• Home
  • »
  • News
  • »
  • trend
  • »
  • Love Story: 10 ವರ್ಷಗಳ ಬಳಿಕ ಮತ್ತೆ ಒಂದಾದ ಜೋಡಿ! ಇವರ ಲವ್‌ ಸ್ಟೋರಿ ಯಾವ ಸಿನಿಮಾಗಿಂತಲೂ ಕಡಿಮೆಯಿಲ್ಲ!

Love Story: 10 ವರ್ಷಗಳ ಬಳಿಕ ಮತ್ತೆ ಒಂದಾದ ಜೋಡಿ! ಇವರ ಲವ್‌ ಸ್ಟೋರಿ ಯಾವ ಸಿನಿಮಾಗಿಂತಲೂ ಕಡಿಮೆಯಿಲ್ಲ!

ದಶಕಗಳ ಬಳಿಕ ಒಂದಾದ ಜೋಡಿ

ದಶಕಗಳ ಬಳಿಕ ಒಂದಾದ ಜೋಡಿ

ದಶಕದಿಂದ ದೂರವಿದ್ದ ಚೀನೀ ಜೋಡಿ ಆಕಸ್ಮಿಕವಾಗಿ ಸಿಕ್ಕು ಈಗ ಮದುವೆಯಾಗಿ ಖುಷಿಯಾಗಿದ್ದಾರೆ. ಆ ಮಹಿಳೆಯ ಸರ್‌ ನೇಮ್‌ ವೆಂಗ್ ಅಂತ. ಈಕೆ ಆನ್‌ ಲೈನ್‌ ಫ್ಲಾಟಫಾರ್ಮ್‌ ಡೌಯಿನ್‌ನಲ್ಲಿ ತನ್ನ ಈ ಪ್ರೇಮ ಕಥೆಯನ್ನು ಹಂಚಿಕೊಂಡಿದ್ದಾಳೆ. ಅಲ್ಲದೇ ಕಳೆದ ವರ್ಷ ಈ ಜೋಡಿ ವಿವಾಹವಾಗಿದ್ದು ಆಗಿನಿಂದ ಆಕೆಯ ಮತ್ತು ಆಕೆಯ ಮಾಜಿ ಪತಿಯ ಮಕ್ಕಳು ಆಕೆಯ ಪ್ರೇಮಿಯ ಮಕ್ಕಳು ಎಲ್ಲರೂ ಚೆನ್ನಾಗಿರುವುದಾಗಿ ಆಕೆ ಹೇಳಿಕೊಂಡಿದ್ದಾರೆ.

ಮುಂದೆ ಓದಿ ...
  • Share this:

ಜಗತ್ತಿನಲ್ಲಿ ಹಲವಾರು ಶ್ರೇಷ್ಟ ಲವ್‌ ಸ್ಟೋರಿಗಳಿವೆ. ಚೀನಾದ (China) ಈ ಪ್ರೇಮ ಕಥೆ ಮತ್ತಷ್ಟು ವಿಶೇವಾಗಿದೆ. 10 ವರ್ಷಗಳ ಕಾಲ ಬೇರೆ ಬೇರೆ ಕಾರಣಗಳಿಂದ ಬೇರೆಯಿದ್ದ ಈ ಜೋಡಿ ಒಂದಾಗಿದ್ದಾರೆ. ದಶಕದಿಂದ ದೂರವಿದ್ದ ಚೀನೀ ಜೋಡಿ ಆಕಸ್ಮಿಕವಾಗಿ ಸಿಕ್ಕು ಈಗ ಮದುವೆಯಾಗಿ (Marriage) ಖುಷಿಯಾಗಿದ್ದಾರೆ. ಆ ಮಹಿಳೆಯ ಸರ್‌ ನೇಮ್‌ ವೆಂಗ್ ಅಂತ. ಈಕೆ ಆನ್‌ ಲೈನ್‌ ಫ್ಲಾಟಫಾರ್ಮ್‌ ಡೌಯಿನ್‌ನಲ್ಲಿ ತನ್ನ ಈ ಪ್ರೇಮ ಕಥೆಯನ್ನು (Love Story) ಹಂಚಿಕೊಂಡಿದ್ದಾಳೆ. ಅಲ್ಲದೇ ಕಳೆದ ವರ್ಷ ಈ ಜೋಡಿ ವಿವಾಹವಾಗಿದ್ದು ಆಗಿನಿಂದ ಆಕೆಯ ಮತ್ತು ಆಕೆಯ ಮಾಜಿ ಪತಿಯ ಮಕ್ಕಳು ಆಕೆಯ ಪ್ರೇಮಿಯ ಮಕ್ಕಳು (Children) ಎಲ್ಲರೂ ಚೆನ್ನಾಗಿರುವುದಾಗಿ ಆಕೆ ಹೇಳಿಕೊಂಡಿದ್ದಾರೆ.


2007 ರಲ್ಲಿ ಶುರುವಾದ ಪ್ರೇಮ 
ಅಷ್ಟಕ್ಕೂ ಇವರ ಈ ಲವ್‌ ಸ್ಟೋರಿ ಸಖತ್‌ ಇಂಟೆರೆಸ್ಟಿಂಗ್‌ ಆಗಿದೆ. ಅಂದಹಾಗೆ 2007 ರಲ್ಲಿ ವೆಂಗ್‌ ತನ್ನ ಪತಿ ಗುವೋ ರನ್ನು ಮೊದಲು ಭೇಟಿಯಾಗಿದ್ದರು. ನಂತರ ಸ್ವಲ್ಪ ಸಮಯ ಕಳೆಯುತ್ತಲೇ ಪ್ರೀತಿಯಲ್ಲಿ ಬಿದ್ದರು. ಆದರೆ ಆಕೆಯ ಮನೆ ಹಾಗೂ ಅತನ ಮನೆ ದೂರ ವಾಗಿದ್ದ ಕಾರಣ, ಜೊತೆಗೆ ಮತ್ತೊಂದಿಷ್ಟು ಕಾರಣಗಳಿಂದಾಗಿ ಅವರಿಬ್ಬರೂ 2011 ರಲ್ಲಿ ಡಿವೋರ್ಸ್‌ ಪಡೆದುಕೊಂಡರು.


ಈ ಮಧ್ಯೆ ಇಬ್ಬರೂ ವಿಚ್ಛೇದನ ಪಡೆಯುವ ಮೊದಲು ಇತರರನ್ನು ಮದುವೆಯಾಗಿ ಮಕ್ಕಳನ್ನು ಹೊಂದಿದ್ದರು. 2020 ರವರೆಗೂ ವೆಂಗ್‌ ಹಾಗೂ ಗುವೋ ಯಾವುದೇ ಸಂಪರ್ಕದಲ್ಲಿ ಇರಲಿಲ್ಲ. ಕೊನೆಗೆ ಅವರಿಬ್ಬರೂ ಭೇಟಿಯಾಗಿದ್ದು ಆಕೆ ಬ್ಯುಸಿನೆಸ್‌ ಟ್ರಿಪ್‌ ಗಾಗಿ ಹೆನಾನ್‌ ಗೆ ಪ್ರಯಾಣಿಸುವ ಸಂದರ್ಭದಲ್ಲಿ. ಆಗ ಗುವೋ ಟ್ಯಾಕ್ಸಿ ಡ್ರೈವರ್‌ ಆಗಿ ಕೆಲಸ ಮಾಡ್ತಿದ್ದ.


ಜೋಡಿಯ ಮಧ್ಯೆ ಮತ್ತೆ ಪ್ರೀತಿ ಹುಟ್ಟಿದ್ದು ಹೇಗೆ?
“ನಾವು ಡಿವೋರ್ಸ್‌ ಪಡೆದ ಬಳಿಕ ನನ್ನ ಬದುಕು ಸರಿಯಾಗಿರಲಿಲ್ಲ ಅನ್ನೋದು ಆತನಿಗೆ ತಿಳಿದಿತ್ತು. ಹಾಗೆಯೇ ಅವನ ಜೀವನವೂ ಸುಂದರವಾಗಿರಲಿಲ್ಲ ಅನ್ನೋದು ನನಗೂ ಗೊತ್ತಿತ್ತು. ಹಾಗಾಗಿ ಮತ್ತೆ ನಮ್ಮ ನಡುವೆ ಬಾಂಧವ್ಯ ಏರ್ಪಟ್ಟಿತು. ನಾವಿಬ್ಬರೂ ಮೆಸೇಜ್‌ ಗಳನ್ನು ಕಳುಹಿಸಿಕೊಳ್ಳತೊಡಗಿದೆವು. ನಂತರ ಕ್ರಮೇಣ ಪ್ರೀತಿಯಲ್ಲಿ ತೊಡಗಿದೆವು” ಎನ್ನುತ್ತಾರೆ ವೆಂಗ್.‌


ಇದನ್ನೂ ಓದಿ: Viral Video: ಮದುವೆ ವಿಧಿವಿಧಾನದಲ್ಲಿ ನಿದ್ದೆಗೆ ಜಾರಿದ ವಧು! ವೈರಲ್ ಆಯ್ತು ವಿಡಿಯೋ


ಆ ಸಮಯ ಅವರಿಬ್ಬರ ಪಾಲಿಗೂ ಅತ್ಯಂತ ಕಷ್ಟದ್ದಾಗಿತ್ತು. ಆಕೆಗೆ ಮೈತುಂಬಾ ಸಾಲವಿತ್ತು. ಅವಳು ನೂರಾರು ಸಾವಿರ ಯುವಾನ್ (ಹತ್ತಾರು ಸಾವಿರ ಯುಎಸ್ ಡಾಲರ್) ಸಾಲ ಹೊಂದಿದ್ದಳು. ಹಾಗೆಯೇ ಗುವೋ ಕೂಡ ಕಷ್ಟದಲ್ಲಿದ್ದ. ಆತನ ತೋಳಿನ ಗಾಯಗಳಿಂದಾಗಿ ತನ್ನ ಕೆಲಸವನ್ನು ಕಳೆದುಕೊಂಡು ಟ್ಯಾಕ್ಸಿ ಡ್ರೈವರ್‌ ಆಗಿ ಅರೆಕಾಲಿಕ ಕೆಲಸ ಮಾಡುತ್ತಿದ್ದ. ಕೊನೆಗೂ ತಮ್ಮ ಮಕ್ಕಳಿಗೆ ಸ್ಥಿರವಾದ ಕುಟುಂಬ ಬೇಕಾಗಿರುವ ಹಿನ್ನೆಲೆಯಲ್ಲಿ ಮದುವೆಯಾಗಲು ನಿರ್ಧರಿದ್ರು.


ಮಕ್ಕಳ ಬಗ್ಗೆ ಚಿಂತೆ ಹುಟ್ಟಿದ್ದೇಕೆ?
ಆದರೆ ಮದುವೆಯಾಗುವ ನಿರ್ಧಾರವನ್ನೇನೋ ತೆಗೆದುಕೊಂಡಾಗಿತ್ತು. ಆದರೆ ಅವರಿಬ್ಬರಿಗೂ ಇದ್ದ ಒಂದೇ ಭಯವೆಂದರೆ ಅವರ ಮಕ್ಕಳು ಅವರನ್ನು ಒಪ್ಪಿಕೊಳ್ಳುತ್ತಾರೆಯೇ ಎಂಬುದಾಗಿತ್ತು. ಆದರೆ ಆಶ್ಚರ್ಯ ಎನ್ನುವಂತೆ ವೆಂಗ್‌ ಹಾಗೂ ಗುವೋ ಮಕ್ಕಳು ಅವರನ್ನು ಸಂತೋಷದಿಂದಲೇ ಒಪ್ಪಿಕೊಂಡಿದ್ದರು. ಅದೊಂದು ಸ್ವಾರಸ್ಯಕರ ಸನ್ನಿವೇಶದಲ್ಲಿ ಅವರೆಲ್ಲರೂ ಭೇಟಿಯಾಗಿ ಖುಷಿ ಪಟ್ಟಿದ್ದರು. ಗುವೋ ಮಕ್ಕಳು ಚಿಕ್ಕವರಿದ್ದಾಗಲೇ ಅವರ ತಾಯಿ ತೊರೆದು ಹೋಗಿದ್ದಳು. ಹೀಗಾಗಿ ಗುವೋ ಮಕ್ಕಳು ತನ್ನನ್ನು ಖುಷಿಯಿಂದಲೇ ಒಪ್ಪಿಕೊಂಡರು ಎಂಬುದಾಗಿ ಹೇಳ್ತಾರೆ ವೆಂಗ್.‌ ‌


ಅಲ್ಲದೇ ವೆಂಗ್‌ ಎರಡನೇ ಬಾರಿಗೆ ಗುವೋ ಮಕ್ಕಳನ್ನು ಭೇಟಿಯಾದಾಗ ಅವರು ಆಕೆಯನ್ನು ಅಮ್ಮ ಅಂತ ಕರೆದಿದ್ದರಂತೆ. ಅಲ್ಲದೇ ಗುವೋ ನ ಮಗಳು ಹಾಗೂ ತನ್ನ ಮಗಳು ಇಬ್ಬರೂ ಒಂದೇ ತಿಂಗಳ ಒಂದೇ ದಿನದಲ್ಲಿ ಜನಿಸಿದವರು. ಆದರೆ ನನ್ನ ಮಗಳು 2 ವರ್ಷ ದೊಡ್ಡವಳು ಎಂಬುದಾಗಿ ಅವರು ಹೇಳ್ತಾರೆ.


ಇದನ್ನೂ ಓದಿ:  Weird Wedding: 18ವರ್ಷದ ಹುಡುಗಿಯನ್ನು ಮದುವೆಯಾದ ಮುದುಕ! ವೈರಲ್ ಆಯ್ತು ಫೋಟೋ


ಕೊನೆಗೆ ದಂಪತಿ ಕಳೆದ ವರ್ಷ ಮೇ ತಿಂಗಳಲ್ಲಿ ಜಿಯಾಂಗ್ಸಿಯಲ್ಲಿ ಒಟ್ಟಿಗೆ ಫ್ಲಾಟ್ ಖರೀದಿಸಿದರು ಮತ್ತು ಒಂದು ತಿಂಗಳ ನಂತರ ತಮ್ಮ ಮದುವೆಯನ್ನು ನೋಂದಾಯಿಸಿದರು. ಸದ್ಯ ಕುಟುಂಬದವರೆಲ್ಲರೂ ಖುಷಿಯಾಗಿರುವುದಾಗಿ ಅವರು ಹೇಳಿಕೊಳ್ಳುತ್ತಾರೆ. ಒಟ್ಟಿನಲ್ಲಿ ಈ ಪ್ರೇಮಕಥೆ ಸಂತೋಷದಲ್ಲಿ ಕೊನೆಗೊಂಡಿರೋದೇ ಸಮಾಧಾನದ ವಿಷಯ.

Published by:Ashwini Prabhu
First published: