Viral Video: ಬೈಕ್ ಹಿಂದಕ್ಕೆ ತೆಗೆದುಕೊಳ್ಳುವುದಕ್ಕೆ ಹೋಗಿ ಏನು ಮಾಡಿಕೊಂಡಿದ್ದಾನೆ ನೋಡಿ ಈ ಸವಾರ! ವೈರಲ್ ಆಯ್ತು ವೀಡಿಯೋ

ಒಬ್ಬ ವ್ಯಕ್ತಿಯು ತನ್ನ ಬೈಕನ್ನು ಹಿಂದಕ್ಕೆ ತೆಗೆದುಕೊಳ್ಳಲು ಹೋಗಿ ಹಿಂದೆ ಏನಿದೆ ಅಂತ ಸಹ ನೋಡದೆ ರಸ್ತೆಯಲ್ಲಿದ್ದ ಆಳವಾದ ಗುಂಡಿಗೆ ಬೈಕ್ ಸಮೇತವಾಗಿ ಬಿದ್ದಿದ್ದಾರೆ. ಈ ಸಣ್ಣ ಕ್ಲಿಪ್ ಅನ್ನು 'ವೈ ಮೆನ್ ಲೀವ್ಸ್ ಲೆಸ್' ಹೆಸರಿನ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಹಂಚಿಕೊಂಡಿದೆ.

ಬೈಕ್ ಹಿಂದಕ್ಕೆ ತೆಗೆದುಕೊಳ್ಳುವುದಕ್ಕೆ ಹೋಗಿ ಗುಂಡಿಗೆ ಬಿದ್ದ ಬೈಕ್ ಸವಾರ

ಬೈಕ್ ಹಿಂದಕ್ಕೆ ತೆಗೆದುಕೊಳ್ಳುವುದಕ್ಕೆ ಹೋಗಿ ಗುಂಡಿಗೆ ಬಿದ್ದ ಬೈಕ್ ಸವಾರ

  • Share this:
ಸಾಮಾನ್ಯವಾಗಿ ನಾವು ಎಲ್ಲಾದರೂ ನಮ್ಮ ಬೈಕ್ ಅನ್ನು (Bike) ನಿಲ್ಲಿಸಿ ಹೋಗಿದ್ದರೆ, ಕೆಲಸ ಮುಗಿಸಿಕೊಂಡು ಬಂದು ಆ ಬೈಕ್ ಮೇಲೆ ಕುಳಿತು (Sitting) ಹಿಂದಕ್ಕೆ ನಾವು ಅವಸರವಸರವಾಗಿ ತೆಗೆದುಕೊಳ್ಳುವಾಗ ಹಿಂದೆ ತಂದು ನಿಲ್ಲಿಸಿದ ಬೈಕ್ ಗೆ ಸ್ವಲ್ಪ ಟಚ್ (Touch) ಮಾಡುತ್ತೇವೆ. ಕೆಲವೊಮ್ಮೆ ನಾವು ನೀಡಿದ ಟಚ್ ನಿಂದಾಗಿ ಆ ಹಿಂದೆ ಇದ್ದಂತಹ ಬೈಕ್ ಕೆಳಕ್ಕೆ ಬೀಳುತ್ತದೆ ಮತ್ತು ಕೆಲವೊಮ್ಮೆ ಆ ಬೈಕ್ ಕೆಳಕ್ಕೆ ಬಿದ್ದಾಗ ಅದರ ಬಿಡಿ ಭಾಗಗಳು (Parts) ಸಹ ಮುರಿದು ಬೀಳುತ್ತವೆ. ನೋಡಿ. ಬೈಕ್ ಹಿಂದಕ್ಕೆ ತೆಗೆದುಕೊಳ್ಳುವಾಗ ಏನೆಲ್ಲಾ ಅವಾಂತರಗಳು ಆಗುತ್ತವೆ ಅಂತ.

ಬೈಕ್ ಹಿಂದಕ್ಕೆ ತೆಗೆದುಕೊಳ್ಳುವ ಮುನ್ನ ಎಚ್ಚರ!
ಅದಕ್ಕಾಗಿ ನಾವು ಬೈಕ್ ಹಿಂದಕ್ಕೆ ತೆಗೆದುಕೊಳ್ಳುವ ಮೊದಲು ಒಮ್ಮೆ ನಮ್ಮ ಬೈಕ್ ಹಿಂದೆ ಯಾವುದಾದರೂ ಬೈಕ್ ಅಥವಾ ಕಾರು ನಿಲ್ಲಿಸಿದ್ದಾರೆಯೇ ಮತ್ತು ಹಾಗೆ ನಿಲ್ಲಿಸಿದ್ದರೆ ನಮ್ಮ ಬೈಕ್ ಅನ್ನು ಅಲ್ಲಿಂದ ಸುರಕ್ಷಿತವಾಗಿ ಯಾರ ಬೈಕ್ ಅಥವಾ ಕಾರಿಗೂ ತೊಂದರೆ ಮಾಡದಂತೆ ಹೇಗೆ ತೆಗೆದುಕೊಳ್ಳಬಹುದು ಮತ್ತು ಅಲ್ಲಿ ಅದಕ್ಕೆ ಸ್ಥಳವಿದೆಯೇ ಅಂತ ಸ್ವಲ್ಪ ಶಾಂತ ರೀತಿಯಿಂದ ನೋಡುವುದು ಒಳ್ಳೆಯದು.  ಇದಕ್ಕಿಂತಲೂ ಚಿಕ್ಕ ಪುಟ್ಟ ಗುಂಡಿಗಳು ಅಲ್ಲಿದ್ದು, ನಮ್ಮ ಬೈಕ್ ಅನ್ನು ನೋಡದೆಯೇ ಹಿಂದಕ್ಕೆ ತೆಗೆದುಕೊಳ್ಳಲು ಹೋದರೆ ಅದೊಂದು ರೀತಿಯ ಫಜೀತಿಗೆ ಕಾರಣವಾಗುತ್ತದೆ.

ಆಳವಾದ ಗುಂಡಿಗೆ ಬೈಕ್ ಮತ್ತು ಸವಾರ
ಇಲ್ನೋಡಿ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ, ಅದರಲ್ಲಿ ಒಬ್ಬ ವ್ಯಕ್ತಿಯು ತನ್ನ ಬೈಕನ್ನು ಹಿಂದಕ್ಕೆ ತೆಗೆದುಕೊಳ್ಳಲು ಹೋಗಿ ಹಿಂದೆ ಏನಿದೆ ಅಂತ ಸಹ ನೋಡದೆ ರಸ್ತೆಯಲ್ಲಿದ್ದ ಆಳವಾದ ಗುಂಡಿಗೆ ಬೈಕ್ ಸಮೇತವಾಗಿ ಬಿದ್ದಿದ್ದಾರೆ. ಈ ಸಣ್ಣ ಕ್ಲಿಪ್ ಅನ್ನು 'ವೈ ಮೆನ್ ಲೀವ್ಸ್ ಲೆಸ್' ಹೆಸರಿನ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಭಾನುವಾರದಂದು ಹಂಚಿಕೊಂಡಿದೆ. ಈ ಪೋಸ್ಟ್ ನೆಟ್ಟಿಗರಿಂದ ಅನೇಕ ಪ್ರತಿಕ್ರಿಯೆಗಳನ್ನು ಪಡೆದಿದೆ ಮತ್ತು 1.2 ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಸಹ ಈ ಪೋಸ್ಟ್ ಸಂಗ್ರಹಿಸಿದೆ.

ಇದನ್ನೂ ಓದಿ: Achmad Zulkarnain: ಈತನಿಗೆ ಕೈಯಿಲ್ಲ, ಕಾಲಿಲ್ಲ! ಆದರೆ ಈತನ ಫೋಟೋಗ್ರಫಿ ಮಾತ್ರ ಯಾರಿಗೂ ಕಡಿಮೆ ಇಲ್ಲ!

ಮೈ ಜುಮ್ಮೆನಿಸುವ ಈ ವಿಡಿಯೋದ ಆರಂಭದಲ್ಲಿ ಬೈಕ್ ಮೇಲೆ ಕುಳಿತುಕೊಂಡ ಒಬ್ಬ ಬೈಕ್ ಸವಾರನನ್ನು ನೋಡಬಹುದು. ಆ ಜನನಿಬಿಡ ರಸ್ತೆಯಲ್ಲಿರುವ ಅಂಗಡಿಯ ಪಕ್ಕದಲ್ಲಿ ನಿಲ್ಲಿಸಲಾದ ಬೈಕ್ ಅನ್ನು ಹಿಂದಕ್ಕೆ ತೆಗೆದುಕೊಳ್ಳಲು ಹೋಗಿ ಆ ವ್ಯಕ್ತಿಯು ತನ್ನ ಹಿಂದಿನ ಆಳವಾದ ಗುಂಡಿಯನ್ನು ಗಮನಿಸದೆ ತನ್ನ ಬೈಕಿನ ಸಮೇತವಾಗಿ ಆ ಗುಂಡಿಗೆ ಬಿದ್ದಿರುವುದನ್ನು ನಾವು ಈ ವಿಡಿಯೋದಲ್ಲಿ ನೋಡಬಹುದು.

ವಿಡಿಯೋ ನೋಡಿ ನೆಟ್ಟಿಗರು ಏನು ಹೇಳಿದ್ರು 
ಪೋಸ್ಟ್ ನ ಶೀರ್ಷಿಕೆ ಸಹ ತುಂಬಾನೇ ತಮಾಷೆಯಾಗಿದೆ "ಭೂಮಿಯ ಒಳಗೆ ಪ್ರಯಾಣ" ಎಂದು ಬರೆಯಲಾಗಿದೆ. ಈ ಸಣ್ಣ ಕ್ಲಿಪ್ ಎಲ್ಲಾ ರೀತಿಯ ಕಾಮೆಂಟ್ ಗಳನ್ನು ಗಳಿಸಿದೆ. ಕೆಲವು ಇಂಟರ್ನೆಟ್ ಬಳಕೆದಾರರು ವೀಡಿಯೋವನ್ನು ಉಲ್ಲಾಸಕರವಾಗಿ ಕಂಡರೆ, ಇತರರು ಬೈಕ್ ಸವಾರನ ಯೋಗಕ್ಷೇಮದ ಬಗ್ಗೆ ಕಳವಳ ವ್ಯಕ್ತಪಡಿಸಿದರು."ವಾಸ್ತವವಾಗಿ ಅವನು ಮತ್ತೊಂದು ಬ್ರಹ್ಮಾಂಡಕ್ಕೆ ಹೋಗುತ್ತಿದ್ದಾನೆ ಅಂತ ಅನ್ನಿಸುತ್ತದೆ, ಅದಕ್ಕಾಗಿಯೇ ಅವನು ಹಿಮ್ಮುಖವಾಗಿ ಹೋಗುತ್ತಿದ್ದ" ಎಂದು ಒಬ್ಬ ಬಳಕೆದಾರರು ಹೇಳಿದರು. ಇನ್ನೊಬ್ಬರು "ತಮಾಷೆಯೇನಲ್ಲ, ಅವನಿಗೆ ಗಾಯವಾಗಿರಬಹುದು ಎಂದು ನನಗೆ ಖಾತ್ರಿಯಿದೆ, ಬೈಕ್ ಗಳು ತುಂಬಾನೇ ಭಾರವಾಗಿರುತ್ತವೆ ಮತ್ತು ಅವನು ಆ ಗುಂಡಿಯಿಂದ ಹೇಗೆ ಹೊರ ಬಂದಿರಬಹುದು ಎಂದು ನನಗೆ ಅರ್ಥವಾಗುತ್ತಿಲ್ಲ" ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral Protest: ರಸ್ತೆಗುಂಡಿಯಲ್ಲೇ ಯೋಗ, ಸ್ನಾನ! ವೈರಲ್ ಆಯ್ತು ಪ್ರತಿಭಟನೆ

ಮೂರನೆಯವನು ಉಲ್ಲಾಸಭರಿತವಾಗಿ ಪ್ರತಿಕ್ರಿಯಿಸುತ್ತಾ "ಅವನು ಭೂಮಿಯ ಮಧ್ಯಭಾಗದಲ್ಲಿ ಹೋಗಿ ಸಿಲುಕಿರಬೇಕು ಅಂತ ಅನ್ನಿಸುತ್ತದೆ" ಎಂದು ಹೇಳಿದರೆ, ನಾಲ್ಕನೆಯವನು "ಗುರುತ್ವಾಕರ್ಷಣೆಯ ಸೆಳೆತ ಅಕ್ಷರಶಃ ನಿಜ" ಎಂದು ಕಾಮೆಂಟ್ ಮಾಡಿದ್ದಾರೆ. ಘಟನೆ ನಡೆದ ಸ್ಥಳ ಇನ್ನೂ ತಿಳಿದು ಬಂದಿಲ್ಲ. ಆ ವ್ಯಕ್ತಿಯನ್ನು ನಂತರ ಹೇಗೆ ಗುಂಡಿಯಿಂದ ಮೇಲಕ್ಕೆ ಎಳೆಯಲಾಯಿತು ಅಥವಾ ರಕ್ಷಿಸಲಾಯಿತು ಎಂಬುದನ್ನು ಸಹ ವಿಡಿಯೋ ತೋರಿಸಿಲ್ಲ.
Published by:Ashwini Prabhu
First published: