Viral Video: ಹಾರ್ಟ್ ಅಟ್ಯಾಕ್ ಆದ ವ್ಯಕ್ತಿಯ ಪ್ರಾಣ ಉಳಿಸಿದ ಡಾಕ್ಟರ್! ಒಮ್ಮೆ ಈ ವಿಡಿಯೋ ನೋಡಿ

ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿಯೇ ಹರಿದಾಡುತ್ತಿದೆ ನೋಡಿ. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಹೃದಯ ಸ್ತಂಭನಕ್ಕೆ ಒಳಗಾದ ಒಬ್ಬ ವ್ಯಕ್ತಿಯ ಜೀವವನ್ನು ಕ್ಷಣ ಮಾತ್ರದಲ್ಲಿ ಅಲ್ಲೇ ಇದ್ದಂತಹ ವೈದ್ಯರೊಬ್ಬರು ರಕ್ಷಿಸಿದ ವಿಡಿಯೋ ಈಗ ವೈರಲ್ ಆಗುತ್ತಿದೆ. ಕೊಲ್ಹಾಪುರ ಮೂಲದ ರಾಜ್ಯಸಭಾ ಸಂಸದ ಧನಂಜಯ್ ಮಹಾದಿಕ್ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಈಗಂತೂ ಒಂದು ದಿನ ನೋಡಿದ ವ್ಯಕ್ತಿ (Person) ಇನ್ನೊಂದು ದಿನಕ್ಕೆ ನೋಡಲು ಸಿಗದೇ ಇರಬಹುದು, ಅಂತಹ ಒಂದು ಅನಿಶ್ಚಿತತೆಯಲ್ಲಿ ನಾವೆಲ್ಲಾರೂ ಬದುಕು (live) ಸಾಗಿಸುತ್ತಿದ್ದೇವೆ. ‘ಬೆಳಿಗ್ಗೆ (Morning) ತಾನೇ ನೋಡಿ, ಮಾತಾಡಿಸಿದ್ದೆ, ಈಗ ಅರ್ಧ ಗಂಟೆಗೂ ಮುಂಚೆ ಭೇಟಿ ಅಗಿದ್ವಿ, ದಿಢೀರನೆ ಹೇಗೆ ತೀರಿಕೊಂಡ’ ಅಂತ ನಮ್ಮ ಸ್ನೇಹಿತರ (Friends) ಅಥವಾ ಹತ್ತಿರದವರ ದಿಢೀರ್ ಸಾವಿನ ಸುದ್ದಿ ಬಂದಾಗ ನಮಗೆ ಹೀಗೆ ಅನ್ನಿಸಿರುತ್ತದೆ. ಹೌದು.. ಇತ್ತೀಚೆಗೆ ತುಂಬಾ ಜನರು ಈ ಹೃದಯ ಸ್ತಂಭನಕ್ಕೆ (cardiac arrest) ಮತ್ತು ಹೃದಯಾಘಾತಕ್ಕೆ (Heart Attack) ಒಳಗಾಗುವುದನ್ನು ನೋಡುತ್ತಿದ್ದೇವೆ.

ಕೂತು ಕೂತಲ್ಲಿಯೇ, ರಾತ್ರಿ ಮಲಗಿದ್ದಾಗ, ಎಲ್ಲೋ ಹೊರಗೆ ಹೋದಾಗ ಹಠಾತ್ತನೆ ಎದೆ ನೋವು ಕಾಣಿಸಿಕೊಂಡು ಕುಸಿದು ಬೀಳುವುದು ಹೀಗೆ ಸಾವು ಎಂಬುವುದು ಯಾವಾಗ? ಹೇಗೆ? ಯಾರಿಗೆ? ಬರುತ್ತದೆ ಅಂತ ಒಂದು ಸಣ್ಣ ಊಹೆ ಮಾಡುವುದಕ್ಕೂ ಸಾಧ್ಯವಾಗದ ಸ್ಥಿತಿಯಲ್ಲಿ ನಾವಿದ್ದೀವಿ.

ಹೃದಯ ಸ್ತಂಭನಕ್ಕೆ ಒಳಗಾದ ಒಬ್ಬ ವ್ಯಕ್ತಿಯನ್ನು ರಕ್ಷಿಸಿದ ಡಾಕ್ಟರ್  
ಇಲ್ಲೊಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿಯೇ ಹರಿದಾಡುತ್ತಿದೆ ನೋಡಿ. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಹೃದಯ ಸ್ತಂಭನಕ್ಕೆ ಒಳಗಾದ ಒಬ್ಬ ವ್ಯಕ್ತಿಯ ಜೀವವನ್ನು ಕ್ಷಣ ಮಾತ್ರದಲ್ಲಿ ಅಲ್ಲೇ ಇದ್ದಂತಹ ವೈದ್ಯರೊಬ್ಬರು ರಕ್ಷಿಸಿದ ವಿಡಿಯೋ ಈಗ ವೈರಲ್ ಆಗುತ್ತಿದೆ. ಕೊಲ್ಹಾಪುರ ಮೂಲದ ರಾಜ್ಯಸಭಾ ಸಂಸದ ಧನಂಜಯ್ ಮಹಾದಿಕ್ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Dream Job: ಜನರೊಂದಿಗೆ ಒಡನಾಟ ಮಾಡೋದೇ ಇವರ ಕೆಲಸ ಅಂತೆ! ಅದರಲ್ಲೇ ನಡೆಯತ್ತೆ ಸಂಪಾದನೆ

ಸಾಮಾನ್ಯವಾಗಿ ನಿಯಮಿತ ತಪಾಸಣೆಗೆಂದು ಒಬ್ಬ ವ್ಯಕ್ತಿ ಆಸ್ಪತ್ರೆಗೆ ಬಂದು ವೈದ್ಯರ ಮುಂದೆ ಕುಳಿತಿರುತ್ತಾರೆ. ಆ ಸಮಯದಲ್ಲಿ ಡಾ.ಅರ್ಜುನ್ ಅದ್ನಾಯಕ್ ಅವರ ಮುಂದೆ ಕುಳಿತಿದ್ದ ವ್ಯಕ್ತಿ ಹಠಾತ್ತನೆ ಹೃದಯ ಸ್ತಂಭನಕ್ಕೆ ಒಳಗಾಗುವುದನ್ನು ವೀಡಿಯೋದಲ್ಲಿ ತೋರಿಸಲಾಗಿದೆ. ಆಗ ಆ ವ್ಯಕ್ತಿಯು ತುಂಬಾನೇ ಅನಾನುಕೂಲತೆಯನ್ನು ಅನುಭವಿಸುತ್ತಾನೆ ಮತ್ತು ಅವನ ಎದುರಿನ ಮೇಜನ್ನು ತಟ್ಟಿ ವೈದ್ಯರಿಗೆ ಸೂಚನೆ ನೀಡುತ್ತಾನೆ. ಅದಕ್ಕೆ ಸ್ಪಂದಿಸಿದ ಡಾಕ್ಟರ್ ಬೇಗನೆ ತಮ್ಮ ಕುರ್ಚಿಯಿಂದ ಎದ್ದು ಅವನ ಸಹಾಯಕ್ಕೆ ಧಾವಿಸುತ್ತಾರೆ. ನಂತರ ಅವರು ಆ ವ್ಯಕ್ತಿಯ ಎದೆಯ ಮೇಲೆ ಕೆಲವು ಬಾರಿ ಕೈಯಿಂದ ಹೊಡೆಯುತ್ತಾರೆ ಮತ್ತು ಸರಿಯಾದ ಸಮಯಕ್ಕೆ ಸರಿಯಾದ ಮಾರ್ಗದೊಂದಿಗೆ ಆ ವ್ಯಕ್ತಿಯ ಜೀವವನ್ನು ಉಳಿಸುತ್ತಾರೆ.

ಟ್ವಿಟ್ಟರ್ನಲ್ಲಿ ವೈರಲ್ ಆಗಿದೆ ಈ ವಿಡಿಯೋ
"ಈ ವಿಡಿಯೋವು ನಮ್ಮ ನಡುವೆ ವಾಸಿಸುವ ನಿಜ ಜೀವನದ ನಾಯಕನ ಒಂದು ಉದಾಹರಣೆಯನ್ನು ತೋರಿಸುತ್ತದೆ. ಕೊಲ್ಹಾಪುರದ ಅತ್ಯುತ್ತಮ ಹೃದ್ರೋಗ ತಜ್ಞರಲ್ಲಿ ಒಬ್ಬರಾದ ಡಾ. ಅರ್ಜುನ್ ಅದ್ನಾಯಕ್ ಅವರು ವ್ಯಕ್ತಿಯ ಜೀವವನ್ನು ಉಳಿಸುತ್ತಾರೆ. ಅಂತಹ ಗೌರವಾನ್ವಿತ ಮತ್ತು ಸದ್ಗುಣಶೀಲ ನಾಯಕರನ್ನು ನಾನು ಶ್ಲಾಘಿಸುತ್ತೇನೆ" ಎಂದು ಮಹಾದಿಕ್ ಅವರು ವೀಡಿಯೋವನ್ನು ಟ್ವೀಟ್ ಮಾಡುವಾಗ ಶೀರ್ಷಿಕೆಯಲ್ಲಿ ಬರೆದಿದ್ದಾರೆ.ಸೋಮವಾರ ಹಂಚಿಕೊಂಡಿರುವ ಈ ವೀಡಿಯೋ ಈವರೆಗೆ 1.30 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ ಮತ್ತು 8,000 ಲೈಕ್ ಗಳನ್ನು ಗಳಿಸಿದೆ ಎಂದು ಹೇಳಬಹುದು. "ಜೀವ ಉಳಿಸುವ ಈ ಮೂಲಭೂತ ಅಂಶವನ್ನು ಶಾಲೆಗಳಲ್ಲಿ ಮಕ್ಕಳಿಗೂ ಹೇಳಿಕೊಡಬೇಕು, ಸೆಕೆಂಡುಗಳಲ್ಲಿ ಹೋಗುವ ಜೀವವನ್ನು ಬದುಕಿಸಬಹುದು" ಎಂದು ಟ್ವಿಟರ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. "ಒಬ್ಬ ವೈದ್ಯನ ಮುಂದೆ, ಅಂದರೆ ಹೃದ್ರೋಗ ತಜ್ಞರ ಮುಂದೆ ಕುಳಿತುಕೊಳ್ಳುವ ಅದೃಷ್ಟ ಆ ರೋಗಿಗಿತ್ತು" ಎಂದು ಇನ್ನೊಬ್ಬರು ಬರೆದಿದ್ದಾರೆ.

ಇದನ್ನೂ ಓದಿ:  Viral Resume: ಲಿಂಕ್ಡ್‌ಇನ್‌ನಲ್ಲಿ ಮೋಜಿನ ರೆಸ್ಯೂಮೆ ಹಂಚಿಕೊಂಡ ಮಾರ್ಕೆಟಿಂಗ್ ಅಧಿಕಾರಿ; ರೆಸ್ಯೂಮೆ ಅಂದ್ರೆ ಇದಪ್ಪಾ ಅಂದ್ರು ನೆಟ್ಟಿಗರು

ಆದಾಗ್ಯೂ, ಕೆಲವು ಜನರು ವೈದ್ಯರ ಕಾರ್ಯವಿಧಾನದ ಬಗ್ಗೆ ಮತ್ತು ಅದು ನಿಜವಾಗಿಯೂ ಕೆಲಸ ಮಾಡಿದೆಯೇ ಎಂಬ ಬಗ್ಗೆ ತಮ್ಮ ಸಂದೇಹವನ್ನು ವ್ಯಕ್ತಪಡಿಸಿದರು. ಹೃದ್ರೋಗ ತಜ್ಞರಾದ ಡಾ.ಶರೀಕ್ ಶಮೀಮ್ ಅವರು "ನನ್ನನ್ನು ಕ್ಷಮಿಸಿ, ಆದರೆ ಈ ರೀತಿಯ ಎದೆಗೆ ಬಡಿಯುವುದರಿಂದ ಏನನ್ನೂ ಮಾಡಲಾಗುವುದಿಲ್ಲ. ಇದು ಸಿಪಿಆರ್ ಅಲ್ಲ ಮತ್ತು ಎಚ್ಚರಗೊಳ್ಳುವ ವ್ಯಕ್ತಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ" ಎಂದು ಕಾಮೆಂಟ್ ಮಾಡಿದ್ದಾರೆ.
Published by:Ashwini Prabhu
First published: