Special Saree: ಬೆಂಕಿಪೊಟ್ಟಣದಲ್ಲಿ ಇಡೀ ಸೀರೆ ಮಡಚಿಡಲಾಗಿದೆ, ಎಷ್ಟು ಚೆನ್ನಾಗಿದೆ ನೋಡಿ

Women Fashion: ಮ್ಯಾಚ್‌ಬಾಕ್ಸ್‌ನಲ್ಲಿ ಹೊಂದಿಕೊಳ್ಳುವ ಕೈಯಿಂದ ನೇಯ್ದ ಸೀರೆಯನ್ನು ತಯಾರಿಸಲು 6 ದಿನಗಳನ್ನು ವಿಜಯ್ ತೆಗೆದುಕೊಂಡರಂತೆ. ಇದೇ ಸೀರೆ ತಯಾರಿಸಲು ಯಂತ್ರವನ್ನು ಬಳಸಿದರೆ ಮೂರು ದಿನಗಳನ್ನು ತೆಗೆದುಕೊಳ್ಳುತ್ತದೆ

ಬೆಂಕಿ ಪಟ್ಟಣ ಸೀರೆ

ಬೆಂಕಿ ಪಟ್ಟಣ ಸೀರೆ

  • Share this:
ಮಹಿಳೆಯರಿಗೆ(Women) ಸೀರೆ(Saree) ಅಂದ್ರೆ ಮುಗೀತು ಎಲ್ಲಿಲ್ಲದ ಪ್ರೀತಿ(Love). ಹಬ್ಬ(Festival), ಹರಿದಿನ, ಮದುವೆ ಇತ್ಯಾದಿ ಸಮಾರಂಭಗಳಿಗೆ ಮಿಸ್ ಇಲ್ದೇನೆ ಸೀರೆ ತೆಗೆದುಕೊಳ್ಳುತ್ತಾರೆ. ಅಷ್ಟರ ಮಟ್ಟಿಗೆ ಅವುಗಳ ಮೇಲೆ ಆಸೆ. ಅದರಲ್ಲೂ ಸೀರೆಗಳನ್ನು ಮಡಚಿ, ಜೋಡಿಸಿಟ್ಟುಕೊಳ್ಳುವುದು ಇನ್ನು ಖುಷಿ(Happiness). ನಾವು ನೀವೆಲ್ಲ ಸೀರೆಯನ್ನು ಮಡಚಿ ಬೀರು, ಪೆಟ್ಟಿಗೆಯಲ್ಲಿ ಇಡುವುದು ಸಾಮಾನ್ಯ. ಆದ್ರೆ ಇಲ್ಲೊಂದು ಸೀರೆ ತಯಾರಾಗಿದೆ ಅದನ್ನು ಬೆಂಕಿ ಪಟ್ಟಣದಲ್ಲಿ(Matchbox) ಮಡಚಿ ಇಡಬಹುದಂತೆ. ನಿಮಗೆ ಶಾಕ್(Shock) ಆಯ್ತುಅಲ್ವ.. ಬೆಂಕಿ ಪಟ್ಟಣದೊಳಗೆ ಸೀರೆನ ಹೇಗೆ ಮಡಚಿಡಬಹುದು ಇದೆಲ್ಲ ಸಾಧ್ಯನಾ ಅಂತ ತಲೆಯಲ್ಲಿ ನಾನಾ ಪ್ರಶ್ನೆ ಮೂಡಿದೆ. ಹೌದು ಕಣ್ರೀ ನೀವು ಕೇಳ್ತಿರೋದು ನಿಜಕ್ಕೂ ಸತ್ಯ. ಹಾಗಾದ್ರೆ ಯಾವ ಸೀರೆ, ಎಲ್ಲಿ ತಯಾರಾಗಿದೆ, ಹೇಗಿದೆ ನೋಡ್ಕೋ ಬಂದು ಬಿಡೋಣ ಬನ್ನಿ.

ಬೆಂಕಿ ಪೊಟ್ಟಣದೊಳಗೆ ಮಡಿಚಿ ಇಡಬಹುದು ಈ ಸೀರೆ

ತೆಲಂಗಾಣದ ಕೈಮಗ್ಗ ನೇಕಾರರೊಬ್ಬರು ಬೆಂಕಿಪಟ್ಟಣದೊಳಗೆ ಹೊಂದುವಂತಹ ಸೀರೆಯನ್ನು ನೇಯ್ದಿದ್ದಾರೆ. ಈ ಸೀರೆಯನ್ನು ಸಲೀಸಾಗಿ ಬೆಂಕಿ ಪಟ್ಟಣದೊಳಗೆ ಮಡಚಿ ಇಡುವಂತೆ ನೇಯ್ದಿದ್ದಾರೆ. ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ನಲ್ಲ ವಿಜಯ್ ಎಂಬ ನೇಕಾರರು ಈ ಸೀರೆ ನೇಯ್ದಿದ್ದಾರೆ. ಮಂಗಳವಾರ ತೆಲಂಗಾಣ ಸಚಿವರಾದ ಕೆಟಿ ರಾಮರಾವ್, ಪಿ ಸಬಿತಾ ಇಂದ್ರ ರೆಡ್ಡಿ, ವಿ ಶ್ರೀನಿವಾಸ್ ಗೌಡ್ ಮತ್ತು ಎರ್ರಾಬೆಲ್ಲಿ ದಯಾಕರ್ ರಾವ್ ಅವರ ಮುಂದೆ ಸೀರೆಯನ್ನು ಪ್ರದರ್ಶಿಸಲಾಯಿತು. ಪ್ರತಿಭಾವಂತ ಯುವ ನೇಕಾರರಾದ ನಲ್ಲ ವಿಜಯ್ ಅವರ ಟ್ಯಾಲೆಂಟ್ ಅನ್ನು ಶ್ಲಾಘಿಸಿದರು. ವಿಜಯ್ ಈ ಸೀರೆ ತಯಾರಿಸಲು ಬಳಸಿದ ವಸ್ತು, ನೇಯ್ಗೆಯ ಪ್ರಕ್ರಿಯೆಯ ಬಗ್ಗೆ ವಿಚಾರಿಸಿ ನೇಕಾರರನ್ನು ಕೊಂಡಾಡಿದರು.

ಇದನ್ನೂ ಓದಿ: ಗರ್ಭಿಣಿ ಅನ್ನೋ ಸುದ್ದಿ ಹರಿದಾಡುತ್ತಿರುವಾಗಲೇ ಹಾಟ್​ ಫೋಟೋಶೂಟ್​ಗೆ ಪೋಸ್​ ಕೊಟ್ಟ ನಟಿ Kajal Aggarwal

ಈ ಸಂದರ್ಭದಲ್ಲಿ ಸಚಿವರಾದ ಕೆಟಿ ರಾಮರಾವ್ ಮಾತನಾಡಿ ಬೆಂಕಿ ಪಟ್ಟಣಕ್ಕೆ ಹೊಂದಿಕೊಳ್ಳುವ ಸೀರೆ ತಯಾರಾಗಿರುವುದರ ಬಗ್ಗೆ ಕೇಳಿದ್ದೆವು. ಆದರೆ ಅದನ್ನು ಮೊದಲ ಬಾರಿಗೆ ನೋಡುತ್ತಿದ್ದೇವೆ ಎಂದು ಹೇಳಿದರು. ವಿಜಯ್ ಅವರ ಈ ಹೊಸ ಪ್ರಯತ್ನಕ್ಕೆ ಮುಂದಿನ ದಿನಗಳಲ್ಲಿ ನಾನು ಅವರಿಗೆ ಬೇಕಾದ ಎಲ್ಲಾ ರೀತಿಯ ಸಹಾಯ ಮಾಡುತ್ತೇನೆ ಎಂದು ವಿಜಯ್‌ಗೆ ಭರವಸೆ ನೀಡಿದರು. ಹಾಗೆ ಈ ಸೀರೆಯನ್ನು ಸಚಿವರು ಸಬಿತಾ ಇಂದ್ರ ರೆಡ್ಡಿ ಅವರಿಗೆ ಉಡುಗೊರೆಯಾಗಿ ನೀಡಿದರು.

ಹೇಗೆ ರೆಡಿ ಆಯ್ತು ಮ್ಯಾಚ್‌ಬಾಕ್ಸ್‌ನಲ್ಲಿ ಹೊಂದಿಕೊಳ್ಳುವ ಸೀರೆ..?

ಮ್ಯಾಚ್‌ಬಾಕ್ಸ್‌ನಲ್ಲಿ ಹೊಂದಿಕೊಳ್ಳುವ ಕೈಯಿಂದ ನೇಯ್ದ ಸೀರೆಯನ್ನು ತಯಾರಿಸಲು 6 ದಿನಗಳನ್ನು ವಿಜಯ್ ತೆಗೆದುಕೊಂಡರಂತೆ. ಇದೇ ಸೀರೆ ತಯಾರಿಸಲು ಯಂತ್ರವನ್ನು ಬಳಸಿದರೆ ಮೂರು ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಕೈಯಿಂದ ನೇಯ್ದ ಸೀರೆಗೆ 12,000 ರೂ ಬೆಲೆ ಇದ್ದು, ಯಂತ್ರ ಬಳಸಿ ತಯಾರಿಸಿದ ಸೀರೆಗೆ 8,000 ರೂ. ನಿಗದಿ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಿರ್ಸಿಲ್ಲಾದ ಕೈಮಗ್ಗ ಕ್ಷೇತ್ರವು ಹಲವು ಬದಲಾವಣೆಗಳನ್ನು ಕಂಡಿದೆ ಎಂದು ವಿಜಯ್ ಸಚಿವರಿಗೆ ತಿಳಿಸಿದರು. ರಾಜ್ಯ ಸರ್ಕಾರ ನೀಡಿದ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು. ಸಿರ್ಸಿಲ್ಲದ ನೇಕಾರರು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಆಧುನಿಕ ಉಪಕರಣಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ನೇಹಾ ಧೂಪಿಯಾರ Maternity Fashion: ಮೆಚ್ಚುಗೆಗೆ ಪಾತ್ರವಾಗಿದೆ ನಟಿಯ ಪ್ರೆಗ್ನೆನ್ಸಿ ಲುಕ್​

ವಿಜಯ್ ನೇಯ್ದ ಸೀರೆಯನ್ನು ಈ ಹಿಂದೆ 2017ರಲ್ಲಿ ವಿಶ್ವ ತೆಲುಗು ಸಮ್ಮೇಳನದಲ್ಲಿ ಪ್ರದರ್ಶಿಸಲಾಯಿತು. ಅವರು 2015ರಲ್ಲಿ ಯುಎಸ್ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಪತ್ನಿ ಮಿಚೆಲ್ ಒಬಾಮಾ ದಂಪತಿಗಳು ಭಾರತಕ್ಕೆ ಬಂದಾಗ ಅವರಿಗೆ ಸೂಪರ್ ಫೈನ್ ರೇಷ್ಮೆಯಿಂದ ಮಾಡಿದ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದರು. ಸದ್ಯ ಬೆಂಕಿ ಪಟ್ಟಣದಲ್ಲಿ ಮಡಚಿಡುವ ಸೀರೆಯನ್ನು ಮಹಿಳೆಯರು ಹೇಗೆ ಸ್ವೀಕರಿಸುತ್ತಾರೆ ಕಾದು ನೋಡಬೇಕು.
Published by:ranjumbkgowda1 ranjumbkgowda1
First published: