• Home
  • »
  • News
  • »
  • trend
  • »
  • Trending: ಕಳೆದುಹೋದ ಚೆಕ್​ನ ಮೊತ್ತ 40 ಕೋಟಿ ರೂಪಾಯಿ! ಹಿಂತಿರುಗಿಸಿದಾಗ ಸಿಕ್ಕಿದ್ದೇನು ಗೊತ್ತಾ?

Trending: ಕಳೆದುಹೋದ ಚೆಕ್​ನ ಮೊತ್ತ 40 ಕೋಟಿ ರೂಪಾಯಿ! ಹಿಂತಿರುಗಿಸಿದಾಗ ಸಿಕ್ಕಿದ್ದೇನು ಗೊತ್ತಾ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇಲ್ಲೊಂದು ಒಬ್ಬ ವ್ಯಕ್ತಿಗೆ 40 ಕೋಟಿ ರೂಪಾಯಿ ಹೊಂದಿದ ಚೆಕ್ ಸಿಕ್ಕಿದ್ದು ಅದನ್ನು ಅವನಿಗೆ ಊಹೆ ಮಅಡಲು ಆಗುತ್ತಿರಲಿಲ್ಲ. ಆದರೆ  ಅವನು ಆ ಚೆಕ್ಗೆ ಸಂಬಂಧಿಸಿದ ಕಂಪನಿಗೆ ಪ್ರಾಮಾಣಿಕವಾಗಿ ಒಪ್ಪಿಸಿದ್ದಾರೆ.

  • Share this:

    ಒಮ್ಮೊಮ್ಮೆ ಏನೆಲ್ಲ ವಿಚಿತ್ರ ಸಂಗತಿಗಳು ನಡೆಯುತ್ತವೆ ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮಲ್ಲಿ ಹಲವರಿಗೆ ಅದೆಷ್ಟೋ ಬಾರಿ ನಡೆಯುವಾಗ ಆಕಸ್ಮಿಕವಾಗಿ ಹಣ (Money) ಸಿಗುತ್ತವೆ. ಈ ರೀತಿಯ ಹಲವಾರು ಉದಾಹರಣೆಗಳಿವೆ. ಕೆಲವು ಬಾರಿ ಕಳೆದುಹೋದ ಚೆಕ್ (Cheque) ಹಾಳೆಗಳೂ ಸಹ ಸಾಕಷ್ಟು ದೊರೆತಿರುವ ಬಗ್ಗೆ ಕೇಳಿದ್ದೇವೆ. ಆದರೆ, ಅವೆಲ್ಲವನ್ನು ಒಂದೊಮ್ಮೆ ಮೆಲುಕು ಹಾಕಿದರೆ ಜರ್ಮನಿಯ ಈ ವ್ಯಕ್ತಿಗೆ ಸಿಕ್ಕ ಆ ಕಳೆದುಹೋದ ಚೆಕ್ ಮೊತ್ತವನ್ನು ನೋಡಿದರೆ ತಲೆ ತಿರುಗತ್ತದೆ. ಈ ರೀತಿಯ  ಚೆಕ್​ಗಳು ಸಿಗುವುದು ಬಹಳ ವಿರಳ ಆದರೆ ಇಲ್ಲೊಂದು ಕಳೆದು ಹೋದ ಚೆಕ್​ನಲ್ಲಿದ್ದ ಹಣ 40 ಕೋಟಿ (40 Crore) ರೂಪಾಯಿಯಾಗಿದೆ.


    ಇಲ್ಲೊಂದು ಒಬ್ಬ ವ್ಯಕ್ತಿಗೆ 40 ಕೋಟಿ ರೂಪಾಯಿ ಹೊಂದಿದ ಚೆಕ್ ಸಿಕ್ಕಿದ್ದು ಅದನ್ನು ಅವನಿಗೆ ಊಹೆ ಮಅಡಲು ಆಗುತ್ತಿರಲಿಲ್ಲ. ಆದರೆ  ಅವನು ಆ ಚೆಕ್ಗೆ ಸಂಬಂಧಿಸಿದ ಕಂಪನಿಗೆ ಪ್ರಾಮಾಣಿಕವಾಗಿ ಒಪ್ಪಿಸಿದ್ದಾರೆ.


    ಅನೋವರ್​​ ಜಿ ಜರ್ಮನ್ ಪ್ರಜೆಗೆ ಚೆಕ್ ದೊರಕಿದ್ದು:


    ಹೌದು, ಅನೋವರ್ ಜಿ ಎಂಬ ಜರ್ಮನ್ ಪ್ರಜೆಯೊಬ್ಬ ತನ್ನ ತಾಯಿಯನ್ನು ಭೇಟಿ ಮಾಡಿ ಮನೆಗೆ ಮರಳುವಾಗ ಮೈದಾನದಲ್ಲಿ ಏನೋ ಒಂದು ಹಾಳೆ ಹಾರುತ್ತಿರುವುದು ಕಂಡುಬಂದಿತು. ಅದನ್ನು ಅವನು ಹೋಗಿ ತೆಗೆದುಕೊಂಡಾಗ ಅದೊಂದು ಚೆಕ್ ಹಾಳೆಯಾಗಿತ್ತು ಅದು ಕೂಡ ಕ್ರಾಸ್ ಮಾಡಿರುವ ಚೆಕ್ ಆಗಿತ್ತು.


    ಇದನ್ನೂ ಓದಿ: ಕೆಲಸಗಾರರು ಧರಿಸುವ ವಿಭಿನ್ನ ಬಣ್ಣದ ಹೆಲ್ಮೆಟ್​​ಗಳು ಯಾವುದರ ಸೂಚಕ? ಇಲ್ಲಿದೆ ಮಾಹಿತಿ


    ಇಲ್ಲಿನ ಜನಪ್ರೀಯ ಚಾಕೊಲೇಟ್ ಕ್ಯಾಂಡಿ ತಯಾರಕರಾದ ಹರಿಬೋ ಎಂಬ ಕಂಪನಿಗೆ ಸಂದಾಯವಾಗಬೇಕಿದ್ದ ಚೆಕ್ ಅದಾಗಿತ್ತು. ಇನ್ನೂ ವಿಶೇಷವೆಂದರೆ ಅದರಲ್ಲಿ ಪಾವತಿಸಬೇಕಾಗಿದ್ದ ಮೊತ್ತ 4.8 ಮಿಲಿಯನ್ ಯುರೋಗಳಾಗಿತ್ತು. ಅಂದರೆ ಇದು ಭಾರತೀಯ ರೂಪಾಯಿಗಳಲ್ಲಿ 40 ಕೋಟಿಗೂ ಅಧಿಕ ಮೊತ್ತ.


    ಸಾಂಕೇತಿಕ ಚಿತ್ರ


    ಚೆಕ್ ನೋಡಿ ಆಚ್ಚರಿಗೊಂಡ ಅನೋವರ್:


    ಇಷ್ಟೊಂದು ಪ್ರಮಾಣದ ಹಣವನ್ನು ಅನೋವರ್ ಗೆ ಉಚ್ಛರಿಸಲೂ ಸಾಧ್ಯವಾಗಿಲ್ಲ ಎಂದು ಹೇಳಿಕೊಂಡಿರುವುದಾಗಿ ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ. ಇಷ್ಟು ದೊಡ್ಡ ಮೊತ್ತದ ಹಣದ ಚೆಕ್ ಸಿಕ್ಕ ನಂತರ ಅನೋವರ್ ಸ್ವಲ್ಪ ಯೋಚಿಸಿ ಅದನ್ನು ಹಿಂತಿರುಗಿಸಲು ನಿರ್ಧರಿಸಿದ್ದಾನೆ. ಅದರಂತೆ ಅವನು ಆ ಹರಿಬೋ ಕಂಪನಿಯನ್ನು ಸಂಪರ್ಕಿಸಿ ಸಿಕ್ಕ ಚೆಕ್ ಬಗ್ಗೆ ಹೇಳಿದ್ದಾನೆ.


    ಇಲ್ಲಿನ ಸೂಪರ್ ಮಾರ್ಕೆಟ್ ಒಂದು ಹರಿಬೊ ಕಂಪನಿಗೆ ಹಣ ಸಂದಾಯ ಮಾಡಲು ಆ ಚೆಕ್ ಅನ್ನು ನೀಡಿದ್ದು ಗೊತ್ತಾಗಿದೆ. ತಕ್ಷಣ ಹರಿಬೊ ಕಂಪನಿಯ ವಕೀಲರು ಅನೋವರ್ ನನ್ನು ಕುರಿತು ಆ ಚೆಕ್ ಅನ್ನು ನಾಶಪಡಿಸಿ ಅದರ ದೃಢೀಕರಣವನ್ನು ತಮಗೆ ಕಳುಹಿಸಿಕೊಡಲು ಹೇಳಿದ್ದಾರೆ. ಅನೋವರ್ ಅವರು ವಕೀಲರು ಹೇಳಿದಂತೆಯೇ ಮಾಡಿದ್ದಾನೆ.


    ಪ್ರಾಮಾಣಿಕವಾಗಿ ಕಂಪನಿಗೆ ಚೆಕ್ ಒಪ್ಪಿಸಿದ ಅನೋವರ್:


    ಅಷ್ಟಕ್ಕೂ ಅನೋವರ್ ಇಷ್ಟು ದೊಡ್ಡ ಮೊತ್ತದ ಚೆಕ್ ಬಗ್ಗೆ ಕಂಪನಿಗೆ ಪ್ರಾಮಾಣಿಕವಾಗಿ ಹೇಳಿದ್ದರಿಂದ ಅವನಲ್ಲೂ ಏನೋ ಒಂದು ನಿರೀಕ್ಷೆ ಮೂಡಿರಬಹುದು. ಅದಕ್ಕೆ ತಕ್ಕಂತೆಯೇ ಕೆಲ ದಿನಗಳಲ್ಲಿ ಅನೋವರ್ ಗೆ ಕಂಪನಿ ವತಿಯಿಂದ ಒಂದು ಉಡುಗೊರೆ ದೊರೆತಿದ್ದು ಅದರಲ್ಲಿ ಕೆಲ ಚಾಕೊಲೇಟ್ ಹಾಗೂ ಕ್ಯಾಂಡಿಗಳು ಮಾತ್ರವೆ ಇದ್ದವು ಎಂಬುದಾಗಿ ಅನೋವರ್ ಹೇಳಿದ್ದಾನೆಂದು ಮಾಧ್ಯಮದಲ್ಲಿ ವರದಿಯಾಗಿದೆ. ಅಲ್ಲದೆ, ಅನೋವರ್ ಗೆ ಖುದ್ದು ಇದು ಬೇಸರ ಮೂಡಿಸಿದ್ದು ಇದು ನಿಜಕ್ಕೂ ಕೆಳ ಮಟ್ಟದ ಉಡುಗೊರೆ ಎಂದು ಬೇಸರ ವ್ಯಕ್ತಪಡಿಸಿರುವುದಾಗಿ ಮಾಧ್ಯಮದಲ್ಲಿ ವರದಿಯಾಗಿದೆ.


    ಸಾಮಾಜಿಕ ಜಾಲತಾಣದಲ್ಲಿ ಜನರ ಪ್ರತಿಕ್ರಿಯೆ:


    ತದನಂತರ ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಪ್ರಕಟಗೊಂಡಾಗ ಪರ ಹಾಗೂ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ. ಈ ನಡುವೆ ಕ್ಯಾಂಡಿ ತಯಾರಕ ಹರಿಬೊ ಮಾಧ್ಯಮಕ್ಕೆ ಹೇಳಿರುವಂತೆ ಆ ಚೆಕ್ ಕ್ರಾಸ್ ಮಾಡಲಾಗಿತ್ತು ಹಾಗೂ ಅವರಿಂದಲ್ಲದೆ ಅದನ್ನು ಯಾರೂ ಸಹ ಕ್ಯಾಶ್ ಮಾಡಿಕೊಳ್ಳಲು ಸಾಧ್ಯವಿರಲಿಲ್ಲ.


    ಈ ಬಗ್ಗೆ ಒಬ್ಬ ಬಳಕೆದಾರರು, "ಹರಿಬೊ ಬೇಕಿದ್ದರೆ ಆ ಚೆಕ್ ನೀಡಿದವರಿಗೆ ಇನ್ನೊಂದು ಚೆಕ್ ನೀಡುವಂತೆ ಕೇಳಬಹುದಾಗಿತ್ತು. ಇದು ಆ ವ್ಯಕ್ತಿಗೆ ನಾಲ್ಕು ಮಿಲಿಯನ್ ಸಿಕ್ಕಿತು ಎಂಬುದನ್ನು ಅರ್ಥೈಸಬೇಕಾಗಿಲ್ಲ, ಆ ವ್ಯಕ್ತಿ ಏನನ್ನು ಬಯಸುತ್ತಿದ್ದ, ತನಗೆ ಸಿಕ್ಕಿದುದರ ಶುಲ್ಕವನ್ನೇ?" ಎಂದು ಪ್ರಶ್ನಿಸಿದ್ದಾರೆ.


    ಇನ್ನೊಬ್ಬ ಬಳಕೆದಾರರು, "ನೋಡಿ ಇಲ್ಲೊಬ್ಬ ವ್ಯಕ್ತಿ ಸಿಹಿ ತಿನಿಸು ತಯಾರಕರಿಗೆ ಸಲ್ಲಬೇಕಾಗಿದ್ದ ನಾಲ್ಕು ಮಿಲಿಯನ್ ಮೊತ್ತದ ಚೆಕ್ ಹುಡುಕಿದ್ದಾನೆ. ಆದರೆ, ಆ ತಯಾರಕರಿಂದ ಅವನಿಗೆ ಸಿಕ್ಕಿದ್ದು ಕೇವಲ ಆರು ಕ್ಯಾಂಡಿಗಳು ಮಾತ್ರ" ಎಂದು ವ್ಯಂಗ್ಯವಾಡಿದ್ದಾರೆ.


    ಮಗದೊಬ್ಬರು, "ಈ ವ್ಯಕ್ತಿಗೆ ಹರಿಬೊದ ನಾಲ್ಕು ಮಿಲಿಯನ್ ಮೊತ್ತದ ಚೆಕ್ ಸಿಕ್ಕಿದೆ, ಆದರೆ ಹರಿಬೊ ಮಾತ್ರ ಆ ವ್ಯಕ್ತಿಗೆ ಆರು ಯುರೋ ಮೌಲ್ಯದ ಕ್ಯಾಂಡಿ ಧನ್ಯವಾದ ಉಡುಗೊರೆ ನೀಡಿದೆ" ಎಂದು ಕುಟುಕಿದ್ದಾರೆ.

    Published by:Prajwal B
    First published: