Viral Story: ಇದಪ್ಪಾ ಮಾನವೀಯತೆ ಅಂದ್ರೆ.. ತಾನೇ ಕಷ್ಟದಲ್ಲಿ ಇದ್ರೂ ಮತ್ತೊಬ್ಬರಿಗೆ ಸಹಾಯ ಮಾಡಿ ಮಾದರಿಯಾದ ಬಾಲಕ

Gambia Girl: ಶಿಶುವಾಗಿದ್ದಾಗಿನಿಂದಲೇ ತನ್ನ ಕಾಲನ್ನು ಕಳೆದುಕೊಂಡಿರುವ ಹದಿಹರೆಯದ ಹುಡುಗನೊಬ್ಬ ತನ್ನ ಬಳಿ ಇರುವ 10 ಕೃತಕ ಕಾಲುಗಳನ್ನು ಆಫ್ರಿಕಾದ ಗಾಂಬಿಯಾದಲ್ಲಿರುವ ಪುಟ್ಟ ಹುಡುಗಿಗೆ ದಾನ ಮಾಡಿ ಅವಳು ಮತ್ತೆ ಶಾಲೆಗೆ ಹೋಗಲು ಸಹಾಯ ಮಾಡಿದ್ದಾನೆ

 ಯುವಾನ್ ಮುರ್ರೆ

ಯುವಾನ್ ಮುರ್ರೆ

  • Share this:
ತಮ್ಮ ಬಳಿ ಅಪಾರ ಹಣ (Money) ಮತ್ತು ಅಂತಸ್ತು (Assets) ಇದ್ದಂತಹ ಶ್ರೀಮಂತ (Rich) ಜನರೇ ಈಗಿನ ಕಾಲದಲ್ಲಿ ಯಾರಿಗಾದರೂ ಒಂದು ರೂಪಾಯಿ ದಾನ (Donate) ಮಾಡಲು ಸಹ ನೂರು ಬಾರಿ ಆಲೋಚನೆ (Think) ಮಾಡುತ್ತಾರೆ.ನಮ್ಮ ಬಳಿ ಎಲ್ಲಾ ಇದ್ದು ಬೇರೆಯವರಿಗೆ ಸಹಾಯ (Help) ಮಾಡುವುದು ಒಳ್ಳೆಯ ಕೆಲಸ. ಆದರೆ ನಾವೇ ಅಂಗ ವೈಫಲ್ಯದಿಂದ ಬಳಲುತ್ತಿದ್ದು ಕೃತಕ ದೇಹದ ಭಾಗಗಳ (Artificial body Part) ಮೇಲೆ ಅವಲಂಬಿತರಾಗಿದ್ದು, ನಮ್ಮ ಆ ಕೃತಕ ದೇಹದ ಭಾಗಗಳನ್ನು ಬೇರೆಯವರಿಗೆ ಸಹಾಯವಾಗಲಿ ಎಂದು ನೀಡುವುದು ಇದೆಯಲ್ಲ ಅದು ನಿಜಕ್ಕೂ ತುಂಬಾ ದೊಡ್ಡ ಸಹಾಯ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ತಾನೇ ಅಂಗವೈಕಲ್ಯದಿಂದ ಬಳಲುತ್ತಿದ್ರೂ ಮಾನವೀಯತೆ ಮೆರೆದ ಬಾಲಕ

ಶಿಶುವಾಗಿದ್ದಾಗಿನಿಂದಲೇ ತನ್ನ ಕಾಲನ್ನು ಕಳೆದುಕೊಂಡಿರುವ ಹದಿಹರೆಯದ ಹುಡುಗನೊಬ್ಬ ತನ್ನ ಬಳಿ ಇರುವ 10 ಕೃತಕ ಕಾಲುಗಳನ್ನು ಆಫ್ರಿಕಾದ ಗಾಂಬಿಯಾದಲ್ಲಿರುವ ಪುಟ್ಟ ಹುಡುಗಿಗೆ ದಾನ ಮಾಡಿ ಅವಳು ಮತ್ತೆ ಶಾಲೆಗೆ ಹೋಗಲು ಸಹಾಯ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಹುಡುಗನ ಹೆಸರು ಯುವಾನ್ ಮುರ್ರೆ ಆಗಿದ್ದು, ತನ್ನ ಬಳಿ ಇರುವಂತಹ ಹತ್ತು ಕೃತಕ ಕಾಲುಗಳನ್ನು 6,000 ಮೈಲಿ ದೂರದಲ್ಲಿ ವಾಸಿಸುವ 9 ವರ್ಷದ ವುಡೆಹ್‌ಗೆ ದಾನ ಮಾಡಿದ್ದಾನೆ.

ಮುರ್ರೆ ಫಿಬುಲಾರ್ ಹೆಮಿಮೆಲಿಯಾದೊಂದಿಗೆ ಜನಿಸಿದ್ದು, ಅವನ ಎಡಗಾಲು ತಾಯಿಯ ಗರ್ಭದಲ್ಲಿಯೇ ಸರಿಯಾಗಿ ಬೆಳೆಯದ ಕಾರಣ, ಅವನು ಕೇವಲ 11 ತಿಂಗಳ ಮಗುವಾಗಿದ್ದಾಗ ಮೊಣಕಾಲಿನ ಕೆಳಗಿನ ಅಂಗವನ್ನು ಕೃತಕವಾಗಿ ಮಾಡಿಸಿಕೊಂಡು ಹಾಕಿಕೊಳ್ಳಬೇಕಾಯಿತು.

ಆತನಿಗೂ ಎಲ್ಲರಂತೆ ಕನಸುಗಳಿದ್ದವು

ತನ್ನ 14ನೇ ವಯಸ್ಸಿನಲ್ಲಿ, ಮುರ್ರೆ ಒಬ್ಬ ಉತ್ಸಾಹಿ ಪರ್ವತ ಬೈಕರ್ ಮತ್ತು ಹಾಕಿ ಆಟಗಾರನಾಗಲು ಜೀವನದ ಎಲ್ಲಾ ಸವಾಲುಗಳನ್ನು ಧೈರ್ಯದಿಂದ ಸಮರ್ಥವಾಗಿ ಎದುರಿಸಿದ್ದಾನೆ. ಆದರೆ ಅವನು ಬೆಳೆದ ನಂತರ ಅವನ ಬಳಿ ಇರುವಂತಹ 10 ಹಳೆಯ ಪ್ರಾಸ್ಥೆಟಿಕ್ ಕಾಲುಗಳನ್ನು ಬೇರೆಯವರಿಗೆ ದಾನ ಮಾಡಲು ನಿರ್ಧರಿಸಿ, ಅವನು ಅವುಗಳನ್ನು ವುಡೆಹ್‌ಗೆ ನೀಡಿದ್ದಾನೆ.

ಇದನ್ನೂ ಓದಿ: ಕಡಲೆಕಾಯಿಯ ಪುಡಿಗಾಸಿನ ಸಾಲ ತೀರಿಸಲು ಅಮೆರಿಕದಿಂದ ಬಂದ ಅಣ್ಣ-ತಂಗಿ   

3ನೇ ವಯಸ್ಸಿಗೆ ಕಾಲು ಕಳೆದುಕೊಂಡ ಬಾಲಕಿಗೆ ಕೃತಕ ಕಾಲು ದಾನ

ಆಕೆ ತನ್ನ ಮೂರನೇ ವಯಸ್ಸಿನಲ್ಲಿಯೇ ಅಪಘಾತವೊಂದರಲ್ಲಿ ತನ್ನ ಕಾಲನ್ನು ಕಳೆದು ಕೊಂಡಿದ್ದಳು ಎಂದು ಹೇಳಲಾಗುತ್ತಿದೆ. ಈ ಪ್ರಾಸ್ಥೆಟಿಕ್ ಕಾಲುಗಳು ಹಾಕಿಕೊಂಡು ಈಗ 9 ವರ್ಷದ ಬಾಲಕಿ ತನ್ನ ಒಡ ಹುಟ್ಟಿದವರೊಂದಿಗೆ ಗ್ಯಾಂಬಿಯಾದಲ್ಲಿ ಶಾಲೆಗೆ ಮತ್ತೆ ಹೋಗುತ್ತಿದ್ದಾಳೆ ಎಂದು ಹೇಳಲಾಗಿದೆ. ಮುರ್ರೆ ಮತ್ತು ಅವರ ಕುಟುಂಬವು ಯಾವಾಗಲೂ ಇತರ ಅಂಗವೈಕಲ್ಯ ಹೊಂದಿರುವ ಮಕ್ಕಳಿಗೆ ಯಾವುದಾದರೂ ಒಂದು ರೀತಿಯಲ್ಲಿ ಅವರಿಗೆ ಸಹಾಯ ಮಾಡಲು ಬಯಸುವ ಆಸಕ್ತಿ ವ್ಯಕ್ತಪಡಿಸಿತು.

ಅವರು ವುಡೆಹ್ ಬಗ್ಗೆ ಕೇಳಿದಾಗ, ತಕ್ಷಣವೇ ಅವರ ಬಳಿ ಇರುವಂತಹ ಹಳೆಯ ಪ್ರಾಸ್ಥೆಟಿಕ್ಸ್ ದಾನ ಮಾಡಲು ನಿರ್ಧರಿಸಿದರು. ಮುರ್ರೆಯ ತಾಯಿ ಆ್ಯಮಿ ಮಾತನಾಡುತ್ತಾ “ಮಕ್ಕಳು ದೊಡ್ಡವರಾದ ಮೇಲೆ ಅವರು ಉಪಯೋಗಿಸುತ್ತಿದ್ದ ಪ್ರಾಸ್ಥೆಟಿಕ್ ಕಾಲುಗಳನ್ನು ಅನೇಕರು ಬೇಕಾಬಿಟ್ಟಿ ಹೊರಕ್ಕೆ ಎಸೆಯುತ್ತಾರೆ” ಎಂದು ಹೇಳಿದರು.

ಇದನ್ನೂ ಓದಿ:  H&M ಶೋರೂಂನಲ್ಲಿ ಬಟ್ಟೆಗಳ ಮೇಲೆ ಹೇನು, ಕ್ರಿಮಿ-ಕೀಟ! ಅಂಗಡಿ ಕ್ಲೋಸ್

ಯುಕೆಯಲ್ಲಿ ಸಾಮಾನ್ಯವಾಗಿ ಒಮ್ಮೆ ಮಕ್ಕಳು ದೊಡ್ಡವರಾಗಿ ಬೆಳೆದ ನಂತರ ತಮ್ಮ ಪ್ರಾಸ್ಥೆಟಿಕ್ ಕಾಲುಗಳನ್ನು ಒಂದು ತ್ಯಾಜ್ಯವೆಂದು ಹೊರಕ್ಕೆ ಎಸೆಯುತ್ತಾರೆ. Legs4Africaದ ಬಗ್ಗೆ ನಾವು ಕೇಳಿದ್ದೇವೆ, ಆದ್ದರಿಂದ ಯುವಾನ್‌ನ ಎಲ್ಲಾ ಹಳೆಯ ಕೃತಕ ಕಾಲುಗಳನ್ನು ಅವರಿಗೆ ದಾನ ಮಾಡಲು ನಿರ್ಧರಿಸಿದ್ದೇವೆ, ಆದ್ದರಿಂದ ಅವುಗಳನ್ನು ಮರು ನಿಯೋಜಿಸಬಹುದು" ಎಂದು ಆ್ಯಮಿ ಹೇಳಿದರು.

ಆಫ್ರಿಕಾದ ಪುಟ್ಟ ಹುಡುಗಿಗೆ ಅವುಗಳನ್ನು ನೀಡಲಾಗಿದೆ ಎಂದು ತಿಳಿದಾಗ ನಾವು ತುಂಬಾನೇ ಖುಷಿ ಪಟ್ಟೆವು. ತನ್ನ ಹೊಸ ಕಾಲಿನಿಂದ ಅವಳು ಈಗ ಶಾಲೆಗೆ ಹೋಗಿ ಇತರ ಮಕ್ಕಳೊಂದಿಗೆ ಆಡಬಹುದು" ಎಂದು ಅವರು ಹೇಳಿದರು. ಆಫ್ರಿಕಾದಲ್ಲಿ ಪ್ರಾಸ್ಥೆಟಿಕ್ ಕಾಲುಗಳು ತುಂಬಾ ದುಬಾರಿಯಾಗಿರುವುದರಿಂದ ಈ ಹುಡುಗಿಗೆ ಇದು ನಿಜಕ್ಕೂ ಒಂದು ವರದಾನವಾಗಿದೆ.
Published by:ranjumbkgowda1 ranjumbkgowda1
First published: