• Home
  • »
  • News
  • »
  • trend
  • »
  • Telia Bhola fish: ಬಲೆಗೆ ಸಿಕ್ಕ ಈ ದೈತ್ಯ ಮೀನಿನ ಒಂದು ಕಿಲೋ ಮಾಂಸಕ್ಕೆ ಬರೋಬ್ಬರಿ 49,300 ರೂಪಾಯಿ!

Telia Bhola fish: ಬಲೆಗೆ ಸಿಕ್ಕ ಈ ದೈತ್ಯ ಮೀನಿನ ಒಂದು ಕಿಲೋ ಮಾಂಸಕ್ಕೆ ಬರೋಬ್ಬರಿ 49,300 ರೂಪಾಯಿ!

ಟೆಲಿಯಾ ಭೋಲಾ ಮೀನು

ಟೆಲಿಯಾ ಭೋಲಾ ಮೀನು

ಸುಮಾರು 7 ಅಡಿ ಉದ್ದದ 'ಟೆಲಿಯಾ ಭೋಲಾ' ಮೀನು ಅಂತಿಮವಾಗಿ 36 ಲಕ್ಷ ರೂಪಾಯಿಗಳಿಗೆ ಮಾರಾಟವಾಯಿತು. ಈ ಮೀನನ್ನು ಕೋಲ್ಕತ್ತಾದ ಕೆಎಂಪಿ ಎಂಬ ಸಂಸ್ಥೆ ಖರೀದಿಸಿದೆ. ಇದರ ಬೆಲೆ ನೋಡಿದರೆ ಇದರ 1 ಕೆಜಿ ಮಾಂಸವು 49,300 ರೂಪಾಯಿಗೆ ಮಾರಾಟವಾಯಿತು.

  • Trending Desk
  • 3-MIN READ
  • Last Updated :
  • Share this:

    ಸಾಮಾನ್ಯವಾಗಿ ಸಮುದ್ರದಲ್ಲಿ ಅಥವಾ ನದಿಯಲ್ಲಿ(sea or river) ಮೀನುಗಾರರು (fisherman)ಬಲೆ ಬೀಸಿದರೇ ಸಾಕು, ಮೀನುಗಳು(fishes) ಗುಂಪು ಗುಂಪಾಗಿ ಬಲೆಯಲ್ಲಿ ಸಿಕ್ಕಿ ಹಾಕಿಕೊಳ್ಳುವುದನ್ನು ನಾವು ನೋಡಿರುತ್ತೇವೆ. ಆದರೆ ತುಂಬಾ ದುಬಾರಿಯಾದ ದೈತ್ಯ ಮೀನು ತನ್ನ ಬಲೆಯಲ್ಲಿ ಸಿಕ್ಕಿಕೊಂಡರೆ ಮೀನುಗಾರರಿಗೆ ಆ ದಿನ ಮಾತ್ರ ಹಬ್ಬವೋ ಹಬ್ಬ. ನಾವೆಲ್ಲಾ ಮಾರುಕಟ್ಟೆಗೆ ಹೋಗಿ ಒಂದು ಕೆಜಿ ಮೀನಿನ ಮಾಂಸಕ್ಕೆ ಅಬ್ಬಬ್ಬಾ ಎಂದರೆ 100 ರಿಂದ 200 ರೂಪಾಯಿಯವರೆಗೆ ನೀಡುತ್ತೇವೆ, ಆದರೆ ಇಲ್ನೋಡಿ ಈ ಮೀನಿನ ಒಂದು ಕೆಜಿ ಮಾಂಸಕ್ಕೆ ಎಷ್ಟು ಹಣ ನೀಡಿದ್ದಾರೆ ಅಂತ.


    ಸುಂದರ್‌ಬನ್ ನದಿಯಲ್ಲಿ ದುಬಾರಿ ಮೀನು 

    ಪಶ್ಚಿಮ ಬಂಗಾಳದ ಸುಂದರ್‌ಬನ್ ನದಿಗಳಲ್ಲಿ ದೀರ್ಘಕಾಲದಿಂದ ಮೀನುಗಾರಿಕೆ ಮಾಡುತ್ತಿದ್ದ ಮೀನುಗಾರರಾದ ಬಿಕಾಶ್ ಬರ್ಮನ್ ಮತ್ತು ಅವರ ತಂಡದವರಿಗೆ ದೈತ್ಯ 'ಟೆಲಿಯಾ ಭೋಲಾ' ಎಂಬ ಮೀನು ತಮ್ಮ ಬಲೆಗೆ ಸಿಕ್ಕಿದ್ದು ತುಂಬಾನೇ ಖುಷಿ ಕೊಟ್ಟಿದೆ. ಏಕೆ ಅಂತೀರಾ? ಈ ದೈತ್ಯ ಮೀನಿನ 1 ಕೆಜಿಯ ಮಾಂಸದ ಬೆಲೆಯನ್ನು ನೀವು ಕೇಳಿದರೆ ಇಷ್ಟೊಂದು ದುಬಾರಿಯಾ ಎಂದು ಬೆಚ್ಚಿ ಬೀಳುವುದು ಗ್ಯಾರಂಟಿ. ಮೀನುಗಾರರು ತಮ್ಮ ಬಲೆಯಲ್ಲಿ ಸಿಕ್ಕಿಬಿದ್ದ ಈ ದೈತ್ಯಾಕಾರದ ಮೀನುವನ್ನು ಎಳೆಯಲು ತಮ್ಮ ಎಲ್ಲಾ ಶಕ್ತಿಯನ್ನು ಹಾಕಬೇಕಾಯಿತು. ಅದನ್ನು ಹಿಡಿದು ಮೇಲಕ್ಕೆತ್ತಿ ತಕ್ಷಣ ಮೀನುವನ್ನು ಸ್ಥಳೀಯ ಮಾರುಕಟ್ಟೆಗೆ ತಂದರು.


    36 ಲಕ್ಷ ರೂಪಾಯಿಗಳಿಗೆ ಮಾರಾಟ

    ಮೀನಿನ ಬೆಲೆ ಮಾರುಕಟ್ಟೆಯಲ್ಲಿ ತೀವ್ರವಾಗಿ ಏರಿತ್ತು. ಸುಮಾರು 7 ಅಡಿ ಉದ್ದದ 'ಟೆಲಿಯಾ ಭೋಲಾ' ಮೀನು ಅಂತಿಮವಾಗಿ 36 ಲಕ್ಷ ರೂಪಾಯಿಗಳಿಗೆ ಮಾರಾಟವಾಯಿತು. ಈ ಮೀನನ್ನು ಕೋಲ್ಕತ್ತಾದ ಕೆಎಂಪಿ ಎಂಬ ಸಂಸ್ಥೆ ಖರೀದಿಸಿದೆ. ಇದರ ಬೆಲೆ ನೋಡಿದರೆ ಇದರ 1 ಕೆಜಿ ಮಾಂಸವು 49,300 ರೂಪಾಯಿಗೆ ಮಾರಾಟವಾಯಿತು. ಆದರೆ ಈ ಮೀನು ಏಕೆ ಇಷ್ಟು ದುಬಾರಿಯಾಯಿತು? ಏಕೆಂದರೆ ಈ ಮೀನಿನ ಹೊಟ್ಟೆಯಲ್ಲಿ ಕೆಲವು ಅಮೂಲ್ಯವಾದ ಸಂಪನ್ಮೂಲಗಳನ್ನು ಹೊಂದಿದ್ದು, ಅದಕ್ಕೆ ಇದರ ಬೆಲೆ ಅಷ್ಟು ದುಬಾರಿಯಾಗಿದೆ ಎಂದು ಹೇಳಲಾಗುತ್ತಿದೆ.


    “ಗೋದಾವರಿ ಪುಲಾಸ” ಅತ್ಯಂತ ದುಬಾರಿ ಮೀನು

    ಈ ಸಂಪನ್ಮೂಲಗಳನ್ನು ವಿವಿಧ ರೀತಿಯ ಔಷಧಿಗಳು ಮತ್ತು ಇತರ ವಸ್ತುಗಳನ್ನು ತಯಾರಿಸಲು ಬಳಸಬಹುದು. ಮೀನುಗಾರ ಬರ್ಮನ್ ಅವರು ದೀರ್ಘಕಾಲದಿಂದ ಈ ವೃತ್ತಿಯಲ್ಲಿದ್ದಾರೆ. ಪ್ರತಿ ವರ್ಷ 'ಭೋಲಾ' ಮೀನು ಹಿಡಿಯಲು ಹೋಗುತ್ತೇನೆ, ಆದರೆ ದೈತ್ಯ ಮೀನುಗಳನ್ನು ಹಿಡಿಯುವುದು ಅಪರೂಪದ ಘಟನೆಯಾಗಿದೆ ಎಂದು ಹೇಳುತ್ತಾರೆ. “ಗೋದಾವರಿ ಪುಲಾಸ” ಅತ್ಯಂತ ದುಬಾರಿ ಮೀನು ಆಗಿದೆ ಎಂದು ಪರಿಗಣಿಸಲಾಗಿದೆ. ಗೋದಾವರಿ ನದಿಯಲ್ಲಿ ಈ ಮೀನು ಮಳೆಗಾಲದ ಪ್ರಾರಂಭದಲ್ಲಿ ಸಿಗುತ್ತವೆ” ಎಂದು ಇವರು ಹೇಳಿದ್ದಾರೆ.


    ಇದನ್ನೂ ಓದಿ: Viral News: ನಗರ ಜೀವನದ ಕಿರಿಕಿರಿಯಿಂದ ಬೇಸತ್ತು ದ್ವೀಪಕ್ಕೆ ವಲಸೆ ಹೋದ ಕುಟುಂಬ

    ಗೋದಾವರಿ ಜಿಲ್ಲೆಗಳಲ್ಲಿ ಮಳೆಗಾಲದಲ್ಲಿ, ಬೇಡಿಕೆಯ ಆಧಾರದ ಮೇಲೆ ಒಂದು ಕಿಲೋಗ್ರಾಂ ಪುಲಾಸ ಮೀನಿನ ಬೆಲೆಯು 5,000 ರೂಪಾಯಿಗಳಿಂದ 17,000 ರೂಪಾಯಿಗಳವರೆಗೆ ತಲುಪುತ್ತದೆ. ಈ ಋತುವಿನಲ್ಲಿ ಪುಲಾಸ ಗೋದಾವರಿ ಜಿಲ್ಲೆಯಾದ್ಯಂತ ಎಲ್ಲಾ ಮೀನು ಮಾರುಕಟ್ಟೆಗಳಲ್ಲಿ ಲಭ್ಯವಿರುತ್ತದೆ. ಎಲ್ಲಾ ರಾಜಕೀಯ ನಾಯಕರು ಮತ್ತು ಚಲನಚಿತ್ರ ಸೆಲೆಬ್ರಿಟಿಗಳು ಈ ಋತುವಿನಲ್ಲಿ ಈ ಪುಲಾಸ ಮೀನು ಖರೀದಿಸಲು ಆಸಕ್ತಿ ತೋರಿಸುತ್ತಾರೆ. ಕೆಲವು ಜನರು ತಮ್ಮ ಕೆಲಸವನ್ನು ಪೂರ್ಣಗೊಳಿಸಿಕೊಳ್ಳಲು ಈ ರಾಜಕೀಯ ನಾಯಕರನ್ನು ಮೆಚ್ಚಿಸಲು ಈ ಪುಲಾಸವನ್ನು ಉಡುಗೊರೆಯಾಗಿ ಕೊಡುತ್ತಾರೆ. ಆದ್ದರಿಂದ, ಆಂಧ್ರ ಪ್ರದೇಶ ರಾಜ್ಯದ ಗೋದಾವರಿ ಜಿಲ್ಲೆಗಳಲ್ಲಿಈ ಪುಲಾಸ ಮೀನಿನ ಕ್ರೇಜ್ ತುಂಬಾನೇ ಇದೆ.

    Published by:Kavya V
    First published: