• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Gadag: ತವರಿಗೆ ಹೋಗೋ ಭರದಲ್ಲಿ 100 ಗ್ರಾಂ ಚಿನ್ನ ಇಟ್ಟಿದ್ದ ಬ್ಯಾಗನ್ನೇ ಮರೆತ ಶಿಕ್ಷಕಿ! ಆಹಾ, ಅಮ್ಮನ ಮನೆಯ ಪ್ರೀತಿಯೋ!

Gadag: ತವರಿಗೆ ಹೋಗೋ ಭರದಲ್ಲಿ 100 ಗ್ರಾಂ ಚಿನ್ನ ಇಟ್ಟಿದ್ದ ಬ್ಯಾಗನ್ನೇ ಮರೆತ ಶಿಕ್ಷಕಿ! ಆಹಾ, ಅಮ್ಮನ ಮನೆಯ ಪ್ರೀತಿಯೋ!

 ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬ್ಯಾಗ್ ನಲ್ಲಿ ಹತ್ತು ತೊಲೆಯ ಚಿನ್ನದ ವಿವಿಧ ಆಭರಣ, 50 ತೊಲೆ ಬೆಳ್ಳಿ ತಟ್ಟೆ, 5 ಸಾವಿರ ನಗದು ಇತ್ತು.  ಅಮ್ಮನ ಮನೆಗೆ ಹೋಗೋ ಸಂಭ್ರಮದಲ್ಲಿ ಬ್ಯಾಗನ್ನೇ ಮರೆತುಬಿಟ್ರು ಶಿಕ್ಷಕಿ.

  • Share this:

ಗದಗ(ಮೇ.08): ತವರು ಮನೆಗೆ ಹೋಗುವ ಆತುರದಲ್ಲಿ ಮಹಿಳೆಯೊಬ್ರು (Woman) ಚಿನ್ನ ಇಟ್ಟಿದ್ದ ಬ್ಯಾಗನ್ನ (Bag) ಬಸ್ ನಲ್ಲೇ ಮರೆತು ಇಳಿದಿದ್ರು.. ವಿಷ್ಯ ತಿಳಿದ ಕೂಡ್ಲೆ ಕಾರ್ಯಪ್ರವೃತ್ತರಾದ ಶಿರಹಟ್ಟಿ ಪೊಲೀಸರು (Police) ಚಿನ್ನ, ಬೆಳ್ಳಿ ಆಭರಣ ತುಂಬಿದ್ದ ವ್ಯಾನಿಟಿ ಬ್ಯಾಗ್ ಪತ್ತೆ ಹಚ್ಚಿ ಮಹಿಳೆಗೆ ಹಿಂತಿರುಗಿಸಿದ್ದಾರೆ. ಹೌದು ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ತಂಗೋಡಕ್ಕೆ ಹೊರಟಿದ್ದ ಧಾರವಾಡ ಮೂಲದ ಮಹಿಳೆ, ಸಹೋದರನ ಮನೆ ಕಾರ್ಯದಲ್ಲಿ ಭಾಗಿಯಾಗಿ ಬೇಕು ಅನ್ನೋ ಖುಷಿಯಲ್ಲಿದ್ರು. ಜೊತೆಗೆ 10 ತೊಲೆ (100 grams)ಚಿನ್ನದ ಆಭರಣ ಸಹೋದರನಿಗೆ ಉಡುಗೊರೆ ಕೊಡೋದಕ್ಕೆ ಅಂತಾ ತಂದಿದ್ದ 50 ಗ್ರಾಂ ತೂಕದ  ಬೆಳ್ಳಿ (Silver) ಆರತಿ ತಟ್ಟೆಯನ್ನ ವ್ಯಾನಿಟಿ ಬ್ಯಾಗ್ ನಲ್ಲಿ ತೆಗೆದುಕೊಂಡು ಹೊರಟಿದ್ರು‌‌.‌


ಧಾರವಾಡ ಮೂಲಕ ಹುಬ್ಬಳ್ಳಿಗೆ ಬಂದು ಅಲ್ಲಿಂದ ಶಿರಹಟ್ಟಿ ಬಸ್ ಹತ್ತಿದ್ರು. ಸಂಜೆ ಏಳು ಗಂಟೆ ಸುಮಾರಿಗೆ ಶಿರಹಟ್ಟಿ ತಲುಪಿದ್ರು‌. ಶಿರಹಟ್ಟಿ ತಾಲೂಕಿನ ತಂಗೋಡ ಬಸ್ ಏರೋದಕ್ಕೆ ಅಂತಾ ಶಿರಹಟ್ಟಿ ಬಸ್ ನಿಲ್ದಾಣದಲ್ಲಿ ಇಳಿದಿದ್ರು. ಮಗುವನ್ನ ಜೊತೆಗೆ ಕರೆದ್ಕೊಂಡು ಬಸ್ ಇಳಿಯೋ ಆತುರದಲ್ಲಿ ಬ್ಯಾಗ್ ಬಸ್ ನಲ್ಲೇ ಉಳಿದಿತ್ತು.


ವ್ಯಾನಿಟಿ ಬ್ಯಾಗ್ ಮಿಸ್ ಆಗಿದ್ದು ಗೀತಾ ಅವರ ಗಮನಕ್ಕೇ ಬರಲಿಲ್ಲ


ಬಸ್ ಇಳಿಯುವ ದಾವಂತದಲ್ಲಿ ವ್ಯಾನಿಟಿ ಬ್ಯಾಗ್ ಮಿಸ್ ಆಗಿದ್ದು ಗೀತಾ ಅವರ ಗಮನಕ್ಕೆ ಬಂದಿರಲಿಲ್ಲ. ಬಸ್ ಇಳಿದ್ಕೂಡಲೇ ಬ್ಯಾಗ್ ಚೆಕ್ ಮಾಡುವ ಸಂಧರ್ಭದಲ್ಲಿ ವ್ಯಾನಿಟಿ ಬ್ಯಾಗ್ ನಾಪತ್ತೆಯಾಗಿದ್ದು ಗಮನಕ್ಕೆ ಬರುತ್ತೆ‌‌. ನಂತ್ರ ಕೂಡ್ಲೆ ಶಿರಹಟ್ಟಿ ಪೊಲೀಸರಿಗೆ ಭೇಟಿಯಾಗಿ ವಿಷ್ಯ ತಿಳಿಸಿದ್ರು. ಕೂಡಲೆ ಕಾರ್ಯಪ್ರವೃತ್ತರಾದ ಶಿರಹಟ್ಟಿಯ ಪೊಲೀಸರು ಬ್ಯಾಗ್ ಪತ್ತೆ ಹಚ್ಚಿದ್ದಾರೆ.


ಪೊಲೀಸರಿಗೆ ವಿಷಯ ತಿಳಿಸಿದ ಶಿಕ್ಷಕಿ


ಹೌದು ಹುಬ್ಬಳ್ಳಿಯಿಂದ ಶಿಂಗಟಾಲೂರಿಗೆ ಹೊರಟ್ಟಿದ ಬಸ್ ಹತ್ತಿದ್ದ ಗೀತಾ ಶಿರಹಟ್ಟಿಯಲ್ಲಿ ಇಳಿದುಕೊಂಡಿದ್ರು. ಆದ್ರೆ ಆ ಸಮಯದಲ್ಲಿ ಬ್ಯಾಗ್ ಮಿಸ್ ಆಗಿದ್ದ ಬಗ್ಗೆ ತಿಳಿದ ತಕ್ಷಣವೇ ತಡ ಮಾಡದೆ ಗೀತಾ ಅವರು ವಿಷಯವನ್ನ ಪೊಲೀಸರಿಗೆ ತಿಳಿಸಿದ್ದಾರೆ.


Hand bag story gadag
ಚಿನ್ನವಿದ್ದ ಬ್ಯಾಗ್ ಸುರಕ್ಷಿತವಾಗಿ ಮರಳಿಸಿದ ಪೊಲೀಸರು


ಸಿಪಿಐ ವಿಕಾಸ ಲಮಾಣಿ ಅವರ ಮಾರ್ಗದಶನದಲ್ಲಿ ಪಿಎಸ್ ಐ ಪ್ರವೀಣ್ ಗಂಗೋಳ ಆ್ಯಂಡ್ ಟೀಮ್ ಬ್ಯಾಗ್ ನಲ್ಲಿ ಏನು ಇಟ್ಟಿದ್ರಿ ಅನ್ನೋ ಮಾಹಿತಿ ಪಡೆದ್ರು. ಚಿನ್ನ ಬೆಳ್ಳಿ ಜೊತೆ ಮೊಬೈಲ್ ಫೋನ್ ಇಟ್ಟಿರೋ ಬಗ್ಗೆಯೂ ಗೀತಾ ಪೊಲೀಸರಿಗೆ ಮಾಹಿತಿ ನೀಡಿದ್ರು. ಕೂಡಲೆ ಬೊಬೈಲ್ ಲೊಕೇಷನ್ ಟ್ರೇಸ್ ಮಾಡಿದ ಪೊಲೀಸರು, ಶಿರಹಟ್ಟಿ ಬಸ್ ನಿಲ್ದಾಣಕ್ಕೆ ತೆರಳಿ ಪರಿಶೀಲನೆ ನಡೆಸಿದ್ರು.


ಇದನ್ನೂ ಓದಿ: Love Story: ಪತ್ನಿಯ ಮೃತದೇಹದ ಜೊತೆ 21 ವರ್ಷ ಬದುಕಿದ ವೃದ್ಧ, ಕೊನೆಗೂ ಅಂತ್ಯಸಂಸ್ಕಾರ ಮಾಡಿದ


ಬೆಳ್ಳಟ್ಟಿ ಕಡೆಗೆ ಬಸ್ ಹೊರಟಿರೋ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಗುತ್ತೆ ಮೊಬೈಲ್ ಲೊಕೇಷನ್ ನಲ್ಲೂ ಬೆಳ್ಳಟ್ಟಿ ಬಸ್ ನಿಲ್ದಾಣ ತೋರಿಸಿತ್ತು. ಬೆಳ್ಳಟ್ಟಿ ಹೊರಠಾಣೆಗೆ ವೈಯಲ್ ಲೆಸ್ ಮೆಸೇಜ್ ನ್ನ ಪೊಲೀಸ್ರು ನೀಡಿದ್ರು. ಬಸ್ ನಿಲ್ದಾಣಕ್ಕೆ ತರಳಿದ ಪೊಲೀಸ್ ಸಿಬ್ಬಂದಿ, ಬಸ್ ಪರಿಶೀಲಿಸಿದಾಗ ಬ್ಯಾಗ್ ಸೀಟ್ ಮೇಲೆ ಇರೋದು ಪತ್ತೆಯಾಗಿದೆ.ಕೂಡಲೆ ಬೆಳ್ಳಟ್ಟಿಗೆ ತೆರಳಿದ ಗೀತಾ ಕುಟುಂಬ ಬ್ಯಾಗ್ ಪಡೆದುಕೊಂಡಿತ್ತು.


ಚಿನ್ನದ ವಿವಿಧ ಆಭರಣ, 50 ತೊಲೆ ಬೆಳ್ಳಿ ತಟ್ಟೆ, 5 ಸಾವಿರ ನಗದು


ಬ್ಯಾಗ್ ನಲ್ಲಿ ಹತ್ತು ತೊಲೆಯ ಚಿನ್ನದ ವಿವಿಧ ಆಭರಣ, 50 ತೊಲೆ ಬೆಳ್ಳಿ ತಟ್ಟೆ, 5 ಸಾವಿರ ನಗದು ಇತ್ತು.  ಆಭರಣ ಹಾಗೂ ಮೊಬೈಲ್ ಫೋನ್  ಪೊಲೀಸರು ಗೀತಾಳಿಗೆ ಮರಳಿಸಿದ್ದಾರೆ.‌ ಚಿನ್ನ ಇಟ್ಟಿದ್ದ ಬ್ಯಾಗನ್ನ ಜೊತೆಗೆ ತೆಗೆದುಕೊಂಡು ಇಳಿದಿದ್ದೆ ಅಂತಾ ಅನ್ಕೊಂಡಿದ್ದಳು ಗೀತಾ. ಆದ್ರೆ, ಬ್ಯಾಗ್ ಮಿಸ್ ಆಗಿತ್ತು. ಪೊಲೀಸರು ಸಹಾಯದಿಂದ ಚಿನ್ನ ಸಿಕ್ಕಿದೆ. ಬ್ಯಾಗ್ ಹುಡುಕಿ ಕೊಡುವಲ್ಲಿ ಶಿರಹಟ್ಟಿ ಪೊಲೀಸರು ನೆರವಾಗಿದ್ದಾರೆ.


ಇದನ್ನೂ ಓದಿ: Dream-11: 2 ಕೋಟಿ ರೂಪಾಯಿ ಗೆದ್ದು ಶ್ರೀಮಂತನಾದ ಚಾಲಕ; 49 ರೂಪಾಯಿಗೆ ಹೊಡೆಯಿತು ಜಾಕ್‌ಪಾಟ್!


ಹೀಗಾಗಿ ಶಿರಹಟ್ಟಿ ಪೊಲೀಸರ ಕಾರ್ಯ ಖುಷಿ ಅಂತಿದ್ದೇ . ಶಿರಹಟ್ಟಿ ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ ಗೀತಾ ಅಭಿನಂದನೆ  ಸಲ್ಲಿಸಿದ್ದಾಳೆ‌. ಸಮಯಕ್ಕೆ ಸರಿಯಾಗಿ ಕಾರ್ಯಪ್ರವೃತ್ತರಾಗಿ ಚಿನ್ನ ಹುಡುಕುವಲ್ಲಿ ಸಹಾಯ ಮಾಡಿದ ಶಿರಹಟ್ಟ ಸಿಪಿಐ ವಿಕಾಸ ಲಮಾಣಿ, ಪಿಎಸ್‌ಐ ಪ್ರವೀಣ ಗಂಗೋಳ ಪ್ರೋಪಿಎಸ್‌ಐ ಶಿವಾನಂದ ಶಿಂಗಣ್ಣವರ ಹಾಗೂ ಸಿಬ್ಬಂದಿ ಕಾರ್ಯಕ್ಕೆ ಎಸ್ ಪಿ ಶಿವಪ್ರಕಾಶ ದೇವರಾಜು, ಡಿವೈಎಸ್ ಪಿ ಎಸ್ ಆರ್ ಪವಾಡಶೆಟ್ಟಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

top videos
    First published: