HOME » NEWS » Trend » THE BIGGEST CHICKEN EGG ROLL IN THE WORLD STG HG

ಬಾಯಲ್ಲಿ ನೀರೂರಿಸುವ ಅತಿ ದೊಡ್ಡ ಚಿಕನ್ ಎಗ್ ರೋಲ್ ಮಿಸ್ ಮಾಡ್ಕೋಬೇಡಿ..!

ಇತ್ತೀಚೆಗೆ ಇಂಡಿಯಾ ಈಟ್ ಮೇನಿಯಾ ತನ್ನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪ್ರಪಂಚದ ಅತಿ ದೊಡ್ಡದಾದ ಚಿಕನ್ ಎಗ್ ರೋಲ್ ಮಾಡುವುದು ಹೇಗೆ ಎಂಬ ವಿಡಿಯೋ ಅಪ್‍ಲೋಡ್ ಮಾಡಿತ್ತು. ಇದು ಕೊಲ್ಕತಾ ಗಾರಿಯಾ ಹಟ್ ಬಳಿಯ ಬೀದಿ ಬದಿಯ ಸಣ್ಣ ಅಂಗಡಿಯಲ್ಲಿ ತಯಾರಿಸಲಾಗುತ್ತದೆ

news18-kannada
Updated:April 7, 2021, 1:31 PM IST
ಬಾಯಲ್ಲಿ ನೀರೂರಿಸುವ ಅತಿ ದೊಡ್ಡ ಚಿಕನ್ ಎಗ್ ರೋಲ್ ಮಿಸ್ ಮಾಡ್ಕೋಬೇಡಿ..!
ಚಿಕನ್ ಎಗ್ ರೋಲ್
  • Share this:
ನೀವು ಕಾಟಿ ರೋಲ್‌ ಅನ್ನು ತುಂಬಾ ಇಷ್ಟಪಡ್ತೀರಾ? ಹಾಗಾ ನಿಮಗೆ ಇಷ್ಟವಾಗುವ ಬಾಯಲ್ಲಿ ನೀರೂರಿಸುವ ರುಚಿಯಾದ ತುಂಬಾ ಫೇಮಸ್ ಆದ ಸ್ಪೆಷಲ್ ಕಾಟಿ ರೋಲ್ ಸಿಗೋದು ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ. ಇದು ತುಂಬಾ ಟೇಸ್ಟಿಯೂ ಹೌದು. ತಿಂದರೆ ಮತ್ತೆ ಮತ್ತೆ ತಿನ್ನಬೇಕು ಎನ್ನುವಷ್ಟು ರುಚಿಯಾಗಿರುತ್ತದೆ. ಆದರೆ ಇದಕ್ಕಿಂತ ಮತ್ತೊಂದು ರುಚಿಯಾದ ರೋಲ್ ಇದೆ. ಅದುವೇ ಚಿಕನ್ ಎಗ್ ರೋಲ್. ಚಿಕನ್, ಮಟನ್, ವೆಜ್, ಸಾಸ್, ಮಸಾಲ ಹೀಗೆ ಖಾರ, ಹುಳಿ, ಸಿಹಿ, ಮಸಾಲೆ ಹೀಗೆ ಎಲ್ಲ ರುಚಿ ಒಂದರಲ್ಲೇ ಸಿಗುವ ದಿ ಬೆಸ್ಟ್ ಟೇಸ್ಟ್ ಚಿಕನ್ ಎಗ್ ರೋಲ್ ಕೋಲ್ಕತಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಇದು ಪ್ರಪಂಚದ ದೊಡ್ಡ ಚಿಕನ್ ಎಗ್ ರೋಲ್ ಕೂಡ ಹೌದು.

ಇತ್ತೀಚೆಗೆ ಇಂಡಿಯಾ ಈಟ್ ಮೇನಿಯಾ ತನ್ನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪ್ರಪಂಚದ ಅತಿ ದೊಡ್ಡದಾದ ಚಿಕನ್ ಎಗ್ ರೋಲ್ ಮಾಡುವುದು ಹೇಗೆ ಎಂಬ ವಿಡಿಯೋ ಅಪ್‍ಲೋಡ್ ಮಾಡಿತ್ತು. ಇದು ಕೊಲ್ಕತಾ ಗಾರಿಯಾ ಹಟ್ ಬಳಿಯ ಬೀದಿ ಬದಿಯ ಸಣ್ಣ ಅಂಗಡಿಯಲ್ಲಿ ತಯಾರಿಸಲಾಗುತ್ತದೆ. ನೋಡುವುದಕ್ಕೆ ಸಣ್ಣ ಶಾಪ್ ಎನಿಸಿದರೂ ರುಚಿಗೆ ಹೆಸರುವಾಸಿ. ಈ ವಿಡಿಯೋವನ್ನು 2 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಈ ರೋಲ್ ಪರೋಟ ಮಾಡಲು ಬಳಸುವ ಹಿಟ್ಟಿನಿಂದ ಮಾಡಲಾಗುತ್ತದೆ. 4 ದೊಡ್ಡ ಗಾತ್ರದ ಪರೋಟ ಹಿಟ್ಟಿನ ಉಂಡೆಗಳನ್ನು ಸೇರಿಸಿ ಮಾಡುವ ಈ ರೋಲ್ 26 ಇಂಚು ಇರುತ್ತದೆ.

ಚಿಕನ್ ಎಗ್ ರೋಲ್ ಮಾಡುವುದು ಹೇಗೆ?

ಮೊದಲು 4 ದೊಡ್ಡ ಗಾತ್ರದ ಪರೋಟ ಹಿಟ್ಟಿನ ಉಂಡೆಗಳನ್ನು ತೆಗೆದುಕೊಂಡು ಸ್ವಲ್ಪ ಎಣ್ಣೆ ಹಾಕಿ ಸ್ವಲ್ಪ ಅಗಲವಾಗಿ ಉಜ್ಜಿ ಹತ್ತು ನಿಮಿಷಗಳ ಕಾಲ ಎತ್ತಿಡಬೇಕು. ನಂತರ ಪುನಃ ನಮಗೆ ಬೇಕಾಗುವಷ್ಟು ದೊಡ್ಡದಾಗಿ ಉಜ್ಜಬೇಕು. ದೊಡ್ಡದಾಗಿ ನಾದಿದ ಮೇಲೆ ಚಪಾತಿ ಬೇಯಿಸುವ ತವಾದ ಮೇಲೆ ಬೇಯಿಸಿಕೊಳ್ಳಬೇಕು. ಬೆಂದ ಮೇಲೆ ಅದೇ ತವಾಕ್ಕೆ ಎಣ್ಣೆ ಹಾಕಿ ಎಣ್ಣೆಯಲ್ಲಿಯೂ ಕೆಂಪಾಗುವ ರೀತಿಯಲ್ಲಿ ಬೇಯಿಸಿಕೊಳ್ಳಬೇಕು. ಬೆಂದ ಬಳಿಕ ಅದನ್ನು ಎತ್ತಿಡಬೇಕು.

ಇದೆಲ್ಲ ಆದ ನಂತರ ಮತ್ತೆ ಅದೇ ತವಾಕ್ಕೆ ಎಣ್ಣೆಹಾಕಬೇಕು. ಎಣ್ಣೆ ಕಾಯುವ ಹೊತ್ತಿಗೆ ಮೂರು ಮೊಟ್ಟೆಗಳ ಹಳದಿ ಭಾಗವನ್ನು ಒಂದು ಬೌಲ್‍ಗೆ ಹಾಕಿ ಚೆನ್ನಾಗಿ ಕಲಸಿ ತವಾದ ಮೇಲೆ ಅಗಲಕ್ಕೆ ಸುರಿಯಬೇಕು. ತದ ನಂತರ ಎಣ್ಣೆಯಲ್ಲಿ ಬೇಯಿಸಿಟ್ಟುಕೊಂಡಿದ್ದ ಪರೋಟವನ್ನು ಮೊಟ್ಟೆ ಹಳದಿ ಭಾಗ ಸುರಿದಿದ್ದ ತವಾದ ಮೇಲೆ ಹಾಕಿ ಒಟ್ಟಿಗೆ ಬೇಯಿಸಿಕೊಳ್ಳಬೇಕು. ಹೀಗೆ ಮೊದಲಿಗೆ ರೋಲ್ ಮಾಡಿಕೊಳ್ಳಬೇಕು.





ಇದೆಲ್ಲ ಮುಗಿದ ಮೇಲೆ ಮೊಟ್ಟೆ ಮಿಶ್ರಿತ ಪರೋಟದ ಮೇಲೆ ಮೊದಲು ಕೋಸು, ಕ್ಯಾರೇಟ್ ಹೀಗೆ ನಾನಾ ತರಕಾರಿಗಳಿಂದ ತಯಾರಿಸಿದ ಮಸಾಲ ಮಿಕ್ಸ್ ವೆಜ್ ಪಲ್ಯ, ಚಿಕನ್ ಕಬಾಬ್, ಮಟನ್ ಕಬಾಬ್, ಪನ್ನಿರ್ ಟಿಕ್ಕಾ ಕಬಾಬ್, ಸೋಯಾ ಚಾಂಪ್, ಮಟನ್ ಶಮಿ ಕಬಾಬ್ ಇವುಗಳನ್ನು ಒಂದರ ನಂತರ ಒಂದನ್ನು ಉದ್ದವಾಗಿ ಹರಡುತ್ತಾ ಹೋಗಬೇಕು. ಇದಾದ ನಂತರ ಬೆಂದ ಮೊಟ್ಟೆಯ ತುರಿ, ಚೀಜ್, ಟೊಮ್ಯಾಟೋ ಕೆಚಪ್, ಈರುಳ್ಳಿ, ಗ್ರೀನ್‍ಚಿಲ್ಲಿ ಸಾಸ್, ಚಾಟ್ ಮಸಾಲ, ಇನ್ನು ಎರಡು ವಿಧದ ಸ್ಪೆಷಲ್ ಮಸಾಲ ಹಾಕಲಾಗುತ್ತದೆ.

ಇದಾದ ನಂತರ ನಿಧಾನವಾಗಿ ಈ ಎಲ್ಲ ಮಿಶ್ರಣದ ರೋಲ್‌ ಅನ್ನು ಸುತ್ತಿ ಕೊಡುತ್ತಾರೆ. ಇದು ತುಂಬಾ ಟೇಸ್ಟಿ ಹಾಗೂ ತುಂಬಾ ದೊಡ್ಡದಾದ ಚಿಕನ್ ಎಗ್ ರೋಲ್ ತಯಾರಾಗುತ್ತದೆ. ಒಂದು ರೋಲ್ ತೆಗೆದುಕೊಂಡರೆ ನಾಲ್ವರು ತಿನ್ನುವಷ್ಟು ದೊಡ್ಡದಾಗಿರುತ್ತದೆ. ಈ ರೋಲ್‍ನ ಬೆಲೆ ಕೇವಲ 349 ರೂ. ಮಾತ್ರ. ಈ ರೋಲ್. ನೀವು ಒಮ್ಮೆ ಕೋಲ್ಕತಾಕ್ಕೆ ಹೋದರೆ ಈ ರೋಲ್ ತಿನ್ನೋದು ಮಾತ್ರ ಮರೆಯಬೇಡಿ.
First published: April 7, 2021, 1:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories