Tequila shot: ಇವರ ಮಂಡಿ ನೋವಿನ ಶಮನಕ್ಕೆ ಟಕಿಲಾ ಶಾಟ್ ಬೇಕಂತೆ! ಹೀಗೆ ಹೇಳಿದ್ದು ಯಾರು ಗೊತ್ತಾ

ಪೋಪ್ ಫ್ರಾನ್ಸಿಸ್ ಅವರಿಗೆ ವೈದ್ಯರು ನೀಡಿರುವ ಈ ಎಲ್ಲ ಸಲಹೆಗಳಿಗಿಂತ ತಮ್ಮದೆ ಆದ ಒಂದು ವಿಶೇಷ ಉಪಾಯವೇ ತಲೆಯಲ್ಲಿ ಕುಳಿತಿದೆ ಅನಿಸುತ್ತಿದೆ. ಹಾಗಾಗಿಯೇ ಅವರು ಅದಕ್ಕೆ ತಮ್ಮದೆ ಆದ ಪರಿಹಾರ ಮಾರ್ಗವೊಂದನ್ನು ಕಂಡುಕೊಂಡಿದ್ದು ಆ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಾರೆ ಎಂದು ಹೇಳಬಹುದು.

ಟಕಿಲಾ ಶಾಟ್

ಟಕಿಲಾ ಶಾಟ್

  • Share this:
ಕ್ಯಾಥೋಲಿಕ್ ಧರ್ಮಗುರು (Catholic priest) ಹಾಗೂ ಕ್ರೈಸ್ತರಿಂದ (Christian) ಪೂಜಿಸಲಾಗುವ ಪೋಪ್ ಫ್ರಾನ್ಸಿಸ್ (Pope Francis) ಅವರು ಕಳೆದ ಕೆಲ ಸಮಯದಿಂದ ತೀವ್ರವಾದ ಮಂಡಿ ನೋವಿನಿಂದ (Knee pain) ಬಳಲುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದರು ಧರ್ಮಗುರುಗಳಿಗೆ ಫಿಸಿಕಲ್ ಥೆರೆಪಿ (Physical Therapy) ಸೇರಿದಂತೆ ವ್ಹೀಲ್ ಚೇರ್ ವರೆಗೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲು ಸಲಹೆ ನೀಡಿದ್ದಾರೆ. ಆದರೆ, ಪೋಪ್ ಫ್ರಾನ್ಸಿಸ್ ಅವರಿಗೆ ವೈದ್ಯರು ನೀಡಿರುವ ಈ ಎಲ್ಲ ಸಲಹೆಗಳಿಗಿಂತ ತಮ್ಮದೆ ಆದ ಒಂದು ವಿಶೇಷ ಉಪಾಯವೇ ತಲೆಯಲ್ಲಿ ಕುಳಿತಿದೆ ಅನಿಸುತ್ತಿದೆ. ಹಾಗಾಗಿಯೇ ಅವರು ಅದಕ್ಕೆ ತಮ್ಮದೆ ಆದ ಪರಿಹಾರ ಮಾರ್ಗವೊಂದನ್ನು ಕಂಡುಕೊಂಡಿದ್ದು ಆ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಾರೆ ಎಂದು ಹೇಳಬಹುದು.

ಹೌದು ಇತ್ತೀಚಿನ ಅವರು ಒಂದು ವಿಡಿಯೋ ಕ್ಲಿಪ್ ನಲ್ಲಿ ಪೋಪ್ ಅವರು ತಮ್ಮ ಈ ಕಾಲು ನೋವಿಗೆ ಒಂದು ಟಕಿಲಾ ಶಾಟ್ ಉತ್ತಮವಾಗಿದೆ ಎಂದು ತಮಾಷೆಯಾಗಿ ಹೇಳಿದ್ದನ್ನು ಕಾಣಬಹುದಾಗಿದ್ದು ಸದ್ಯ ಆ ವಿಡಿಯೋ ಈಗ ವೈರಲ್ ಆಗುತ್ತಿದೆ ಎನ್ನಲಾಗಿದೆ.

ಕಾಲಿನ ತೀವ್ರ ನೋವಿನ ಶಮನಕ್ಕೆ ಎಲ್ಲಕ್ಕಿಂತ ಟಕಿಲಾ ಶಾಟ್ ಒಂದು ಉತ್ತಮ
ಕೆಲ ಸಮಯದ ಹಿಂದೆ ಮೆಕ್ಸಿಕನ್ ನಿಂದ ಬಂದಿದ್ದ ಕೆಲ ಭಾಷಣಕಾರರೊಂದಿಗೆ ವ್ಯಾಟಿಕನ್ ಸಿಟಿಯ ಸೇಂಟ್ ಪೀಟರ್ ಸ್ಕ್ವೇರ್ ನಲ್ಲಿ ಪೋಪ್ ಅವರು ಸಂಭಾಷಣೆಯೊಂದನ್ನು ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಪೋಪ್ ಫ್ರಾನ್ಸಿಸ್ ತಮ್ಮ ಕಾಲಿನ ತೀವ್ರ ನೋವಿನ ಶಮನಕ್ಕೆ ಎಲ್ಲಕ್ಕಿಂತ ಟಕಿಲಾ ಶಾಟ್ ಒಂದು ಉತ್ತಮ ಪರಿಹಾರವಾಗಿದೆ ಎಂದು ತಮಾಷೆಪೂರಕವಾಗಿ ಮಾತನಾಡಿದ್ದು ವಿಡಿಯೋದಲ್ಲಿ ದಾಖಲಾಗಿದ್ದು ಸದ್ಯ ಆ ವಿಡಿಯೋ ಈಗೆ ಎಲ್ಲರ ಗಮನ ಸೆಳೆಯುತ್ತಿದೆ ಎನ್ನಲಾಗಿದೆ.

ಪಾದ್ರಿಯ ಪ್ರಶ್ನೆಗೆ ಧರ್ಮಗುರು ಪೋಪ್ ಹೇಳಿದ್ದು ಹೀಗೆ!
ಸಿಟಿವಿ ನ್ಯೂಸ್ ಹಂಚಿಕೊಂಡಿರುವ ವಿಡಿಯೋ ಕ್ಲಿಪ್ ಒಂದರಲ್ಲಿ ಮೆಕ್ಸಿಕನ್ ದೇಶದ ಪಾದ್ರಿಯೊಬ್ಬರು ಧರ್ಮಗುರು ಪೋಪ್ ಅವರನ್ನು ಕುರಿತು "ನಿಮ್ಮ ಕಾಲು ಹಾಗೂ ಮಂಡಿ ಸ್ಥಿತಿ ಈಗ ಹೇಗಿದೆ" ಎಂದು ಕೇಳಿದಾಗ ಪೋಪ್ ಫ್ರಾನ್ಸಿಸ್ ಅವರು ವಿಡಂಬನಾತ್ಮಕವಾಗಿ ಈ ರೀತಿ ಉತ್ತರ ನೀಡಿದ್ದನ್ನು ಇಲ್ಲಿ ಕೇಳಬಹುದಾಗಿದೆ. ಮುಂದುವರೆಯುತ್ತ ಮೆಕ್ಸಿಕನ್ ಪಾದ್ರಿಯು "ನೀವು ನೋವಿನ ಇಂತಹ ಸ್ಥಿತಿಯಲ್ಲಿದ್ದರೂ ನಗುಮುಖ ಹಾಗೂ ಸಂತಸದೊಂದಿಗೆ ನಮ್ಮ ಜೊತೆ ಇಲ್ಲಿ ಸಮಯ ಕಳೆಯುತ್ತಿರುವುದಕ್ಕೆ ಧನ್ಯವಾದಗಳು. ಭವಿಷ್ಯದ ಧರ್ಮಗುರುಗಳಿಗೆ ನೀವೊಬ್ಬ ಮಾದರಿಯಾಗಿರುವಿರಿ" ಎಂದು ಪ್ರತಿಕ್ರಯಿಸುತ್ತಾರೆ.

ಇದನ್ನೂ ಓದಿ: Carpet Python: ಮನೆಯೊಳಗಿತ್ತು 4 ಬೃಹತ್ ಹೆಬ್ಬಾವು! ಶಾಕಿಂಗ್ ವಿಡಿಯೋ ವೈರಲ್

ಈ ಸಂದರ್ಭದಲ್ಲಿ ತಮ್ಮ ಮಾತುಗಳನ್ನು ಮುಂದುವರೆಸಿದ ಧರ್ಮಗುರು ಪೋಪ್ ಫ್ರಾನ್ಸಿಸ್ ಮುಂದಿನ ತಮ್ಮ ನುಡಿಗಳಿಂದ ಅಲ್ಲಿ ನೆರೆದಿದ್ದವರೆಲ್ಲರಲ್ಲಿ ನಗುವಿನ ಅಲೆಗಳುಂಟಾಗುವಂತೆ ಮಾಡುತ್ತಾರೆ. ಅವರು, "ನಿಮಗೆ ಗೊತ್ತಿದೆಯಲ್ಲವೆ, ನನ್ನ ಕಾಲಿನ ಪರಿಹಾರಕ್ಕಾಗಿ ನನಗೇನು ಬೇಕೆಂದು? ಸ್ವಲ್ಪ ಟಕಿಲಾ ಸಾಕು" ಎಂದು ಹೇಳಿದಾಗ ಅಲ್ಲಿದ್ದವರೆಲ್ಲರ ಮುಖದಲ್ಲಿ ನಗು ಮೂಡುತ್ತದೆ.

ಪೋಪ್ ಅವರ ಈ ಉತ್ತರವನ್ನು ಪರಿಗಣಿಸುವ ಮೆಕ್ಸಿಕನ್ ಪಾದ್ರಿ ತಮ್ಮ ಪ್ರತಿಕ್ರಿಯೆ ನೀಡುತ್ತ, "ಮುಂದೊಂದು ದಿನ ನಾವು ಸಾಂಟಾ ಮಾರ್ತಾಗೆ ಹೋಗುವ ಅವಕಾಶ ಬಂದರೆ ನಿಮಗಾಗಿ ಒಂದು ಚಿಕ್ಕ ಬಾಟಲ್ ಟಕಿಲಾ ತರುವೆವು" ಎಂದು ಹೇಳುತ್ತಾರೆ.

ಪೋಪ್ ಅವರಿಗೆ ಚೀಯರ್ಸ್
85 ವರ್ಷ ಪ್ರಾಯದ ಅರ್ಜೆಂಟೈನಾ ಮೂಲದ ಪೋಪ್ ಅವರ ಈ ವಿಚಾರಧಾರೆ ಸದ್ಯ ನೆಟ್ಟಿಗರ ಮನದಲ್ಲಿ ಒಂದು ರೀತಿಯ ವಿಸ್ಮಯತೆಯ ಭಾವ ಮೂಡಿಸಿದೆ ಎಂದರೂ ತಪ್ಪಾಗಲಾರದು. ಈ ಬಗ್ಗೆ ಒಬ್ಬರು "ಇವರಿಗೆ ಮೊದಲು ಆ ಡ್ರಿಂಕ್ ಒದಗಿಸಿ" ಎಂದು ಕಾಮೆಂಟ್ ಮಾಡಿದರೆ, ಇನ್ನೊಬ್ಬರು, "ನನ್ನ ಬಳಿ ನಿಜಕ್ಕೂ ಸ್ವಲ್ಪ ಟಕಿಲಾ ಇದೆ, ನಾನು ಕೊಡಬಲ್ಲೆ, ಆದರೆ ನಾವು ಫೆಬ್ರುವರಿ 6, 2022ರ ದಿನಕ್ಕೆ ಮರಳುವುದು ಹೇಗೆ" ಎಂದು ಪ್ರಶ್ನಿಸಿದ್ದಾರೆ.

ಮಗದೊಬ್ಬರು "ಕ್ಯಾಥೋಲಿಕ್ ಚರ್ಚುಗಳು ಈಗ ಹೊಸಯುಗಕ್ಕೆ ಹೊಂದಿಕೊಳ್ಳುವ ಸಮಯ ಬಂದಿದೆ, ಪೋಪ್ ಅವರಿಗೆ ಚೀಯರ್ಸ್" ಎಂದು ಹೇಳುವ ಒಬ್ಬರಿಗೊಬ್ಬರು ಕೈ ಹೊಡೆದುಕೊಳ್ಳುವ ಐಕಾನ್ ಹಾಕಿದ್ದಾರೆ.

ಇದನ್ನೂ ಓದಿ:  Longevity Women: ಇತ್ತೀಚೆಗಷ್ಟೇ 128ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ದಕ್ಷಿಣ ಆಫ್ರಿಕಾದ ಈ ವೃದ್ಧೆ!

ಅಸೋಸಿಯೇಟ್ ಪ್ರೆಸ್ ವರದಿ ಮಾಡಿರುವಂತೆ, ಪೋಪ್ ಫ್ರಾನ್ಸಿಸ್ ಅವರು ಇತ್ತೀಚಿನ ಕೆಲ ಸಮಯದಿಂದ ವ್ಹೀಲ್ ಚೇರ್ ಹಾಗೂ ಊರುಗೋಲನ್ನು ಬಳಸುತ್ತಿದ್ದಾರೆ. ಅವರು ತಿಂಗಳುಗಳಿಂದ ಬಲ ಮಂಡಿಯಲ್ಲಿ ಲಿಗಾಮೆಂಟುಗಳ ನೋವನ್ನು ಅನುಭವಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲಿನ ಬಾತ್ಮಿದಾರರೊಬ್ಬರ ಪ್ರಕಾರ, ಪೋಪ್ ಹಿಂದೆಂದಿಗಿಂತಲೂ ಈಗ ಉತ್ತಮವಾಗಿದ್ದಾರೆ ಎಂದು ತಿಳಿದುಬಂದಿದ್ದು ಪ್ರತಿನಿತ್ಯ ಅವರು ಎರಡು ಗಂಟೆಗಳ ಕಾಲ ಫಿಸಿಯೋಥೆರೆಪಿಗೆ ಒಳಪಡುತ್ತಿದ್ದಾರೆನ್ನಲಾಗಿದೆ.
Published by:Ashwini Prabhu
First published: