• Home
  • »
  • News
  • »
  • trend
  • »
  • Viral Video: ಮೃತಪಟ್ಟ ಅಪ್ಪನ ಫೋಟೋ ಹಿಡಿದು ಮದುವೆ ಮಂಟಪಕ್ಕೆ ಬಂದ ವಧು, ಇದಕ್ಕೆ ಹೇಳೋದು ಜೊತೆಗಿರದ ಜೀವ ಎಂದೆಂದಿಗೂ ಜೀವಂತ!

Viral Video: ಮೃತಪಟ್ಟ ಅಪ್ಪನ ಫೋಟೋ ಹಿಡಿದು ಮದುವೆ ಮಂಟಪಕ್ಕೆ ಬಂದ ವಧು, ಇದಕ್ಕೆ ಹೇಳೋದು ಜೊತೆಗಿರದ ಜೀವ ಎಂದೆಂದಿಗೂ ಜೀವಂತ!

ಪ್ರಿಯಾಂಕಾ ಭಾಟಿ

ಪ್ರಿಯಾಂಕಾ ಭಾಟಿ

ವಧುವಿನ ಹೆಸರು ಪ್ರಿಯಾಂಕಾ ಭಾಟಿ, ಅವರು ಕೇವಲ 9 ವರ್ಷದವರಿದ್ದಾಗ ಕ್ಯಾನ್ಸರ್ ನಿಂದ ತಮ್ಮ ತಂದೆಯನ್ನು ಕಳೆದುಕೊಂಡರು. ಮದುವೆಯ ದಿನದಂದು, ತನ್ನ ಅಜ್ಜನೊಂದಿಗೆ ಮಂಟಪಕ್ಕೆ ಬರುತ್ತಿರುವಾಗ ತನ್ನ ತಂದೆಯ ಫೋಟೋವನ್ನು ಕೈಯಲ್ಲಿ ಹಿಡಿದುಕೊಂಡು ಬರುತ್ತಿರುವ ವಿಡಿಯೋವೊಂದು ನಿಮ್ಮ ಕಣ್ಣಲ್ಲಿ ನೀರು ತರಿಸದೆ ಇರದು.

ಮುಂದೆ ಓದಿ ...
  • Share this:

ಒಂದು ಹುಡುಗಿಯ ಜೀವನದಲ್ಲಿ ಈ ಮದುವೆ (Marriage) ಎನ್ನುವುದು ಒಂದು ಮಹತ್ವದ ಘಟ್ಟ. ಏಕೆಂದರೆ ತನ್ನನ್ನು ಹೆತ್ತು ಪೋಷಿಸಿ ದೊಡ್ಡವಳಾಗಿ ಮಾಡಿ ಒಳ್ಳೆಯ ಶಿಕ್ಷಣ (Education) ನೀಡಿ ಸಮಾಜದಲ್ಲಿ ಯಾರ ಮೇಲೂ ಅವಲಂಬಿತವಾಗದೆ, ತಾನೇ ಸ್ವಂತ ದುಡಿದು ತಿನ್ನಲು ಒಂದು ಒಳ್ಳೆಯ ಕೆಲಸ (Good Job) ಕೊಡಿಸುವ ತನಕ ಹೀಗೆ ವಿವಾಹವಾಗಿ ಬೇರೆ ಮನೆಗೆ ಹೋಗುವ ತನಕ ಏನೆಲ್ಲಾ ಮಾಡಿರುತ್ತಾರೆ ಪೋಷಕರು (Parents). ಈಗ ದಿಢೀರನೆ ತಮ್ಮ ಮನೆಯನ್ನು ಬಿಟ್ಟು ಗಂಡನ ಮನೆಗೆ ಹೋಗಬೇಕು ಮತ್ತು ಅಲ್ಲಿದ್ದ ಜನರಿಗೆ ಹೊಂದಿಕೊಳ್ಳಬೇಕು. ಇದೆಲ್ಲವೂ ಅಷ್ಟು ಸುಲಭದ ಹೊಂದಾಣಿಕೆ ಅಲ್ಲವೇ ಅಲ್ಲ.


ಈಗಂತೂ ಈ ಮದುವೆಗಳಲ್ಲಿ ನಾವು ಈ ವಧು ವರರು ಹೇಗೆಲ್ಲಾ ಮದುವೆ ಮಂಟಪಗಳಿಗೆ ಎಂಟ್ರಿ ನೀಡುತ್ತಿದ್ದಾರೆ ಅಂತ ನಮಗೆ ಗೊತ್ತೇ ಇದೆ. ಕೆಲವರು ಸ್ಟೈಲ್ ಆಗಿ ಎಂಟ್ರಿ ನೀಡಿದರೆ, ಇನ್ನು ಕೆಲವರು ಈ ಭಾವುಕ ಕ್ಷಣವನ್ನು ಇನ್ನಷ್ಟು ಭಾವುಕವಾಗಿ ಮಾಡಿಕೊಳ್ಳುತ್ತಾರೆ.


ಕಣ್ಣಲ್ಲಿ ನೀರು ತರಿಸುತ್ತೆ ಈ ವಿಡಿಯೋ
ವಧುವಿನ ಹೆಸರು ಪ್ರಿಯಾಂಕಾ ಭಾಟಿ, ಅವರು ಕೇವಲ 9 ವರ್ಷದವರಿದ್ದಾಗ ಕ್ಯಾನ್ಸರ್ ನಿಂದ ತಮ್ಮ ತಂದೆಯನ್ನು ಕಳೆದುಕೊಂಡರು. ಮದುವೆಯ ದಿನದಂದು, ತನ್ನ ಅಜ್ಜನೊಂದಿಗೆ ಮಂಟಪಕ್ಕೆ ಬರುತ್ತಿರುವಾಗ ತನ್ನ ತಂದೆಯ ಫೋಟೋವನ್ನು ಕೈಯಲ್ಲಿ ಹಿಡಿದುಕೊಂಡು ಬರುತ್ತಿರುವ ವಿಡಿಯೋವೊಂದು ನಿಮ್ಮ ಕಣ್ಣಲ್ಲಿ ನೀರು ತರಿಸದೆ ಇರದು.ಅವರ ಮದುವೆಯ ದಿನದ ಈ ಭಾವುಕ ಕ್ಷಣದ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪ್ರಿಯಾಂಕಾ ತನ್ನ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ತನ್ನ ಅಜ್ಜ ತನ್ನನ್ನು ಹೇಗೆ ಬೆಂಬಲಿಸಿದರು ಮತ್ತು ತನ್ನ ತಂದೆಯ ಮರಣದ ನಂತರ ಯಾವಾಗಲೂ ಜೊತೆಯಲ್ಲಿಯೇ ಇದ್ದರು ಎಂದು ಇದರಲ್ಲಿ ಹೇಳಿದ್ದಾರೆ. ಅವರಿಬ್ಬರೂ ಮದುವೆಯ ವಿಧಿವಿಧಾನಗಳಿಗಾಗಿ ಮಂಟಪದ ಕಡೆಗೆ ಹೋಗುತ್ತಿದ್ದಂತೆ ಅವಳು ತನ್ನ ಅಜ್ಜನ ಕೈಯನ್ನು ಹಿಡಿದುಕೊಂಡು ನಡೆಯುತ್ತಿರುವುದನ್ನು ನಾವು ನೋಡಬಹುದು. ಆಕೆಯ ಕಥೆಯನ್ನು ಹ್ಯೂಮನ್ಸ್ ಆಫ್ ಬಾಂಬೆ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಗಳಲ್ಲಿ ಹಂಚಿಕೊಂಡಿದೆ.


ವಿಡಿಯೋ ಪೋಸ್ಟ್ ನಲ್ಲಿದೆ ಭಾವುಕ ಪದಗಳು
"ಅಪ್ಪ ತೀರಿಕೊಂಡಾಗ ನನಗೆ ಬರೀ 9 ವರ್ಷ ಅಷ್ಟೇ... ಆದರೆ ನಾನು ಅವನೊಂದಿಗೆ ಕಳೆದ ಆ ಕೆಲವು ವರ್ಷಗಳಲ್ಲಿಯೂ ಸಹ, ಅವನನ್ನು ತನ್ನ ಮಗಳಿಗಾಗಿ ತನ್ನ ಸರ್ವಸ್ವವನ್ನೂ ಅರ್ಪಿಸಿದ ವ್ಯಕ್ತಿ ಎಂದು ನಾನು ನೋಡಿದೆ. ನಾನು ಮಾವಿನಹಣ್ಣನ್ನು ತುಂಬಾನೇ ಇಷ್ಟ ಪಡುತ್ತಿದ್ದರೆ, ಬೇಸಿಗೆ ರಜೆ ಪ್ರಾರಂಭವಾಗುತ್ತಿದ್ದಂತೆ, ಅಪ್ಪ ಮಾವಿನಹಣ್ಣುಗಳಿಂದ ತುಂಬಿದ ಡಬ್ಬಿಗಳನ್ನು ಮನೆಯಲ್ಲಿ ತಂದಿಡುತ್ತಿದ್ದರು. ಅವರ ಕೊನೆಯ 2 ವರ್ಷಗಳಲ್ಲಿ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾಗ, ಅವರು ತಮ್ಮ ಹಾಸಿಗೆಯ ಮೇಲೆ ಹೆಚ್ಚಿನ ಸಮಯವನ್ನು ಕಳೆದರು, ಆದರೆ ಆಗಲೂ ಅವರು ಯಾವಾಗಲೂ ನನ್ನ ಬಗ್ಗೆ ಕೇಳುತ್ತಿದ್ದರು.


ಇದನ್ನೂ ಓದಿ: Birthday Celebration: 18ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಪವಾಡ ಹುಡುಗ, ಈತನ ಬಗ್ಗೆ ತಾಯಿ ಏನು ಹೇಳಿದ್ದಾರೆ ನೋಡಿ 


ಅದಕ್ಕಾಗಿಯೇ ಅವರು ನಮ್ಮನ್ನು ತೊರೆದ ನಂತರ, ನಾನು ಅವರನ್ನು ತುಂಬಾನೇ ಮಿಸ್ ಮಾಡಿಕೊಂಡೆ. ಆನಂತರ ಅಪ್ಪ ಬಿಟ್ಟು ಹೋದ ಅಂಗಡಿಯ ಜವಾಬ್ದಾರಿ ಅಮ್ಮನ ಹೆಗಲೇರಿತು. ನನ್ನ ಅಣ್ಣ ತಮ್ಮ ಮತ್ತು ನಾನು ಅವಳಿಗೆ ಸಹಾಯ ಮಾಡುತ್ತಿದ್ದೆವು ಆದರೆ ನಾವು ಒಂಟಿಯಾಗಿದ್ದೇವೆ ಅನ್ನೋ ಭಾವ ಮಾತ್ರ ನಮ್ಮನ್ನು ಸದಾ ಕಾಡುತ್ತಲೇ ಇರುತ್ತಿತ್ತು" ಎಂದು ಅವರು ವಿಡಿಯೋ ಪೋಸ್ಟ್ ನಲ್ಲಿ ಹೇಳಿದರು.


"ಆದರೆ ಅಜ್ಜ ನನ್ನನ್ನು ತಮ್ಮ ಮಗಳಂತೆ ಬೆಳೆಸಿದರು, ನಾನು ಅವರನ್ನು ಮೊದಲು ತುಂಬಾ ಸಿಟ್ಟಿನ ಮನುಷ್ಯನಾಗಿ ತಿಳಿದಿದ್ದೆ, ಅವನ ಸುತ್ತಲೂ ಮಕ್ಕಳು ಆಟವಾಡಲು ಹೆದರುತ್ತಿದ್ದರು. ಆದರೆ ಅಪ್ಪನ ಸಾವಿನ ನಂತರ, ಅವನು ತುಂಬಾನೇ ಮೃದುವಾದ. ನನ್ನ ವಿದ್ಯಾಭ್ಯಾಸದ ಬಗ್ಗೆ ತುಂಬಾನೇ ಕಾಳಜಿ ವಹಿಸಿದರು" ಎಂದು ಅವರು ಹೇಳಿದರು.


ವಿಡಿಯೋ ನೋಡಿ ಭಾವುಕರಾದ ನೆಟ್ಟಿಗರು
ವೈರಲ್ ಆದ ಈ ವಿಡಿಯೋ ಎಲ್ಲರನ್ನೂ ಕಣ್ಣೀರಿಡುವಂತೆ ಮಾಡಿದ್ದಂತು ನಿಜ. "ನಾನು ಇದನ್ನು ಸಂಪೂರ್ಣವಾಗಿ ಅನುಭವಿಸಬಲ್ಲೆ. ಪ್ರತಿಯೊಬ್ಬ ತಂದೆಯು ತನ್ನ ಮಗಳಿಗೆ ಸೂಪರ್ ಹೀರೋ ಮತ್ತು ಆ ಸ್ಥಳವನ್ನು ಬೇರೆ ಯಾರಿಂದಲೂ ತುಂಬಲು ಸಾಧ್ಯವಿಲ್ಲ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಬರೆದಿದ್ದಾರೆ.


ಇದನ್ನೂ ಓದಿ:  Viral Video: 3 ವರ್ಷದ ಪುಟ್ಟ ಮಗುವಿಗೆ ಐಬ್ರೋ ಮಾಡಿದ ತಾಯಿ, ವೈರಲ್ ಆಯ್ತು ವಿಡಿಯೋ


"ನೀವು ಮಾಡಿರುವ ಸಾಧನೆಯನ್ನು ನೋಡಿ ನಿಮ್ಮ ತಂದೆ ಮೇಲಿಂದಲೇ ಹೆಮ್ಮೆ ಪಡುತ್ತಿರುತ್ತಾರೆ ಮತ್ತು ನಿಮ್ಮ ತಂದೆ ಯಾವಾಗಲೂ ನಿಮ್ಮನ್ನು ಮೇಲಿಂದ ಗಮನಿಸುತ್ತಿರುತ್ತಾರೆ, ಬೇಸರ ಮಾಡಿಕೊಳ್ಳಬೇಡಿ. ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಿ" ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.

Published by:Ashwini Prabhu
First published: