ಕಾರಿನಲ್ಲಿ ಸಿಕ್ಕಿದ 7 ಲಕ್ಷ ರೂ. ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಚಾಲಕ

ಈ ಹಿನ್ನೆಲೆಯಲ್ಲಿ ವಿಮಾನ ಟಿಕೆಟ್​ ಕ್ಯಾನ್ಸಲ್​ ಮಾಡಿದ ಜೆರಿ, ಪೊಲೀಸರಿಗೆ ದೂರು ನೀಡಿದ್ದರು.

zahir | news18
Updated:December 13, 2018, 10:50 PM IST
ಕಾರಿನಲ್ಲಿ ಸಿಕ್ಕಿದ 7 ಲಕ್ಷ ರೂ. ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಚಾಲಕ
ಸಾಂದರ್ಭಿಕ ಚಿತ್ರ
zahir | news18
Updated: December 13, 2018, 10:50 PM IST
ಟ್ಯಾಕ್ಸಿ ವಾಹನಗಳಲ್ಲಿ ಕೆಲವೊಮ್ಮೆ ಮರೆತು ಬಿಡುವ ಸಣ್ಣ ಪುಟ್ಟ ವಸ್ತುಗಳು ವಾಪಾಸ್​ ಸಿಗುವುದೇ ಅಪರೂಪ. ಅಂತ್ರದಲ್ಲಿ ಕಂತೆಗಟ್ಟಲೇ ಹಣ ಸಿಕ್ಕರೆ..? ಥಾಯ್ಲೆಂಡ್​ನ ಕ್ಯಾಬ್​ ಚಾಲಕನಿಗೆ ಇತ್ತೀಚೆಗೆ ಅಂತಹದೊಂದು ಬ್ಯಾಗ್ ಸಿಕ್ಕಿದೆ. ಆದರೆ ಆ ಬ್ಯಾಗ್​ನ್ನು ಮಾಲೀಕನಿಗೆ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದು ವಿಶ್ವದ ಗಮನ ಸೆಳೆದಿದ್ದಾನೆ.

ಬ್ಯಾಂಕಾಕ್​ ನಗರದಲ್ಲಿ ಕ್ಯಾಬ್​ ಚಾಲಕನಾಗಿರುವ ಅವರ ಕಾರಿನಲ್ಲಿ ಪ್ರಯಾಣಿಕರೊಬ್ಬರು ಸುಮಾರು 9800 ಡಾಲರ್ ( ಸುಮಾರು 7 ಲಕ್ಷ) ​ ಹೊಂದಿದ್ದ ಬ್ಯಾಗ್​ ಬಿಟ್ಟು ಹೋಗಿದ್ದರು. ಹಣ ತುಂಬಿದ್ದ ಬ್ಯಾಗ್​ನ್ನು ಡ್ರೈವರ್​ ಪೊಲೀಸರಿಗೆ ಒಪ್ಪಿಸಿದ್ದಾರೆ. ಹೀಗೆ ಪ್ರಾಮಾಣಿಕತೆಯ ಮೂಲಕ ಬ್ಯಾಗ್​ ಒಪ್ಪಿಸಿದ  ಚಾಲಕನನ್ನು ವೀರಪೋಲ್ ಕ್ಲಮ್​ಸಿರಿ ಎಂದು ಗರುತಿಸಲಾಗಿದೆ.

47 ರ ಹರೆಯದ ಜೆರಿ ಹಾರ್ಟ್ ಕೆಲ ದಿನಗಳ ಹಿಂದೆ ಬ್ಯಾಂಕಾಂಗ್​ನಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸಲು ಮುಂದಾಗಿದ್ದರು. ಏರ್​ಪೋರ್ಟ್​ ತನಕ ಟ್ಯಾಕ್ಸಿ ಕಾರಿನಲ್ಲಿ ಪ್ರಯಾಣಿಸಿದ್ದರು. ಏರ್​ಪೋರ್ಟ್​ ತಲುಪುತ್ತಿದ್ದಂತೆ ಅವಸರದಲ್ಲಿ ಓಡಿ ಹೋಗಿದ್ದ ಜೆರಿ ಅವರಿಗೆ ತನ್ನ ಹಣದ ಬ್ಯಾಗ್​ ಕಾರಿನಲ್ಲೇ  ಬಿಟ್ಟು ಬಂದಿರುವುದು ನೆನಪಾಗಿದೆ.

ಇದನ್ನೂ ಓದಿ: ನಿಮ್ಮ ಕರೆಗಳನ್ನು ಕದ್ದಾಲಿಸುತ್ತಾರೆಂಬ ಸಂಶಯವೇ? ಹಾಗಿದ್ರೆ ಹೀಗೆ ಮಾಡಿ

ಈ ಹಿನ್ನೆಲೆಯಲ್ಲಿ ವಿಮಾನ ಟಿಕೆಟ್​ ಕ್ಯಾನ್ಸಲ್​ ಮಾಡಿದ ಜೆರಿ, ಪೊಲೀಸರಿಗೆ ದೂರು ನೀಡಿದ್ದರು. ಇದೇ ವೇಳೆ ಮತ್ತೊಂದೆಡೆ ಕಾರು ವಾಶ್ ಮಾಡುವಾಗ ಕ್ಲಮ್​ಸಿರಿಗೆ ಹಣ ತುಂಬಿರುವ ಬ್ಯಾಗ್ ಸಿಕ್ಕಿದೆ. ಜೆರಿ ಬ್ಯಾಗ್​ಗಾಗಿ ಕ್ಲಮ್​ಸಿರಿಯನ್ನು ಹುಡುಕಿ ಬರುವಷ್ಟರಲ್ಲಿ ಬ್ಯಾಗ್​ ಪೊಲೀಸರ ಮೂಲಕ ಜೆರಿ ಹಾರ್ಟ್​​ಗೆ ಕೈ ತಲುಪಿದೆ. ಡ್ರೈವರ್​ನ ಈ ಪ್ರಮಾಣಿಕತೆಯನ್ನು ನೋಡಿದ ಜೆರಿ ಹಾರ್ಟ್​ ಆಶ್ಚರ್ಯಚಕಿತರಾಗಿದ್ದರು.

ಇದನ್ನೂ ಓದಿ: ವಾಟ್ಸ್​ಆ್ಯಪ್​ನಲ್ಲಿ ನಿಮ್ಮ ನಂಬರನ್ನು ಬ್ಲಾಕ್ ಮಾಡಿದ್ದರೆ ತಿಳಿದುಕೊಳ್ಳುವುದು ಹೇಗೆ?
ಕಳೆದು ಹೋದ ಬ್ಯಾಗ್​ನಲ್ಲಿ ಸುಮಾರು ಒಂಭತ್ತು ಸಾವಿರದಷ್ಟು ಹಣವಿತ್ತು. ಈ ಬ್ಯಾಗ್​ ಯಾವತ್ತೂ ನನ್ನ ಕೈಗೆ ಹಣ ಸೇರುತ್ತದೆ ಎಂದು ಯಾವತ್ತೂ ಭಾವಿಸಿರಲಿಲ್ಲ. ಆದರೆ ಈ ಡ್ರೈವರ್​ನ ಪ್ರಾಮಾಣಿಕತೆಗೆ ನಾನು ಕೃತಜ್ಞನಾಗಿದ್ದೇನೆ ಎಂದು ಜೆರಿ ತಿಳಿಸಿದರು.
Loading...

@viralPress

ಮೂಲತಃ ಅಮೆರಿಕ ಪ್ರಜೆಯಾಗಿರುವ ಜೆರಿಯ ಬ್ಯಾಗ್ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ, ವೀರಪೋಲ್ ಕ್ಲಮ್​ಸಿರಿ ಪ್ರಾಮಾಣಿಕತೆಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಶಂಸೆಗಳ ಸುರಿಮಳೆಯಾಗಿದೆ.

ಇದನ್ನೂ ಓದಿ: ಇಎಸ್​ಐ ನೇಮಕಾತಿ: 5200 ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

First published:December 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ