Teachers Day 2021: ನಾಳಿನ ಟೀಚರ್ಸ್​ ಡೇಗೆ ನಿಮ್ಮ ಶಿಕ್ಷಕರಿಗೆ ಈ ರೀತಿಯಾಗಿ ವಿಶ್ ಮಾಡಿ..! ನಿಮ್ಮ ಪ್ರೀತಿಗೆ ಅವರು ಫಿದಾ ಆಗೋದು ಗ್ಯಾರಂಟಿ

ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ವಿಭಿನ್ನ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಲು ಶಿಕ್ಷಕರ ದಿನಾಚರಣೆಯ ಕೆಲವು ಭಾಷಣ ವಿಚಾರಗಳು ಇಲ್ಲಿವೆ.

ಟೀಚರ್ಸ್​ ಡೇ

ಟೀಚರ್ಸ್​ ಡೇ

  • Share this:
ಸೆಪ್ಟೆಂಬರ್ 5 ಅಂದರೆ ನಾಳೆ ಶಿಕ್ಷಕರ ದಿನಾಚರಣೆ(Teachers Day). ಪ್ರತೀ ವರ್ಷ ಸೆ.5ನ್ನು ಭಾರತದಾದ್ಯಂತ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ ಪ್ರತಿಯೊಬ್ಬ ವಿದ್ಯಾರ್ಥಿಯು(Student) ತಮ್ಮ ಶಿಕ್ಷಕರು(Teachers), ಮಾರ್ಗದರ್ಶಕರು ಮತ್ತು ಜೀವನದಲ್ಲಿ ಯಾವುದೇ ಪಾಠ ಕಲಿಸಿದ ಯಾರಿಗಾದರೂ ಕೃತಜ್ಞತೆಯನ್ನು ಸಲ್ಲಿಸುತ್ತಾನೆ. ಭಾರತದ ಎರಡನೇ ರಾಷ್ಟ್ರಪತಿ ಮತ್ತು ಅತ್ಯುತ್ತಮ ಶಿಕ್ಷಕರಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್(Dr Sarvepalli Radhakrishnan) ಅವರ ಜನ್ಮದಿನ(Birthday)ವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷ ಶಿಕ್ಷಕರ ದಿನಾಚರಣೆಯು ಹೆಚ್ಚು ವಿಶೇಷವಾಗಿರುತ್ತದೆ. ಏಕೆಂದರೆ ಕೊರೋನಾ(Corona Pandemic) ಕಾರಣದಿಂದ ಬಹಳ ಸಮಯದವರೆಗೆ ಮುಚ್ಚಲ್ಪಟ್ಟಿದ್ದ ಶಾಲೆಗಳು(Schools Reopen) ಹಂತ-ಹಂತವಾಗಿ ಶುರುವಾಗುತ್ತಿವೆ. ಹೀಗಾಗಿ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುತ್ತಿದ್ದು, ನಾಳೆ ಇರುವ ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬಹುದಾಗಿದೆ.

ಸೆ.5 ರಂದು ಶಿಕ್ಷಕರ ದಿನಾಚರಣೆಯನ್ನು ವಿಶೇಷ ಮತ್ತು ಸ್ಮರಣೀಯವಾಗಿಸಲು ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಗೌರವಾರ್ಥವಾಗಿ ವಿವಿಧ ರೀತಿಯ ಭಾಷಣಗಳು, ಕವಿತೆ-ಕವನಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ವಿಭಿನ್ನ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಲು ಶಿಕ್ಷಕರ ದಿನಾಚರಣೆಯ ಕೆಲವು ಭಾಷಣ ವಿಚಾರಗಳು ಇಲ್ಲಿವೆ.

ಶಿಕ್ಷಕರ ದಿನ 2021: ಭಾಷಣದ ವಿಷಯಗಳು

ಕೋವಿಡ್​-19 ಸಮಯದಲ್ಲಿ ಶಿಕ್ಷಕರು

ಕೊರೋನಾ ಸಮಯದಲ್ಲಿ ಜೀವನ ಸಾಗಿಸುವುದು ಯಾರಿಗೂ ಸಹ ಅಷ್ಟು ಸುಲಭವಲ್ಲ. ಈ ಕೋವಿಡ್-19 ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಯಾವ ರೀತಿ ಪರಿಣಾಮ ಬೀರಿತೋ ಅದೇ ರೀತಿ ಶಿಕ್ಷಕರ ಮೇಲೂ ಮಾನಸಿಕವಾಗಿ ಪ್ರಭಾವ ಬೀರಿತು. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಭಾಷಣದಲ್ಲಿ ಕೋವಿಡ್​-19 ಸಮಯದಲ್ಲಿ ಶಿಕ್ಷಕರ ಪಾತ್ರದ ಬಗ್ಗೆ ಸೇರಿಸಬಹುದಾಗಿದೆ. ಶಿಕ್ಷಕರು ಸದಾ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತಿಸುತ್ತಾರೆ ಮತ್ತು ಅವರಿಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುತ್ತಾರೆ ಎಂಬುದನ್ನು ವಿದ್ಯಾರ್ಥಿಗಳು ತಮ್ಮ ಭಾಷಣ ಅಥವಾ ಲೇಖನದಲ್ಲಿ ಹೇಳಬಹುದಾಗಿದೆ.

ಇದನ್ನೂ ಓದಿ:Karnataka Weather Today: ಕರ್ನಾಟಕದಲ್ಲಿ ಸೆ.6ವರೆಗೂ ಮಳೆಯ ಆರ್ಭಟ; ಕರಾವಳಿ ಸೇರಿ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ಆನ್​ಲೈನ್​ ತರಗತಿಗಳು ಮತ್ತು ಶಿಕ್ಷಕರ ಶ್ರಮ

ಮಾರಕ ಕೊರೋನಾ ವೈರಸ್​ ವಕ್ಕರಿಸಿದ ಬಳಿಕ ಇಡೀ ಶಿಕ್ಷಣ ವ್ಯವಸ್ಥೆಯೇ ಬದಲಾಗಿದೆ. ಶಾಲೆಗಳು ಮುಚ್ಚಲ್ಪಟ್ಟಿದ್ದು, ವಿದ್ಯಾರ್ಥಿಗಳು ಆನ್​ಲೈನ್ ಶಿಕ್ಷಣದ ಮೊರೆ ಹೋಗುತ್ತಿದ್ದಾರೆ. ಶಿಕ್ಷಕರೂ ಸಹ ಇದರಿಂದ ಹೊರತಾಗಿಲ್ಲ. ಕೊರೋನಾ ಸಮಯದಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ವಿದ್ಯಾರ್ಥಿಗಳಿಗೆ ಆನ್​ಲೈನ್​ನಲ್ಲೇ ಪಾಠ-ಪ್ರವಚನ ಮಾಡುತ್ತಿದ್ದಾರೆ. ತಮ್ಮ ವೈಯಕ್ತಿಕ ಸಮಸ್ಯೆಗಳು ಎಷ್ಟೇ ಇದ್ದರೂ ಸಹ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಧನ್ಯವಾದ ಸಲ್ಲಿಸಬಹುದು.

ಜೀವನ ಪಾಠ ಕಲಿಸಿದ ಗುರುವಿಗೆ ಧನ್ಯವಾದ

ಶಿಕ್ಷಕರು ಕೇವಲ ಪುಸ್ತಕದಲ್ಲಿರುವ ಪಾಠ ಮಾತ್ರ ಹೇಳಿಕೊಡಲ್ಲ. ಅವರು ಪ್ರತಿನಿತ್ಯ ಜೀವನದ ಪಾಠವನ್ನು ಕಲಿಸುತ್ತಾರೆ. ಹೀಗಾಗಿ ವಿದ್ಯಾರ್ಥಿಗಳು ತಮಗೆ ಜೀವನ ಪಾಠ ಕಲಿಸಿದ ಗುರುಗಳ ಬಗ್ಗೆ ಮಾತನಾಡಿ ಧನ್ಯವಾದ ತಿಳಿಸಬಹುದಾಗಿದೆ.

ಆನ್​ಲೈನ್​ ಕ್ಲಾಸ್​ ವೇಳೆಯ ಯಾವುದಾದರೊಂದು ಘಟನೆ

ಶಿಕ್ಷಕರ ದಿನಾಚರಣೆಗೆ ಇಂತಹ ವಿಷಯದ ಬಗ್ಗೆಯೇ ಮಾತನಾಡಬೇಕು ಎಂಬುದೇನಿಲ್ಲ. ಬದಲಾಗಿ ನೀವು ಆನ್​ಲೈನ್​ ತರಗತಿ ಕೇಳುವಾಗ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ನಡೆದ ಯಾವುದಾದರೂ ಸಂಭಾಷಣೆ ಅಥವಾ ನೆನಪಲ್ಲಿಡುವಂತಹ ಸುಂದರ ಕ್ಷಣಗಳನ್ನು ಹಂಚಿಕೊಳ್ಳಬಹುದು. ಯಾಕೆಂದರೆ, ಕೋವಿಡ್​-19 ಬಳಿಕ ಎಲ್ಲರಿಗೂ ಆನ್​ಲೈನ್​ ತರಗತಿಗಳು ಹೊಸದಾಗಿ ಪರಿಚಯವಾಗಿವೆ. ಹೀಗಾಗಿ ತಮ್ಮ ಹೊಸ ಅನುಭವವನ್ನು ಇಲ್ಲಿ ಹಂಚಿಕೊಳ್ಳಬಹುದಾಗಿದೆ.

ಇದನ್ನೂ ಓದಿ:Karnataka Cabinet Meeting: ಇಂದು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ; ಈ ವಿಚಾರಗಳ ಬಗ್ಗೆ ಚರ್ಚೆ

ಶಿಕ್ಷಕರಿಗೆ ವಿದ್ಯಾರ್ಥಿಗಳ ಮೇಲಿರುವ ಪ್ರೀತಿ

ಶಿಕ್ಷಕ-ವಿದ್ಯಾರ್ಥಿ ನಡುವೆ ಅದೊಂದು ಅವಿನಾಭಾವ ಸಂಬಂಧವಿದೆ. ವಿದ್ಯಾರ್ಥಿ ತನ್ನ ಹೆಚ್ಚಿನ ಸಮಯವನ್ನು ಮನೆಗಿಂತ ಶಾಲೆಯನ್ನು ಕಳೆಯುತ್ತಾನೆ. ಹೀಗಾಗಿ ವಿದ್ಯಾರ್ಥಿ ಮತ್ತು ಗುರುವಿನ ನಡುವೆ ಒಂದು ಉತ್ತಮ ಬಾಂಧವ್ಯ ವೃದ್ಧಿಯಾಗಿರುತ್ತದೆ. ಶಿಕ್ಷಕರಿಗೆ ತಮ್ಮ ವಿದ್ಯಾರ್ಥಿಗಳ ಮೇಲೆ ಅತೀವ ಪ್ರೀತಿಯಿದ್ದು, ಅವರ ಭವಿಷ್ಯದ ಭದ್ರ ಬುನಾದಿ ಹಾಕಲು ಸದಾ ಯೋಚಿಸುತ್ತಿರುತ್ತಾರೆ. ಇದೇ ವಿಷಯವನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಗೆ ತಮ್ಮ ಭಾಷಣವನ್ನು ಮಾಡಬಹುದಾಗಿದೆ.
Published by:Latha CG
First published: