Optical Illusion: ಈ ಚಿತ್ರ ನೋಡಿದ ತಕ್ಷಣ ನಿಮಗೆ ಏನು ಕಾಣುತ್ತಿದೆ? ಹಾಗಿದ್ರೆ ಜೀವನದಲ್ಲಿ ಬರೋ ಸಮಸ್ಯೆಗಳನ್ನು ನೀವು ಹೇಗೆ ನಿಭಾಯಿಸ್ತಿರಿ ಅಂತ ನೋಡಿ

ಕೆಲವೊಮ್ಮೆ ಜನರು ತಮಗೆ ಹೇಗೆ ಕಾಣಿಸುತ್ತದೆಯೋ ಮತ್ತು ಅವರು ಆ ಚಿತ್ರದಲ್ಲಿ ಏನನ್ನು ಕಲ್ಪನೆ ಮಾಡಿಕೊಳ್ಳುತ್ತಾರೋ, ಅದೇ ಅವರಿಗೆ ಮೊದಲು ಕಾಣುವುದು. ನೀವು ಆಪ್ಟಿಕಲ್ ಭ್ರಮೆಗಳು ಎಂಬುದನ್ನು ಎಂದಾದರೂ ಕೇಳಿದ್ದರೆ ನಿಮಗೆ ಈ ಚಿತ್ರಗಳು ಏಕೆ ಹೀಗೆ ಇರುತ್ತವೆ ಎಂದು ಬಹಳ ಚೆನ್ನಾಗಿಯೇ ಅರ್ಥವಾಗುತ್ತವೆ ಎಂದು ಹೇಳಬಹುದು.

ಚಿತ್ರದಲ್ಲಿ ಏನಿದೆ ಗುರುತಿಸಿ

ಚಿತ್ರದಲ್ಲಿ ಏನಿದೆ ಗುರುತಿಸಿ

  • Share this:
ಕೆಲವೊಂದು ಚಿತ್ರಗಳನ್ನು (Picture) ಕೆಲವೊಬ್ಬರಿಗೆ ತೋರಿಸಿದಾಗ ಅವರು ನೋಡುವ ದೃಷ್ಟಿಕೋನಗಳು (Orientation) ಬದಲಾಗಿರುತ್ತವೆ ಮತ್ತು ಅವರು ಊಹಿಸಿವುದು (imagine) ಬೇರೆ ಬೇರೆ ಆಗಿರುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು.. ಕೆಲವೊಮ್ಮೆ ಜನರು (People) ತಮಗೆ ಹೇಗೆ ಕಾಣಿಸುತ್ತದೆಯೋ ಮತ್ತು ಅವರು ಆ ಚಿತ್ರದಲ್ಲಿ ಏನನ್ನು ಕಲ್ಪನೆ ಮಾಡಿಕೊಳ್ಳುತ್ತಾರೋ, ಅದೇ ಅವರಿಗೆ ಮೊದಲು (First) ಕಾಣುವುದು. ನೀವು ಆಪ್ಟಿಕಲ್ ಭ್ರಮೆಗಳು (Optical illusion) ಎಂಬುದನ್ನು ಎಂದಾದರೂ ಕೇಳಿದ್ದರೆ ನಿಮಗೆ ಈ ಚಿತ್ರಗಳು ಏಕೆ ಹೀಗೆ ಇರುತ್ತವೆ ಎಂದು ಬಹಳ ಚೆನ್ನಾಗಿಯೇ ಅರ್ಥವಾಗುತ್ತವೆ (Meaning) ಎಂದು ಹೇಳಬಹುದು.

ವಿರಾಮದ ಸಮಯದಲ್ಲಿ ಮೆದುಳಿಗೆ ಸವಾಲು ನೀಡುವ ಚಿತ್ರಗಳು
ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರನ್ನು ಒಂದು ಕ್ಷಣ ಬೆರಗುಗೊಳಿಸುವ ಮತ್ತು ಗೊಂದಲಕ್ಕಿಡು ಮಾಡುವ ಈ ಚಿತ್ರಗಳು ನಿಮ್ಮ ವಿರಾಮದ ಸಮಯದಲ್ಲಿ ನಿಮ್ಮ ಮೆದುಳಿಗೆ ಒಂದು ಸವಾಲ್ ಎಂಬಂತೆ ಇರುತ್ತದೆ. ಈ ಅಮೂರ್ತ, ಆಕಾರ-ಬದಲಾಯಿಸುವ ಚಿತ್ರಗಳು ಒಬ್ಬ ವ್ಯಕ್ತಿಯನ್ನು ಅವರು ಹೇಗೆ ಗ್ರಹಿಸುತ್ತಾರೆ ಎಂಬುದರ ಆಧಾರದ ಮೇಲೆ ಮನೋವಿಶ್ಲೇಷಣೆಗೆ ಉತ್ತಮ ಮಾರ್ಗವಾಗಿದೆ.

ಇಂತಹ ಚಿತ್ರಗಳನ್ನು ನೋಡುವ ವಿಧಾನವು ನಮ್ಮ ಮೆದುಳಿನ ಪ್ರಬಲ ಭಾಗಕ್ಕೆ ಸಂಬಂಧಪಟ್ಟಿರುತ್ತದೆ ಮತ್ತು ಇದು ಜನರ ವ್ಯಕ್ತಿತ್ವದ ಗುಣಲಕ್ಷಣಗಳನ್ನು ಸಹ ಬಹಿರಂಗಪಡಿಸುತ್ತದೆ. ಒಂದು ವೆಬ್ಸೈಟ್ ‘ಯುವರ್ ಟ್ಯಾಂಗೋ ಡಾಟ್ ಕಾಂ ಪ್ರಕಾರ, ನೀವು ಜೀವನದಲ್ಲಿ ಸಮಸ್ಯೆಗಳನ್ನು ಹೇಗೆ ಪರಿಹರಿಸುತ್ತೀರಿ ಎಂಬುದನ್ನು ಬಹಿರಂಗಪಡಿಸುತ್ತದೆ ಎಂದು ಹೇಳಲಾಗುವ ಈ ಆಪ್ಟಿಕಲ್ ಭ್ರಮೆಯ ಬಗ್ಗೆ ತಿಳಿಯಿರಿ.

ನೀವು ಎಷ್ಟೇ ಅಸಾಂಪ್ರದಾಯಿಕವಾದ ಮಾರ್ಗವನ್ನು ತೆಗೆದುಕೊಂಡರೂ, ಪರಿಸ್ಥಿತಿಗಳಿಂದ ಹೊರಬರುವ ಮಾರ್ಗವನ್ನು ಸ್ವತಂತ್ರವಾಗಿ ಕಂಡು ಹಿಡಿಯುವ ನಿರ್ಣಾಯಕ ಸಮಸ್ಯೆ ಪರಿಹರಿಸುವವರೇ ಅಥವಾ ನೀವು ನಿರ್ಧಾರ ತೆಗೆದುಕೊಳ್ಳುವ ಮೊದಲು ತುಂಬಾ ಜನರ ಬಳಿ ಚರ್ಚಿಸುವವರೆ ಎಂದು ತಿಳಿದುಕೊಳ್ಳೋಣ ಬನ್ನಿ. ಇಲ್ಲಿ ಒಂದು ಚಿತ್ರವನ್ನು ನೀಡಲಾಗಿದೆ ಅದನ್ನು ನೀವು ತುಂಬಾನೇ ಹತ್ತಿರದಿಂದ ನೋಡಿ ಮತ್ತು ನೀವು ಮೊದಲು ನೋಡುವ ವಿಷಯದ ಬಗ್ಗೆ ಮಾನಸಿಕ ಟಿಪ್ಪಣಿ ಮಾಡಿಕೊಳ್ಳಿ. ಆಪ್ಟಿಕಲ್ ಭ್ರಮೆಯನ್ನು ಒಳಗೊಂಡಿರುವ ಯಾವುದೇ ಪ್ರಥಮ ವ್ಯಕ್ತಿತ್ವ ಪರೀಕ್ಷೆಗೆ ಎರಡನೇ ಭಾಗವು ಪ್ರಮುಖವಾಗಿದೆ.

ಮೊದಲು ನಾಯಿಯ ಬಾಲವನ್ನು ನೋಡಿದ್ದೀರಾ?
ನೀವು ಆ ಚಿತ್ರದಲ್ಲಿ ಮೊದಲು ನಾಯಿಯ ಹಿಂಗಾಲು ಮತ್ತು ಬಾಲವನ್ನು ನೋಡಿದರೆ, ನೀವು ಒಬ್ಬ ಸ್ವತಂತ್ರ ಚಿಂತಕ ಮತ್ತು ಯಾವಾಗಲೂ ಬೇರೆವರಿಗಿಂತಲೂ ಸ್ವಲ್ಪ ವಿಭಿನ್ನವಾಗಿ ಚಿಂತನೆ ಮಾಡುವಂತಹ ವ್ಯಕ್ತಿ ಎಂದು ಇದು ಸೂಚಿಸುತ್ತದೆ, ನಿಮಗೆ ತಿಳಿಯದೆ ಇರುವಂತಹ ಸಮಸ್ಯೆಗಳಿಗೆ ಧುಮಕಲು ಹಿಂದೆ ಮುಂದೆ ನೋಡುವುದಿಲ್ಲ.

ಇದನ್ನೂ ಓದಿ:  Unknown Facts: ಮನೆ, ವಾಹನಗಳಿಗೆ ನಿಂಬೆ ಮತ್ತು ಮೆಣಸಿನಕಾಯಿ ನೇತುಹಾಕೋದ್ಯಾಕೆ? ನಿಜಾಂಶ ಇಲ್ಲಿದೆ

ನಿಮ್ಮ ಟಾಂಗೊ ವಿವರಿಸಿದಂತೆ "ನೀವು ಬೇರೆ ಯಾರಿಂದಲೂ ಸಹಾಯ ಪಡೆಯಲು ಇಷ್ಟಪಡುವುದಿಲ್ಲ, ನಿಮ್ಮಿಂದ ಏನಾದರೂ ತಪ್ಪಾದಲ್ಲಿ ಕೂಡಲೇ ಅದನ್ನು ಒಪ್ಪಿಕೊಂಡು ತಲೆ ತಗ್ಗಿಸುವಿರಿ ಮತ್ತು ಆ ಸಮಸ್ಯೆಯನ್ನು ಕೂಡಲೇ ಪರಿಹರಿಸಲು ಏನನ್ನಾದರೂ ಪರಿಹಾರವನ್ನು ಹುಡುಕುತ್ತೀರಿ" ಎಂದು ತಿಳಿಸುತ್ತದೆ.

ನೀವು ಮೊದಲು ನಾಯಿಯ ಮೂಗನ್ನು ಗುರುತಿಸಿದ್ದೀರಾ?
ನೀವು ಆ ಚಿತ್ರದಲ್ಲಿ ಮೊದಲು ನಕಾರಾತ್ಮಕ ಜಾಗದಲ್ಲಿ ನಾಯಿಯ ಮೂಗನ್ನು ಗುರುತಿಸಿದ್ದರೆ ನಿಮಗೆ ನೀಡಲಾದ ಎಲ್ಲಾ ಮಾಹಿತಿಯ ಆಧಾರದ ಮೇಲೆ ನೀವು ತರ್ಕಬದ್ಧ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚು ಮತ್ತು ವಿಶ್ಲೇಷಣಾತ್ಮಕವಾಗಿ ಪರಿಹಾರವನ್ನು ಹುಡುಕುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹೇಳಬಹುದು.

ಇದನ್ನೂ ಓದಿ:   Love Story: ಈ ಜೋಡಿಯ ಒಂದು ಕಪ್ ಚಹಾದಿಂದ ವೈರಲ್ ಆಗ್ತಿದೆ ಇವರಿಬ್ಬರ ಲವ್ ಸ್ಟೋರಿ

ಆದಾಗ್ಯೂ, ಕೆಲವು ಜನರು ಮೊದಲ ನೋಟದಲ್ಲಿಯೇ ಈ ಎರಡೂ ಭ್ರಮೆಗಳನ್ನು ನೋಡಬಹುದು ಮತ್ತು ಇದರರ್ಥ ವಿಶ್ಲೇಷಣಾತ್ಮಕ ಸಮಸ್ಯೆ ಪರಿಹಾರ ಮತ್ತು ಸೃಜನಶೀಲ ಚಿಂತನ ಮಂಥನದ ನಡುವೆ ಸಮತೋಲನವನ್ನು ಸಾಧಿಸುವಲ್ಲಿ ಅವರು ಉತ್ತಮರಾಗಿದ್ದೀರಿ ಎಂದರ್ಥ. ಈ ಎರಡೂ ರೀತಿಯ ಜನರ ನಡುವೆಯಲ್ಲಿ ಅತ್ಯುತ್ತಮವಾಗಿ ಹೊಂದಿಕೊಳ್ಳುವ ಮತ್ತು ಯಾವುದೇ ಸಮಸ್ಯೆಗಳಿಗೆ ನೀವು ಪರಿಹಾರವನ್ನು ಹುಡುಕುವವರಾಗಿರುತ್ತೀರಿ ಎಂದು ಹೇಳಬಹುದು.
Published by:Ashwini Prabhu
First published: