ಈ ಬಸ್ಗಳಲ್ಲಿ ಜನಿಸಿದ ನವಜಾತ ಶಿಶುಗಳಿಗೆ ಜೀವಮಾನ ಪ್ರಯಾಣಿಸಲು ಉಚಿತ ಪಾಸ್
TSRTC ಯ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿಸಿ ಸಜ್ಜನರ್ ಅವರು TSRTC ಬಸ್ಗಳಲ್ಲಿ ಪ್ರಯಾಣಿಸಲು ನವಜಾತ ಶಿಶುಗಳಿಗೆ ಉಚಿತ ಲೈಫ್ಟೈಮ್ ಪಾಸ್ಗಳನ್ನು ನೀಡಲು ಸಂತೋಷವಾಗಿದೆ ಎಂದು ಹೇಳಿದ್ದಾರೆ.
ತಾಯಿ ಮಗುವಿನ ಸಂಬಂಧ ಅತ್ಯಂತ ಅನೂಹ್ಯವಾದುದು (Mother-Child Relationship)ಹಾಗೂ ತನ್ನ ಮಗುವಿಗಾಗಿ ತಾಯಿ ಎಂತಹದ್ದೇ ಅಪಾಯಗಳನ್ನು(Risk) ಕೂಡ ಎದುರಿಸುವ ಸಾಹಸ ತೋರುವವಳು ಎಂಬುದು ನಮಗೆಲ್ಲರಿಗೂ ತಿಳಿದೇ ಇದೆ. ನವಮಾಸಗಳ ಕಾಲ ಜತನದಲ್ಲಿ ಹೊತ್ತು ಹೆರಿಗೆಯ ಸಮಯದಲ್ಲಿ ಆ ತಾಯಿ ಪಡುವಂತಹ ನೋವು ಮತ್ತು ಸಂತಸ ಬೆಲೆ ಕಟ್ಟಲಾಗದ ಅಮೂಲ್ಯ ಕ್ಷಣ (Happiness)ಎಂದೇ ಪ್ರತೀತಿ ಪಡೆದಿದೆ. ಹೆರಿಗೆ ಸಮಯವಾಯಿತು ಎಂದರೆ ಪರಿಸ್ಥಿತಿ, ಪರಿಸರ (Environment)ನೋಡದೆಯೇ ತಾಯಿ ಮಗುವಿಗೆ ಜನ್ಮ ನೀಡುವಂತಹ ಅನಿವಾರ್ಯ ಪರಿಸ್ಥಿತಿ ಬಂದೊದಗುತ್ತದೆ. ಹೀಗಿದ್ದ ಸಮಯದಲ್ಲಿಯೇ ಒಮ್ಮೊಮ್ಮೆ ರೈಲಿನಲ್ಲಿ, ಪ್ರಯಾಣಿಸುತ್ತಿರುವ ವಾಹನಗಳಲ್ಲಿ ಮಗುವಿಗೆ ಜನ್ಮ ನೀಡಿರುವಂತಹ ಎಷ್ಟೋ ಸನ್ನಿವೇಶಗಳನ್ನು ಘಟನೆಗಳನ್ನು ನಾವು ಕೇಳಿದ್ದೇವೆ ನೋಡಿದ್ದೇವೆ. ಹೌದು ಇದೇ ರೀತಿ ಇಬ್ಬರು ತಾಯಂದಿರು TSRTC ಗೆ ಸೇರಿದ ಬಸ್ಗಳಲ್ಲಿ ಮಕ್ಕಳಿಗೆ ಜನ್ಮನೀಡಿದ್ದು ಸಂಸ್ಥೆಯು ಈ ಮಕ್ಕಳಿಗೆ (children)ಜೀವನ ಪರ್ಯಂತ ಉಚಿತವಾಗಿ TSRTC ಬಸ್ಗಳಲ್ಲಿ ಪ್ರಯಾಣಿಸುವ ಪಾಸ್ (free pass)ಅನ್ನು ನೀಡಿದೆ.
ಜನಿಸಿದ ಎರಡು ಮಕ್ಕಳಿಗೆ
ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (TSRTC) ಯಲ್ಲಿ ಇತ್ತೀಚೆಗೆ ಜನಿಸಿದ ಎರಡು ಮಕ್ಕಳಿಗೆ ಇನ್ನು ಮುಂದೆ ಕಾರ್ಪೋರೇಶನ್ ಬಸ್ಗಳಲ್ಲಿ ಉಚಿತವಾಗಿ ಟಿಕೆಟ್ ರಹಿತವಾಗಿ ಪ್ರಯಾಣಿಸಬಹುದಾಗಿದೆ. ಈ ನಿಟ್ಟಿನಲ್ಲಿ TSRTC ಮಹತ್ವದ ನಿರ್ಧಾರ ಕೈಗೊಂಡಿದ್ದು ಜೀವನ ಪರ್ಯಂತ ಕಾರ್ಪೋರೇಶನ್ ಬಸ್ಗಳಲ್ಲಿ ಉಚಿತವಾಗಿ ಓಡಾಡುವಂತೆ ಲೈಫ್ಟೈಮ್ ಪಾಸ್ ಅನ್ನು ಸಂಸ್ಥೆಯು ಮಕ್ಕಳಿಗೆ ನೀಡಿದೆ.
TSRTC ಸಿಬ್ಬಂದಿಗಳು ಹೆರಿಗೆಗೆ ಸಹಾಯ
TSRTC ಹೇಳಿರುವಂತೆ ಮೊದಲ ಹೆಣ್ಣುಮಗು ನವೆಂಬರ್ 30 ರಂದು ನಗರ್ಕರ್ನೂಲ್ ಡಿಪೋಗೆ ಸೇರಿದ ಬಸ್ನಲ್ಲಿ ಪೆದ್ದಕೊತ್ತಪಳ್ಳಿ ಹಳ್ಳಿಯ ಸಮೀಪ ಜನಿಸಿದೆ. ಇನ್ನೊಂದು ಮಹಿಳೆ ತನ್ನ ಮಗಳಿಗೆ ಡಿಸೆಂಬರ್ 7 ರ ಮಧ್ಯಾಹ್ನ ಅಸಿಫಾಬಾದ್ ಡಿಪೋಗೆ ಸೇರಿದ ಸಿದ್ದಪೇಟೆ ಊರಿನ ಸಮೀಪ ಜನ್ಮನೀಡಿದ್ದಾರೆ. ಈ ಇಬ್ಬರೂ ಮಹಿಳೆಯರು ಹೆರಿಗೆಗಾಗಿ ಬಸ್ ಏರಿದ್ದರು ಆದರೆ ಬಸ್ನಲ್ಲಿಯೇ ಮಕ್ಕಳಿಗೆ ಜನ್ಮನೀಡಿದ್ದಾರೆ. TSRTC ಸಿಬ್ಬಂದಿಗಳು ಹಾಗೂ ಬಸ್ನಲ್ಲಿದ್ದ ಪ್ರಯಾಣಿಕರು ಮಹಿಳೆಯರ ಹೆರಿಗೆಗೆ ಸಹಾಯ ಮಾಡಿದ್ದಾರೆ.
ಉಚಿತ ಲೈಫ್ಟೈಮ್ ಪಾಸ್
ತದನಂತರ TSRTC ಸದಸ್ಯರು ಮಹಿಳೆಯರು ಹಾಗೂ ಮಕ್ಕಳನ್ನು ಆರೋಗ್ಯ ವಿಭಾಗದ ಅಧಿಕಾರಿಗಳೊಂದಿಗೆ 108 ಆಂಬುಲೆನ್ಸ್ನಲ್ಲಿ ಸರಕಾರಿ ಆಸ್ಪತ್ರೆಗೆ ಕರೆದೊಯ್ದರು. ತಾಯಂದಿರು ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ. TSRTC ಸಿಬ್ಬಂದಿಗಳು ಹಾಗೂ ಪ್ರಯಾಣಿಕರ ತ್ವರಿತ ಸ್ಪಂದನೆ ಹಾಗೂ ಸಹಕಾರವನ್ನು ಪ್ರತಿಯೊಬ್ಬರೂ ಶ್ಲಾಘಿಸಿದ್ದು TSRTC ಯ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿಸಿ ಸಜ್ಜನರ್ ಅವರು TSRTC ಬಸ್ಗಳಲ್ಲಿ ಪ್ರಯಾಣಿಸಲು ನವಜಾತ ಶಿಶುಗಳಿಗೆ ಉಚಿತ ಲೈಫ್ಟೈಮ್ ಪಾಸ್ಗಳನ್ನು ನೀಡಲು ಸಂತೋಷವಾಗಿದೆ ಎಂದು ಹೇಳಿದರು.
ಹುಟ್ಟುಹಬ್ಬದ ಉಡುಗೊರೆ
ಇಬ್ಬರೂ ಮಹಿಳೆಯರು ನಿರಂತರವಾಗಿ TSRTC ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಈ ಕುರಿತು ಟ್ವೀಟ್ ಮಾಡಿರುವ ಸಜ್ಜನರ್ ಚಲಿಸುತ್ತಿರುವ TSRTC ಬಸ್ನಲ್ಲಿಯೇ ಇಬ್ಬರು ಮಹಿಳೆಯರು ನವಜಾತ ಶಿಶುಗಳಿಗೆ ಜನ್ಮನೀಡಿದ್ದಾರೆ. ಹುಟ್ಟುಹಬ್ಬದ ಉಡುಗೊರೆಯಾಗಿ ಇಬ್ಬರೂ ಮಕ್ಕಳು ಕಾರ್ಪೋರೇಶನ್ನಿಂದ ಉಚಿತ ಪಾಸ್ಗಳನ್ನು ಪಡೆದುಕೊಂಡಿದ್ದಾರೆ ಹಾಗೂ ಮಕ್ಕಳಿಗೆ ಪಾಸ್ಗಳನ್ನು ವಿತರಿಸಲು ಸಂತೋಷವಾಗುತ್ತಿದೆ ಎಂದು ಸಜ್ಜನರ್ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
ದೇಶದ್ಯಾದಂತ್ಯ ಅನೇಕ ಸಾರಿಗೆಗಳು ಕಲ್ಯಾಣ ಕಾರ್ಯ, ಸಮಾಜ ಸೇವೆ, ದೇಶಕ್ಕಾಗಿ ಗೆದ್ದವರು ಸೇರಿದಂತೆ ಅನೇಕ ಸಾಧನೆಗೈದವರಿಗೆ ಉಚಿತ ಪಾಸ ನೀಡುವುದು ರೂಢಿಯಲ್ಲಿದೆ. ತೆಲಂಗಣ ಇದೀಗ ನವಜಾತ ಮಕ್ಕಳಿಗೆ ಬಸ್ ಪಾಸ್ ನೀಡಿ ಗಮನ ಸೆಳೆದಿದೆ ಎನ್ನಬಹುದು.
Published by:vanithasanjevani vanithasanjevani
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ