Air India ಸುಗಮ ಕಾರ್ಯಾಚರಣೆಗೆ Tata Groupಗೆ ಸಾಲ

ಕಳೆದ ದಶಕದಲ್ಲಿ, ಏರ್ ಇಂಡಿಯಾವನ್ನು ಕೊಂಚ ದೃಢವಾಗಿಸಲು ನಗದು ಬೆಂಬಲ ಮತ್ತು ಸಾಲದ ಖಾತರಿಗಳ ಮೂಲಕ ರೂ 1.10 ಲಕ್ಷ ಕೋಟಿಗೂ ಹೆಚ್ಚು ಹಣದ ಬೆಂಬಲವನ್ನು ಒದಗಿಸಲಾಗಿದೆ.

 ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಷ್ಟದಲ್ಲಿರುವ ಏರ್ ಇಂಡಿಯಾದ(State Bank of India) ಸುಗಮ ಕಾರ್ಯಾಚರಣೆಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನೇತೃತ್ವದ ಸಾಲದಾತರ ಒಕ್ಕೂಟವು ಟಾಟಾ ಗ್ರೂಪ್‌ಗಾಗಿ ಸಾಲ ನೀಡಲು ಅಂಗೀಕಾರ ನೀಡಿದೆ. ಕಳೆದ ಅಕ್ಟೋಬರ್‌ನಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ಹಾಗೂ AISATS ನಲ್ಲಿ 50% ಷೇರನ್ನು ಸ್ವಾಧೀನಪಡಿಸಿಕೊಳ್ಳುವ ಬಿಡ್ ಗೆದ್ದಿರುವ ಟಾಟಾ ಗ್ರೂಪ್ (Tata Group) ಔಪಚಾರಿಕವಾಗಿ ವಿಮಾನ ಯಾನ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಳ್ಳುವ ನಿರೀಕ್ಷೆ ಇದೆ. ಎಸ್‌ಬಿಐ ನೇತೃತ್ವದ ಒಕ್ಕೂಟವು ಏರ್‌ಲೈನ್‌ನ ಅವಶ್ಯಕತೆಗಳಿಗೆ ಅನುಗುಣವಾಗಿ ಅವಧಿಯ ಸಾಲಗಳು ಮತ್ತು ಕಾರ್ಯನಿರತ ಬಂಡವಾಳ ಸಾಲಗಳನ್ನು ನೀಡಲು ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ಯೂನಿಯನ್ ಬ್ಯಾಂಕ್ ಆಫ್ (Union Bank of India)ಇಂಡಿಯಾ ಎಲ್ಲಾ ಪ್ರಮುಖ ಬ್ಯಾಂಕ್‌ಗಳು ಒಕ್ಕೂಟದ ಭಾಗವಾಗಿವೆ ಎಂದು ಮೂಲಗಳು ತಿಳಿಸಿವೆ.

ಏರ್ ಇಂಡಿಯಾದ ಪ್ರಸ್ತುತ ಸಾಲವೇನು?

ಟಾಟಾ ಗ್ರೂಪ್‌ನ ಹಿಡುವಳಿ ಕಂಪನಿ ಟಾಟಾ ಸನ್ಸ್‌ನ ಅಂಗಸಂಸ್ಥೆ ಟ್ಯಾಲೇಸ್ ಪ್ರೈವೇಟ್ ಲಿಮಿಟೆಡ್ (Talace Private Limited) ಅಕ್ಟೋಬರ್ 8, 2021 ರಂದು ಸಾಲದ ಸಂಕಷ್ಟದಲ್ಲಿರುವ ಏರ್ ಇಂಡಿಯಾವನ್ನು ಸ್ವಾಧೀನಪಡಿಸಿಕೊಳ್ಳುವ ಬಿಡ್ ಅನ್ನು ಗೆದ್ದಿದೆ.

ಸಾಲ್ಟ್-ಟು-ಸಾಫ್ಟ್‌ವೇರ್ ಹಿಡುವಳಿ ಕಂಪನಿಯ ಭಾಗವಾಗಿರುವ ಒಂದು ಘಟಕವು ತನ್ನ ವಿಜೇತ ಬಿಡ್‌ನ ಭಾಗವಾಗಿ 18,000 ಕೋಟಿ ರೂವನ್ನು ನೀಡಿತು -- ಏರ್ ಇಂಡಿಯಾದ ಅಸ್ತಿತ್ವದಲ್ಲಿರುವ ಸಾಲವು 15,300 ಕೋಟಿ ರೂ ಹಾಗೂ ಸಂಸ್ಥೆ ಸರ್ಕಾರಕ್ಕೆ ನಗದು ರೂಪದಲ್ಲಿ 2,700 ಕೋಟಿ ರೂವನ್ನು ಪಾವತಿಸಬೇಕಾಗಿದೆ.

ಅಕ್ಟೋಬರ್ 11, 2021 ರಂದು ಏರ್‌ಲೈನ್‌ನಲ್ಲಿ ತನ್ನ 100% ಪಾಲನ್ನು ಮಾರಾಟ ಮಾಡಲು ಸರ್ಕಾರದ ಇಚ್ಛೆಯನ್ನು ದೃಢೀಕರಿಸುವ ಉದ್ದೇಶ ಪತ್ರವನ್ನು (LoI) ಅನ್ನು ಟಾಟಾ ಗ್ರೂಪ್‌ಗೆ ನೀಡಲಾಯಿತು. ಅಕ್ಟೋಬರ್ 25 ರಂದು ಕೇಂದ್ರವು ಒಪ್ಪಂದಕ್ಕೆ ಷೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಿತು. ಏರ್ ಇಂಡಿಯಾದ ಹೆಚ್ಚಿನ ವೆಚ್ಚದ ಸಾಲವನ್ನು ನಿವೃತ್ತಿಗೊಳಿಸಲು ತಾಲೇಸ್‌ಗೆ ಟರ್ಮ್ ಲೋನ್‌ಗಳು ಸಹಾಯ ಮಾಡುತ್ತವೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Air India: ನಾಳೆ ಟಾಟಾ ಸಂಸ್ಥೆ ಸೇರಲಿದೆ ಏರ್ ಇಂಡಿಯಾ, 69 ವರ್ಷಗಳ ಬಳಿಕ ಮಾತೃಸಂಸ್ಥೆ ಅಂಗಳದಲ್ಲಿ ಲ್ಯಾಂಡ್

ಟಾಟಾ ಗ್ರೂಪ್‌ಗೆ ಏನೆಲ್ಲಾ ಅಧಿಕಾರವಿರುತ್ತದೆ?

ಸರ್ಕಾರದೊಂದಿಗಿನ ಒಪ್ಪಂದದಲ್ಲಿ ಭೂಮಿ ಮತ್ತು ಕಟ್ಟಡಗಳು ಸೇರಿಲ್ಲ. ಒಪ್ಪಂದದ ಪ್ರಕಾರ, ಟಾಟಾ ಗ್ರೂಪ್ ಏರ್ ಇಂಡಿಯಾದ ಎಲ್ಲಾ ಉದ್ಯೋಗಿಗಳನ್ನು ಕನಿಷ್ಠ ಒಂದು ವರ್ಷದವರೆಗೆ ಉಳಿಸಿಕೊಳ್ಳುತ್ತದೆ. ಸ್ವಾಧೀನಪಡಿಸಿಕೊಳ್ಳುವುದರೊಂದಿಗೆ, ಟಾಟಾ ಗ್ರೂಪ್ 117-ವಿಶಾಲ ರಚನೆಯುಳ್ಳ ಹಾಗೂ ಕಿರಿದಾದ ವೈಮಾನಿಕ ರಚನೆಯುಳ್ಳ ಹಾಗೂ 24 ಕಿರಿದಾದ ವೈಮಾನಿಕ ರಚನೆಯ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ವಿಮಾನಗಳಿಗೆ ಪ್ರವೇಶವನ್ನು ಹೊಂದಿರುತ್ತದೆ. ಇದಲ್ಲದೆ, ಇದು 4,400 ದೇಶೀಯ ಮತ್ತು 1,800 ಅಂತರಾಷ್ಟ್ರೀಯ ಲ್ಯಾಂಡಿಂಗ್ ಮತ್ತು ದೇಶೀಯ ವಿಮಾನ ನಿಲ್ದಾಣಗಳಲ್ಲಿ ಪಾರ್ಕಿಂಗ್ ಸ್ಲಾಟ್‌ಗಳ ನಿಯಂತ್ರಣವನ್ನು ಪಡೆಯುತ್ತದೆ.

SpiceJet ಪ್ರವರ್ತಕ ಅಜಯ್ ಸಿಂಗ್ ನೇತೃತ್ವದ ಒಕ್ಕೂಟದ 15,100 ಕೋಟಿ ರೂ ಆಫರ್ ಹಾಗೂ ನಷ್ಟದಲ್ಲಿ ಸರಕಾರ ನಿಗದಿಪಡಿಸಿದ 100% ಪಾಲನ್ನು ಮಾರುವ ನಿಗದಿಪಡಿಸಿದ 12,906 ಕೋಟಿ ರೂ ಮೀಸಲು ಬೆಲೆಯನ್ನು ಟಾಟಾ ಗ್ರೂಪ್ ಮೀರಿಸಿದೆ. ಇದು 2003-04 ರಿಂದ ಕೇಂದ್ರದ ಮೊದಲ ಖಾಸಗೀಕರಣವಾಗಿದ್ದರೂ, ಸಿಂಗಾಪುರ್ ಏರ್‌ಲೈನ್ಸ್ ಲಿಮಿಟೆಡ್‌ನ ಜಂಟಿ ಉದ್ಯಮವಾದ ಏರ್‌ಏಷ್ಯಾ ಇಂಡಿಯಾ ಮತ್ತು ವಿಸ್ತಾರಾದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುವ ಕಾರಣ ಏರ್ ಇಂಡಿಯಾ ಟಾಟಾಗಳ ಸ್ಥಿರತೆಯ ಮೂರನೇ ಏರ್‌ಲೈನ್ ಬ್ರ್ಯಾಂಡ್ ಆಗಿರುತ್ತದೆ.

ಏರ್ ಇಂಡಿಯಾ ನಷ್ಟಕ್ಕೆ ಕಾರಣವೇನು?

ಆಗಸ್ಟ್ 31 ರ ವೇಳೆಗೆ ಏರ್ ಇಂಡಿಯಾ ಒಟ್ಟು 61,562 ಕೋಟಿ ರೂ ಸಾಲವನ್ನು ಹೊಂದಿತ್ತು. ಟಾಟಾ ಗ್ರೂಪ್‌ಗೆ ನಷ್ಟದ ಸುಳಿಯಲ್ಲಿರುವ ವಿಮಾನ ಯಾನ ಸಂಸ್ಥೆಯನ್ನು ವರ್ಗಾಯಿಸುವುದಕ್ಕೆ ಮುನ್ನ ಈ ಸಾಲದ ಸುಮಾರು 75% ಅಂದರೆ 46,262 ಕೋಟಿ ರೂವನ್ನು ವಿಶೇಷ ಉದ್ದೇಶಿತ ವಾಹನ AIAHL ಗೆ ವರ್ಗಾಯಿಸಲಾಗುತ್ತದೆ. 2007-08 ರಲ್ಲಿ ಇಂಡಿಯನ್ ಏರ್‌ಲೈನ್ಸ್‌ನೊಂದಿಗೆ ವಿಲೀನಗೊಂಡ ನಂತರ ಏರ್ ಇಂಡಿಯಾ ಪ್ರತಿ ವರ್ಷವೂ ನಷ್ಟವನ್ನು ಅನುಭವಿಸಲು ಪ್ರಾರಂಭಿಸಿತು.

ಇದನ್ನೂ ಓದಿ: Air Indiaವನ್ನು ತನ್ನದಾಗಿಸಿಕೊಂಡ TATA ಎದುರು ಇದೆ ದೊಡ್ಡ ಸವಾಲುಗಳು.. ಏನದು?

ಹಿಂದಿನ ಯುಪಿಎ ಆಡಳಿತವು 2012 ರಲ್ಲಿ ಏರ್ ಇಂಡಿಯಾಕ್ಕೆ ಒಂದು ಟರ್ನರೌಂಡ್ ಪ್ಲಾನ್ (ಟಿಎಪಿ) ಮತ್ತು ಹಣಕಾಸು ಪುನರ್ರಚನಾ ಯೋಜನೆ (ಎಫ್‌ಆರ್‌ಪಿ) ಅನ್ನು ಅನುಮೋದಿಸಿತು. ಆದಾಗ್ಯೂ, ಟಿಎಪಿ ನಿರೀಕ್ಷಿತವಾಗಿ ಕೆಲಸ ಮಾಡಲಿಲ್ಲ ಮತ್ತು ಏರ್ ಇಂಡಿಯಾ ಊಹಿಸಿದಂತೆ ನಷ್ಟದ ಸುಳಿಯಲ್ಲಿ ಸಿಲುಕಿತು.

ಕಳೆದ ದಶಕದಲ್ಲಿ, ಏರ್ ಇಂಡಿಯಾವನ್ನು ಕೊಂಚ ದೃಢವಾಗಿಸಲು ನಗದು ಬೆಂಬಲ ಮತ್ತು ಸಾಲದ ಖಾತರಿಗಳ ಮೂಲಕ ರೂ 1.10 ಲಕ್ಷ ಕೋಟಿಗೂ ಹೆಚ್ಚು ಹಣದ ಬೆಂಬಲವನ್ನು ಒದಗಿಸಲಾಗಿದೆ.
Published by:vanithasanjevani vanithasanjevani
First published: