ಇತ್ತೀಚಿಗಿನ ಕಾಲದಲ್ಲಿ ಟ್ರೆಂಡ್ (Trend) ಯಾವುದೆಲ್ಲಾ ವಿಷಯಗಳಲ್ಲಿ ಆಗುತ್ತೆ ಅಂತ ಗೊತ್ತಾಗೋದೇ ಇಲ್ಲ ನೋಡಿ. ಒಬ್ಬರು ಒಂದು ಸ್ಟೈಲ್ ಆರಂಭ ಮಾಡಿದ್ರೆ ಸಾಕು, ಎಲ್ಲರೂ ಅದನ್ನೇ ಶುರು ಮಾಡ್ತಾರೆ. ಅದೇ ರೀತಿಯಾಗಿ ಈ ಟ್ಯಾಟು ಕೂಡ ಒಂದು. ಒಂದು ಕಾಲದಲ್ಲಿ ಟ್ಯಾಟು (Tattoo) ಹಾಕಿಸಿಕೊಳ್ಳೋದು ಅಂದ್ರೆ ಒಂದು ರೀತಿಯಾಗಿ ಭಯಾನಕವಾಗಿತ್ತು, ಹೆದರುತ್ತಾ ಇದ್ರು ಜನರು. ಆದರೆ, ಈಗ ಅದೇ ಒಂದು ಟ್ರೆಂಡ್ ಆಗಿದೆ ಬಿಡಿ. ಜಾತ್ರೆಗಳಲ್ಲಿ ಕೂಡ ಈ ಟ್ಯಾಟೂ ಹಾಕಿಸಿಕೊಳ್ಳೋದು ಕಾಮನ್ ಆಗಿದೆ. ಅಚ್ಚೆ ಹಾಕಿಸಿಕೊಳ್ಳೋದು ಅಂತ ಇತ್ತು, ಈಗ ಅದುವೇ ಸಖತ್ ಫ್ಯಾಷನ್ (Fashion) ಆಗಿ ಟ್ಯಾಟೂ ಅಂತ ಆಗಿ ಬಿಟ್ಟಿದೆ.
ಈ ಟ್ಯಾಟೂ ಹಾಕಿಸಿಕೊಳ್ಳುವಾಗ ತುಂಬಾ ಜಾಗರೂಕರಾಗಿರಬೇಕು. ಅಂದ್ರೆ ಒಬ್ಬರಿಗೆ ಹಾಕಿದ ಟ್ಯಾಟೂ ಪಿನ್, ಸೂಜಿ, ಮಿಷನ್ನಲ್ಲಿ ಇನ್ನೊಬ್ರಿಗೆ ಯಾವುದೇ ಕಾರಣಕ್ಕೂ ಹಾಕಬಾರದು. ಅದು ಇನ್ನೊಂದು ರೀತಿಯಾಗಿ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ. ಇದೀಗ ತನ್ನ ದೇಹದ ಮೇಲೆಯೇ ಟ್ಯಾಟೂ ಹಾಕಿಸಿಕೊಂಡು ಒಬ್ಬ ಮ್ಯಾನ್ ದಾಖಲೆ ನಿಮಿರ್ಸಿದ್ದಾನೆ. ಯಾರು, ಏನಿದು ವಿಷ್ಯ ಅಂತ ಕೇಳ್ತೀರಾ? ಇಲ್ಲಿದೆ ಸಂಪೂರ್ಣ ಮಾಹಿತಿ.
ಜೇಸನ್ ಮ್ಯಾಥ್ಯೂ ಜಾರ್ಜ್ ಎಂಬ 31 ವರ್ಷದ ಟ್ಯಾಟೂ ಕಲಾವಿದ ತಮ್ಮ ದೇಹದಲ್ಲಿ 540 ಟ್ಯಾಟೂಗಳನ್ನು ಹಚ್ಚೆ ಹಾಕಿಸಿಕೊಂಡಿದ್ದು, ಇದೀಗ ಎರಡು ವಿಶ್ವ ದಾಖಲೆಯನ್ನು ಮಾಡಿದ್ದಾರೆ. ಒಂದು ತನ್ನ ದೇಹದ ಮೇಲೆ 521 ಬ್ರಾಂಡ್ ಲೋಗೋ ಟ್ಯಾಟೂಗಳನ್ನು ಹಚ್ಚೆ ಹಾಕಿಸಿಕೊಂಡಿದ್ದಕ್ಕಾಗಿ ವಿಶ್ವದಾಖಲೆಯನ್ನು ಮಾಡಿದ್ದಾರೆ. ಇನ್ನೊಂದು ಕೇವಲ 10 ದಿನಗಳಲ್ಲಿ ತನ್ನ ದೇಹದ ಮೇಲೆ 100 ಟ್ಯಾಟೂಗಳನ್ನು ಹಚ್ಚೆ ಹಾಕಿಸಿಕೊಳ್ಳುವ ಮೂಲಕ ವಿಶ್ವ ದಾಖಲೆ ಮಾಡಿದ್ದಾರೆ.
ಇದನ್ನೂ ಓದಿ: ಮದುವೆಯಾಗಿ 2 ಮಕ್ಕಳಾದ್ಮೇಲೆ ತಿಳೀತು, ಆಕೆ ಪತ್ನಿಯಲ್ಲ - ಸ್ವಂತ ತಂಗಿ!
ಇವರು ಮೊದಲು ತಾನು ಟ್ಯಾಟೂ ಕಲಾವಿದ ಆಗಬೇಕು ಎಂದು ಯೋಚಿಸಿರಲಿಲ್ಲ. ಬದಲಾಗಿ ಇವರು ಟ್ಯಾಟೂ ಸಂಗ್ರಾಹಕರಾಗಿದ್ದರು. ಒಮ್ಮೆ 2010ರಲ್ಲಿ ಒಬ್ಬ ವ್ಯಕ್ತಿ ಇವರ ಕೈಯನ್ನು ಟ್ಯಾಟೂ ಹಾಕುವ ಸಲುವಾಗಿ ಸಂಪೂರ್ಣ ಹಾಳು ಮಾಡಿದ್ದನಂತೆ, ಈ ಘಟನೆಯೇ ಇವರಿಗೆ ಟ್ಯಾಟೂ ಕಲಾವಿದನಾಗಲು ಮಹತ್ವದ ತಿರುವನ್ನು ನೀಡಿತು. ನಂತರ ಜನರಿಗೆ ಈ ರೀತಿಯ ಕೆಟ್ಟ ಟ್ಯಾಟೂವನ್ನು ಹಾಕದೆ, ಸುಂದರವಾಗಿ ಟ್ಯಾಟೂ ಬಿಡಿಸಬೇಕೆಂದು ಪಣತೊಟ್ಟು ಜೇಸನ್ ಅವರು ಟ್ಯಾಟೂ ಕಲಾವಿದರಾದರು.
2021ರಲ್ಲಿ 0-Z ವರೆಗೆ ಎಲ್ಲಾ ಬ್ರಾಂಡ್ ಹೆಸರುಗಳನ್ನು ತಮ್ಮ ದೇಹದ ಮೇಲೆ ಹಚ್ಚೆ ಹಾಕಿಸಿಕೊಂಡ ಏಕೈಕ ವ್ಯಕ್ತಿಯೆಂಬ ಹೊಸ ದಾಖಲೆಯನ್ನು ಜೇಸನ್ ಪಡೆದುಕೊಂಡಿದ್ದಾರೆ. ಬ್ರಾಂಡ್ ಲೋಗೊಗಳನ್ನು ಹಚ್ಚೆ ಹಾಕಿಸಿಕೊಳ್ಳುವುದು ನನಗೆ ಬಹಳ ಇಷ್ಟ ಎಂದು ಜೇಸನ್ ಹೇಳುತ್ತಾರೆ. ದೇಹದಲ್ಲಿ ಸ್ಥಳಾವಕಾಶ ಇಲ್ಲದ ಕಾರಣ ಜೇಸನ್ ಈಗ ಟ್ಯಾಟೂ ಹಾಕಿಸಿಕೊಳ್ಳುವುದನ್ನು ಕಡಿಮೆ ಮಾಡಿದ್ದಾರಂತೆ.
ಇದನ್ನೂ ಓದಿ: ಈ ಸ್ಥಳದಲ್ಲಿ ಎರಡು ವರ್ಷಗಳಲ್ಲಿ 240 ಸಿಂಹಗಳು ಸಾವನ್ನಪ್ಪಿದ್ಯಂತೆ! ಇದಕ್ಕೆ ಕಾರಣ ಏನು ಗೊತ್ತಾ?
ಜೇಸನ್ ಅವರು ಬದುಕಿನಲ್ಲಿ ಸೋಲು ಗೆಲುವಿನ ಪಾಠ ಕಲಿಯುವ ಸಲುವಾಗಿ ಬ್ರ್ಯಾಂಡ್‌ಗಳ ಹಚ್ಚೆ ಹಾಕಿಸಿದ್ದಾರೆ. ಜೇಸನ್ ಹೇಳುತ್ತಾರೆ, ಕೋಕೋ ಕೋಲಾ ಎಷ್ಟೇ ದೊಡ್ಡವರಾದರೂ ನೀವು ನಿಮ್ಮನ್ನು ಜಾಹೀರಾತು ಮಾಡಿಕೊಳ್ಳಬೇಕು ಎಂಬುದನ್ನು ಕಲಿಸಿದೆ. ಹಾಗೂ ಆಂಡ್ರಾಯ್ಡ್ರ್ನ ನೋಕಿಯ ಸ್ವೀಕರಿಸಿರಲಿಲ್ಲ, ನಂತರ ನೋಕಿಯಾ ಪತನವಾಯಿತು. ಇದರಿಂದ ನೀವು ಎಷ್ಟೇ ದೊಡ್ಡವರಾದರೂ, ಸಮಯಕ್ಕೆ ತಕ್ಕ ಹಾಗೆ ಬದಲಾಗುಬೇಕು ಎಂಬುದನ್ನು ಕಲಿತೆ ಎಂದು ಜೇಸನ್ ಹೇಳುತ್ತಾರೆ.
ಯಾವ ರೀತಿಯ ಟ್ಯಾಟೂ ಇದೆ?
ನನ್ನ ದೇಹದ ಮೇಲೆ ಹಚ್ಚೆ ಹಾಕಿಸಿಕೊಂಡಿರುವ ಈ ಬ್ರ್ಯಾಂಡ್ ಲೋಗೋಗಳು ನನ್ನ ಜೀವನದ ಮೇಲೆ ವೈಯಕ್ತಿಕವಾಗಿ ಪ್ರಭಾವ ಬೀರಿದೆ. ಉತ್ತಮ ಜೀವನ ಪಾಠವನ್ನು ಕಲಿಸಿದೆ. ನನ್ನ ಮೊದಲ ಮೊಬೈಲ್ ಫೋನ್, ನಾನು ಭೇಟಿ ನೀಡಿದ ಸ್ಥಳಗಳು, ನನ್ನ ಕಾಲೇಜು ದಿನಗಳು, ನನ್ನ ನೆಚ್ಚಿನ ಆಟಿಕೆಗಳು ಹೀಗೆ ನನಗೆ ಇಷ್ಟವಾದ ಎಲ್ಲವನ್ನು ನನ್ನ ದೇಹದ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದೇನೆ ಎಂದು ಜೇಸನ್ ಮ್ಯಾಥ್ಯೂ ಜಾರ್ಜ್ ಹೇಳಿದ್ದಾರೆ.
ನೋಡಿದ್ರಲ್ವಾ ಯಾವುದೆಲ್ಲಾ ವಿಷಯಗಳಲ್ಲಿ ಗಿನ್ನಿಸ ರೆಕಾರ್ಡ್ ಮಾಡ್ಬೋದು ಅಂತ. ಪ್ರಸ್ತುತ ಕಾಲ ಹೇಗೆ ಅಂತನೇ ಹೇಳೋಕೆ ಆಗೋಲ್ಲ. ಯಾವುದೆಲ್ಲಾ ವಿಷಯಗಳು ವೈರಲ್ ಆಗುತ್ತೆ, ಟ್ರೆಂಡ್ ಆಗುತ್ತೆ ಹಾಗೆಯೇ ಅವುಗಳು ರೆಕಾರ್ಡ್ ಕೂಡ ಮಾಡಿ ಬಿಡುತ್ತವೆ. ಅವುಗಳಲ್ಲಿ ಈ ಟ್ಯಾಟೂ ಕೂಡ ಒಂದು ಅಂತ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ