Viral Video: ಬೆಳೆ ರಕ್ಷಣೆಗಾಗಿ ಕರಡಿ ತಂದ ರೈತ; ಇದಕ್ಕೆ ಪ್ರತಿದಿನ 500 ರೂ. ಸಂಬಳ

ಬೆಳಗ್ಗೆ ಆಸುಪಾಸಿನಲ್ಲಿಯೇ ಮಂಗ ಮತ್ತು ಹಂದಿಗಳು ದಾಳಿ ಮಾಡೋದನ್ನು ಗಮನಿಸಿದ ಭಾಸ್ಕರ್ ರೆಡ್ಡಿ, ಕರಡಿಯನ್ನು ತಂದಿದ್ದಾರೆ.

ಕರಡಿ ದೃಶ್ಯ

ಕರಡಿ ದೃಶ್ಯ

  • Share this:
ಕೆಲವೊಮ್ಮೆ ರೈತರು (Farmers) ಬೆಳೆದ ಬೆಳೆಗಳು (Crop) ಪ್ರಾಣಿಗಳ (Animlas) ಹಾವಳಿಯಿಂದ ಹಾಳಾಗುತ್ತವೆ. ಇಂತಹ ಸಮಯದಲ್ಲಿ ಕೈಗೆ ಬಂದ ತುತ್ತು ಕೈಗೆ ಸಿಗದಂತಾಗುತ್ತದೆ. ಹಾಗಾಗಿ ಅರಣ್ಯ ಪ್ರದೇಶದ (Forest Area) ಭಾಗದಲ್ಲಿರುವ ರೈತರು ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ವಿವಿಧ ಉಪಾಯಗಳನ್ನು ಮಾಡುತ್ತಾರೆ. ಈ ಮೂಲಕ ಬೆಳೆಯನ್ನು ರಕ್ಷಿಸುತ್ತಾರೆ. ಸಾಮಾನ್ಯವಾಗಿ ಹೊಲಗಳಿಗೆ ಪಕ್ಷಿಗಳು ಬರದರಿಲಿ ಎಂದು ರೈತರು ಬೆದರು ಗೊಂಬೆಗಳನ್ನು ಇರಿಸುತ್ತಾರೆ. ಇದರಿಂದ ಗದ್ದೆಗಳಲ್ಲಿ ಜನ ನಿಂತಿರುವಂತೆ ಕಾಣುತ್ತದೆ. ಈಗ ತೆಲಂಗಾಣದ ರೈತರೊಬ್ಬರು (Telangana Farmer) ತಮ್ಮ ಬೆಳೆಯನ್ನು ರಕ್ಷಿಸಲು ಕರಡಿಯನ್ನು ನೇಮಿಸಿಕೊಂಡಿದ್ದಾರೆ. ಈ ಕರಡಿಗೆ (Bear) ರೈತ  ಪ್ರತಿನಿತ್ಯ 500 ರೂಪಾಯೊ ಪಾವತಿಸುತ್ತಾರೆ. ಈ ಕರಡಿ ರೈತನ ಬೆಳೆಯನ್ನು ರಕ್ಷಣೆ ಮಾಡುತ್ತದೆ.

ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯಲ್ಲಿ ಮಂಗಗಳು ಹಾಗೂ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ರೈತರ ಬೆಳೆಗಳು ಹಾಳಾಗುತ್ತಿವೆ.  ಈಗ ದಿನವಿಡೀ ಕೂತು ಮಂಗ, ಹಂದಿಗಳನ್ನು ಓಡಿಸುವುದು ಯಾರಿಂದಲೂ ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಭಾಸ್ಕರ್ ರೆಡ್ಡಿ ಎಂಬ ರೈತ ಅದ್ಬುತ ಮಾರ್ಗ ಕಂಡುಕೊಂಡಿದ್ದಾರೆ. ಬೆಳಗ್ಗೆ ಆಸುಪಾಸಿನಲ್ಲಿಯೇ ಮಂಗ ಮತ್ತು ಹಂದಿಗಳು ದಾಳಿ ಮಾಡೋದನ್ನು ಗಮನಿಸಿದ ಭಾಸ್ಕರ್ ರೆಡ್ಡಿ, ಕರಡಿಯನ್ನು ತಂದಿದ್ದಾರೆ.

ಕರಡಿಯ ವೇಷ ಭೂಷಣ ಬಾಡಿಗೆಗೆ ತಂದ ರೈತ

ಇದು ನಿಜವಾದ ಕರಡಿ ಅಲ್ಲ. ಬದಲಾಗಿ ಭಾಸ್ಕರ್ ರೆಡ್ಡಿಯವರು ಕರಡಿಯ ವೇಷ ಭೂಷಣಗಳನ್ನು (Bear Costume) ಬಾಡಿಗೆಗೆ ತಂದಿದ್ದಾರೆ. ಇದಕ್ಕಾಗಿ ಓರ್ವನನ್ನು ನೇಮಿಸಿಕೊಂಡಿದ್ದಾರೆ. ಆತ ಕರಡಿಯ ವೇಷಭೂಷಣಗಳನ್ನು ಧರಿಸಿ ಹೊಲದ ತುಂಬೆಲ್ಲ ಓಡಾಡುತ್ತಾನೆ. ಇದನ್ನ ನೋಡಿದ ಮಂಗ ಮತ್ತು ಹಂದಿಗಳು ನಿಜವಾದ ಕರಡಿಯಂದು ಜಮೀನು ಹತ್ತಿರವೂ ಸುಳಿಯಲ್ಲ.

ಇದನ್ನೂ ಓದಿ:  Wooden Tank: ಮಗನಿಗಾಗಿ 8 ಲಕ್ಷ ಖರ್ಚು ಮಾಡಿ ಮರದ ಟ್ಯಾಂಕ್ ನಿರ್ಮಿಸಿದ ತಂದೆ!

ಸದ್ಯ ಭಾಸ್ಕರ್ ರೆಡ್ಡಿ ಅವರು ಕರಡಿ ವೇಷ ಭೂಷಣ ಧರಿಸುವ ವ್ಯಕ್ತಿಗೆ ಪ್ರತಿದಿನ 500 ರೂಪಾಯಿ ಸಂಬಳ ನೀಡುತ್ತಿದ್ದಾರೆ. ನಕಲಿ ಕರಡಿಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿವೆ. ನಕಲಿ ಕರಡಿ ಬಳಕೆಯಿಂದ ಬೆಳೆ ಹಾನಿ ನಿಂತಿದೆ ಎಂದು ಭಾಸ್ಕರ್ ರಾವ್ ಹೇಳುತ್ತಾರೆ.

ರೈತನ ಐಡಿಯಾಗೆ ನೆಟ್ಟಿಗರ ಮೆಚ್ಚುಗೆ

ಈ ವಿಡಿಯೋ ನೋಡಿದ ನಂತರ ಕೆಲವರು ರೈತನನ್ನು ಹೊಗಳಿದ್ದಾರೆ. ಕೇವಲ ವೇಷ ಭೂಷಣ ಧರಿಸಲು ಆ ವ್ಯಕ್ತಿ 500 ರೂ ಪಡೆಯುತ್ತಿರೋದು ಕೇಳಿ ಜನರು ಆಶ್ಚರ್ಯ ವ್ಯಕ್ಯಪಡಿಸುತ್ತಿದ್ದಾರೆ. ಇನ್ನು ಕೆಲವರು ಅಲ್ಲಿ ಆ ವ್ಯಕ್ತಿಯ ಜೀವ  ಅಪಾಯದಲ್ಲಿ ಇರುತ್ತೆ, ಹಾಗಾಗಿ ಆತ ಅಷ್ಟು ಮೊತ್ತ ಪಡೆಯೋದರಲ್ಲಿ ಯಾವುದೇ ತಪ್ಪಿಲ್ಲ ಎಂದು ಕೆಲವರು ವಾದಿಸಿದ್ದಾರೆ. ಆದ್ರೂ ಈ ರೈತನ ಐಡಿಯಾವನ್ನು ಹೊಗಳಲೇಬೇಕು ಎಂದು ಮೆಚ್ಚುಗೆ ಸೂಚಿಸಿದ್ದಾರೆ.



ಬೆಳೆ ರಕ್ಷಣೆಗೆ ಸನ್ನಿ ಲಿಯೋನ್ ಮೊರೆ ಹೋಗಿದ್ದ ರೈತರು

ಕೆಲ ವರ್ಷಗಳ ಹಿಂದೆ ಆಂಧ್ರ ಭಾಗದ ರೈತರು ತಮ್ಮ ತೋಟಗಳಿಗೆ ಜನರ ದೃಷ್ಟಿ ತಾಗದಿರಲಿ ಎಂದು ರಸ್ತೆ ಬದಿ ಬಾಲಿವುಡ್ ಚೆಲುವೆ ಸನ್ನಿ ಲಿಯೋನ್ ಫೋಟೋಗಳನ್ನು ಹಾಕಿದ್ದರು. ಇದರಿಂದ ಬೆಳೆಗಳಿಗೆ ಯಾವುದೇ ಕೆಟ್ಟ ದೃಷ್ಟಿ ತಾಗಲ್ಲ ಎಂದು  ರೈತರು ಹೇಳಿದ್ದರು. ಜನರು ತಮ್ಮ ಬೆಳೆಗಳ ಬದಲಾಗಿ ಸನ್ನಿ ಲಿಯೋನ್ ಫೋಟೋ ನೋಡುತ್ತಾರೆ. ಇದರಿಂದ ಸನ್ನಿ ಲಿಯೋನ್ ಫೋಟೋ ಬಳಸಲಾಗುತ್ತಿದೆ ಎಂದು ಹೇಳಿದ್ದರು.

ಇದನ್ನೂ ಓದಿ:  Viral Story: ಮೊದಲ ಬಾರಿ Pizza ಟೇಸ್ಟ್ ಮಾಡಿದ ಬುಡಕಟ್ಟು ಜನಾಂಗದ ಮಂದಿ, ಇವರ ರಿಯಾಕ್ಷನ್ ನೋಡಿ

ಇನ್ನು ಕೆಲ ರೈತರು ತಮ್ಮ ಗದ್ದೆಗಳಿಗೆ ಸೀರೆಗಳಿಂದ ಕಾಂಪೌಂಡ್ ರೀತಿ ತಡೆಗೋಡೆಗಳನ್ನು ನಿರ್ಮಿಸಿಕೊಳ್ಳುತ್ತಾರೆ. ಇತ್ತೀಚೆಗೆ ಚಿಕ್ಕಮಗಳೂರು ಭಾಗದ ರೈತರು ಕಾಡಾನೆಗಳ ನಿಯಂತ್ರಣಕ್ಕಾಗಿ ತೋಟಗಳಲ್ಲಿ ಡಿಜೆ ಸೌಂಡ್ ಬಳಕೆ ಮಾಡುತ್ತಿದ್ದಾರೆ. ಜೋರಾದ ಸದ್ದು ಕೇಳಿ ಆನೆಗಳು ತೋಟಗಳತ್ತ ಸುಳಿಯುತ್ತಿಲ್ಲ.
Published by:Mahmadrafik K
First published: