Viral Video: ಊಟ ಚೆನ್ನಾಗಿಲ್ಲ ಅಂತ ರಸ್ತೆ ಮೇಲೆ ನಿಂತು ಕಣ್ಣೀರಿಟ್ಟ ಕಾನ್ಸ್‌ಟೇಬಲ್‌! ಪಾಪ ಇವ್ರ ಕಷ್ಟ ಯಾರಿಗೂ ಬೇಡ

24 ಗಂಟೆ, ವಿಶ್ರಾಂತಿ ಇಲ್ಲದೇ ದುಡಿಯುವ ಪೊಲೀಸರಿಗೆ ಒಂದು ಹೊತ್ತಿನ ಊಟನಾದ್ರೂ ನೆಟ್ಟಗೆ ಕೊಡಲಿಲ್ಲ ಅಂದ್ರೆ ಹೇಗೆ? ಉತ್ತರ ಪ್ರದೇಶದಲ್ಲೂ ಹೀಗೆ ಆಗಿದೆ. ಕಳಪೆ ಊಟ ಕೊಡುತ್ತಿರುವುದನ್ನು ವಿರೋಧಿಸಿದ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬ ಏಕಾಂಗಿಯಾಗಿ ಪ್ರತಿಭಟನೆ ಮಾಡಿದ್ದಾನೆ.

ಕಣ್ಣೀರು ಹಾಕಿದ ಕಾನ್ಸ್‌ಟೇಬಲ್

ಕಣ್ಣೀರು ಹಾಕಿದ ಕಾನ್ಸ್‌ಟೇಬಲ್

  • Share this:
ಉತ್ತರ ಪ್ರದೇಶ: ಪೊಲೀಸರು (Police) ಅಂದರೆ 24 ಗಂಟೆ ಮೈಯಲ್ಲಾ ಕಣ್ಣಾಗಿ ದುಡಿಯುವ ಮಂದಿ. ಜನಸಾಮಾನ್ಯರು ಹಬ್ಬ (Festival) ಹರಿದಿನ, ಮಳೆ (Rain), ಚಳಿ ಅಂತ ಮನೆಯಲ್ಲೇ ಇರುತ್ತಾರೆ. ಆದರೆ ಪೊಲೀಸರಿಗೆ ಆ ಭಾಗ್ಯವಿಲ್ಲ. ಎಂತಹಾ ಸಂದರ್ಭ ಇರಲಿ ಅವರು ಡ್ಯೂಟಿ (Duty) ಮಾಡಲೇಬೇಕು. ಆದರೆ ಹೀಗೆ 24 ಗಂಟೆ, ವಿಶ್ರಾಂತಿ ಇಲ್ಲದೇ (Restless) ದುಡಿಯುವ ಪೊಲೀಸರಿಗೆ ಒಂದು ಹೊತ್ತಿನ ಊಟನಾದ್ರೂ (Meals) ನೆಟ್ಟಗೆ ಕೊಡಲಿಲ್ಲ ಅಂದ್ರೆ ಹೇಗೆ? ಉತ್ತರ ಪ್ರದೇಶದಲ್ಲೂ (Uttar Pradesh) ಹೀಗೆ ಆಗಿದೆ. ಕಳಪೆ ಊಟ (tasteless meals) ಕೊಡುತ್ತಿರುವುದನ್ನು ವಿರೋಧಿಸಿದ ಪೊಲೀಸ್ ಕಾನ್ಸ್‌ಟೇಬಲ್ (Police Constable) ಒಬ್ಬ ಏಕಾಂಗಿಯಾಗಿ ಪ್ರತಿಭಟನೆ (Protest) ಮಾಡಿದ್ದಾನೆ. ಇದ್ಯಾಕೆ ಪ್ರತಿಭಟನೆ ಅಂತ ಕೇಳಿದ್ದಕ್ಕೆ ಕಳಪೆ ಊಟ ಸಾರ್ವಜನಿಕರ ಮುಂದೆ ತೋರಿಸಿ, ಕಣ್ಣೀರಿಟ್ಟಿದ್ದಾನೆ. ಇದೀಗ ಈ ಏಕಾಂಗಿ ಪ್ರತಿಭಟನೆ, ಕಾನ್ಸ್‌ಟೇಬಲ್ ಕಣ್ಣೀರಿನ ವಿಡಿಯೋ (Video) ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ (Viral) ಆಗಿದೆ.  

 ಕಳಪೆ ಊಟದ ವಿರುದ್ಧ ತಿರುಗಿಬಿದ್ದ ಕಾನ್ಸ್‌ಟೇಬಲ್

ಉತ್ತರ ಪ್ರದೇಶದಲ್ಲಿ ಪೊಲೀಸ್  ಕಾನ್‌ಸ್ಟೇಬಲ್ ಒಬ್ಬರು ಊಟದ ತಟ್ಟೆ ಸಮೇತ ರಸ್ತೆಯಲ್ಲಿ ನಿಂತು ಅಳುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ. ಫಿರೋಜಾಬಾದ್ ಜಿಲ್ಲೆಯಲ್ಲಿನ ಪೊಲೀಸ್ ಮೆಸ್‌ನಲ್ಲಿ ನೀಡಲಾಗುತ್ತಿರುವ ಆಹಾರ ಕಳಪೆ ಗುಣಮಟ್ಟದ್ದಾಗಿದ್ದು, ತಿನ್ನಲು ಸಾಧ್ಯವಾಗುತ್ತಿಲ್ಲ ಎಂದು ಪೊಲೀಸ್ ಪೇದೆ ಮನೋಜ್ ಕುಮಾರ್ ದೂರಿ, ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ.



ರಸ್ತೆ ಮೇಲೆ ಅಳುತ್ತಾ ನಿಂತು ಪ್ರತಿಭಟನೆ

ಕಾನ್ಸ್‌ಟೇಬಲ್ ಮನೋಜ್ ಅವರು ತಟ್ಟೆಯಲ್ಲಿ ರೊಟ್ಟಿ, ದಾಲ್ ಮತ್ತು ಅನ್ನ ಹಿಡಿದು ಏಕಾಂಗಿಯಾಗಿ, ಸಾರ್ವಜನಿಕರು ಓಡಾಡುವ ರಸ್ತೆಯಲ್ಲಿ ನಿಂತು ಪ್ರತಿಭಟಿಸಿದರು. ಕೊನೆಹೆ ಕಣ್ಣೀರು ಹಾಕಿದ್ರು. ಅಳುತ್ತಾ ನಿಂತಿದ್ದ ಕಾನ್‌ಸ್ಟೇಬಲ್‌ ಅನ್ನು ಹಿರಿಯ ಅಧಿಕಾರಿಯೊಬ್ಬರು ಮತ್ತೆ ಠಾಣೆಗೆ ಕರೆದುಕೊಂಡು ಹೋಗಲು ಯತ್ನಿಸಿದರಾದರೂ ಕಳಪೆ ಗುಣಮಟ್ಟದ ಆಹಾರದ ಬಗ್ಗೆ ವರಿಷ್ಠರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮನೋಜ್ ಆಕ್ರೋಶ ವ್ಯಕ್ತಪಡಿಸಿದರು. ನನ್ನನ್ನು ಕೆಲಸದಿಂದ ವಜಾ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಮನೋಜ್ ದೂರಿದ್ರು.

ಇದನ್ನೂ ಓದಿ: Jalna IT Raid: ಈ ಉದ್ಯಮಿ ಮನೆಯಲ್ಲಿ ಸಿಕ್ಕಿದ್ದು 56 ಕೋಟಿ ಕ್ಯಾಶ್, 32 ಕೆಜಿ ಚಿನ್ನ, ವಜ್ರ, ಮುತ್ತು! ಎಣಿಸಿ ಎಣಿಸಿ ಅಧಿಕಾರಿಗಳೇ ಸುಸ್ತು!

 “ಪ್ರಾಣಿಯೂ ತಿನ್ನದ ಆಹಾರ ನಮಗೆ ಕೊಡುತ್ತಾರೆ”

“ನಮ್ಮ ಪೊಲೀಸ್ ಇಲಾಖೆಯಿಂದ ಕೊಡುತ್ತಿರುವ ಆಹಾರ ನನ್ನ ತಟ್ಟೆಯಲ್ಲಿ ನೋಡಬಹುದು, ಪ್ರಾಣಿ ಕೂಡ ಈ ಆಹಾರವನ್ನು ತಿನ್ನುವುದಿಲ್ಲ, ಆದರೆ ಅದು ನಮಗೆ ತಿನ್ನಲು ಕೊಡುತ್ತಾರೆ. ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಡಿಸಿಪಿಯಿಂದ ಮೋಸವಾಗಿದೆ. ಈ ಜನರ ಮೂಲಕ, ಪೊಲೀಸರು ಸಿಬ್ಬಂದಿಗೆ ಕಳಪೆ ಗುಣಮಟ್ಟದ ಆಹಾರವನ್ನು ನೀಡಲಾಗುತ್ತದೆ ಎಂದು ಮನೋಜ್ ಕುಮಾರ್ ಎಂಬ ಪೊಲೀಸ್ ಪೇದೆ ಹೇಳಿದ್ದಾರೆ.



ಹಿರಿಯ ಅಧಿಕಾರಿಗಳ ವಿರುದ್ಧ ಆಕ್ರೋಶ

ನಾವು ಡ್ಯೂಟಿ ಮುಗಿಸಿ ಬಂದ್ರೆ ನಮಗೆ ಸಿಗುವುದು ಇದೇ ಆಹಾರ. ಪೊಲೀಸರಿಗೆ ಸರಿಯಾದ ಆಹಾರ ನೀಡದಿದ್ದರೆ ಹೇಗೆ ಕೆಲಸ ಮಾಡುತ್ತಾರೆ ಎಂದು ಪ್ರಶ್ನಿಸಿದರು. ಈ ಆಹಾರವನ್ನು ಪ್ರಾಣಿಗಳು ಸಹ ಅದನ್ನು ತಿನ್ನುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆಯೂ ಮನೋಜ್ ಕುಮಾರ್ ವಿರುದ್ಧ ಶಿಸ್ತುಕ್ರಮ

ಫಿರೋಜಾಬಾದ್ ಪೊಲೀಸರು ಕಾನ್‌ಸ್ಟೆಬಲ್‌ನ ವರ್ತನೆಯ ಬಗ್ಗೆ ಟ್ವೀಟ್ ಮಾಡಿದ್ದು, ಕಾನ್ ಸ್ಟೇಬಲ್ ಮನೋಜ್ ಕುಮಾರ್ ವಿರುದ್ಧ ಹಲವು ಬಾರಿ ಶಿಸ್ತು ಕ್ರಮ ಕೈಗೊಂಡಿರುವ ದಾಖಲೆಗಳಿವೆ ಎಂದರು. ಈ ಹಿಂದೆ ಅಕ್ರಮ ಹಾಗೂ ಇತರೆ ವಿಚಾರಗಳಲ್ಲಿ ಹದಿನೈದು ಬಾರಿ ಶಿಕ್ಷೆಗೆ ಗುರಿಯಾಗಿದ್ದಾರೆ. ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: World's Worst City: ಅಯ್ಯಯ್ಯಪ್ಪಾ, ಈ ಸಿಟಿಯಲ್ಲಿ ಜನ ಹೇಗಿರುತ್ತಾರೋ? ಪಾಕಿಸ್ತಾನದ ಕರಾಚಿ ಈಗ ಜಗತ್ತಿನ ಅತ್ಯಂತ ಕೆಟ್ಟ ನಗರ!

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್

ಇನ್ನು ಕಳಪೆ ಊಟ ಕೊಡುತ್ತಿರುವುದನ್ನು ವಿರೋಧಿಸಿದ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬ ಏಕಾಂಗಿಯಾಗಿ ಪ್ರತಿಭಟನೆ, ಕಾನ್ಸ್‌ಟೇಬಲ್ ಕಣ್ಣೀರಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  ಈ ಬಗ್ಗೆ ನೆಟ್ಟಿಗರು ಭಾರೀ ಕಾಮೆಂಟ್ ಮಾಡುತ್ತಿದ್ದಾರೆ.
Published by:Annappa Achari
First published: