ಯಾವುದೇ ಸಂಬಂಧಕ್ಕೆ ಅರ್ಥ ಬರುವುದು ಇನ್ನೊಬ್ಬರು ಅವರ ಪ್ರೀತಿಯನ್ನು ಗುರುತಿಸಿದಾಗ ಮಾತ್ರ ಎನ್ನುವ ಮಾತು ನಮಗೆಲ್ಲಾ ತಿಳಿದ ವಿಚಾರವೇ ಆಗಿದೆ, ಹಾಗೆಯೇ ಒಬ್ಬ ಅಣ್ಣನಿಗೆ ‘ಅಣ್ಣ’ (Brother) ಅಂತ ಮುದ್ದಾಗಿ ಕರೆಯುವ ಒಬ್ಬ ತಮ್ಮನೋ ಅಥವಾ ತಂಗಿಯೋ ಇದ್ದರೆ ಮಾತ್ರ ಆ ‘ಅಣ್ಣ’ ಎನ್ನುವ ಪದಕ್ಕೆ ಮತ್ತು ಸಂಬಂಧಕ್ಕೆ ಒಂದು ಅರ್ಥ.ಸಾಮಾನ್ಯವಾಗಿ ಮೊದಲನೆಯ ಮಗು ಜನಿಸಿದ ನಂತರ ಕೆಲವು ವರ್ಷಗಳ ಕಾಲ ಆ ಮಗು ತಾಯಿ ತಂದೆಯ ಆರೈಕೆಯಲ್ಲಿ ತುಂಬಾ ಮುದ್ದಾಗಿ ಬೆಳೆಯುತ್ತದೆ. ಸ್ವಲ್ಪ ಬೆಳೆದ ನಂತರ ಆ ಮಗುವಿಗೂ ಮನೆಯಲ್ಲಿ ನನ್ನ ಜೊತೆಯಲ್ಲಿ ಆಟವಾಡಲು ಇನ್ನೊಬ್ಬರು ನನ್ನ ತಮ್ಮನೋ, ತಂಗಿನೋ ಇದ್ದರೆ ಚೆನ್ನಾಗಿರುತ್ತಿತ್ತು ಅಂತ ಅನ್ನಿಸದೇ ಇರದು.ನಮ್ಮ ತಂದೆ ತಾಯಿ ಇನ್ನೊಂದು ಮಗುವಿಗೆ ಜನ್ಮ ನೀಡುತ್ತಿದ್ದಾರೆ ಮತ್ತು ಇನ್ನೊಬ್ಬರು ನಮ್ಮ ಜೊತೆಯಲ್ಲಿ ಆಟವಾಡಲು ಬರುತ್ತಿದ್ದಾರೆ ಎಂದರೆ ಎಷ್ಟು ಖುಷಿಯ ವಿಚಾರ ಅಲ್ಲವೇ.
ಒಬ್ಬ ಹೊಸ ಸದಸ್ಯ ನಿಮ್ಮ ಕುಟುಂಬ ಸೇರಲಿದ್ದಾನೆ ಎಂದು ತಿಳಿದುಕೊಳ್ಳುವುದೇ ತುಂಬಾ ಅದ್ಭುತವಾದ ಭಾವನೆ ಅದು. ಇಲ್ಲಿ ಒಂದು ಘಟನೆಯಲ್ಲಿ ಸಹ ಹುಡುಗನು ತನಗಿಂತ ಕಿರಿಯರೊಬ್ಬರು ಬರುತ್ತಿದ್ದಾರೆ ಎಂದು ಸುದ್ದಿ ತಿಳಿದ ತಕ್ಷಣ ಅವನು ಪಟ್ಟ ಖುಷಿ ಅಷ್ಟಿಷ್ಟಲ್ಲ. ನೀನು ಅಣ್ಣನಾಗುತ್ತಿಯಾ ಎನ್ನುವ ಸುದ್ದಿಯನ್ನು ತಂದೆ ತಾಯಿ ವಿನೂತನವಾಗಿ ತಮ್ಮ ಮಗನಿಗೆ ತಿಳಿಸಿದ್ದು, ವಿಡಿಯೋ (Video) ಈಗ ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗಿದೆ.
ನೀವು ಆ ವಿಡಿಯೋದಲ್ಲಿ ಏನಿದೆ ಎಂದು ನೋಡಲು ಕಾತುರರಾಗಿರಬೇಕಲ್ಲವೇ? ಇಲ್ಲಿ ಈ ಹುಡುಗನ ಖುಷಿ ನೋಡಿದವರಿಗೆ ಆನಂದದಿಂದ ಕಣ್ಣೀರು ಬರುವುದಂತೂ ಗ್ಯಾರಂಟಿ.
ಈ 48 ಸೆಕೆಂಡುಗಳ ವಿಡಿಯೋ ತುಣುಕಿನಲ್ಲಿ ಹದಿಹರೆಯದ ಹುಡುಗನೊಬ್ಬ ತನ್ನ ಪೋಷಕರು ನೀಡಿದಂತಹ ಒಂದು ಕಾರ್ಡ್ ಅನ್ನು ಸ್ಕ್ರ್ಯಾಚ್ ಮಾಡಿದ ನಂತರ ಅದರಲ್ಲಿರುವಂತಹ ಸಂದೇಶವನ್ನು ನೋಡಿ ತಾನು ಅಣ್ಣನಾಗುತ್ತಿರುವ ಸುದ್ದಿ ತಿಳಿದು “ಓ..ದೇವರೆ” ಎಂದು ಹೇಳಿ ಕಣ್ಣಲ್ಲಿ ನೀರು ತುಂಬಿಕೊಂಡು ಭಾವುಕನಾಗುತ್ತಾನೆ. ನಂತರ ಅಲ್ಲೇ ಇರುವಂತಹ ತನ್ನ ತಂದೆಯನ್ನು ಅಪ್ಪಿಕೊಳ್ಳುತ್ತಾನೆ. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ನೋಡಿದ ನೆಟ್ಟಿಗರು ಸಹ ಹುಡುಗನ ಪ್ರತಿಕ್ರಿಯೆಗೆ ಭಾವುಕರಾಗಿದ್ದಾರೆ.
"ನಾನು ಹಿಂದಿನ ದಿನವೇ ತುಂಬಾ ನೋವಿನಿಂದ ನನ್ನ ಮಗನಿಗೆ ಒಬ್ಬ ಒಡಹುಟ್ಟಿದವನನ್ನು ನೀಡಲು ಸಾಧ್ಯವಾಗುತ್ತಿಲ್ಲ ಕ್ಷಮಿಸಿ ಎಂದು ಹೇಳಿದ್ದೆ. ನಾನು 4 ವಾರಗಳ ಮೊದಲೇ ಇನ್ನೊಂದು ಮಗು ಮಾಡಿಕೊಳ್ಳಬೇಕು ಎಂಬುದನ್ನು ಕೈಬಿಡಬೇಕು ಎಂದು ನಿರ್ಧರಿಸಿದ್ದೆ" ಎಂದು ಅವರ ತಾಯಿ ಬೆಕಿ ವಿಡಿಯೋದ ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ 12,000ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಈ ವಿಡಿಯೋ ನೋಡಿ 350ಕ್ಕೂಹೆಚ್ಚು ನೆಟ್ಟಿಗರು ಇದನ್ನು ಇಷ್ಟಪಟ್ಟಿದ್ದು, ಅವರು ಸಹ ಹುಡುಗನ ಪ್ರತಿಕ್ರಿಯೆ ನೋಡಿ ಭಾವುಕರಾಗಿದ್ದಾರೆ.
Son's reaction at finding out he's going to be a big brother
"I had just cried my eyes out the day before & told him I was so sorry I could never give him a sibling. I had decided to stop trying 4 weeks prior" his mother, Becky writes.😭❤.
(🎥:Beckyc253) pic.twitter.com/cE3iPBXjnC
— GoodNewsCorrespondent (@GoodNewsCorres1) August 27, 2021
"ಹುಡುಗನ ಪ್ರತಿಕ್ರಿಯೆ ತುಂಬಾ ಸುಂದರವಾಗಿದೆ, ಇವನು ತುಂಬಾ ಒಳ್ಳೆಯ ಅಣ್ಣನಾಗುತ್ತಾನೆ" ಎಂದು ಒಬ್ಬರು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು "ನಾನು ಸಹ ಭಾವುಕನಾಗಿದ್ದೇನೆ, ಎಂತಹ ಪ್ರೀತಿ" ಎಂದು ಬರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ