[Video] ಅಂಡರ್​ವೇರ್​ ಧರಿಸಿ ಕಳ್ಳತನಕ್ಕೆ ಮುಂದಾದ ಭೂಪ !


Updated:July 15, 2018, 5:23 PM IST
[Video] ಅಂಡರ್​ವೇರ್​ ಧರಿಸಿ ಕಳ್ಳತನಕ್ಕೆ ಮುಂದಾದ ಭೂಪ !
Leander Police Department/ Facebook

Updated: July 15, 2018, 5:23 PM IST
ಟೆಕ್ಸಾಸ್​: ಕಳ್ಳರು, ದರೋಡೆಕೋರರು ತಮ್ಮ ಮುಖಕ್ಕೆ ಮಾಸ್ಕ್, ಬಟ್ಟೆ ಅಥವಾ ಹೆಲ್ಮೆಟ್​ಗಳನ್ನು ಹಾಕಿಕೊಂಡು ಕಳ್ಳತನ ಮಾಡುವುದು ಮಾಮೂಲಿ. ಆದರೆ ಟೆಕ್ಸಾಸ್​ನ ಈ ಕಳ್ಳ ಮಾತ್ರಾ ಕೊಂಚ ಭಿನ್ನವಾಗಿಯೇ ಕಳ್ಳತನಕ್ಕೆ ಮುಂದಾಗಿದ್ದು, ಅಂತರ್ಜಾಲದಲ್ಲಿ ವೈರಲ್​ ಆಗಿದ್ದಾರೆ.

ಹೌದು! ಮುಖಕ್ಕೆ ಅಂಡರ್‌ವೇರ್‌ ಧರಿಸಿ ಕಚೇರಿಯೊಂದಕ್ಕೆ ನುಗ್ಗಿ ಕಳ್ಳತನ ಮಾಡಲು ಪ್ರಯತ್ನಿಸಿದ ಕಳ್ಳನಿಗಾಗಿ ಅಮೆರಿಕದ ಟೆಕ್ಸಾಸ್‌ನ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಈ ಕಳ್ಳತನ ಜೂ.6ರಂದು ನಡೆದಿದ್ದು, ತನ್ನ ಅರ್ಧ ಮುಖಕ್ಕೆ ಒಳಉಡುಪನ್ನು ಹಾಕಿ ಕಳ್ಳತನ ನಡೆಸಿದ್ದಾರೆ. ಕಚೇರಿ ಅಧಿಕಾರಿಗಳು ಮೊದಲಿಗೆ ಈತನ ವಿಡಿಯೋವನ್ನು ಎಲ್ಲೂ ಶೇರ್​ ಮಾಡದಂತೆ ಪೊಲೀಸರ ಬಳಿ ಕೇಳಿಕೊಂಡಿದ್ದರು. ಆದರೆ ಕಳ್ಳ ಈವರೆಗೂ ಪತ್ತೆಯಾಗದ ಕಾರಣ ಲಿಯಾಂಡರ್​ ಪೊಲೀಸ್​ ಡಿಪಾರ್ಟ್​ಮೆಂಟ್​ ಅಧಿಕಾರಿಗಳು ಆತ ಕಚೇರಿ ಪ್ರವೇಶಿಸುವ ದೃಶ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.



ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಿಮಗೊಂದುವೇಳೆ ಈತನ ಗುರುತು ಸಿಕ್ಕರೆ ಪೊಲೀಸರಿಗೆ ತಿಳಿಸದಿರಲು ಮರೆಯದಿರಿ.
First published:July 15, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ