School: ಈ ಪೆಟ್ಟಿಗೆ ಇಣುಕಿ ನೋಡಿದ ಪ್ರತಿ ಮಗುವಿನ ಮುಖದಲ್ಲೂ ಮುಗುಳ್ನಗೆ: ಶಿಕ್ಷಕನ ಐಡಿಯಾ ಏನು ಅಂತೀರಾ? ವಿಡಿಯೋ ನೋಡಿ

ಈ ವಿಡಿಯೋ ಶುರುವಾದಾಗ ಆರಂಭದಲ್ಲಿ ಹಲವಾರು ವಿದ್ಯಾರ್ಥಿಗಳು ತರಗತಿಯಲ್ಲಿ ಒಬ್ಬೊಬ್ಬರಾಗಿ ಬಂದು ಅಲ್ಲೇ ತರಗತಿಯ ಮುಂದೆ ಇರಿಸಲಾದ ಒಂದು ಪೆಟ್ಟಿಗೆಯನ್ನು ನೋಡುತ್ತಿರುವುದನ್ನು ನಾವು ನೋಡಬಹುದು.

ಶಿಕ್ಷಕ ಮತ್ತು ಮಕ್ಕಳು

ಶಿಕ್ಷಕ ಮತ್ತು ಮಕ್ಕಳು

  • Share this:
ಸಾಮಾನ್ಯವಾಗಿ ನಾವೆಲ್ಲಾ ಚಿಕ್ಕವರಾಗಿದ್ದಾಗ (Childhood) ಶಾಲೆಯಲ್ಲಿ (School) ಓದುತ್ತಿರಬೇಕಾದರೆ ನಮ್ಮ ತರಗತಿಗೆ ಬಂದು ಅನೇಕ ವಿಷಯಗಳನ್ನು (Subject) ಹೇಳಿಕೊಡುವಂತಹ ಅನೇಕ ಜನ ಶಿಕ್ಷಕರಿಗೆ (Teachers) ಅವರದೇ ಆದಂತಹ ಕೆಲವು ಅಚ್ಚುಮೆಚ್ಚಿನ ವಿದ್ಯಾರ್ಥಿಗಳಿರುವುದನ್ನು (Students) ನಾವು ನೋಡಿರುತ್ತೇವೆ. ಕೆಲವೊಮ್ಮೆ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಕರು ಇಡೀ ತರಗತಿಯಲ್ಲಿಯೇ ಯಾರನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ತಿಳಿದುಕೊಳ್ಳುವ ಹಂಬಲ ತುಂಬಾನೇ ಇರುತ್ತದೆ. ಏಕೆಂದರೆ ಚಿಕ್ಕವರಾಗಿದ್ದಾಗ ಸಾಮಾನ್ಯವಾಗಿಯೇ ನಮಗೆ ಎಲ್ಲರೂ ಇಷ್ಟ ಪಡಬೇಕು, ನಮ್ಮನ್ನು ಯಾರು ಹೆಚ್ಚು ಇಷ್ಟಪಡುತ್ತಾರೆ ಎಂದು ತಿಳಿದುಕೊಳ್ಳಬೇಕೆಂಬ ಆಸೆ ತುಂಬಾನೇ ಇರುತ್ತದೆ.

ಇಂತಹ ಒಂದು ಶಾಲೆಗೆ ಮತ್ತು ಅದರಲ್ಲೂ ಒಂದು ತರಗತಿಗೆ ಸಂಬಂಧಪಟ್ಟಂತಹ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುವುದು ತುಂಬಾನೇ ವಿರಳ ಎಂದು ಹೇಳಬಹುದು. ಇಲ್ಲಿ ಇಂತಹ ಒಂದು ಅಪರೂಪದ ವಿಡಿಯೋವೊಂದಿದೆ ನೋಡಿ.

ಹುಲುಸಿ ಆಕೀರ್ ಅವರ ಖಾತೆಯಿಂದ ವಿಡಿಯೋ, ಫೋಟೋ ಶೇರ್

ಹುಲುಸಿ ಆಕೀರ್ ಎಂಬ ಶಿಕ್ಷಕ ತನ್ನ ನವೀನ ಮತ್ತು ಆರೋಗ್ಯಕರ ಶೈಕ್ಷಣಿಕ ತಂತ್ರಗಳಿಂದಾಗಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದಾರೆ.

ಟರ್ಕಿ ಮೂಲದ ಈ ವ್ಯಕ್ತಿಯು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುವಂತಹ ಫೋಟೋಗಳು ಮತ್ತು ವಿಡಿಯೋಗಳು ಆಗಾಗ್ಗೆ ಒಳ್ಳೆಯ ಕಾರಣಗಳಿಗಾಗಿ ವೈರಲ್ ಆಗುತ್ತವೆ. ಈ ಬಾರಿಯು ವೈರಲ್ ಆಗಿರುವ ಮತ್ತು ಅವರ ಪುಟದಿಂದ ಹಂಚಿಕೊಳ್ಳಲಾದ ವಿಡಿಯೋವನ್ನು ಎಲ್ಲರೂ ಮಿಸ್ ಮಾಡದೆ ನೋಡಬೇಕಾದದ್ದು ಎಂದು ಹೇಳಿದರೆ ತಪ್ಪಾಗುವುದಿಲ್ಲ.




ವೈರಲ್ ವಿಡಿಯೋದಲ್ಲಿ ಏನಿದೆ?

ಈ ವಿಡಿಯೋ ಶುರುವಾದಾಗ ಆರಂಭದಲ್ಲಿ ಹಲವಾರು ವಿದ್ಯಾರ್ಥಿಗಳು ತರಗತಿಯಲ್ಲಿ ಒಬ್ಬೊಬ್ಬರಾಗಿ ಬಂದು ಅಲ್ಲೇ ತರಗತಿಯ ಮುಂದೆ ಇರಿಸಲಾದ ಒಂದು ಪೆಟ್ಟಿಗೆಯನ್ನು ನೋಡುತ್ತಿರುವುದನ್ನು ನಾವು ನೋಡಬಹುದು. ಆದರೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಬಂದು ಆ ಪೆಟ್ಟಿಗೆಯಲ್ಲಿ ಇಣುಕಿ ನೋಡಿದಾಗ ಪ್ರತಿಯೊಬ್ಬ ವಿದ್ಯಾರ್ಥಿಯ ಮುಖದ ಮೇಲೆ ಮಧುರವಾದ ಮುಗುಳ್ನಗೆ ಇರುವುದನ್ನು ನಾವು ವಿಡಿಯೋ ಮುಂದುವರೆದಂತೆ ನೋಡಬಹುದು. ಬಹುಶಃ ಈ ಸಂದರ್ಭವು ಈ ವಿಡಿಯೋದ ಅತ್ಯಂತ ಮುದ್ದಾದ ಭಾಗವೆಂದು ಹೇಳಬಹುದು.

ಇದನ್ನೂ ಓದಿ:  Optical Illusions: ಈ ಚಿತ್ರದಲ್ಲಿರುವ 16 ವೃತ್ತಗಳು ನಿಮಗೆ ಕಾಣಿಸುತ್ತಿವೆಯೇ?

ಈ ವಿಡಿಯೋಗೆ ಟರ್ಕಿ ಭಾಷೆಯಲ್ಲಿ ಶೀರ್ಷಿಕೆಯನ್ನು ಬರೆಯಲಾಗಿದೆ ಮತ್ತು ಅದರ ಭಾಷಾಂತರವು ಹೇಳುವುದೇನೆಂದರೆ ಈ ತರಗತಿಯ ಶಿಕ್ಷಕನು ತನ್ನ ನೆಚ್ಚಿನ ವಿದ್ಯಾರ್ಥಿಯ ಫೋಟೋವನ್ನು ಈ ಒಂದು ಪೆಟ್ಟಿಗೆಯಲ್ಲಿ ಹಾಕಿದ್ದಾರೆ ಎಂದು ತನ್ನ ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ ಎಂದು ವಿವರಿಸುತ್ತದೆ.

ನೆಚ್ಚಿನ ವಿದ್ಯಾರ್ಥಿಯ ಫೋಟೋ

ಇದು ಸ್ಪಷ್ಟವಾಗಿ ಹೇಳುವುದಾದರೆ ತರಗತಿಯಲ್ಲಿರುವ ಎಲ್ಲಾ ವಿದ್ಯಾರ್ಥಿಗಳನ್ನು ಖುಷಿ ಪಡಿಸಿತು ಎಂದು ಹೇಳಬಹುದು, ಏಕೆಂದರೆ ಅವರೆಲ್ಲಾ ಹೋಗಿ ಆ ಪೆಟ್ಟಿಗೆಯಲ್ಲಿ ಒಬ್ಬೊಬ್ಬರಾಗಿ ಇಣುಕಿ ನೋಡಿ ಆ ನೆಚ್ಚಿನ ವಿದ್ಯಾರ್ಥಿಯ ಫೋಟೋವನ್ನು ನೋಡಿ ಹೋದರು.

ಫೋಟೋ ಬದಲಾಗಿ ಕನ್ನಡಿ ಇರಿಸಿದ್ದ ಶಿಕ್ಷಕ

ಆ ಪೆಟ್ಟಿಗೆಯಲ್ಲಿರುವ ಒಂದು ವಿದ್ಯಾರ್ಥಿಯ ಫೋಟೋ ಹೇಗೆ ತರಗತಿಯ ಎಲ್ಲಾ ಮಕ್ಕಳಿಗೆ ಖುಷಿ ನೀಡಿತು ಎಂದು ನಿಮಗೆ ಪ್ರಶ್ನೆಯೊಂದು ಕಾಡಬಹುದು. ಇಲ್ಲಿದೆ ನೋಡಿ ಅದಕ್ಕೆ ಉತ್ತರ, ಈ ವಿಡಿಯೋದ ಕೊನೆಯಲ್ಲಿ, ಶಿಕ್ಷಕನು ಈ ಪೆಟ್ಟಿಗೆಯಲ್ಲಿ ಯಾರ ಫೋಟೋವನ್ನು ಇಟ್ಟಿಲ್ಲ, ಬದಲಾಗಿ ಒಂದು ಕನ್ನಡಿಯನ್ನು ಇಟ್ಟಿದ್ದಾನೆ ಮತ್ತು ಇದು ಎಲ್ಲಾ ವಿದ್ಯಾರ್ಥಿಗಳ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ ಎಂಬ ಅಂಶದಿಂದ ಪ್ರತಿ ಮಗುವು ಹೇಗೆ ಆಹ್ಲಾದಕರವಾಗಿ ಆಶ್ಚರ್ಯಚಕಿತವಾಯಿತು ಎಂಬುದನ್ನು ನಾವು ಇಲ್ಲಿ ನೋಡಬಹುದು.

ಇದನ್ನೂ ಓದಿ:  Cow Dung: ಭಾರತದ ಸಗಣಿ ಮೇಲೆ ಅಮೆರಿಕನ್ನರ ಕೆಂಗಣ್ಣು, ವಿಮಾನ ನಿಲ್ದಾಣದಲ್ಲಿ ಇನ್ನು ಇದನ್ನು ತಲುವಂತೆಯೇ ಇಲ್ಲ!

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಈ ವಿಡಿಯೋವನ್ನು ಒಂದು ವಾರದ ಹಿಂದೆ ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು ಅಂದಿನಿಂದ, ಇಲ್ಲಿಯವರೆಗೆ ಈ ಸೂಪರ್ ವಿಡಿಯೋವನ್ನು ನೋಡಿದ ಜನರಿಂದ ಹಲವಾರು ಕಾಮೆಂಟ್‌ಗಳನ್ನು ಗಳಿಸಿದೆ. ಇದು 1.6 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಮತ್ತು 87,000ಕ್ಕೂ ಹೆಚ್ಚು ಲೈಕ್‌ಗಳನ್ನು ಸಹ ಪಡೆಯುವುದಲ್ಲದೆ, ಹಲವಾರು ಹೃದಯಸ್ಪರ್ಶಿ ಕಾಮೆಂಟ್‌ಗಳನ್ನು ಸಹ ಪಡೆದಿದೆ.
Published by:Mahmadrafik K
First published: