Viral Video: ಕಾಲು ಒದ್ದೆಯಾಗುತ್ತೆ ಅಂತ ವಿದ್ಯಾರ್ಥಿಗಳಿಂದ ಕುರ್ಚಿ ಹಿಡಿಸಿದ ಶಿಕ್ಷಕಿಗೆ ಆಯ್ತು ತಕ್ಕ ಶಾಸ್ತಿ!

ಮಳೆ ನೀರಿನಿಂದ ತುಂಬಿರುವ ಆವರಣದಲ್ಲಿ ಬಂದರೆ ತನ್ನ ಕಾಲು ಒದ್ದೆಯಾಗುತ್ತೆ ಎಂಬ ಕಾರಣದಿಂದ ವಿದ್ಯಾರ್ಥಿಗಳಿಂದ ಕುರ್ಚಿ ಹಿಡಿದು ತರಗತಿ ಪ್ರವೇಶಿಸಿದ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.

ವಿದ್ಯಾರ್ಥಿಗಳಿಂದ ಕುರ್ಚಿ ಹಿಡಿಸಿ ನಡೆದುಕೊಂಡು ಬರುತ್ತಿರುವ ಶಿಕ್ಷಕಿ

ವಿದ್ಯಾರ್ಥಿಗಳಿಂದ ಕುರ್ಚಿ ಹಿಡಿಸಿ ನಡೆದುಕೊಂಡು ಬರುತ್ತಿರುವ ಶಿಕ್ಷಕಿ

  • Share this:
ಮುಂದೆ ಗುರಿ ಇರಬೇಕು ,ಹಿಂದೆ ಗುರು ಇರಬೇಕು ಅನ್ನುವ ಮಾತಿದೆ. ಅಂದರೆ ಒಬ್ಬ ವಿದ್ಯಾರ್ಥಿಯು (School) ಒಂದು ನಿರ್ದಿಷ್ಟವಾದ ಗುರಿಯನ್ನು ಹೊಂದಿರಬೇಕು ಮತ್ತು ಅದಕ್ಕೆ  ಗುರುವಾದವನು ಪೂರಕವಾದ ಸಹಕಾರವನ್ನು, ಮಾರ್ಗದರ್ಶನವನ್ನು ನೀಡಬೇಕು ಎಂಬುದಾಗಿದೆ. ವ್ಯಕ್ತಿಯ ಜೀವನದ (Life) ರೂಪಣೆಯಲ್ಲಿ ಗುರುವಿನ ಪಾತ್ರ ಮಹತ್ತವಾದುದಾಗಿದೆ. ಆದರೆ ಇದಕ್ಕೆ ವ್ಯತಿರಿಕ್ತ ಎಂಬಂತೆ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವೊಂದು ಹರಿದಾಡುತ್ತಿದ್ದು. ಶಿಕ್ಷಕಿಯೊಬ್ಬಳು (Teacher) ಮಳೆಯಿಂದಾಗಿ (Rain) ತುಂಬಿದ ನೀರಿನಲ್ಲಿ ಕಾಲನ್ನು ತಾಗಿಸದೆ ವಿದ್ಯಾರ್ಥಿಗಳಿಂದ (Students) ಕುರ್ಚಿಯನ್ನು (Chair)  ಹಿಡಿಸಿ ಅದರ ಮೇಲಿಂದ ನಡೆದು ತರಗತಿಯೊಳಗೆ (Classroom) ಹೋಗುವ ಕ್ರೂರ ದೃಶ್ಯವನ್ನು ಅದರಲ್ಲಿ ಗಮನಿಸಬಹುದು.

ಉತ್ತರ ಪ್ರದೇಶದ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳು ಹಾಕಿದ್ದ ಪ್ಲಾಸ್ಟಿಕ್ ಕುರ್ಚಿಗಳ ಮೇಲೆ ಹರಸಾಹಸ ಮಾಡಿ ತರಗತಿಯೊಳಗೆ ಪ್ರವೇಶಿಸಿದ ವಿಡಿಯೋ ವೈರಲ್ ಆಗಿದ್ದು, ಆಕೆಯನ್ನು ವಜಾ ಮಾಡಲಾಗಿದೆ.

ನೀರಿನ ಮೇಲೆ ನಿಂತು ಕುರ್ಚಿ ಹಿಡಿದಿರುವ ಮಕ್ಕಳು
ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ಗುರವಾದ ಸುರಿದ ಜೋರಾದ ಮಳೆಯಿಂದಾಗಿ ಶಾಲೆಯ ಆವರಣದಲ್ಲಿ ನೀರು ತುಂಬಿಕೊಂಡಿದ್ದು ಶಿಕ್ಷಕಿ ತರಗತಿಯೊಳಗಡೆ ಬರಲು ವಿದ್ಯಾರ್ಥಿಗಳು ನೀರಿನ ಮೇಲೆ ಪ್ಲಾಸ್ಟಿಕ್ ಕುರ್ಚಿ ಹಿಡಿದುಕೊಂಡು ನಿಂತಿದ್ದಾರೆ.

ಇದನ್ನೂ ಓದಿ: Vishwanath Karthikeya: 13 ವರ್ಷದ ಬಾಲಕನಿಂದ ಪರ್ವತಾರೋಹಣದಲ್ಲಿ ವಿಶ್ವದಾಖಲೆ!

ಕುರ್ಚಿಯ ಮೇಲೆ ನಡೆದು ತರಗತಿ ಪ್ರವೇಶಿಸುವ ಶಿಕ್ಷಕಿ
ನೀರಿನ ಮೇಲೆ ಕಾಲು ಸೋಕಿಸದರೆ ಕಾಲು ಒದ್ದೆಯಾಗುತ್ತೆ ಎಂಬ ಕಾರಣದಿಂದ ಶಿಕ್ಷಕಿಯು ಸಣ್ಣ ಮಕ್ಕಳು ಹಿಡಿದಿರುವ ಕುರ್ಚಿಯ ಮೇಲೆ ನಡೆದುಕೊಂಡು ತರಗತಿ ಪ್ರವೇಶಿಸಲು ಮುಂದಾಗುತ್ತಿರುವುದನ್ನು ವೀಡಿಯೋದಲ್ಲಿ ಗಮನಿಸಬಹುದು.

ವೀಡಿಯೋ ಇಲ್ಲಿದೆ ನೋಡಿ:

https://youtu.be/MtkznH05pFM

ವೀಡಿಯೋವನ್ನು ಗಮನಿಸಿದಾದಗ, ವಿದ್ಯಾರ್ಥಿಗಳು ಕುರ್ಚಿಯು ಅಲುಗಾಡಿ ಶಿಕ್ಷಕಿ ಬೀಳಬಹುದು ಎಂಬ ಕಾರಣದಿಂದ ಅವರು ಪ್ರತಿ ಸಲ ಕುರ್ಚಿಗೆ ಶಿಕ್ಷಕಿ ಕಾಲಿಟ್ಟಾಗ ಆ ಕುರ್ಚಿಯನ್ನು ವಿದ್ಯಾರ್ಥಿಗಳು ಗಟ್ಟಿಯಾಗಿ ಹಿಡಿಯುವುವುದನ್ನು ಕಾಣಬಹುದು.

ಈ ಘಟನೆಯಿಂದಾಗಿ ಶಿಕ್ಷಕಿಯ ಆಮಾನತು
ತಾನು ಶಾಲಾ ಆವರಣದಲ್ಲಿ ತುಂಬಿದ ನೀರಿನಲ್ಲಿ ನಡೆದರೆ ತನ್ನ ಕಾಲು ಮತ್ತು ಶೂ ಒದ್ದೆಯಾಗುತ್ತದೆ ಎಂಬ ಕಾರಣದಿಂದ ವಿದ್ಯಾರ್ಥಿಗಳ ಹತ್ತಿರ ಪ್ಲಾಸ್ಟಿಕ್ ಕುರ್ಚಿ ಹಿಡಿಸಿ ಅದರ ಮೇಲೆ ನಡೆದುಕೊಂಡ ಬಂದಿದ್ದಾರೆ. ಈ ರೀತಿಯ ನೀಚ ಕೆಲಸ ಮಾಡಿದಕ್ಕಾಗಿ ಆ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವೀಡಿಯೋ
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿದೆ ಮತ್ತು ಇಂತಹ ಕೆಟ್ಟ ಕೆಲಸವನ್ನು ಮಾಡಿದಂತಹ ಶಿಕ್ಷಕಿಯ ವಿರುದ್ಧ ನೆಟ್ಟಿಗರು ಅಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ವರದಿಯ ಪ್ರಕಾರ, ಈ ವಿಡಿಯೋವನ್ನು ಅಲ್ಲಿನ ಶಿಕ್ಷಕರೊಬ್ಬರೇ ದೃಶ್ಯೀಕರಿಸಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ ಇದರಿಂದಾಗಿ ಇನ್ನು ಮುಂದೆ ವಿದ್ಯಾರ್ಥಿಗಳನ್ನು ಈ ರೀತಿಯಾಗಿ ಬಳಸಿಕೊಳ್ಳುವುದನ್ನು ತಪ್ಪಿಸಬಹುದಾಗಿದೆ.

ಒಬ್ಬ ಶಿಕ್ಷಕನಾದವನು ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸಲು ಬೇಕಾದ ವಿಚಾರಗಹಳನ್ನು ಬೋಧನೆ ಮಾಡುವವನಾಗಬೇಕೆ ಹೊರತು ವಿದ್ಯಾರ್ಥಿಗಳ ಮುಗ್ಧತೆಯನ್ನು ತನ್ನ ಕೆಲಸಗಳಿಗೆ ದುರುಪಯೋಗ ಪಡಿಸಿಕೊಳ್ಳಬಾರದು.

ಇದನ್ನೂ ಓದಿ: Viral Video: ಯಾವುದೇ ಸಪೋರ್ಟ್ ಇಲ್ಲದೆ ಕಲ್ಲಿನ ಬೆಟ್ಟ ಹತ್ತಿದ ಭಿಕ್ಕು! ಅಬ್ಬಾ ಎನರ್ಜಿಯೇ, ನೆಟ್ಟಿಗರು ಫಿದಾ

ಇಂತಹ ಶಿಕ್ಷಕರಿದ್ದರೆ ಶಿಕ್ಷಣದಿಂದಾಗಿ ಉತ್ತಮ ಜೀವನ ನಿರ್ಮಾಣವಾಗುತ್ತದೆ. ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂಬ ನಂಬಿಕೆ ಸುಳ್ಳಾಗುತ್ತದೆ. ತನ್ನ ಜೀವನವನ್ನೇ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಮುಡಿಪಾಗಿಟ್ಟ ಶಿಕ್ಷಕರ ನಡುವೆ ಇಂತವರು ಇರುವುದು ನಮ್ಮ ಶಿಕ್ಷಣ ವ್ಯವಸ್ಥೆಯ ದುರಂತ.
Published by:Nalini Suvarna
First published: