Teacher: ನಾಳೆ ಶಾಲೆಗೆ ಹೋಗಲು ಇಂದೇ ಮೇಕಪ್ ಮಾಡ್ಕೊತಾರೆ ಈ ಟೀಚರ್!

Viral Story: ಇಲ್ಲೊಬ್ಬರು ಶಿಕ್ಷಕಿಗೂ (Teacher) ಮೇಕಪ್ ಎಂದರೆ ಇಷ್ಟವಂತೆ. ಹಾಗಾಗಿ ಆಕೆ ಶಾಲೆಗೆ ಮೇಕಪ್​ ಮಾಡಿಕೊಂಡು ಹೋಗುತ್ತಾರೆ. ಆದರೆ ವಿಚಾರ ಅದಲ್ಲ, ಈ ಶಿಕ್ಷಿಕಿ ನಾಳೆ ಶಾಲೆಗೆ ತೆರಳಲು ಇಂದು ರಾತ್ರಿಯೇ (Night) ಮೇಕಪ್​ ಮಾಡುತ್ತಾರಂತೆ.

ಹೆನ್ನಾ

ಹೆನ್ನಾ

  • Share this:
    ಮಹಿಳೆಯರಿಗೆ (Womens) ಮೇಕಪ್ (Makeup)​ ಮಾಡುವುದು ಎಂದರೆ ತುಂಬಾ ಇಷ್ಟ! ಕಾರ್ಯಕ್ರಮಕ್ಕೆ ಹೋಗುವುದಿದ್ದರೆ, ಮಹಿಳೆಯರು ಮುಂಚಿತವಾಗಿಯೇ ಮೇಕಪ್​ ಮಾಡಲು ರೆಡಿಯಾಗುತ್ತಾರೆ. ಆದರೆ ಮಹಿಳೆಯರು ಮೇಕಪ್​ ಮಾಡಲು, ಬಟ್ಟೆ ತೊಡಲು (Dress) ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಇನ್ನು ಕೆಲವರು ಮಹಿಳೆಯರು ಕಾರ್ಯಕ್ರಮಕ್ಕೆ (Function) ಹೋಗುವುದಕ್ಕೂ ಮುನ್ನವೇ ಬೇಗನೆ ಎದ್ದು ಮೇಕಪ್​ ಮಾಡಿಕೊಂಡು ರೆಡಿಯಾಗಲು ಬಯಸುತ್ತಾರೆ. ಒಟ್ಟಿನಲ್ಲಿ ನೋಡುಗರಿಗೆ ವಾವ್ (Wow)​ ಎಂದು ಹೇಳಿಸಿಕೊಳ್ಳಲು ಮಹಿಳೆಯರು ಮೇಕಪ್​ ಮಾಡುತ್ತಾರೆ. ಹಾಗಾಗಿ ಮಹಿಳೆಯರು ಮೇಕಪ್ ಎಂದರೆ ತುಂಬಾನೇ ಇಷ್ಟ ಪಡುತ್ತಾರೆ. ಆದರೆ ಇಲ್ಲೊಂದು ಅಚ್ಚರಿಯ ಸಂಗತಿ ಇದೆ. ಅದೇನೆಂದರೆ ಇಲ್ಲೊಬ್ಬರು ಶಿಕ್ಷಕಿಗೂ (Teacher) ಮೇಕಪ್ ಎಂದರೆ ಇಷ್ಟವಂತೆ. ಹಾಗಾಗಿ ಆಕೆ ಶಾಲೆಗೆ ಮೇಕಪ್​ ಮಾಡಿಕೊಂಡು ಹೋಗುತ್ತಾರೆ. ಆದರೆ ವಿಚಾರ ಅದಲ್ಲ, ಈ ಶಿಕ್ಷಿಕಿ ನಾಳೆ ಶಾಲೆಗೆ ತೆರಳಲು ಇಂದು ರಾತ್ರಿಯೇ (Night) ಮೇಕಪ್​ ಮಾಡುತ್ತಾರಂತೆ.

    ಇತ್ತೀಚೆಗಷ್ಟೇ ಅಮೆರಿಕದ ಕೆಂಟುಕಿಯ ಶಾಲಾ ಶಿಕ್ಷಕಿ ಹೆನ್ನಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳಿಗೆ ಅಚ್ಚರಿಯ ವಿಷಯವೊಂದನ್ನು ಹೇಳಿದ್ದಾರೆ. ಹೆನ್ನಾ ಅವರು ಟಿಕ್‌ಟಾಕ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು  ಮರುದಿನ ಶಾಲೆಗೆ ಹೋಗಲು ರಾತ್ರಿಯೇ ಸಿದ್ಧವಾಗುತ್ತಾರಂತೆ.

    ಅಂದಹಾಗೆಯೇ ನಾಳೆ ಶಾಲೆಗೆ ತೆರಳಿ ಪಾಠ ಮಾಡಲು ಆಕೆ ಇಂದು ರಾತ್ರಿ ತನ್ನ ಮೇಕಪ್ ಮಾಡುತ್ತಾಳೆ ಮತ್ತು ಹಾಗೆ ಮಲಗುತ್ತಾಳೆ. ಮರುದಿನ ಅದೇ ರೀತಿ ಶಾಲೆಗೆ ಹೋಗುತ್ತಾಳೆ. ಒಟ್ಟಿನಲ್ಲಿ ಮೇಕಪ್​ ಮಾಡಲು ಈ ಶಿಕ್ಷಿಕಿ ರಾತ್ರಿಯೇ ಸಿದ್ಧತೆ ಮಾಡುತ್ತಾರೆ. ಅಂದಹಾಗೆಯೇ, ಹಾನ್ನಾ ಈ ಆಶ್ಚರ್ಯಕರವಾದ ಕೆಲಸವನ್ನು ಏಕೆ ಮಾಡುತ್ತಾರೆ ಎಂದು ತಿಳಿಯೋಣ.

    ಕಾರಣವನ್ನು ನೀಡಿದ ಶಿಕ್ಷಕಿ

    ಶಿಕ್ಷಕಿ ಹಂಚಿಕೊಂಡ ವೀಡಿಯೊದಲ್ಲಿ, ಆಕೆ ರಾತ್ರಿಯಲ್ಲಿ ತನ್ನ ಮುಖದ ಮೇಲೆ ಫೌಂಡೇಶನ್ ಅನ್ನು ಅನ್ವಯಿಸುವುದನ್ನು ಮತ್ತು ಕೂದಲನ್ನು ಟವೆಲ್‌ನಿಂದ ಸುತ್ತಿಕೊಂಡಿರುವುದನ್ನು ಕಾಣಬಹುದು. ಬೆಳಗ್ಗೆ ಮೇಕಪ್​ ಮಾಡಲು ಮತ್ತು ಬೇಗ ಎದ್ದೇಳಲು ಸೋಮಾರಿತನ ಕಾಡುವುದರಿಂದ ಈ ಶಿಕ್ಷಕಿ ರಾತ್ರಿಯೇ ತನ್ನ ಮುಖಕ್ಕೆ ಮೇಕಪ್​ ಹಾಕಿಕೊಂಡು ಮಲಗುತ್ತಾಳೆ.

    ಶಿಕ್ಷಕಿ ಏನೇ ಆದರು ಮೇಕಪ್​ ಇಲ್ಲದೆ ಶಾಲೆಗೆ ತೆರಳಿಲ್ಲವಂತೆ. ರಾತ್ರಿ ಅದಕ್ಕಾಗಿ ಸಮಯ ನೀಡಿ. ನಂತರ ಮಲಗುತ್ತಾಳೆ. ಬೆಳಗ್ಗೆ ಎದ್ದು ಕೂದಲನ್ನ ಸ್ವಲ್ಪ ಸರಿಪಡಿಸಿ ನಂತರ ಶಾಲೆಗೆ ಹೊರಡುತ್ತಾಳೆ. ಆಕೆಯ ಮೇಕಪ್​ ಮತ್ತು ಮುಖದ ಮೇಲಿನ ಕಾಳಜಿಯನ್ನು ಗಮನಿಸುವುದಾದರೆ ಬೆಳಗ್ಗೆ ಎದ್ದ ಮೇಲೂ ಆಕೆಯ ಮೇಕಪ್ ಕೆಡುವುದಿಲ್ಲವಂತೆ.

    ಇದನ್ನು ಓದಿ: Adult Star: ಟೀಚರ್​​ ಕೆಲಸ ಬಿಟ್ಟು ಅಡಾಲ್ಟ್​ ತಾರೆಯಾದಳು.. ಈಗ ತಿಂಗಳಿಗೆ 81 ಲಕ್ಷ ಎಣಿಸುತ್ತಿದ್ದಾಳೆ!

    ಸಾಮಾಜಿಕ ಜಾಲತಾಣಗಳಲ್ಲಿಯೂ ಶಿಕ್ಷಕಿಯ ಈ ಕೆಲಸವನ್ನು ನೋಡಿ ಜನ ಪ್ರತಿಕ್ರಿಯಿಸಿದ್ದಾರೆ. ರಾತ್ರಿ ಮೇಕಪ್ ಹಾಕಿಕೊಂಡು ಮಲಗುವುದರಿಂದ ತ್ವಚೆ ಹಾಳಾಗುತ್ತದೆ ಎಂದು ಕೆಲವರು ಶಿಕ್ಷಕಿಗೆ ಬುದ್ಧಿ ಮಾತು ಹೇಳಿದ್ದಾರೆ.

    ಇಷ್ಟು ದಿನ ಮುಖದ ಮೇಲೆ ಮೇಕಪ್ ಮಾಡುವುದರಿಂದ ಮುಖದ ಮೇಲೆ ಅಲರ್ಜಿಯ ಪ್ರತಿಕ್ರಿಯೆಗಳು ಉಂಟಾಗಬಹುದು. ಹೀಗೆ ಮಾಡುವುದರಿಂದ ಇಡೀ ದಿನ ಹೆನ್ನಾ ಮುಖಕ್ಕೆ ಮೇಕ್ಅಪ್ ಹಚ್ಚಿದಂತಾಗುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ.

    ಇದನ್ನು ಓದಿ: Red Ants: ಕಡಲೆ ಹುರಿದಂತೆ ಇರುವೆಯನ್ನು ಹುರಿದು ತಿನ್ನುತ್ತಾರೆ ಈ ದೇಶದ ಜನರು! ಇದು ಆರೋಗ್ಯಕ್ಕೆ ಭಾರೀ ಒಳ್ಳೆಯದಂತೆ

    ಹಾನ್ನಾ ಅವರು ಶಾಲೆಯಿಂದ ಮನೆಗೆ ಬಂದ ತಕ್ಷಣ ಮೇಕ್ಅಪ್ ಅನ್ನು ಸ್ವಚ್ಛಗೊಳಿಸುವ ಬಗ್ಗೆ  ಕಾಮೆಂಟ್​ನಲ್ಲಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಶಿಕ್ಷಕಿಗೆ ಮೇಕಪ್​ ಎಂದರೆ ಬಲು ಇಷ್ಟ. ತಾನೂ ಚಂದವಾಗಿ ಕಾಣಲು ಮೇಕಪ್​ ಬಳಿದುಕೊಳ್ಳುತ್ತಾರೆ. ಆದರೆ ರಾತ್ರಿಯೇ ಈ ಕೆಲಸ ಮಾಡುತತಾರೆಂದರೆ ನಿಜಕ್ಕೂ ಅಚ್ಚರಿಯಲ್ಲದೆ ಮತ್ತೇನು!
    Published by:Harshith AS
    First published: