ಐಟಿ ದೈತ್ಯ ಟಿಸಿಎಸ್ (TCS) 2021- 22 ರ ಎರಡನೇ ತ್ರೈಮಾಸಿಕದಿಂದ ನೇಮಕಾತಿ ಮಾಡಿಕೊಳ್ಳುವ ಭರಾಟೆಯಲ್ಲಿ ಇದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ( Tata Consultancy Services) ತನ್ನ ‘ಸ್ಮಾರ್ಟ್ ಹೈರಿಂಗ್’ (Smart Hiring) ಪ್ರೋಗ್ರಾಂ ಅಡಿಯಲ್ಲಿ ಫ್ರೆಷರ್ಗಳನ್ನು ನೇಮಿಸಿಕೊಳ್ಳುವುದಾಗಿ ಅಕ್ಟೋಬರ್ನಲ್ಲಿ ಘೋಷಣೆ ಮಾಡಿತ್ತು. ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ 43,000 ಹೊಸ ಪದವೀಧರರನ್ನು ನೇಮಿಸಿಕೊಂಡಿರುವುದಾಗಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಹೇಳಿದೆ. ಇದುವರೆಗಿನ ಅವಧಿಯಲ್ಲಿ ಇದು ಅತ್ಯಂತ ದೊಡ್ಡ ಸಂಖ್ಯೆಯಾಗಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಈ ವರ್ಷ ಕನಿಷ್ಟ 35,000 ನೇಮಕಾತಿಗಳನ್ನು ಮಾಡಿಕೊಳ್ಳುವ ಯೋಜನೆಯನ್ನು ಹೊಂದಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಈಗ ನೋಂದಣಿ ದಿನಾಂಕವನ್ನು ನವಂಬರ್ 30 ರ ವರೆಗೆ ವಿಸ್ತರಿಸಿದೆ. ಈ ಮೊದಲು ನೋಂದಣಿಗಳು ನವಂಬರ್ 2ಕ್ಕೆ ಮುಕ್ತಾಯಗೊಳ್ಳುತ್ತಿದ್ದವು. ಅದರೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ನಲ್ಲಿ ನೀವು ಉದ್ಯೋಗವನ್ನು ಪಡೆಯಲು ಅರ್ಜಿ ಸಲ್ಲಿಸುವ ಮೊದಲು, ಆ ಬೃಹತ್ ಐಟಿ ಕಂಪೆನಿ ತನ್ನ ಉದ್ಯೋಗಿಗಳಿಗೆ ಎಷ್ಟು ವೇತನವನ್ನು ನೀಡುತ್ತದೆ ಎಂಬುದನ್ನು ತಿಳಿದುಕೊಳ್ಳಲು ಈ ಮಾಹಿತಿ ಉಪಯೋಗ ಆಗಬಹುದು. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ತನ್ನ ಉದ್ಯೋಗಿಗಳಿಗೆ ನೀಡುವ ಸಂಬಳವನ್ನು ವಿಶ್ಲೇಷಿಸಲು ನಾವು ಜಾಬ್ಬಜ್ (JobBuzz) ನಲ್ಲಿ ನೀಡಲಾಗಿರುವ ಡಾಟಾವನ್ನು ಇಲ್ಲಿ ವಿಶ್ಲೇಷಿಸಿದ್ದೇವೆ.
ಐಟಿ ದೈತ್ಯ ಟಿಸಿಎಸ್ ಸಾಫ್ಟ್ವೇರ್ ಎಂಜಿನಿಯರ್ಗಳ ನೇಮಕಾತಿ ಮಾಡಿಕೊಳ್ಳುತ್ತಿದೆ. ಇನ್ಫೋಸಿಸ್ , ವಿಪ್ರೋ ಮತ್ತು ಹೆಚ್ಸಿಎಲ್ ಕೂಡ. ಹಾಗಾದರೆ ಯಾವ ಕಂಪೆನಿ ಒಳ್ಳೆಯ ವೇತನ ನೀಡುತ್ತದೆ.
1. ಸಾಫ್ಟ್ವೇರ್ ಡೆವಲಪರ್
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ನಲ್ಲಿ ಸಾಫ್ಟ್ವೇರ್ ಡೆವಲಪರ್ಗಳು ವರ್ಷಕ್ಕೆ 5,08,304 ಸಂಬಳ ಪಡೆಯುತ್ತಾರೆ. ಡೆವಲಪರ್ಗಳ ಅನುಭವದ ಆಧಾರದ ಮೇಲೆ ಟಿಸಿಟಸ್ ಕಂಪೆನಿಯು ವರ್ಷಕ್ಕೆ ಕನಿಷ್ಟ 2,83,856 ರೂ ಮತ್ತು ಗರಿಷ್ಟ 8,72,128 ರೂ. ವೇತನವನ್ನು ನೀಡುತ್ತದೆ.
2. ಡಾಟಾ ವೇರ್ಹೌಸ್ ಡೆವಲಪರ್
ಸರಾಸರಿಯಾಗಿ, ಒಬ್ಬ ಡಾಟಾ ವೇರ್ಹೌಸ್ ಡೆವಲಪರ್ಗೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ನಲ್ಲಿ ವಾರ್ಷಿಕ 5,12,313 ರೂ. ವೇತನವನ್ನು, ಅಭ್ಯರ್ಥಿಯ ಅನುಭವದ ಆಧಾರದ ಮೇಲೆ ಅನುಕ್ರಮವಾಗಿ ಕನಿಷ್ಟ 3,10,791 ರೂ. ಮತ್ತು ಗರಿಷ್ಟ 8,61,791 ರೂ. ವೇತನವನ್ನು ನೀಡಲಾಗುತ್ತದೆ.
ಇದನ್ನು ಓದಿ: Well Shape: ಬಾವಿ ವೃತ್ತಾಕಾರದಲ್ಲಿರಲು ಇದೆ ಕಾರಣ!
3. ಸಾಫ್ಟ್ವೇರ್ ಟೆಸ್ಟಿಂಗ್ ಎಂಜಿನಿಯರ್
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ನಲ್ಲಿ ಸಾಫ್ಟ್ವೇರ್ ಟೆಸ್ಟಿಂಗ್ ಎಂಜಿನಿಯರ್ಗಳಿಗೆ ಸರಿ ಸುಮಾರು, ವಾರ್ಷಿಕ 4,83,873 ರೂ. ಸಂಬಳ ನೀಡಲಾಗುತ್ತದೆ. ಅನುಭವದ ಆಧಾರದ ಮೇಲೆ ಟಿಸಿಎಸ್ನಲ್ಲಿ ಟೆಸ್ಟಿಂಗ್ ಎಂಜಿನಿಯರ್ಗೆ ಕನಿಷ್ಟ 2,32,540 ರೂ. ಮತ್ತು ಗರಿಷ್ಟ 8,28,717 ರೂ. ವಾರ್ಷಿಕ ವೇತನ ನೀಡಲಾಗುತ್ತದೆ.
ಇದನ್ನು ಓದಿ: ಬೆಂಗಳೂರಿನಲ್ಲಿದೆ ಲಿಟಲ್ ಬ್ರೆಜಿಲ್; ಇದಕ್ಕಿರುವ ಇತಿಹಾಸದ ಬಗ್ಗೆ ನಿಮಗೆ ಗೊತ್ತೇ?
4. ಟೆಕ್ ಆರ್ಕಿಟೆಕ್ಟ್
ಟಿಸಿಎಸ್ನಲ್ಲಿ ಅನುಭವದ ಆಧಾರದ ಮೇಲೆ ಟೆಕ್ ಆಕಿಟೆಕ್ಟ್ಗೆ ವಾರ್ಷಿಕವಾಗಿ ಗರಿಷ್ಟ 21,54,150 ರೂ. ಮತ್ತು ಕನಿಷ್ಟ 3,74, 950 ರೂ. ವೇತನ ನೀಡಲಾಗುತ್ತದೆ. ಇಲ್ಲಿ ಟೆಕ್ ಆರ್ಕಿಟೆಕ್ಟ್ಗಳು ವಾರ್ಷಿಕವಾಗಿ ಸರಾಸರಿ 10, 99, 717 ರೂ. ವೇತನ ಪಡೆಯುತ್ತಾರೆ.
5. ಪ್ರಾಜೆಕ್ಟ್ ಮ್ಯಾನೆಜರ್
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ನಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಅಥವಾ ಪ್ರಾಜೆಕ್ಟ್ ಲೀಡರ್ಗೆ ವಾರ್ಷಿಕವಾಗಿ ಸರಾಸರಿ 10,50,521 ರೂ. ವೇತನ ನೀಡಲಾಗುತ್ತದೆ. ಅಲ್ಲಿ ಅನುಭವದ ಆಧಾರದ ಮೇಲೆ ಪ್ರಾಜೆಕ್ಟ್ ಮ್ಯಾನೇಜರ್ಗೆ ವಾರ್ಷಿಕವಾಗಿ ಗರಿಷ್ಟ 18,25,076 ರೂ. ಮತ್ತು ಕನಿಷ್ಟ 3,95, 096 ರೂ. ವೇತನ ನೀಡಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ