• ಹೋಂ
 • »
 • ನ್ಯೂಸ್
 • »
 • ಟ್ರೆಂಡ್
 • »
 • Viral Story: ವಿವಾಹ ಮಂಟಪದಲ್ಲಿ ಕುಡಿದು ಫುಲ್‌ ಟೈಟ್‌ ಆದ ವರ; ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು

Viral Story: ವಿವಾಹ ಮಂಟಪದಲ್ಲಿ ಕುಡಿದು ಫುಲ್‌ ಟೈಟ್‌ ಆದ ವರ; ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು

ಮದುವೆಗೆ ಕುಡಿದು ಬಂದ ಯುವಕ

ಮದುವೆಗೆ ಕುಡಿದು ಬಂದ ಯುವಕ

ವಿವಾಹದ ವಿಧಿ ವಿಧಾನಗಳು ತಮ್ಮದೇ ಆದ ಮಹತ್ವ ಹಾಗೂ ಪಾವಿತ್ರ್ಯತೆಯನ್ನು ಹೊಂದಿವೆ. ಇಂತಹ ಪವಿತ್ರ ಸ್ಥಳದಲ್ಲಿಯೇ ಕುಡಿದು ನಶೆ ಏರಿದ್ದ ವರನೊಬ್ಬ ವಿವಾಹ ಮಂಟಪದಲ್ಲಿಯೇ ನಿದ್ದೆ ಹೋಗಿದ್ದು ಇದನ್ನು ನೋಡಿದ ವಧು ವಿವಾಹವನ್ನೇ ರದ್ದುಗೊಳಿಸಿ ಪಾಠ ಕಲಿಸಿದ್ದಾರೆ.

 • Share this:

  ವಿವಾಹವೆಂಬುದು (Marriage) ಸ್ವರ್ಗದಲ್ಲೇ ನಿಶ್ಚಯಿಸುವ ಸುಂದರ ಅನುಬಂಧ ಎಂಬ ಮಾತಿದೆ. ಭೂಮಿಯಲ್ಲಿ ಹುಡುಗ ಹುಡುಗಿ ಮೆಚ್ಚಿ ವಿವಾಹಿತರಾಗಿದ್ದರೂ ಇಂತಹ ಹುಡುಗ ಇದೇ ಹುಡುಗಿಯೊಂದಿಗೆ ವಿವಾಹಿತರಾಗಬೇಕು ಇವರೇ ಸತಿಪತಿಗಳಾಗಬೇಕು ಎಂಬುದು ಸ್ವರ್ಗದಲ್ಲೇ ನಿರ್ಧರಿತವಾಗಿರುತ್ತದೆ ಎಂಬುದು ಹಿರಿಯರ ಮಾತು. ವಿವಾಹದ ಪ್ರತಿಯೊಂದು ಕಾರ್ಯಗಳನ್ನು ಕೂಡ ವಿಧಿ ವಿಧಾನದ ಮೂಲಕ ನಡೆಸಲಾಗುತ್ತದೆ. ಈ ವಿಧಿ ವಿಧಾನಗಳು ತಮ್ಮದೇ ಆದ ಮಹತ್ವ ಹಾಗೂ ಪಾವಿತ್ರ್ಯತೆಯನ್ನು ಹೊಂದಿವೆ. ಪುರೋಹಿತರು ಪಠಿಸುವ ಮಂತ್ರ, ನಾದಸ್ವರ, ಮುಂದಿರುವ ಹೋಮ ಕುಂಡ ಹೀಗೆ ವಿವಾಹವೆಂಬುದು ಸ್ವತಃ ದೇವತೆಗಳ ಸಮ್ಮುಖದಲ್ಲಿಯೇ ನಡೆಯುವ ಪವಿತ್ರ ಕಾರ್ಯ ಎಂಬುದಾಗಿ ತಿಳಿಯಲಾಗುತ್ತದೆ.


  ಸಂಪೂರ್ಣ ಪಾನಮತ್ತನಾಗಿ ಸ್ವಯಂ ನಿಯಂತ್ರಣ ಕಳೆದುಕೊಂಡ ವರ


  ಇಂತಹ ಪವಿತ್ರ ಸ್ಥಳದಲ್ಲಿಯೇ ಕುಡಿದು ನಶೆ ಏರಿದ್ದ ವರನೊಬ್ಬ ವಿವಾಹ ಮಂಟಪದಲ್ಲಿಯೇ ನಿದ್ದೆ ಹೋಗಿದ್ದು ಇದನ್ನು ನೋಡಿದ ವಧು ವಿವಾಹವನ್ನೇ ರದ್ದುಗೊಳಿಸಿ ಪಾಠ ಕಲಿಸಿದ್ದಾರೆ. ಅಸ್ಸಾಂನ ನಲ್ಬರಿ ಜಿಲ್ಲೆಯ ಬರ್ಖಾನಾಜನ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ವಿವಾಹದಲ್ಲಿ ಉಪಸ್ಥಿತರಿದ್ದ ಜನರು ವರ ಹಾಗೂ ಆತನ ಜತೆಗಿದ್ದ ಆತನ ತಂದೆ ಮಿತಿಮೀರಿ ಕುಡಿದು ಕಲ್ಯಾಣ ಮಂಟಪದಲ್ಲಿ ವರ್ತಿಸಿರುವ ವರ್ತನೆ ನೋಡಿ ಕುಪಿತರಾಗಿದ್ದಾರೆ. ವಧುವಿನ ಸಂಬಂಧಿಕರ ಪ್ರಕಾರ ವರ ಹಾಗೂ ಆತನ ತಂದೆ ವಿವಾಹದ ಕ್ರಮಗಳನ್ನು ಕೈಗೊಳ್ಳದೇ ಇರುವ ಸ್ಥಿತಿಯಲ್ಲಿದ್ದರು ಅಷ್ಟೊಂದು ಕುಡಿದಿದ್ದರು ಎಂದು ತಿಳಿಸಿದ್ದಾರೆ.


  ವಿವಾಹವನ್ನೇ ರದ್ದುಗೊಳಿಸಿದ ವಧು


  ವಿವಾಹ ಸಮಾರಂಭದಲ್ಲಿ ಪುರೋಹಿತರು ಮಂತ್ರಗಳನ್ನು ಉಚ್ಛರಿಸಿ ವರನಿಗೆ ವಿವಾಹ ಕಾರ್ಯಗಳನ್ನು ಬೋಧಿಸುತ್ತಿದ್ದಾಗ ಅದನ್ನು ಪಾಲಿಸಲು ಆತ ಹೆಣಗಾಡುತ್ತಿದ್ದನು ಹಾಗೂ ಅತಿಯಾಗಿ ಕುಡಿದ ಪರಿಣಾಮ ಅಮಲೇರಿದಂತೆ ವರ್ತಿಸುತ್ತಿದ್ದನು. ಇದರಿಂದ ಕೋಪಗೊಂಡ ವಧು ತನಗೆ ಈ ವಿವಾಹವೇ ಬೇಡ ಎಂಬ ನಿರ್ಧಾರಕ್ಕೆ ಬಂದು ವಿವಾಹವನ್ನು ರದ್ದುಗೊಳಿಸಿದ್ದಾರೆ.


  ಇದನ್ನೂ ಓದಿ: ಕೆಲಸ ಇಲ್ಲದೇ ಊಟಕ್ಕೂ ಪರದಾಡುತ್ತಿದ್ದ ವ್ಯಕ್ತಿ; ಹಸಿವಿಗಾಗಿ ಈತ ಮಾಡಿದ ಪ್ಲ್ಯಾನ್​ ಕೇಳಿದ್ರೆ ಶಾಕ್ ಆಗ್ತೀರಾ!


  ಇಂಟರ್ನೆಟ್‌ನಲ್ಲಿ ವೈರಲ್ ಆದ ವಿಡಿಯೋ


  ಕುಡಿದು ಅಮಲೇರಿದ ವರ ವಿವಾಹ ಮಂಟಪದಲ್ಲಿ ಹೇಗೆಲ್ಲಾ ವರ್ತಿಸುತ್ತಿದ್ದನು ಎಂಬ ದೃಶ್ಯಾವಳಿಗಳು ಇದೀಗ ಇಂಟರ್ನೆಟ್‌ನಲ್ಲಿ ವೈರಲ್ ಆಗಿವೆ. ವಿವಾಹದ ವಿಧಿ ವಿಧಾನಗಳು ನಡೆಯುತ್ತಿರುವಾಗ ತನ್ನನ್ನು ತಾನು ನಿಯಂತ್ರಿಸಿಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ವರ ಕಂಡುಬಂದಿದ್ದಾನೆ ಹಾಗೂ ದಣಿದು ತನ್ನ ಸಂಬಂಧಿಕರ ತೊಡೆಯ ಮೇಲೆ ನಿದ್ರೆಗೆ ಜಾರಿರುವ ದೃಶ್ಯ ಕೂಡ ವೈರಲ್ ವಿಡಿಯೋದಲ್ಲಿ ಕಂಡುಬಂದಿದೆ.


  ಮದುವೆಗೆ ಕುಡಿದು ಬಂದ ಯುವಕ


  ವರ ಹಾಗೂ ಆತನ ಕುಟುಂಬದ ಮೇಲೆ ಕೇಸು ದಾಖಲಿಸಿದ ವಧು ಮತ್ತು ಕುಟುಂಬಸ್ಥರು


  ವಧುವಿನ ಕುಟುಂಬಸ್ಥರು ತಿಳಿಸಿರುವಂತೆ ವರ ಹಾಗೂ ಆತನ ತಂದೆ ವಿಪರೀತ ಕುಡಿದಿದ್ದರಿಂದ ಕಾರಿನಿಂದ ಇಳಿಯುವ ಸ್ಥಿತಿಯಲ್ಲಿ ಕೂಡ ಇರಲಿಲ್ಲ ಹಾಗೂ ಮಂಟಪದಲ್ಲಿ ಆತನ ಸ್ಥಿತಿ ನೋಡಿಯೇ ವಧು ವಿವಾಹವನ್ನು ತಿರಸ್ಕರಿಸಿದ್ದಾರೆ ಎಂದು ತಿಳಿಸಿದ್ದಾರೆ.  ವರನ ಕಡೆಯ 95% ದಷ್ಟು ಸಂಬಂಧಿಕರು ಕುಡಿದಿದ್ದರು


  ವಿವಾಹ ಕಾರ್ಯಗಳು ಚೆನ್ನಾಗಿ ನಡೆಯುತ್ತಿತ್ತು ಹಾಗೂ ಎಲ್ಲಾ ವಿಧಿ ವಿಧಾನಗಳನ್ನು ನಾವು ಪೂರ್ಣಗೊಳಿಸಿದ್ದೆವು. ಆದರೆ ಪರಿಸ್ಥಿತಿ ಬಿಗಡಾಯಿಸಿದಾಗ ಸ್ವತಃ ವಧುವೇ ವಿವಾಹವೇ ಬೇಡ ಎಂಬ ನಿರ್ಧಾರಕ್ಕೆ ಬಂದರು. ವರನ ಕಡೆಯಲ್ಲಿ 95% ಜನರು ಸಂಪೂರ್ಣವಾಗಿ ಕುಡಿದೇ ಬಂದಿದ್ದರು. ಅಸ್ಸಾಂ ಗ್ರಾಮದ ನಾಯಕನನ್ನು ಸಂಧಿಸಿದ್ದೇವೆ ಹಾಗೂ ಜೊತೆಗೆ ಪೊಲೀಸರಿಗೂ ಮಾಹಿತಿ ನೀಡಿದ್ದೇವೆ ಎಂದು ವಧುವಿನ ಕಡೆಯ ಇನ್ನೊಬ್ಬ ಸಂಬಂಧಿ ತಿಳಿಸಿದ್ದಾರೆ.
  ಆಘಾತಕ್ಕೊಳಗಾದ ವಧುವಿನ ತಂದೆ


  ಈ ಘಟನೆಯಿಂದ ತೀವ್ರ ಆಘಾತಕ್ಕೊಳಗಾದ ವಧುವಿನ ತಂದೆ ತೀವ್ರ ಒತ್ತಡದಿಂದ ವೈದ್ಯಕೀಯ ಚಿಕಿತ್ಸೆ ತೆಗೆದುಕೊಳ್ಳುವ ಪ್ರಮೇಯ ಕೂಡ ಒದಗಿ ಬಂದಿದೆ. ಮಂಟಪದ ಪರಿಸ್ಥಿತಿ ನೋಡಿ ಸ್ವತಃ ರೋಸಿದ ವಧುವಿನ ಕುಟುಂಬ ನಲ್ಬರಿ ಪೊಲೀಸರಿಗೆ ಘಟನೆಯನ್ನು ವರದಿ ಮಾಡಿದೆ ಮತ್ತು ಮದುವೆಗೆ ಪರಿಹಾರವನ್ನು ನೀಡುವಂತೆ ಎಫ್ಐಆರ್ ದಾಖಲಿಸಿದೆ.

  Published by:Prajwal B
  First published: