ವೈದ್ಯ (Docter) ಮತ್ತು ರೋಗಿಗಳ ನಡುವಣ ಸಂಬಂಧ ದಿನೇ ದಿನೇ ಹಳಸುತ್ತಿರುವ ಇಂದಿನ ದಿನಗಳಲ್ಲಿ, ಆಗಾಗ ಕೇಳಿಬರುವ ವಾಕ್ಯವೆಂದರೆ “ವೈದ್ಯೋ ನಾರಾಯಣೋ ಹರಿಃ” ಎಂಬ ನುಡಿಗಟ್ಟು . ಇದರ ಅರ್ಥ “ವೈದ್ಯನೆಂದರೆ ದೇವರಿಗೆ ಸಮಾನ’ ಎಂಬುದಾಗಿದೆ. ವೈದ್ಯರನ್ನು ದೇವರ (God) ಇನ್ನೊಂದು ರೂಪ ಎನ್ನುತ್ತಾರೆ ಅದನ್ನು ಸುಖಾಸುಮ್ಮನೆ ಹೇಳುವಂತದ್ದಲ್ಲ. ರೋಗಿಗಳನ್ನು ಪ್ರಾಣಾಪಾಯದಿಂದ ಪಾರು ಮಾಡುವ ಶಕ್ತಿಯನ್ನು (Strong) ವೈದ್ಯರು ಹೊಂದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಆದರೆ ಇಂದು ವೈದ್ಯರಿಗೆ ಬೆಲೆ ಕಡಿಮೆ ಆಗಿದೆ ಎಂದೇ ಹೇಳಬಹುದು. ಇದರ ಬಗ್ಗೆ ಹಲವು ಬೆಂಗಳೂರಿನ ವೈದ್ಯರು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಹೃದ್ರೋಗ ತಜ್ಞರು ಹೇಳಿರುವುದೇನು?
ಬೆಂಗಳೂರಿನ ಹೃದ್ರೋಗ ತಜ್ಞರೊಬ್ಬರು ಎಂಬಿಬಿಎಸ್ ವೈದ್ಯರು ರೋಗಿಗಳನ್ನು ಉಚಿತವಾಗಿ ಮತ್ತು ತಮ್ಮ ಕೆಲಸದ ಸಮಯ ಮೀರಿದಾಗಲೂ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವಾಗಲೂ, ಅವರು ಕಡಿಮೆ ಸಂಬಳ ಪಡೆಯುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಮಾತನಾಡಿದ್ದಾರೆ.
ಸಕ್ರಾ ವರ್ಲ್ಡ್ ಹಾಸ್ಪಿಟಲ್‌ನ ಹಿರಿಯ ಇಂಟರ್‌ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ.ದೀಪಕ್ ಕೃಷ್ಣಮೂರ್ತಿ ಅವರು ಮಾತನಾಡಿ, “ಬಹುತೇಕ ವೈದ್ಯರಿಗೆ ಆರಂಭಿಕ ವೇತನ ಸುಮಾರು 10,000 ರೂ. ಮತ್ತು 20,000 ರೂ. ಆಗಿದೆ.
ಆದರೆ ಅದೇ ಎಂಜಿನಿಯರ್‌ಗಳ ವೇತನ ವರ್ಷಕ್ಕೆ 15 ರಿಂದ 20 ಲಕ್ಷ ರೂ. ಗಳಷ್ಟು ಆಗಿದೆ. ಇಂಜಿನಿಯರ್‌ಗಳು ಹೆಚ್ಚಿನ ಸಂಬಳವನ್ನು ಪಡೆಯುತ್ತಿರಬೇಕಾದರೆ, ತಮ್ಮ ಜೀವವನ್ನು ಲೆಕ್ಕಿಸದೇ ರೋಗಿಗಳ ಜೀವ ಉಳಿಸುತ್ತಿರುವ ವೈದ್ಯರ ಸಂಬಳ ಯಾಕೆ ಇಷ್ಟು ಕಡಿಮೆ ಎಂಬುದೇ ಅರ್ಥವಾಗ್ತಿಲ್ಲ" ಎಂದು ಸಂಶೋಧನಾ ಲೇಖನವೊಂದನ್ನು ಉಲ್ಲೇಖಿಸಿ ಕೃಷ್ಣಮೂರ್ತಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Divorce Photoshoot ಮಾಡಿಸಿಕೊಂಡ ಯುವತಿ! ಟ್ರೆಂಡ್ ಅಂದ್ರೆ ಹೀಗೂ ಇರುತ್ತಾ?
ಬೆಂಗಳೂರಿನ ಕಾಲೇಜೊಂದು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಸೀಟಿಗೆ 64 ಲಕ್ಷ ರೂ. ಕಾಲೇಜು ಶುಲ್ಕವನ್ನು ವಿಧಿಸುತ್ತಿರುವುದರ ಬಗ್ಗೆ ತಿಳಿಸಲಾಗಿದೆ. "ಎಂಬಿಬಿಎಸ್ ನ ನಂತರ ಪ್ರಾರಂಭಿಕ ವೇತನವು ತಿಂಗಳಿಗೆ 10 ರಿಂದ 20K ರೂ.ಗಳಷ್ಟು ಕಡಿಮೆಯಾಗಿದೆ. ಬಿಟೆಕ್ ನಂತರ ವರ್ಷಕ್ಕೆ 15 ರಿಂದ 20 ಲಕ್ಷ ರೂ. ಸಂಬಳ ಪಡೆಯುತ್ತಿದ್ದಾರೆ. ಆದರೆ ಈ ಭಾಗ್ಯ ವೈದ್ಯರಿಗೆ ಇಲ್ಲ” ಎಂದು ಲೇಖನದಲ್ಲಿ ಬರೆಯಲಾಗಿದೆ.
“ಜೀವ ಉಳಿಸುವ ವೈದ್ಯರು ಇಷ್ಟು ಕಡಿಮೆ ಸಂಬಳ ಪಡೆದರೆ ಜೀವನ ನಡೆಸುವುದು ನಿಜಕ್ಕೂ ದುಸ್ತರವಾಗಿದೆ. ಇಂಜಿನಿಯರ್‌ಗಳು ತಮ್ಮ ಸಂಬಳವನ್ನು ಸಂಭ್ರಮಿಸುತ್ತಿರುವಾಗ ವೈದ್ಯರಿಗೆ ಇದು ಸಾಧ್ಯವಾಗ್ತಿಲ್ಲ ಏಕೆ?” ಎಂದು ಕೃಷ್ಣಮೂರ್ತಿ ಟ್ವೀಟ್ ಮಾಡಿದ್ದಾರೆ.
Have you ever seen such positive news about fees in a medical college being high? Or about doctors earning good salary?
The starting salary after MBBS is as low as 10-20k per month. Nowhere to the tune of 15-20lakh per annum being spoken here for post Btech!
How does this… pic.twitter.com/fSzRYUKCAL
— Dr Deepak Krishnamurthy (@DrDeepakKrishn1) April 9, 2023
“ವೈದ್ಯರು ರೋಗಿಗಳ ಜೀವವನ್ನು ಉಳಿಸಲು ತಮ್ಮ ಪ್ರಾಣವನ್ನು ಸಹ ಪಣಕ್ಕಿಟ್ಟ ಉದಾಹರಣೆಗಳನ್ನು ನಾವು ಕೊರೊನಾ ಸಮಯದಲ್ಲಿ ನೋಡಿದ್ದೇವೆ. ಆದರೆ ಅವರು ಈಗ ಪಡೆಯುತ್ತಿರುವ ಸಂಬಳವನ್ನು ಒಮ್ಮೆ ಪರಿಶೀಲಿಸಿದಾಗ ಅವರು ತಮ್ಮ ಆದರ್ಶಗಳನ್ನು ಬದಿಗಿಟ್ಟು ಕೇವಲ ದುಡಿಮೆಗೋಸ್ಕರ ಬದುಕು ನಡೆಸಬೇಕಾಗಬಹುದು.
ಇದನ್ನೂ ಓದಿ: ಜೆಆರ್‌ಡಿ ಟಾಟಾ ಹೇಳಿದ್ದ ಆ ಒಂದು ಮಾತು ಸುಧಾಮೂರ್ತಿ ಅವರಿಗೆ ಇಂದಿಗೂ ಸ್ಫೂರ್ತಿಯಂತೆ! ಏನದು ಸಲಹೆ?
ವೈದ್ಯರು ದೇವರ ಸ್ವರೂಪ ಆದರೆ ಅವರು ಮನುಷ್ಯರಲ್ಲವೇ? ಇಡೀ ಜಗತ್ತಿಗೆ ಆಹಾರ ಮತ್ತು ಬಟ್ಟೆ ಮತ್ತು ಸಾಮಗ್ರಿಗಳು ಬೇಕು ಆದರೆ ವೈದ್ಯರಿಗೆ ಅವು ಅಗತ್ಯವಿಲ್ಲವೇ” ಎಂದು ಕೃಷ್ಣಮೂರ್ತಿ ಪ್ರಶ್ನಿಸಿದ್ದಾರೆ.
"ಪ್ರತಿ ಉದ್ಯಮದಲ್ಲೂ ಸಾಕಷ್ಟು ಲಾಭವನ್ನು ಎಲ್ಲರೂ ಗಳಿಸುತ್ತಿದ್ದಾರೆ. ಅದರಲ್ಲೂ ಸಿಗರೇಟ್ ಮತ್ತು ಆಲ್ಕೋಹಾಲ್ ತಯಾರಕರು ಸೇರಿದಂತೆ ಅನಿಯಮಿತ ಲಾಭಗಳನ್ನು ಗಳಿಸಬಹುದು ಆದರೆ ವೈದ್ಯರು ಮತ್ತು ಆಸ್ಪತ್ರೆಗಳಿಗೆ ಈ ಅವಕಾಶವಿಲ್ಲ. ಕೆಟ್ಟ ದಾರಿ ಹಿಡಿದು ಹೆಚ್ಚು ಹಣ ಗಳಿಸುವ ಅವಕಾಶವನ್ನು ಎಲ್ಲರೂ ಪಡೆದಿರುವಾಗ ವೈದ್ಯರಿಗೆ ಮಾತ್ರ ಇದಕ್ಕೆ ಅರ್ಹರಲ್ಲ” ಎಂದು ಅವರು ಹೇಳಿದ್ದಾರೆ.
ತಮ್ಮ ಮಾತನ್ನು ಮುಂದುವರಿಸುತ್ತಾ, "ವೈದ್ಯರು, ಆರೋಗ್ಯ ಕಾರ್ಯಕರ್ತರು, ಶಿಕ್ಷಕರು ಮತ್ತು ಸಶಸ್ತ್ರ ಪಡೆಗಳ ಪ್ರಾಮುಖ್ಯತೆಯನ್ನು ಸಮಾಜವು ಅರ್ಥಮಾಡಿಕೊಳ್ಳುವವರೆಗೂ ಈ ಸಮಾಜ ಬೆಳವಣಿಗೆ ಹೊಂದಲು ಸಾಧ್ಯವಿಲ್ಲ.
ಅದನ್ನು ಅರ್ಥಮಾಡಿಕೊಂಡಾಗ ಮಾತ್ರ ಈ ಸಮಾಜವು ಶ್ರೇಷ್ಠವಾಗುತ್ತದೆ. ವೈದ್ಯರಿಗೆ ನೀಡಬೇಕಾದ ಶುಲ್ಕವನ್ನು ಸೂಕ್ತವಾಗಿ ನೀಡಿ” ಎಂದು ಡಾ. ಕೃಷ್ಣಮೂರ್ತಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ