ಈಗಂತೂ ಮನೆಗಳಲ್ಲಿ ಅಥವಾ ದೊಡ್ಡ ದೊಡ್ಡ ಹೊಟೇಲ್ (Hotels) ಮತ್ತು ರೆಸಾರ್ಟ್ಗಳಲ್ಲಿ (Resorts) ನಡೆಯುವ ಪಾರ್ಟಿಗಳಲ್ಲಿ (Party) ನಮ್ಮ ನೆಚ್ಚಿನ ಹಾಡಿಗೆ ಒಂದೆರಡು ಹೆಜ್ಜೆ ಹಾಕದೆ ಹೋದರೆ ಏನು ಮಜಾ ಇರುತ್ತೆ ನೀವೇ ಹೇಳಿ? ಮೈ ಮನ ರೋಮಾಂಚನಗೊಳಿಸುವ ಸಂಗೀತವನ್ನು (Songs) ಕೇಳಿದರೆ ಡ್ಯಾನ್ಸ್ ಬಾರದೇ ಇರುವವರು ಸಹ ತಮ್ಮ ಮೈಯನ್ನು ಹಾಗೆಯೇ ಕುಣಿಸಲು ಶುರು ಮಾಡುತ್ತಾರೆ ಅಂತ ಹೇಳಬಹುದು. ಇತ್ತೀಚೆಗೆ ಈ ಡ್ಯಾನ್ಸ್ ವಿಡಿಯೋಗಳು (Dance Video) ಸಾಮಾಜಿಕ ಜಾಲತಾಣದಲ್ಲಿ (Social Media) ಅತ್ಯಂತ ಜನಪ್ರಿಯವಾಗಿವೆ ಅಂತಾನೆ ಹೇಳಬಹುದು ನೋಡಿ. ನೆಟ್ಟಿಗರು ಸಹ ಈ ಡ್ಯಾನ್ಸ್ ವಿಡಿಯೋಗಳನ್ನು ನೋಡಿ ತುಂಬಾನೇ ಇಷ್ಟ ಪಡುತ್ತಿದ್ದಾರೆ ಮತ್ತು ಆ ಹಾಡಿಗೆ ಅವರು ಸಹ ಒಂದೆರಡು ಸ್ಟೆಪ್ಸ್ ಹಾಕಿಯೇ ಬಿಡುತ್ತಿದ್ದಾರೆ ಅಂತ ಹೇಳಬಹುದು.
ಮನೆಯಲ್ಲಿ ನಡೆಯುವ ಚಿಕ್ಕ-ಪುಟ್ಟ ಹುಟ್ಟುಹಬ್ಬದ ಪಾರ್ಟಿಗಳಿಂದ ಹಿಡಿದು ಮದುವೆ ಸಮಾರಂಭಗಳಲ್ಲಿ ಮತ್ತು ತಮ್ಮ ಸ್ನೇಹಿತರೊಂದಿಗೆ ರಾತ್ರಿ ಪಾರ್ಟಿಗಳು ಇರಬಹುದು. ಹೀಗೆ ಎಲ್ಲಾ ಪಾರ್ಟಿಗಳಲ್ಲಿಯೂ ತಮ್ಮ ನೆಚ್ಚಿನ ಹಾಡಿಗೆ ಒಂದೆರಡು ಸ್ಟೆಪ್ಸ್ ಹಾಕದೆ ಹೋದರೆ ಅವರಿಗೆ ಆ ಸಂಭ್ರಮಾಚರಣೆ ಅಪೂರ್ಣ.
ಈಗ ದಂಪತಿಗಳಿಬ್ಬರು ಒಂದು ಸಮಾರಂಭದಲ್ಲಿ ಒಟ್ಟಿಗೆ ಡ್ಯಾನ್ಸ್ ಮಾಡುತ್ತಿರುವ ಮುದ್ದಾದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಮತ್ತು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಪೋಷಕರಾಗಲಿರುವ ದಂಪತಿಗಳು ಮಾಡಿದ ಡ್ಯಾನ್ಸ್ ನೋಡಿ ಹೇಗಿದೆ ಅಂತ.
ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಶಿವಾನಿ ಮತ್ತು ನಿಶಿಕೇತ್ ತಮ್ಮ ಬೇಬಿ ಶವರ್ ಸಮಾರಂಭದಲ್ಲಿ 'ಮಾನ್ ಮೇರಿ ಜಾನ್' ಹಾಡಿಗೆ ನೃತ್ಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ.
ಆ ವಿಡಿಯೋದಲ್ಲಿ ಅಪ್ಪನಾಗಿ ಭಡ್ತಿ ಹೊಂದಲಿರುವ ನಿಶಿಕೇತ್ ತನ್ನ ಗರ್ಭಿಣಿ ಪತ್ನಿ ಶಿವಾನಿ ಹಾಕುತ್ತಿರುವ ಆ ಡ್ಯಾನ್ಸ್ ಸ್ಟೆಪ್ಸ್‌ಗಳನ್ನು ಅನುಕರಿಸುತ್ತಿದ್ದು ಪತ್ನಿ ಮಾಡಿದಂತೆಯೇ ಮಾಡುತ್ತಾ ನೃತ್ಯಗೈಯ್ಯುತ್ತಿದ್ದಾರೆ.
ಅಷ್ಟೇ ಅಲ್ಲದೆ ಆಕೆ ಗರ್ಭಿಣಿಯಾಗಿರುವುದರಿಂದ ಆಕೆಯನ್ನು ಜೋಪಾನವಾಗಿ ನೋಡಿಕೊಳ್ಳಬೇಕು ಅಂತ ಸ್ವಲ್ಪವೂ ತನ್ನ ಕಣ್ಣನ್ನು ಮಿಟುಕಿಸದೆ ಮತ್ತು ಬೇರೆ ಕಡೆಗೆ ನೋಡದೆ ಆಕೆಯ ಕಡೆಗೆ ನೋಡುತ್ತಿರುವುದು ಮಾತ್ರ ತುಂಬಾನೇ ಮುದ್ದಾಗಿದೆ. ನೆಟ್ಟಿಗರು ಈ ಡ್ಯಾನ್ಸ್ ನಲ್ಲಿ ಪತ್ನಿಯ ಬಗ್ಗೆ ಪತಿಗೆ ಇರುವ ಈ ಕಾಳಜಿಯನ್ನು ತ್ವರಿತವಾಗಿ ಗಮನಿಸಿದ್ದಾರೆ.
ಹೆಂಡತಿ ಹಾಕ್ತಿರೋ ಸ್ಟೆಪ್ಸ್ ನೋಡಿಕೊಂಡು ಡ್ಯಾನ್ಸ್ ಮಾಡ್ತಿರುವ ಪತಿ
ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವ ವಿಡಿಯೋದಲ್ಲಿ ಹಳದಿ ಸೀರೆ ಉಟ್ಟ ಪತ್ನಿ ಸುಂದರವಾಗಿ ಡ್ಯಾನ್ಸ್ ಮಾಡುತ್ತಿರುವುದನ್ನು ನೋಡಬಹುದು. ಅಷ್ಟೇ ಅಲ್ಲದೆ ಆಕೆಯ ಪಕ್ಕದಲ್ಲಿಯೇ ಆಕೆಯ ಪತಿ ಸಹ ಆಕೆಯ ಸ್ಟೆಪ್ಸ್ ಗಳನ್ನು ನೋಡಿಕೊಂಡು ಡ್ಯಾನ್ಸ್ ಮಾಡುತ್ತಿರುವುದನ್ನು ಸಹ ನಾವು ನೋಡಬಹುದು.
View this post on Instagram
ವಿಡಿಯೋ ನೋಡಿ ಇಷ್ಟಪಟ್ಟ ನೆಟ್ಟಿಗರು.
ಈ ವಿಡಿಯೋವನ್ನು ಡಿಂಪಲ್ ಬ್ರಹ್ಮ ಭಟ್ ಎಂಬ ಇನ್‌ಸ್ಟಾಗ್ರಾಮ್ ರೀಲ್ಸ್ ನಲ್ಲಿ ಪೋಸ್ಟ್ ಮಾಡಿದ್ದು, "ನಿಮ್ಮ ಸೀಮಂತ ಕಾರ್ಯಕ್ರಮದಲ್ಲಿ ನೀವು ಮನಬಿಚ್ಚಿ ನರ್ತಿಸಿದಾಗ ಹೀಗೆಯೇ ಸಂಭವಿಸುತ್ತದೆ!!" ಎಂದು ಬರೆದಿದ್ದಾರೆ. ದಂಪತಿಗಳ ಕೆಮಿಸ್ಟ್ರಿ ನೆಟ್ಟಿಗರ ಹೃದಯವನ್ನು ಗೆದ್ದಿದೆ.
"ಪತಿರಾಯ ತಾನು ತನ್ನ ಹೆಂಡತಿಯಂತೆ ಸರಿಯಾದ ಸ್ಟೆಪ್ಸ್ ಗಳನ್ನು ಇಡುತ್ತಿದ್ದಾರೆಯೇ ಅಥವಾ ಇಲ್ಲವೇ ಎಂದು ಪರೀಕ್ಷಿಸಲು ಅವರು ನಿರಂತರವಾಗಿ ನಗುತ್ತಾ ಆಕೆಯನ್ನು ಗಮನಿಸುತ್ತಿರುವುದು ನನಗೆ ತುಂಬಾನೇ ಇಷ್ಟವಾಗಿದೆ” ಎಂದು ಒಬ್ಬ ಸಾಮಾಜಿಕ ಜಾಲತಾಣ ಬಳಕೆದಾರರು ಹೇಳಿದ್ದಾರೆ.
ಇನ್ನೊಬ್ಬರು "ಹಾಹಾ, ಆತ ತನ್ನ ಪತ್ನಿಯ ಮೇಲಿಂದ ದೃಷ್ಟಿ ಕದಲಿಸುತ್ತಿಲ್ಲ" ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು "ಇದು ಎಷ್ಟು ಸುಂದರವಾಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ. ನನ್ನ 20 ತಿಂಗಳ ಮಗು ಈ ಡ್ಯಾನ್ಸ್ ನೋಡಿ ವಾವ್ ಎಂದು ಹೇಳಿದೆ" ಎಂದು ನಾಲ್ಕನೆಯವರು ಹೃದಯಸ್ಪರ್ಶಿಯಾಗಿ ಹಂಚಿಕೊಂಡರು.1
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ