ಮಂಚ್​ ಮುರುಗನ ಚಾಕೊಲೇಟ್​ ಪ್ರೇಮ!


Updated:May 6, 2018, 3:41 PM IST
ಮಂಚ್​ ಮುರುಗನ ಚಾಕೊಲೇಟ್​ ಪ್ರೇಮ!

Updated: May 6, 2018, 3:41 PM IST
ನ್ಯೂಸ್​ 18 ಕನ್ನಡ

ಅಲೆಪ್ಪಿ: ದೇವರಿಗೆ ಪುಷ್ಪ, ಹಣ್ಣು ಹಂಪಲುಗಳನ್ನು ಸಮರ್ಪಿಸುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ತೆಕ್ಕಂ ಪಳನಿ ಬಾಲಸುಬ್ರಹ್ಮಣ್ಯಂ ದೇವರಿಗೆ ಮಾತ್ರಾ ಇದ್ಯಾವುದೂ ಬೇಡ, ಬದಲಾಗಿ ಚಾಕೊಲೇಟು ಸಮರ್ಪಸಬೇಕಂತೆ.

ಹೌದು! ಅಲೆಪ್ಪಿಯ ತೆಕ್ಕಂ ಪಳನಿ ಬಾಲಸುಬ್ರಹ್ಮಣ್ಯಂ ದೇವಸ್ಥಾನಕ್ಕೆ ಇನ್ನೊಂದು ಹೆಸರೇ ಮಂಚ್​ ಮುರುಗ ಎಂದು. ಹೆಚ್ಚಿನ ಭಕ್ತರು ಈ ದೇವರಿಗೆ ಹೂ-ಹಣ್ಣು ನೀಡುವ ಬದಲು ಚಾಕೊಲೇಟನ್ನೇ ಭಕ್ತಿಯಿಂದ ಅರ್ಪಿಸುತ್ತಾರೆ. ಪ್ರಮುಖ ಬ್ರಾಂಡ್‌ ಒಂದರ ಚಾಕೊಲೇಟ್‌ ಬಾರ್‌ಗಳನ್ನು ದೇವರಿಗೆ ಅರ್ಪಿಸಿದ ಬಳಿಕ ಭಕ್ತರಿಗೆ ಅವುಗಳನ್ನೇ ಪ್ರಸಾದ ರೂಪದಲ್ಲಿ ನೀಡಲಾಗುತ್ತಿದೆ.ಈ ದೇವಸ್ಥಾನದಲ್ಲಿ ಬಾಲಮುರುಗನನ್ನು ಪೂಜಿಸುವುದರಿಂದ, ಪರೀಕ್ಷಾ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಈ ದೇವಾಸ್ಥಾನಕ್ಕೆ ಆಗಮಿಸುತ್ತಾರೆ.  ಹೀಗಾಗಿ ಯಾರೊ ಒಬ್ಬರು ಭಕ್ತಿಯಲ್ಲಿ ಚಾಕೊಲೇಟ್​ನ್ನು ಸಮರ್ಪಿಸಿದ್ದಾರೆ. ಕಾಲಕ್ರಮೇಣ ಈ ಆಚಾರ ನಡೆದುಕೊಂಡು ಬಂದಿದೆ ಎಂದು ದೇವಸ್ಥಾನ ಆಡಳುತ ಮಂಡಳಿಯವರು ಹೇಳಿದ್ದಾರೆ.

ಈ ದೇವಸ್ಥಾನದಲ್ಲಿ ಯಾವುದೇ ಜಾತಿ, ಧರ್ಮ, ಅಂತಸ್ತುಗಳ ಭೇದವಿಲ್ಲದೆ ಎಲ್ಲ ಜನರೂ ದೇವ ಮುರುಗನಿಗೆ ಚಾಕೊಲೇಟ್‌ಗಳನ್ನೇ ಅರ್ಪಿಸುತ್ತಾರೆ. ಸಹಜವಾಗಿಯೇ ಈ ದೇವಸ್ಥಾನಕ್ಕೆ ಮಕ್ಕಳೇ ಹೆಚ್ಚಾಗಿ ಬರುತ್ತಾರೆ.
First published:May 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...