ಈಗಂತೂ ಚಿಕ್ಕ ಮಕ್ಕಳಿಂದ ಹಿಡಿದು ಶಾಲೆ (School), ಕಾಲೇಜಿಗೆ (College) ಹೋಗುವ ಮಕ್ಕಳವರೆಗೆ ಅಷ್ಟೇ ಏಕೆ ವಯೋ ವೃದ್ದರೂ ಸಹ ಸದಾ ಮೊಬೈಲ್ ಫೋನ್ ಹಿಡಿದುಕೊಂಡು ಅದರ ಸ್ಕ್ರೀನ್ ಅನ್ನು ಕೆಳಕ್ಕೆ ಮೇಲಕ್ಕೆ ಮಾಡುತ್ತಾ ಸಮಯ ವ್ಯರ್ಥ ಮಾಡುವುದನ್ನು ನಾವೆಲ್ಲಾ ನೋಡುತ್ತೇವೆ. ಹೌದು, ಅದರಲ್ಲೂ ಈ ಶಾಲೆಗೆ ಹೋಗುವ ಮಕ್ಕಳಂತೂ ಗೇಮ್ಸ್ ಗಳನ್ನು (Games) ಆಡುತ್ತಾ ಮತ್ತು ಅದರಲ್ಲಿ ಬರುವ ರೈಮ್ಸ್ ಗಳನ್ನು ಕೇಳುತ್ತಾ ರಾತ್ರಿ ಹಗಲು ಎನ್ನದೆ ಅದರ ಮುಂದೆಯೇ ಇರುತ್ತಾರೆ ಅಂತ ಹೇಳಬಹುದು. ಇದನ್ನು ನೋಡಿ ನೋಡಿ ತಂದೆ-ತಾಯಿಗಳಿಗಂತೂ ಎಲ್ಲಿ ತಮ್ಮ ಮಕ್ಕಳು ಮೊಬೈಲ್ ಫೋನಿನಲ್ಲಿ (Mobile Phone) ತುಂಬಾ ಹೊತ್ತಿನವರೆಗೂ ಗೇಮ್ಸ್ ಆಡುವುದರಿಂದ ಕಣ್ಣುಗಳಿಗೆ ಹಾನಿಯಾಗುತ್ತದೆಯೋ ಅನ್ನೋ ಚಿಂತೆ ಕಾಡುತ್ತಲೇ ಇರುತ್ತದೆ ಅಂತ ಹೇಳಬಹುದು.
ಗೇಮ್ಸ್ ಅಂದಾಗ ಮೊಬೈಲ್ ಫೋನ್ ಅಷ್ಟೇ ಅಲ್ಲದೆ ಈ ವೀಡಿಯೋ ಗೇಮ್ ಗಳಿಂದಲೂ ಸಹ ಮಕ್ಕಳ ಕಣ್ಣಿಗೆ ಹಾನಿಯಾಗುತ್ತದೆ ಮತ್ತು ಅವರು ರಾತ್ರಿ ಹೊತ್ತು ಸುಮ್ಮನೆ ಮಲಗದೆ ವೀಡಿಯೋ ಗೇಮ್ ನ ಸ್ಕ್ರೀನ್ ನೋಡುವುದರಿಂದ ನಿದ್ರೆಯ ಮೇಲೂ ಸಹ ಪರಿಣಾಮ ಬೀರುತ್ತದೆ.
ಆದ್ದರಿಂದ ಹೆಚ್ಚಿನ ಪೋಷಕರು ಮಕ್ಕಳಿಗೆ ಮೊಬೈಲ್ ಫೋನ್ ಮತ್ತು ವೀಡಿಯೋ ಗೇಮ್ ಗಳು ಕೈಗೆ ಸಿಗದಂತೆ ದೂರವಿಡಲು ಅನೇಕ ಉಪಾಯಗಳನ್ನು ಮಾಡುತ್ತಲೇ ಇರುತ್ತಾರೆ ಅಂತ ಹೇಳಬಹುದು.
ಮಗ ರಾತ್ರಿ ಹೊತ್ತು ಕದ್ದು ಮುಚ್ಚಿ ವೀಡಿಯೋ ಗೇಮ್ ಆಡ್ತಿದ್ನಂತೆ..
ಇಲ್ಲೊಬ್ಬ ತಂದೆ ತನ್ನ ಮಗ ರಾತ್ರಿ ಹೊತ್ತಿನಲ್ಲಿ ಕದ್ದು ಮುಚ್ಚಿ ವೀಡಿಯೋ ಗೇಮ್ ಆಡುತ್ತಾನೆ ಅಂತ, ಅವನ ಮೇಲೆ ನಿಗಾ ಇಡಲು ಎಂತಹ ಉಪಾಯವನ್ನು ಮಾಡಿದ್ದಾನೆ ನೀವೇ ನೋಡಿ.
ತಮ್ಮ 16 ವರ್ಷ ವಯಸ್ಸಿನ ಮಗ ವೀಡಿಯೋ ಗೇಮ್ ಆಡುವುದರ ಮೇಲೆ ನಿಗಾ ಇಡಲು ತಂದೆ ಅವನ ಕೋಣೆಯಲ್ಲಿ ಒಂದು ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದಾರೆ ನೋಡಿ.
ತನ್ನ ಕೋಣೆಯಲ್ಲಿ ಸಿಸಿಟಿವಿ ಕ್ಯಾಮೆರಾ ಹಾಕಿಸಿದರ ಬಗ್ಗೆ ಮಗ ಹೇಳಿದ್ದೇನು ನೋಡಿ..
ಹದಿಹರೆಯದ ಹುಡುಗ ತನ್ನ ತಂದೆ ಈ ರೀತಿಯಾಗಿ ತನ್ನ ಕೋಣೆಯಲ್ಲಿ ಸಿಸಿಟಿವಿ ಕ್ಯಾಮೆರಾ ಹಾಕಿದ್ದ ಒಂದು ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾನೆ.
ಇದನ್ನೂ ಓದಿ: ಇಂದು ಭೂಮಿಯಲ್ಲಿ ಅಲ್ಲೋಲ ಕಲ್ಲೋಲ, ಅಪ್ಪಳಿಸುತ್ತಾ ಸೌರ ಬಿರುಗಾಳಿ?
"ನಮಗೆ ಗೌಪ್ಯತೆ ಇಲ್ಲ, ನನ್ನ ಮತ್ತು ನನ್ನ ಸಹೋದರನ ಕೋಣೆಯಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಹಾಕಿದ್ದಾರೆ" ಎಂದು ಅದಕ್ಕೆ ಶೀರ್ಷಿಕೆಯನ್ನು ಸಹ ಬರೆದಿದ್ದಾನೆ ಆ ಹುಡುಗ. ಈ ಸಿಸಿಟಿವಿ ಕ್ಯಾಮೆರಾ ನಿಜವಾಗಿಯೂ ತನ್ನ ಕೋಪಗೊಂಡ ತಂದೆ ನಮಗೆ ವಿಧಿಸಿದ ಶಿಕ್ಷೆಯಾಗಿದೆ ಅಂತ ಆ ಹುಡುಗ ಹೇಳಿದ್ದಾನೆ.
ಒಂದು ವರ್ಷದ ಹಿಂದೆ ಕೂಡ ತನ್ನ ತಂದೆ ತನ್ನ ಸಹೋದರನ ಪ್ಲೇ ಸ್ಟೇಷನ್ ನಲ್ಲಿ ತಡರಾತ್ರಿ ಆಟವಾಡುತ್ತಿರುವಾಗ ಹಠಾತ್ತನೆ ಕೋಣೆಗೆ ಬಂದು ನನ್ನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು ಎಂದು ಆ ಹುಡುಗ ಹೇಳಿಕೊಂಡಿದ್ದಾನೆ.
ಹದಿಹರೆಯದ ಹುಡುಗ ತನ್ನನ್ನು ಸಮರ್ಥಿಸಿಕೊಳ್ಳುತ್ತಾ ಆ ವೀಡಿಯೋ ಗೇಮ್ ಕೈಗೆ ತೆಗೆದುಕೊಳ್ಳುವ ಮೊದಲು ತಾನು ಮೂರು ಗಂಟೆಗಳ ಕಾಲ ಅಧ್ಯಯನ ಮಾಡಿದ್ದೇನೆ ಅಂತ ಹೇಳಿದ್ದಾನೆ.
ಆದರೆ ಅವನ ತಂದೆ ಮಾತ್ರ ಅವನಿಂದ ಯಾವುದೇ ರೀತಿಯ ವಿವರಣೆಗಳನ್ನು ಕೇಳಲು ಸಿದ್ಧರಿರಲಿಲ್ಲವಂತೆ ಮತ್ತು ಈ ಹುಡುಗ ಪ್ರತಿದಿನ ರಾತ್ರಿ ಆಟವಾಡುತ್ತಾರೆ ಅಂತ ಅವರ ತಂದೆ ತಿಳಿದುಕೊಂಡಿದ್ದಾರಂತೆ ಎಂದು ಆ ಹುಡುಗ ಹೇಳಿದನು.
ಹುಡುಗ ಓದಿನಲ್ಲೂ ತುಂಬಾನೇ ಬುದ್ದಿವಂತನಂತೆ..
ಮಗನ ಈ ವೀಡಿಯೋ ಗೇಮ್ ಆಟದಿಂದ ತುಂಬಾನೇ ಕೋಪಗೊಂಡ ತಂದೆ ಹುಡುಗನನ್ನು ಅವನ ಹುಟ್ಟುಹಬ್ಬದ ದಿನದ ರಾತ್ರಿ ಮತ್ತೊಮ್ಮೆ ವೀಡಿಯೋ ಗೇಮ್ ಆಡುವಾಗ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಇದನ್ನೂ ಓದಿ: ನಾಯಿಗೆ ಮರುಜನ್ಮ ನೀಡಿದ ChatGPT! ಇಡೀ ವೈದ್ಯಲೋಕವನ್ನೇ ಅಚ್ಚರಿಗೊಳಿಸಿದ ಟೆಕ್ನಾಲಜಿ
ಎರಡು ದಿನಗಳ ನಂತರ, ಅವರ ಕೋಣೆಯಲ್ಲಿ ಸಿಸಿಟಿವಿ ಕ್ಯಾಮೆರಾ ಹಾಕಿಸಿಯೇ ಬಿಟ್ಟಿದ್ದಾರೆ. "ವಿಪರ್ಯಾಸವೆಂದರೆ ನಾನು ನನ್ನ ತರಗತಿಯಲ್ಲಿ ಟಾಪ್ 10 ವಿದ್ಯಾರ್ಥಿಯಾಗಿದ್ದೇನೆ.
ನಾನು ಯಾವಾಗಲೂ 90 ಪ್ರತಿಶತಕ್ಕಿಂತಲೂ ಹೆಚ್ಚು ಅಂಕಗಳನ್ನು ಪಡೆಯುತ್ತೇನೆ. ಆದ್ದರಿಂದ ನಾನು ರಾತ್ರಿ ಹೊತ್ತು ಸ್ವಲ್ಪ ವೀಡಿಯೋ ಗೇಮ್ ಆಡಿದರೆ ಏನಾಗುತ್ತದೆ” ಅಂತ ಆ ಹುಡುಗ ಕೇಳುತ್ತಾನೆ. ಈ ಪೋಸ್ಟ್ ನೋಡಿದ ಕೆಲವರು ತಂದೆಯು ಮಾಡಿದ್ದು ಸರಿಯಾಗಿದೆ ಅಂತ ಹೇಳಿದರೆ, ಇನ್ನೂ ಕೆಲವರು ಹೀಗೆಲ್ಲಾ ಮಾಡಬಾರದಿತ್ತು ಬಿಡಿ ಮಕ್ಕಳ ಜೊತೆ ಅಂತ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ