀಡಿಯೋ" ಎಂದು ಬರೆದು ಕೊಂಡಿದ್ದಾರೆ.



ಅರಣ್ಯ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಯನ್ನು ಶ್ಲಾಘಿಸಿದ ನೆಟ್ಟಿಗರು

ಇಂಟರ್ನೆಟ್ ಬಳಕೆದಾರರು ತಮಿಳುನಾಡು ಅರಣ್ಯ ಅಧಿಕಾರಿಗಳ ಈ ಒಳ್ಳೆಯ ಕೆಲಸವನ್ನು ತುಂಬಾನೇ ಶ್ಲಾಘಿಸಿದ್ದಾರೆ ಮತ್ತು ಕಾಮೆಂಟ್ ವಿಭಾಗವನ್ನು ಹೃದಯದ ಎಮೋಜಿಗಳೊಂದಿಗೆ ಭರ್ತಿ ಮಾಡಿದ್ದಾರೆ ಅಂತ ಹೇಳಬಹುದು.

"ಈ ವೀಡಿಯೋ ತುಂಬಾನೇ ಸುಂದರವಾಗಿದೆ, ಪ್ರಪಂಚದ ಅನೇಕ ಭಾಗಗಳಲ್ಲಿ ಲಾಭಕೋರರನ್ನು ತೃಪ್ತಿಪಡಿಸಲು ಎಷ್ಟೋ ತಾಯಿ ಆನೆಗಳಿಂದ ಎಷ್ಟೋ ಮರಿಗಳನ್ನು ಬೇರೆ ಮಾಡಲಾಗಿದೆಯೋ ಎಂಬುದನ್ನು ನಾನು ಒಂದು ಕ್ಷಣ ನೆನಪಿಸಿಕೊಂಡರೆ ಅದು ನನಗೆ ನೋವುಂಟು ಮಾಡುತ್ತದೆ. ಆದರೆ ಇಲ್ಲಿನ ಮನುಷ್ಯರ ಈ ಕೆಲಸವು ತುಂಬಾನೇ ಅಮೂಲ್ಯವಾಗಿದೆ ಮತ್ತು ಇಂತಹ ದೃಶ್ಯಗಳು ತುಂಬಾನೇ ವಿರಳವಾಗಿವೆ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಬರೆದಿದ್ದಾರೆ. "ಆನೆಗಳು ಅಮೂಲ್ಯವಾದ ಪ್ರಾಣಿಗಳು” ಎಂದು ಇನ್ನೊಬ್ಬರು ಹೇಳಿದರು.

ಇದನ್ನೂ ಓದಿ: ಥೇಟ್​​ ಫಿಲ್ಮಿ ಸ್ಟೈಲ್​​ನಲ್ಲಿ ಎಂಗೇಜ್​ ಆದ ಆಮೀರ್​ ಮಗಳು ಇರಾ! ವೈರಲ್ ಆಯ್ತು ಪ್ರಪೋಸಿಂಗ್ ವಿಡಿಯೋ

ಮೂರನೆಯವರು "ಕಠಿಣ ಪರಿಸ್ಥಿತಿಗಳಲ್ಲಿ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುವ ಅರಣ್ಯ ಸಿಬ್ಬಂದಿಗೆ ಎಲ್ಲಾ ಪ್ರಾಣಿಪ್ರಿಯರಿಂದ ಅನಂತ ಅನಂತ ಆಶೀರ್ವಾದಗಳು" ಎಂದು ಕಾಮೆಂಟ್ ಮಾಡಿದ್ದಾರೆ. "ಒಳ್ಳೆಯ ಕೆಲಸವನ್ನು ಮಾಡಿರುವುದನ್ನು ಒಪ್ಪಿಕೊಳ್ಳುವುದು ಸಹ ಒಂದು ಒಳ್ಳೆಯ ಗುಣ... ಈ ಉದಾತ್ತ ಕೆಲಸವನ್ನು ಮಾಡಿದ ಎಲ್ಲಾ ಸಿಬ್ಬಂದಿಗೆ ಅಭಿನಂದನೆಗಳು" ಎಂದು ನಾಲ್ಕನೆಯವರು ಕಾಮೆಂಟ್ ಮಾಡಿದ್ದಾರೆ.

ಇದೇ ರೀತಿಯ ಘಟನೆ ಛತ್ತೀಸಘಡ್ ದಲ್ಲೂ ನಡೆದಿತ್ತು

ಇತ್ತೀಚೆಗೆ ಈ ರೀತಿಯ ಆನೆಗಳ ವೀಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ನೋಡುತ್ತಿದ್ದೇವೆ. ಈ ತಿಂಗಳ ಆರಂಭದಲ್ಲಿ, ಛತ್ತೀಸಘಡ್ ಅರಣ್ಯ ಅಧಿಕಾರಿಗಳು ತನ್ನ ಹಿಂಡಿನಿಂದ ಬೇರ್ಪಟ್ಟ ಆನೆ ಮರಿಗೆ ಸಹಾಯ ಮಾಡುತ್ತಿರುವುದನ್ನು ವೀಡಿಯೋ ತೋರಿಸಿತ್ತು.ಅರಣ್ಯ ಸಿಬ್ಬಂದಿಗಳು ಮರಿ ಆನೆಯನ್ನು ರಕ್ಷಿಸಿದರು ಮತ್ತು ಅದರ ಕುಟುಂಬವನ್ನು ಪತ್ತೆ ಹಚ್ಚಲು ಸಹಾಯ ಮಾಡುವ ಮೊದಲು ಪ್ರಾಥಮಿಕ ಆರೋಗ್ಯ ಪರೀಕ್ಷೆಯನ್ನು ಸಹ ನಡೆಸಿದರು.

ಇದನ್ನೂ ಓದಿ:  ನಿಮ್ಮ ಖಾಸಗಿ ಫೋಟೋ, ವಿಡಿಯೋ ವೈರಲ್ ಆಗಿದ್ರೆ ಹೀಗೆ ಮಾಡಿ; ತಕ್ಷಣ ಪರಿಹಾರ ಸಿಗುತ್ತೆ

"ಒಂದು ತಿಂಗಳ ಆನೆ ಮರಿ ತನ್ನ ಹಿಂಡಿನಿಂದ ಬೇರ್ಪಟ್ಟಿದೆ ಎಂಬ ಮಾಹಿತಿ ನಮಗೆ ಸಿಕ್ಕಿತು. ನಾವು ಮರಿಯನ್ನು ರಕ್ಷಿಸಲು 15 ನಿಮಿಷಗಳಲ್ಲಿ ಮರಿ ಆನೆ ಇರುವ ಸ್ಥಳವನ್ನು ತಲುಪಿದೆವು. ಆರೋಗ್ಯ ತಪಾಸಣೆ ನಡೆಸಲಾಯಿತು ಮತ್ತು ನಂತರ ಮರಿಯನ್ನು ಹಿಂಡಿನೊಂದಿಗೆ ಮತ್ತೆ ಸೇರಿಸಲಾಯಿತು" ಎಂದು ಜಶ್ಪುರ್ ವಿಭಾಗೀಯ ಅರಣ್ಯ ಅಧಿಕಾರಿ ಜಿತೇಂದ್ರ ಉಪಾಧ್ಯಾಯ ಅವರು ಕಳೆದ ವಾರ ಹೇಳಿದರು.
First published: