ಶ್ರಾವಣ ಮಾಸದಲ್ಲಿ ಭಗವಂತ ಶಿವನ ಕೊರಳಲ್ಲಿ ಜೀವಂತ ನಾಗರಹಾವು: ವಿಡಿಯೋ ವೈರಲ್​


Updated:August 1, 2018, 5:13 PM IST
ಶ್ರಾವಣ ಮಾಸದಲ್ಲಿ ಭಗವಂತ ಶಿವನ ಕೊರಳಲ್ಲಿ ಜೀವಂತ ನಾಗರಹಾವು: ವಿಡಿಯೋ ವೈರಲ್​

Updated: August 1, 2018, 5:13 PM IST
ನ್ಯೂಸ್​ 18 ಕನ್ನಡ

ಸಾಮಾಜಿಕ ತಾಣಗಳಲ್ಲಿ ವಿಡಿಯೋ ಒಂದು ಭಾರೀ ವೈರಲ್​ ಆಗುತ್ತಿದೆ. ಇದರಲ್ಲಿ ನಾಗರ ಹಾವೊಂದು ಭಗವಂತ ಶಿವನ ಮೂರ್ತಿಯ ಕೊರಳಿಗೆ ಸುತ್ತು ಹಾಕಿ ಕುಳಿತಿರುವುದನ್ನು ಕಾಣಬಹುದಾಗಿದೆ. ಸದ್ಯ ಈ ವಿಡಿಯೋವನ್ನು ಬಹುತೇಕ ಮಂದಿ ಶೇರ್ ಮಾಡುತ್ತಿದ್ದಾರೆ. ಸದ್ಯ ಶ್ರಾವಣ ಮಾಸ ನಡೆಯುತ್ತಿದೆ ಎಂಬುವುದು ಗಮನಾರ್ಹ ವಿಚಾರ. ಈ ತಿಂಗಳಲ್ಲಿ ಭಕ್ತರು ಶಿವನನ್ನು ಮೆಚ್ಚಿಸಲು ವ್ರತ ಕೈಗೊಳ್ಳುತ್ತಾರೆ ಹಾಗೂ ಎಲ್ಲಾ ವಿಧಿ ವಿಧಾನಗಳನ್ವಯ ಪೂಜೆ ಮಾಡುತ್ತಾರೆ. ಇನ್ನು ಶಿವನ ಕೊರಳಲ್ಲಿ ನಾಗರಹಾವು ಕೂಡಾ ಇರುತ್ತದೆ. ಹೀಗಿರುವಾಗ ಜೀವಂತ ನಾಗರ ಹಾವೊಂದು ಶಿವನ ಮೂರ್ತಿಯ ಕೊರಳಿಗೆ ಸುತ್ತಿಕೊಂಡಿರುವುದು ಭಕ್ತರ ಭಕ್ತಿ ಹೆವಚ್ಚುವಂತೆ ಮಾಡಿದೆ.

ಈ ಘಟನೆಯು ತೆಲ್ಲಂಗಾಣದ ಕರೀಂ ನಗರದಲ್ಲಿ ನಡೆದಿರುವುದಾಗಿ ಹೇಳಲಾಗುತ್ತಿದೆ. ಇದು ಶುಭ ಸಂಕೇತ ಎಂದು ಭಕ್ತರು ಹೇಳಿಕೊಳ್ಳುತ್ತಿದ್ದು, ಬಹುತೇಕ ಮಂದಿ ಇದನ್ನು ತಮ್ಮ ಮೊಬೈಲ್​ ಫೋನ್​​ಗಳಲ್ಲಿ ಫೋಟೋ ಹಾಗೂ ವಿಡಿಯೋ ಮಾಡಿಕೊಳ್ಳುವ ಮೂಲಕ ಸೆರೆ ಹಿಡಿದಿದ್ದಾರೆ. ಬಳಿಕ ಈ ವಿಚಾರ ತಿಳಿದ ಎನ್​ಜಿಒ ಒಂದು ಹಾವನ್ನು ಅಲ್ಲಿಂದ ಸುರಕ್ಷಿತವಾಗಿ ಕೆಳಗಿಳಿಸಿ ಕಾಡಿನಲ್ಲಿ ಬಿಟ್ಟಿದೆ. ಸದ್ಯ ಜನರು ತೆಗೆದಿರುವ ದೃಶ್ಯಗಳು ವಾಟ್ಸಾಪ್​, ಫೇಸ್​ಬುಕ್​ ಹಾಗೂ ಟ್ವಿಟರ್​ನಲ್ಲಿ ವ್ಯಾಪಕವಾಗಿ ಶೇರ್​ ಆಗುತ್ತಿದೆ.
First published:August 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ