• Home
  • »
  • News
  • »
  • trend
  • »
  • Viral Video: ಆನೆಯೂ ವಿಡಿಯೋ ನೋಡುತ್ತಂತೆ ಈ ಊರಲ್ಲಿ! ಹೀಗೂ ಉಂಟಾ? ನೀವೇ ನೋಡಿ

Viral Video: ಆನೆಯೂ ವಿಡಿಯೋ ನೋಡುತ್ತಂತೆ ಈ ಊರಲ್ಲಿ! ಹೀಗೂ ಉಂಟಾ? ನೀವೇ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪ್ರಾಣಿ ಮತ್ತು ಮನುಷ್ಯನ ನಡುವಿನ ಆತ್ಮೀಯತೆಗೆ ಉದಾಹರಣೆ ನಮ್ಮೊಂದಿಗೆ ಇದೆ. ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ಕ್ಲಿಪ್‌ನಲ್ಲಿ, ಆನೆಯೊಂದು ಮಾವುತ ತನ್ನ ಮೊಬೈಲನ್ನು ನೋಡುತ್ತಿದ್ದಾಗ ಫೋನನ್ನು ಇಣುಕಿ ನೋಡಲು ಪ್ರಯತ್ನಿಸಿದೆ.

  • Share this:

    ಇತ್ತೀಚಿನ ದಿನಗಳಲ್ಲಿ ಮನುಷ್ಯ (Human Being) ಮತ್ತು ಪ್ರಾಣಿಗಳ (Animals) ನಡುವೆ ನಂಟು ಹೆಚ್ಚುತ್ತಲೇ ಇದೆ. ಅದ್ರಾಲ್ಲೂ ಮಕ್ಕಳಿಗೆ (Children's) ಪ್ರಾಣಿಗಳು ಬೇಗನೆ ಹತ್ತಿರವಾಗುತ್ತದೆ. ಈಗೀಗ ಪ್ರಾಣಿಗಳು ಕೂಡ ಮನುಷ್ಯರಂತೆಯೇ ವರ್ತಿಸುತ್ತವೆ. ಏಕೆಂದರೆ ಕೆಲವೊಂದು ಪ್ರಾಣಿಗಳು ಮನುಷ್ಯರಂತೆ ಬುದ್ಧಿಯನ್ನು ಹೊಂದಿದ್ದು  ಕೆಲವೊಮ್ಮೆ ಇದು ಮಾಡುವಂತಹ ಕೆಲಸಗಳು ನೋಡುಗರನ್ನೇ ಆಶ್ಚರ್ಯಪಡುವಂತೆ ಮಾಡುತ್ತದೆ.  ಇಲ್ಲೊಂದು ಆನೆ ಮಾವುತನ ಮೊಬೈಲನ್ನು (Mobile) ಬಗ್ಗಿ ನೋಡುತ್ತಿರುವ ವಿಡಿಯೋ (Video) ಸಖತ್‌ ವೈರಲ್‌ (Viral) ಆಗುತ್ತಿದೆ. ಈ ರೀತಿಯ ಪ್ರಾಣಿ ಮತ್ತು ಮನುಷ್ಯರ ನಡುವೆ ಇರುವಂತಹ ನಂಟಿನ ವಿಡಿಯೋಗಳು ಹಲವಾರು ವೈರಲ್‌ ಆಗಿದ್ದು. ಇದೀಗ ಈ ಆನೆ ಮತ್ತು ಮಾವುತನ ವಿಡಿಯೋ ಕೂಡ ಈ ಸಾಲಿಗೆ ಸೇರ್ಪಡೆಯಾಗುತ್ತಿದೆ.


    ಪ್ರಾಣಿ ಮತ್ತು ಮನುಷ್ಯನ ನಡುವಿನ ಬಂಧವು ತುಂಬಾ ಆತ್ಮೀಯವಾದದ್ದು ಮತ್ತು ಇದಕ್ಕೆ  ಉದಾಹರಣೆ ಕೂಡ ನಮ್ಮೊಂದಿಗೆ ಇದೆ. ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ಕ್ಲಿಪ್‌ನಲ್ಲಿ, ಆನೆಯೊಂದು ಮಾವುತ ತನ್ನ ಮೊಬೈಲನ್ನು ಸ್ಕ್ರಾಲ್ ಮಾಡುತ್ತಿದ್ದಾಗ ಫೋನನ್ನು ಇಣುಕಿ ನೋಡಲು ಪ್ರಯತ್ನಿಸಿದೆ. ಏನಿದೆ ಈ ವಿಡಿಯೋನಲ್ಲಿ ಇಲ್ಲಿದೆ ಸ್ಟೋರಿ.


    ಈ ವಿಡಿಯೋದಲ್ಲಿ ಏನಿದೆ?


    ಈಗ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ತಮಿಳುನಾಡಿನ ಕುಂಭಕೋಣಂ ಕುಂಬೇಶ್ವರರ್ ದೇವಾಲಯದ ಹೊರಗೆ ಮಾವುತನೊಬ್ಬ ತನ್ನ ಫೋನ್ ಮೂಲಕ ಸ್ಕ್ರೋಲ್ ಮಾಡುತ್ತಿರುವುದನ್ನು ಕಾಣಬಹುದು. ಅವನ ಆನೆಯು ಅವನ ಹಿಂದೆ ನಿಂತಿದೆ ಜೊತೆಗೆ ಅದು ಅವನ ಫೋನ್‌ ಅನ್ನು ನೋಡಲು ಪ್ರಯತ್ನಿಸುತ್ತಿತ್ತು. ಅದಲ್ಲದೆ ಇಲ್ಲಿ ನಾವು ಆನೆ ಮಾವುತನ ಫೋನ್‌ ಅನ್ನು ನೋಡಿ ತನ್ನಷ್ಟಕ್ಕೆ ಸಂತಸಪಡುತ್ತಿರುವುದನ್ನು ಕಾಣಬಹುದಾಗಿದೆ.




    ಈ ಮೇಲೆ ಇರುವ ವಂತಹ ವಿಡಿಯೋ ತಮಿಳುನಾಡಿನ ಕುಂಭಕೋಣಂನಲ್ಲಿ ಆಗಿರುವಂತಹ ವಿಡಿಯೋ ಆಗಿದೆ.


    ಇದನ್ನೂ ಓದಿ: ಆನೆಮರಿಯನ್ನು ರಕ್ಷಿಸಿದ ಪುಟ್ಟ ಬಾಲಕಿ, ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಫುಲ್‌ ವೈರಲ್


    ಇದೇ ರೀತಿ ವೈರಲ್‌ ಆದ ಆನೆಯ ವಿಡಿಯೋ:


    ಇದೇ ರೀತಿ ಆನೆ ಮತ್ತು ಪುಟ್ಟ ಬಾಲಕಿಯ ವಿಡಿಯೋ ವೈರಲ್‌ ಆಗಿತ್ತು. ಇದರಲ್ಲಿ ಇಲ್ಲಿ ಹುಡುಗಿ ಅಪಾಯದಲ್ಲಿರುವ ಆನೆಯನ್ನು ರಕ್ಷಿಸುತ್ತಾಳೆ.


    ಆನೆಯನ್ನು ಮೇಲಕ್ಕೆತ್ತಲು ಈ ಪುಟ್ಟ ಬಾಲಕಿ ಕಷ್ಟ ಪಡುತ್ತಿರುವುದನ್ನು ಈ ವಿಡಿಯೋದಲ್ಲಿ ನಾವು ಗಮನಿಸಬಹುದು. ಅಂತಿಮವಾಗಿ ಸತತ ಪ್ರಯತ್ನದಿಂದ ಕೆಸರಿನಿಂದ ಆನೆಮರಿಯನ್ನು ತೆಗೆಯುವಲ್ಲಿ ಯಶಸ್ವಿಯಾಗುತ್ತಾಳೆ. ಈವಿಡಿಯೋ ದ ಕೊನೆಯ ಕ್ಷಣಗಳಲ್ಲಿ ತನ್ನ ಸೊಂಡಿಲು ಎತ್ತುವುದನ್ನು ನೋಡಬಹುದು, ಬಹುಶಃ ಹುಡುಗಿಯ ಪ್ರಯತ್ನಕ್ಕೆ ಈ ಆನೆಮರಿ ಧನ್ಯವಾದ ಸಲ್ಲಿಸುತ್ತಿರಬಹುದು.


    ಏನಿದೆ ಈ ವಿಡಿಯೋದಲ್ಲಿ?


    36 ಸೆಕೆಂಡುಗಳ ಈ ವಿಡಿಯೋದಲ್ಲಿ ಗ್ರಾಮೀಣ ರಸ್ತೆ ಮತ್ತು ಕಬ್ಬಿನ ಗದ್ದೆಯ ನಡುವೆ, ಮರಿ ಆನೆ ಮಣ್ಣಿನ ಕಂದಕದಲ್ಲಿ ಸಿಲುಕಿಕೊಂಡಿದೆ. ನಂತರ  ಎಳೆಯ ಹುಡುಗಿ ಆನೆಮರಿಯನ್ನು ಕಂದಕದಿಂದ ಮೇಲಕ್ಕೆತ್ತಲು ಪ್ರಯತ್ನಿಸುತ್ತಾ ಇರುತ್ತಾಳೆ ಮತ್ತು ಕೆಸರಿನಿಂದ ಆನೆಮರಿ ಹೊರಬರಲು ಸಹಾಯ ಮಾಡುತ್ತಾಳೆ.


    ಇದನ್ನೂ ಓದಿ: ಚೆಂಡಿನಲ್ಲಿ ಆಡುವುದು ಹೇಗೆ ಅಂತ ನಾಯಿಮರಿಗೆ ಪಾಠ ನಡೀತಿದೆ, ಈ ಕ್ಯೂಟ್ ವಿಡಿಯೋ ನೋಡಿ


    ಈ ಎರಡು ವಿಡಿಯೋಗಳು ಈಗಿನ ಟ್ರೆಂಡಿಂಗ್‌ನಲ್ಲಿರುವಂತಹ ವಿಡಿಯೋಗಳಾಗಿವೆ. ಇಲ್ಲಿ ಮುಖ್ಯವಾಗಿ ಈಗಿನ ಆಧುನಿಕ ಯುಗದಲ್ಲೂ ಈ ರೀತಿಯ ಪ್ರಾಣಿ ಮತ್ತು ಮನುಷ್ಯನ ನಡುವೆ ಇರುವಂತಹ ಬಂಧಗಳನ್ನು ನೋಡಬಹುದು.

    Published by:ವಾಸುದೇವ್ ಎಂ
    First published: