HOME » NEWS » Trend » TET CERTIFICATIONS WILL BE VALID FOR LIFETIME STG SKTV

TET Certifications: ಟಿಇಟಿ ಪ್ರಮಾಣ ಪತ್ರಗಳಿಗೆ ಅಜೀವನಪರ್ಯಂತ ಮಾನ್ಯತೆ !

TET Cretificate: ಈ ಹಿಂದೆ, ಸಿಂಧುತ್ವವನ್ನು ಏಳು ವರ್ಷಗಳಿಗೆ ಸೀಮಿತಗೊಳಿಸಲಾಗಿತ್ತು. ಆದರೆ 2011 ರಿಂದಲೇ ಅನ್ವಯವಾಗುವಂತೆ ಅದನ್ನು ಜೀವಿತಾವಧಿಗೆ ವಿಸ್ತರಿಸಲಾಗುವುದು ಎಂದು ಹೇಳಿದೆ. ಟಿಇಟಿ ಪ್ರಮಾಣಪತ್ರಗಳ ಮಾನ್ಯತೆಯ ಅವಧಿಯನ್ನು 2020ರ ಸೆಪ್ಟೆಂಬರ್‌ನಲ್ಲಿ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (ಎನ್‌ಸಿಟಿಇ) ಚರ್ಚಿಸಿತ್ತು.

Trending Desk
Updated:June 23, 2021, 12:48 PM IST
TET Certifications: ಟಿಇಟಿ ಪ್ರಮಾಣ ಪತ್ರಗಳಿಗೆ ಅಜೀವನಪರ್ಯಂತ ಮಾನ್ಯತೆ !
ಸಾಂದರ್ಭಿಕ ಚಿತ್ರ
  • Share this:

TET certification: ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಅರ್ಹತಾ ಪ್ರಮಾಣಪತ್ರದ ಮಾನ್ಯತೆಯ ಅವಧಿಯನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ‘ನಿಶಾಂಕ್’ ಹೇಳಿದ್ದಾರೆ. ಈ ಹಿಂದೆ, ಸಿಂಧುತ್ವವನ್ನು ಏಳು ವರ್ಷಗಳಿಗೆ ಸೀಮಿತಗೊಳಿಸಲಾಗಿತ್ತು. ಆದರೆ 2011 ರಿಂದಲೇ ಅನ್ವಯವಾಗುವಂತೆ ಅದನ್ನು ಜೀವಿತಾವಧಿಗೆ ವಿಸ್ತರಿಸಲಾಗುವುದು ಎಂದು ಹೇಳಿದೆ. ಟಿಇಟಿ ಪ್ರಮಾಣಪತ್ರಗಳ ಮಾನ್ಯತೆಯ ಅವಧಿಯನ್ನು 2020ರ ಸೆಪ್ಟೆಂಬರ್‌ನಲ್ಲಿ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (ಎನ್‌ಸಿಟಿಇ) ಚರ್ಚಿಸಿತ್ತು. ಆದರೆ ಶಿಕ್ಷಣ ಸಚಿವಾಲಯದ ಅನುಮೋದನೆಯ ನಂತರ ಅದು ಈಗ ಜಾರಿಯಲ್ಲಿದೆ. ಪೋಖ್ರಿಯಾಲ್ ಪ್ರಕಾರ, ಶಿಕ್ಷಕರಾಗಿ ವೃತ್ತಿಜೀವನವನ್ನು ಮುಂದುವರಿಸಲು ಆಸಕ್ತಿ ಹೊಂದಿರುವವರಿಗೆ ಉದ್ಯೋಗಾವಕಾಶವನ್ನು ಹೆಚ್ಚಿಸುವಲ್ಲಿ ಇದು ಉತ್ತಮ ಹೆಜ್ಜೆಯಾಗಿದೆ ಎಂದರು.


ಈಗಾಗಲೇ ಏಳು ವರ್ಷಗಳ ಅವಧಿ ಮುಗಿದ ಅಭ್ಯರ್ಥಿಗಳಿಗೆ ಟಿಇಟಿ ಪ್ರಮಾಣಪತ್ರಗಳನ್ನು ಮರುಮೌಲ್ಯಮಾಪನ ಮಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯ / ಕೇಂದ್ರಾಡಳಿತಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.



ಟಿಇಟಿಯನ್ನು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ನಡೆಸಲಾಗುತ್ತದೆ. ಶಾಲೆಗಳಲ್ಲಿ ಬೋಧಿಸಲು ಆಸಕ್ತಿ ಹೊಂದಿರುವವರು ಸಿಟಿಇಟಿ ಅಥವಾ ರಾಜ್ಯ-ನಿರ್ದಿಷ್ಟ ಟಿಇಟಿಯಲ್ಲಿ ಉತ್ತೀರ್ಣರಾಗಿರಬೇಕು. ಕೇಂದ್ರೀಯ ಪ್ರೌಢಶಾಲಾ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು (ಸಿಟಿಇಟಿ) ನಿರ್ವಹಿಸುತ್ತದೆ. ಇದು ಪ್ರಾಥಮಿಕ ಶಾಲೆಗಳಲ್ಲಿ ಕಲಿಸಲು ಯಾರನ್ನು ನೇಮಿಸಿಕೊಳ್ಳುತ್ತದೆ ಎಂಬುದನ್ನು ನಿರ್ಧರಿಸುತ್ತದೆ.


ಇನ್ನೂ ಬೋಧನಾ ಕ್ಷೇತ್ರದಲ್ಲಿ ಉದ್ಯೋಗವಕಾಶ ಹೆಚ್ಚಿಸುವುದರಿಂದ ಅತಂತ್ರ ಸ್ಥಿತಿಯಲ್ಲಿರುವ ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ಹೊಸ ಬೆಳಕು ಮೂಡಿದಂತಾಗಿದೆ.


ಈ ವರ್ಷದ ಪರೀಕ್ಷೆಯ ದಿನಾಂಕಗಳು ಇನ್ನೂ ಬಿಡುಗಡೆಯಾಗಿಲ್ಲವಾದರೂ ವರ್ಷಕ್ಕೊಮ್ಮೆ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ವರ್ಷ, ಸಿಟಿಇಟಿ ಜೊತೆಗೆ ರಾಜ್ಯಮಟ್ಟದ ವಿವಿಧ ಪರೀಕ್ಷೆಗಳನ್ನು ಮುಂದೂಡಲಾಗಿದೆ.


ಪ್ರತಿ ಟಿಇಟಿ ಒಂದೇ ಮಾದರಿಯಲ್ಲಿ ನಡೆಯುತ್ತದೆ. ಪ್ರತಿ ಪರೀಕ್ಷೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ: ಪೇಪರ್ I ಮತ್ತು ಪೇಪರ್ II. 1 ರಿಂದ 6 ನೇ ತರಗತಿಗಳನ್ನು ಕಲಿಸಲು ಬಯಸುವವರು ಪೇಪರ್ 1 ಅನ್ನು ತೆಗೆದುಕೊಂಡರೆ, ಉಳಿದವರು ಪೇಪರ್ 2 ಅನ್ನು ತೆಗೆದುಕೊಳ್ಳುತ್ತಾರೆ.


ಟಿಇಟಿ ಅಭ್ಯರ್ಥಿ ಅರ್ಹತಾ ಮಾನದಂಡಗಳು:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ 45 ಪ್ರತಿಶತದೊಂದಿಗೆ ಪದವೀಧರರಾಗಿರಬೇಕು.
ಅಭ್ಯರ್ಥಿಗಳು ಶಿಕ್ಷಣದಲ್ಲಿ ಪದವೀಧರರಾಗಿರಬೇಕು ಅಥವಾ ಅಗತ್ಯವಿರುವ ಯಾವುದೇ ಶಿಕ್ಷಕರ ತರಬೇತಿ ಕಾರ್ಯಕ್ರಮ ಅಥವಾ ಕೋರ್ಸ್ ಅನ್ನು ಪೂರ್ಣಗೊಳಿಸಬೇಕು.


ಟಿಇಟಿ (ಶಿಕ್ಷಕರ ಅರ್ಹತಾ ಪರೀಕ್ಷೆ) ಒಬ್ಬ ವ್ಯಕ್ತಿಯನ್ನು ಶಾಲಾ ಶಿಕ್ಷಕನಾಗಿ ಪರಿಗಣಿಸಲು ಅಗತ್ಯವಾದ ಅರ್ಹತೆಗಳಲ್ಲಿ ಒಂದಾಗಿದೆ. ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು 35 ವರ್ಷಕ್ಕಿಂತ ಹೆಚ್ಚಿರಬಾರದು.



Youtube Video

ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (ಎನ್‌ಸಿಟಿಇ) ಫೆಬ್ರವರಿ 11, 2011 ರಂದು ಟಿಇಟಿಯನ್ನು ರಾಜ್ಯ ಸರ್ಕಾರಗಳು ಮಾರ್ಗದರ್ಶಿಯಂತೆ ಟಿಇಟಿ ಪ್ರಮಾಣಪತ್ರವು ಟಿಇಟಿ ಉತ್ತೀರ್ಣರಾದ ದಿನಾಂಕದಿಂದ ಏಳು ವರ್ಷಗಳವರೆಗೆ ಮಾನ್ಯವಾಗಿರುತ್ತದೆ ಎಂದು ಈ ಮೊದಲು ತಿಳಿಸಿತ್ತು. ಈಗ ಅದು ಅಜೀವಪರ್ಯಂತ ಮಾನ್ಯತೆ ಗಳಿಸುವ ಮೂಲಕ ಶಿಕ್ಷಣ ಕ್ಷೇತ್ರದ ಉದ್ಯೋಗಾಕಾಂಕ್ಷಿಗಳಿಗೆ ಹೊಸ ಭರವಸೆ ನೀಡಿದೆ.


First published: June 23, 2021, 12:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories