VIral Video: ಮಂಟಪದಲ್ಲೇ ವರನ ಕೆನ್ನೆಗೆ ಬಾರಿಸಿದ ವಧು! ಅಷ್ಟಕ್ಕೂ ವರ ಮಾಡಿದ ತಪ್ಪೇನು?

ವಿವಾಹದ ಸಂದರ್ಭದಲ್ಲಿ ವಧು ತನ್ನ ವರನಿಗೆ ಕಪಾಳಮೋಕ್ಷ ಮಾಡಿದ ವಿಡಿಯೋ ಇದೀಗ ವೈರಲ್ ಆಗಿದೆ. ಮೊದಲೇ ಹೇಳಿದಂತೆ ಇನ್​ಸ್ಟಾಗ್ರಾಂನಲ್ಲಿ ಇದು ವೈರಲ್ ಆಗಿದೆ.

ವರನ ಕನ್ನೆಗೆ ಬಾರಿಸಿದ ವಧು

ವರನ ಕನ್ನೆಗೆ ಬಾರಿಸಿದ ವಧು

  • Share this:
    ಇತ್ತೀಚಿನ ದಿನಗಳಲ್ಲಿ ಯಾವುದೇ ಘಟನೆ ಸಂಭವಿಸಿದರು ಅದು 2 ನಿಮಿಷದಲ್ಲಿ ವೈರಲ್ ಆಗುತ್ತದೆ. ನೇರವಾಗಿ ಅಂತಹ ಸನ್ನಿವೇಷವನ್ನು ಸ್ಮಾರ್ಟ್​ಫೋನ್​ನಲ್ಲಿ ನೋಡಬಹುದಾಗಿದೆ. ಅದರಲ್ಲೂ ವೈರಲ್ ಸುದ್ದಿಗಳು ಬೇಗನೆ ಹರಿದಾಡುತ್ತಿರುತ್ತದೆ. ಮೆಟಾ ಮಾಲಿಕತ್ವದ ಇನ್​ಸ್ಟಾಗ್ರಾಂನಲ್ಲಿ ವೈರಲ್ ವಿಡಿಯೋಗಳು ಹೆಚ್ಚಾಗಿ ಹರಿದಾಡುತ್ತಿರುತ್ತವೆ. ಆದರೆ ಕೆಲವೊಂದು ತುಣುಕುಗಳು ನಗು ತರಿಸುವಂತಿರುತ್ತವೆ. ಇನ್ನು ಕೆಲವು ಘಟನೆಗಳು ನಿಜವಾಗಿದ್ದರು ಸಹ ನೋಡುಗನಿಗೆ ಮಾತ್ರ ಹಾಸ್ಯಸ್ಪದವಾಗಿ ಕಾಣುತ್ತದೆ. ಅದರಂತೆ ವಿವಾಹದ ಸಂದರ್ಭದಲ್ಲಿ ವಧು ತನ್ನ ವರನಿಗೆ ಕಪಾಳಮೋಕ್ಷ ಮಾಡಿದ ವಿಡಿಯೋ ಇದೀಗ ವೈರಲ್ ಆಗಿದೆ. ಮೊದಲೇ ಹೇಳಿದಂತೆ ಇನ್​ಸ್ಟಾಗ್ರಾಂನಲ್ಲಿ ಇದು ವೈರಲ್ ಆಗಿದೆ.

    ಮದುವೆ ಅಥವಾ ವಿವಾಹ ಎಂಬುದು ಖುಷಿಯ ಸಂಗತಿ. ವಿವಾಹದ ಬಳಿಕ ವಧು-ವರ ಇಂತಹ ಸಂತದ ಕ್ಷಣವನ್ನು ಆನಂದಿಸಲು ಸಿಹಿ ಹಂಚುತ್ತಾರೆ. ಆದರೆ ಇಲ್ಲಿ ವಧು ಮತ್ತು ವರ ಮದುವೆಯ ಎಲ್ಲಾ ಆಚರಣೆಗಳು ಮಗಿದ ಬಳಿಕ ಒಬ್ಬರನ್ನೊಬ್ಬರು ಸಿಹಿ ತಿಂಡಿ ನೀಡುವ ಮೂಲಕ ಖುಷಿ ಆಚರಿಸಬೇಕದ ಕ್ಷಣ ನಿರ್ಮಾಣವಾಗಿತ್ತು. ಈ ವೇಳೆ ವಧು ತನ್ನ ವರನಿಗೆ ಸಿಹಿ ತಿಂಡಿಯನ್ನು ನೀಡಿದ್ದಾಳೆ. ತನ್ನ ಕೈಯಾರೆ ಗಂಡನ ಬಾಯಿಗೆ ಸಿಹಿತಿಂಡಿ ನೀಡಿದ್ದಾಳೆ. ಆದರೆ ಇದನ್ನು ವರನು ಗಬಗಬನೆ ತಿಂದಿದ್ದಾನೆ.

    ಇದಾಗ ಬಳಿಕ ವರನ ಸರದಿ. ವಧುವಿಗೆ ತನ್ನ ಕೈಯಾರೆ ವರನು ಸಿಹಿ ತಿಂಡಿ ನೀಡಬೇಕು. ಅದರಂತೆ ವರನು ಕೂಡ ಸಿಹಿ ತಿಂಡಿ ತೆಗೆದುಕೊಂಡು ಆಕೆಯ ಬಾಯಿಗೆ ನೀಡಲು ಹೋಗಿದ್ದಾನೆ. ಆದರೆ ಆಕೆ ಮಾತ್ರ ತಿನ್ನಲು ಕೊಂಚ ಹಿಂದೇಟು ಹಾಕಲು ಪ್ರಯತ್ನಿಸಲು. ಇದಕ್ಕೆ ಸುಮ್ಮನಾಗದ ವರನು ಆಕೆಯ ಬಾಯಿಗೆ ತಿಂಡಿಯನ್ನು ತುರುಕಿಸಿದ್ದಾನೆ. ಇದರಿಂದ ವಧು ಕೋಪಗೊಂಡ ವರನ ಕೆನ್ನೆಗೆ ಬಾರಿಸಿದ್ದಾಳೆ. ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಇದನ್ನೂ ಓದಿ: Donkey Farm: ಕತ್ತೆ ಕಾಯೋಕೆ ಹೋಗು ಅಂದಿದ್ದನ್ನೇ ಸೀರಿಯಸ್​ ಆಗಿ ತೆಗೆದುಕೊಂಡ ವ್ಯಕ್ತಿ! ಅದ್ರಿಂದಲೇ ಲಕ್ಷ ಲಕ್ಷ ಗಳಿಸುತ್ತಿದ್ದಾರೆ

    ಅಂದಹಾಗೆಯೇ ಈ ದೃಶ್ಯ ಇನ್​ಸ್ಟಾಗ್ರಾಂನಲ್ಲಿ ವೈರಲ್​ ಆಗಿದೆ. ಆಫೀಶಿಯಲ್​ ವೈರಲ್​ಕ್ಲಿಪ್​ ಎಂಬ ಇನ್​ಸ್ಟಾ ಖಾತೆಯಲ್ಲಿ ಇದನ್ನು ಶೇರ್​ ಮಾಡಲಾಗಿದೆ. ಬಹುತೇಕರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ನಗು ತರಿಸುವಂತಹ ವಿಡಿಯೋ ಇದಾಗಿದ್ದರು ಸಹ, ವರನ ವರ್ತನೆ ಮತ್ತು ವಧುವಿನ ಕಪಾಳಮೋಕ್ಷ ಇವೆರೆಡ ಸನ್ನಿವೇಶ ಊಹಿಸಿದಂತಲ್ಲ. ಆದರೆ ಬಹುತೇಕರು ಈ ದೃಶ್ಯವನ್ನು ಕಂಡು ಶೇರ್​ ಮಾಡಿದ್ದಾರೆ. ಕೆಲವು ಕಾಮೆಂಟ್​ ಬರೆದಿದ್ದಾರೆ.






    ಇದನ್ನೂ ಓದಿ: AC Cooling Bedsheet: ಮಾರುಕಟ್ಟೆಯಲ್ಲಿದೆ ಏಸಿ ಬೆಡ್​ಶೀಟ್​​! ಇದು ನಿಮ್ಮನ್ನು ತಂಪು ತಂಪು ಕೂಲ್​ ಕೂಲ್​ ಮಾಡುತ್ತೆ

    ಇನನ್​ಸ್ಟಾಗ್ರಾಂ ಎಂಬ ವೈರಲ್​ ತಾಣ

    ಇಂದು ಇನ್​ಸ್ಟಾಗ್ರಾಂ ಇಲ್ಲದ ಸ್ಮಾರ್ಟ್​ಫೋನ್​ ಇರಲು ಸಾಧ್ಯವಿಲ್ಲ, ಮಾತ್ರವಲ್ಲದೆ, ಇನ್​ಸ್ಟಾಗ್ರಾಂ ಖಾತೆಯಿಲ್ಲದ ಯುವಕ ಯುವತಿಯರು ಇರಲಿಕ್ಕಿಲ್ಲ. ಬಹುತೇಕರು ಇದರಲ್ಲಿ ಖಾತೆ ರಚಿಸಿ ಫೋಟೋ, ವಿಡಿಯೋ, ರೀಲ್ಸ್​ ಶೇರ್​ ಮಾಡುತ್ತಾರೆ. ಅಂದಹಾಗೆಯೇ ಇದನ್ನೇ ಬಳಸಿಕೊಂಡು ಹಣ ಮಾಡುವವರು ಇದ್ದಾರೆ.

    ಸಾಮಾಜಿಕ ಜಾಲತಾಣಗಳು ಬಂದ ಬಳಿಕ ನ್ಯೂಸ್​ ಚಾನೆಲ್​​ಗಳಿಗಿಂತ ವೇಗವಾಗಿ ಸುದ್ದಿಗಳು ಇಂತಹ ಫ್ಲಾಟ್​ಫಾರ್ಮ್​ನಲ್ಲಿ ಶೇರ್​ ಆಗುತ್ತವೆ. ಪ್ರತಿ ದಿನ ಏನಾದರೊಂದು ವಿಡಿಯೋ ಶೇರ್​​ ಆಗದೇ ಇರದು.
    Published by:Harshith AS
    First published: